Breaking News

BigTv News

ಎಂಟು ಆರೋಪಿಗಳ ಬಂಧನ

ಬಳ್ಳಾರಿ : ಕುರುಗೋಡು ಹಾಗೂ ಕುಡುತಿನಿ ಪಟ್ಟಣದಲ್ಲಿ ಕಳ್ಳತನ ಪ್ರಕರಣ ಸಂಬಂಧ ಎಂಟು ಆರೋಪಿಗಳನ್ನು ಬಂಧಿಸಿ, 12 ಲಕ್ಷ ರೂ. ಮೌಲ್ಯದ ವಸ್ತು, ವಾಹನ ಹಾಗೂ ಎಮ್ಮೆಗಳನ್ನು ವಶಕ್ಕೆ ಪಡೆಯಲಾಗಿದೆ. ಕುರುಗೋಡಿನಲ್ಲಿ 1.50 ಲಕ್ಷ ರೂ. ಮೌಲ್ಯದ ಕಾಪರ್ ವೈರ್, 4.50 ಲಕ್ಷ ರೂ. ಮೌಲ್ಯದ ಒಂಬತ್ತು ಎಮ್ಮೆಗಳು ಹಾಗೂ 3.80 ಲಕ್ಷ ರೂ. ಮೌಲ್ಯದ ನಾಲ್ಕು ಬೈಕ್‌ಗಳು ವಶಪಡೆಯಲಾಗಿದೆ. ಕುಡುತಿನಿ ಪಟ್ಟಣದಲ್ಲಿ 2.20 ಲಕ್ಷ ರೂ. ಮೌಲ್ಯದ ಲಾರಿಯ …

Read More »

ಲವ್ ಜಿಹಾದ್, ಗಾಂಜಾ ಕೇಸ್‌ – ತಲೆಮರೆಸಿಕೊಂಡಿದ್ದ ಆರೋಪಿ ಸಮೀರ್ ಬಂಧನ

ಹುಬ್ಬಳ್ಳಿ: ಲವ್ ಜಿಹಾದ್ ಆರೋಪ ಹಾಗೂ ಗಾಂಜಾ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಮೀರ್ ಬೂದಿಹಾಳನನ್ನು ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ. ಮೊಬೈಲ್‌ನಲ್ಲಿ ಯುವತಿಯರ ಜೊತೆಗಿನ ವಿಡಿಯೋ ಹಾಗೂ ಗಾಂಜಾ ಸೇವನೆಗೆ ಸಂಬಂಧಿಸಿದ ತುಣುಕುಗಳು ಲಭ್ಯವಾಗಿದೆ. ಈ ಹಿನ್ನೆಲೆ ಯುವಕನನ್ನು ಬಂಧಿಸುವಂತೆ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ಈತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಯು ಪರಾರಿಯಾಗಿ ಗೋವಾದಲ್ಲಿ ಅಡಗಿ ಕುಳಿತಿದ್ದ. ಈ ವೇಳೆ …

Read More »

ರಾಯದ ದರುಶನಕ್ಕೆ ಹೋಗುತ್ತಿದ್ದ ವಾಹನ ಅಪಘಾತ: ಮೃತರ ಸಂಖ್ಯೆ ಏಳಕ್ಕೆ ಏರಿಕೆ

ಹಾಸನದಿಂದ ರಾಯರ ದರುಶನಕ್ಕೆ ತೆರಳಿದ್ದ ಕುಟುಂಬವಿದ್ದ ಕಾರು ಅಪಘಾತಕ್ಕೀಡಾಗಿತ್ತು. ಇದೀಗ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡ 16 ವರ್ಷದ ಬಾಲಕಿ ತೇಜಸ್ವಿನಿ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಬೇಲೂರಿನ ಶೆಟ್ಟಿಗೆರೆ ಗ್ರಾಮದ ನಿವಾಸಿ. ಅಪಘಾತದಲ್ಲಿ ತೇಜಸ್ವಿನಿಯ ತಾಯಿ ಲೋಲಾಕ್ಷಿ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಇದೀಗ ತೇಜಸ್ವಿನಿಯ ಸಾವಿನಿಂದಾಗಿ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. ರಾಘವೇಂದ್ರನ ದರುಶನಕ್ಕೆ ಹೊರಟಿದ್ದ ಬೊಲೇರೋ ವಾಹನ ಸಿಮೆಂಟ್‌ …

Read More »

ಪತ್ನಿ ತವರೂರಲ್ಲಿ ಪತಿ ಮೇಲೆ ಹಲ್ಲೆ

ಚಿಂತಾಮಣಿ: ಕೌಟುಂಬಿಕ ಕಲಹಕ್ಕೆ ಬೇಸರಗೊಂಡು ತವರು ಸೇರಿದ್ದ ಪತ್ನಿಯನ್ನು ಮಾತನಾಡಿಸಲು ಹೋದ ಪತಿ ಮೇಲೆ ಪತ್ನಿಯ ಕುಟುಂಬದವರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದೊಡ್ಡಬಳ್ಳಾಪುರ ತಾಲೂಕಿನ ಪಾಲನ ಜೋಗಹಳ್ಳಿ ಮುನಿರಾಜು (37) ಹಲ್ಲೆಗೊಳಗಾದವರು. ಚಿಂತಾಮಣಿ ತಾಲೂಕಿನ ಬಂಡಮಿಂದಪಲ್ಲಿ ಗ್ರಾಮದ ಮಹಿಳೆಯನ್ನು ಮುನಿರಾಜು ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. 5 ವರ್ಷಗಳಿಂದ ಸಂಸಾರದ ವಿಚಾರದಲ್ಲಿ ಉಂಟಾದ ಮನಸ್ತಾಪಗಳಿಂದ 2ನೇ ಮಗನನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದಾರೆ. ಇತ್ತೀಚೆಗೆ ಮುನಿರಾಜು ಬಂಡಮಿಂದಪಲ್ಲಿಗೆ ಹೋಗಿ …

Read More »

ವರದಿಗೆ ತೆರಳಿದ ಸಂದರ್ಭ ಹ*ಲ್ಲೆ ಆರೋಪ

ಕೋಟ: ಸರಕಾರಿ ಜಾಗದ ಒತ್ತುವರಿ ಕುರಿತು ವರದಿಗೆ ತೆರಳಿದ ಸಂದರ್ಭ ಹಲ್ಲೆ ನಡೆಸಲಾಗಿದೆ ಎಂದು ಕೋಟ ಮೂಡುಗಿಳಿಯಾರು ನಿವಾಸಿ ಆರತಿ ಗಿಳಿಯಾರು ಕೋಟ ಪೊಲೀಸ್‌ ಠಾಣೆಯಲ್ಲಿ ಎ.15ರಂದು ಪ್ರಕರಣ ದಾಖಲಿಸಿದ್ದಾರೆ. ಆರತಿ ಗಿಳಿಯಾರು ಬ್ರಹ್ಮಾವರ ತಾಲೂಕು ನ್ಯೂಸ್‌ ಪತ್ರಿಕೆ ಉಪಸಂಪಾದಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ವಡ್ಡರ್ಸೆ ಗ್ರಾಮದ ಪ್ರಣುತ್‌ ಗಾಣಿಗ ತನ್ನ ಮನೆ ಹತ್ತಿರ ಸರಕಾರಿ ಜಾಗ ಒತ್ತುವರಿ ಮಾಡಿ ಶೆಡ್‌ ನಿರ್ಮಾಣ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ …

Read More »

ಸಂಕದಡಿ ಟಿಪ್ಪರ್‌ ಲಾರಿ ಚಾಲಕ ಸಾವಿಗೀಡಾದ ಘಟನೆ : ಮುಂದುವರಿದ ನಿಗೂಢತೆ

ಕಾಸರಗೋಡು: ಪೊಯಿನಾಚಿ ಸಮೀಪದ ಮಂಡಲಿಪಾರ ಞಾಣಿಕಡವು ರಸ್ತೆಯ ಸಂಕದ ಅಡಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಟಿಪ್ಪರ್‌ ಲಾರಿ ಚಾಲಕ ಬೆಂಡಿಚ್ಚಾಲ್‌ ಮಂಡಲಿಪ್ಪಾರ ನಿವಾಸಿ ಅಬ್ದುಲ್‌ ಕಬೀರ್‌ (40) ಸಾವಿನ ಹಿಂದಿನ ನಿಗೂಢತೆ ಇನ್ನೂ ಮುಂದುವರಿದಿದೆ. ಅಂದು ಅಲ್ಲೇ ಪಕ್ಕದ ತೋಟದಿಂದ ತೆಂಗಿನಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತದೇಹವನ್ನು ಮೊದಲು ಕಂಡಿದ್ದರು. ಈ ಬಗ್ಗೆ ಮಾಹಿತಿ ಲಭಿಸಿದ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮಹಜರು ನಡೆಸಿದ ಬಳಿಕ ಕಣ್ಣೂರು ಮೆಡಿಕಲ್‌ ಕಾಲೇಜು …

Read More »

ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿ ಬಂಧನ: 1.5 ಕೆಜಿ ಗಾಂಜಾ ವಶ

ಮುಳಬಾಗಿಲು: ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬುಧವಾರ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿ, ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಮುಳಬಾಗಿಲು ನಗರದ ಶಾಮೀರ್ ಮೊಹಲ್ಲ ನಿವಾಸಿ ಅಬೂಕರ್ (22) ಬಂಧಿತ ಆರೋಪಿ. ಆರೋಪಿಯಿಂದ 1.5 ಕೆಜಿ ಗಾಂಜಾ ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಇನ್‌ಸ್ಪೆಕ್ಟರ್ ಎಂ.ಆರ್. ಅಣ್ಣಯ್ಯ ಮತ್ತು ಸಿಬ್ಬಂದಿ ದಾಳಿ ನಡೆಸಿ, ಗಾಂಜಾ ವಶಕ್ಕೆ ಪಡೆದು, ಆರೋಪಿಯನ್ನು …

Read More »

ಲಾಡ್ಜ್ ರೂಮಿನಿಂದ 1.40 ಲಕ್ಷ ರೂ. ಮೌಲ್ಯದ ಚಿನ್ನದ ಬ್ರೇಸ್ಲೆಟ್ ಕಳವು

ಮಂಗಳೂರು: ಪ್ರವಾಸಕ್ಕೆಂದು ಬಂದು ಬಿಜೈಯ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಆಂಧ್ರಪ್ರದೇಶ ಅನಂತರಪುರ ಮೂಲದ ಕುಟುಂಬವೊಂದಕ್ಕೆ ಸಂಬಂಧಿಸಿದ ಸುಮಾರು 10 ಗ್ರಾಂ. ತೂಕದ 1.40 ಲಕ್ಷ ರೂ. ಮೌಲ್ಯದ ಚಿನ್ನದ ಬ್ರಾಸ್ ಲೆಟ್ ಕಳವಾಗಿದೆ. ಕುಟುಂಬದ ಮುಖ್ಯಸ್ಥ ಎ.ಎನ್. ಶಿವ ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಎ.13ರಂದು ಬೆಳಗ್ಗೆ 6.30ರಿಂದ ಬಿಜೈ ಕೆಎಸ್ ಆರ್ ಟಿಸಿ ಬಸ್ಸು ನಿಲ್ದಾಣದ ಲಾಡ್ಜ್‌ನಲ್ಲಿ ತಂಗಿದ್ದು, ಎ.15ರಂದು ಬೆಳಗ್ಗೆ 8.30ಕ್ಕೆ ತಣ್ಣೀರು ಬಾವಿ ಬೀಚ್ …

Read More »

ಬಸ್ಸಿನಲ್ಲಿ 18 ಗ್ರಾಂ. ತೂಕದ ಚಿನ್ನದ ಸರ ಕಳವು

ಬಂಟ್ವಾಳ: ಮಡಂತ್ಯಾರಿನಿಂದ ಬಿ.ಸಿ. ರೋಡ್ ಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯ ಕತ್ತಿನಲ್ಲಿದ್ದ 18 ಗ್ರಾಂ. ತೂಕದ 2.50 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ. ಬೆಳ್ತಂಗಡಿಯ ಪಾಪುಂಜ ಮನೆಯ ಸರಸ್ವತಿ ಅವರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಂಚರಿಸುತ್ತಿದ್ದರು. ಬಸ್ಸಿನಲ್ಲಿ ರಷ್ ಇದ್ದ ಕಾರಣ ನಿಂತುಕೊಂಡೇ ಪ್ರಯಾಣಿಸಿದ್ದು , ಬಿ.ಸಿ.ರೋಡ್ ನಲ್ಲಿ ಬಸ್ ನಿಂದ ಇಳಿಯುವಾಗ ಚಿನ್ನದ ಸರ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಸರ ಕಳ್ಳತನ ಆಗಿರಬಹುದು …

Read More »

ಅಕ್ರಮ ಪಡಿತರ ವಶ

ಹೊಸಪೇಟೆ: ನಗರದ ಸಂಡೂರು ರಸ್ತೆಯ ಬಳಿ ಸಂಗ್ರಹಿಸಿಟ್ಟಿದ್ದ ಅಕ್ರಮ ಪಡಿತರ ಅಕ್ಕಿಯನ್ನು ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡು ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಆಹಾರ ನಿರೀಕ್ಷಕ ಅಜೀತ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಂಗ್ರಹಿಸಿದ 34,843 ರೂ. ಮೌಲ್ಯದ 15.30 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆಯುಲಾಗಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಆಹಾರ …

Read More »