ಸಂಜಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿ ನಿಂತಿದ್ದ ಸಿಬಿಐ ಕಚೇರಿಯ ಹೆಡ್ ಕಾನ್ಸ್ಟೆಬಲ್ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಕಳ್ಳರಿಬ್ಬರು ಪರಾರಿಯಾಗಿದ್ದಾರೆ. ಗಂಗಾ ನಗರ ನಿವಾಸಿ, ಹೆಡ್ಕಾನ್ಸ್ಟೆಬಲ್ ಎನ್.ಕೃಷ್ಣ ಅವರು ನೀಡಿದ ದೂರಿನ ಮೇಲೆ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ. ಕೆಲಸದ ನಿಮಿತ್ತ ದೆಹಲಿಗೆ ತೆರಳಲು ಎನ್.ಕೃಷ್ಣ ಅವರು ಫೆಬ್ರುವರಿ 16ರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸಿ.ಬಿ.ಎಸ್ ಬಸ್ ಸ್ಟಾಪ್ ಹತ್ತಿರ …
Read More »ಚಿಂತಾಮಣಿ: ಕಾಣೆಯಾಗಿದ್ದ ಕನಿಶೆಟ್ಟಹಳ್ಳಿ ಗ್ರಾಮದ ಬಾಲಕನ ಶವ ಪತ್ತೆ
ಚಿಂತಾಮಣಿ: ತಾಲ್ಲೂಕಿನ ಕನಿಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಕಾಣೆಯಾಗಿದ್ದ ಬಾಲಕ ಕರುಣಾಕರ (3)ನ ಶವ ಮನೆಯ ಸಮೀಪಸ ಕೃಷಿ ಹೊಂಡದಲ್ಲಿ ಭಾನುವಾರ ಪತ್ತೆಯಾಗಿದೆ. ಮನೆ ಬಳಿ ಆಟವಾಡುತ್ತಿದ್ದ ಬಾಲಕ ಶನಿವಾರ ಸಂಜೆ ಕಾಣೆಯಾಗಿದ್ದ. ಮನೆಯವರು ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಅನುಮಾನಗೊಂಡು ಭಾನುವಾರ ಅಗ್ನಿಶಾಮಕದಳಕ್ಕೆ ದೂರು ನೀಡಿ ಮನೆಯ ಸಮೀಪದಲ್ಲೇ ಇರುವ ಕೃಷಿಹೊಂಡದಲ್ಲಿ ಹುಡುಕಾಡಿಸಿದಾಗ ಬಾಲಕನ ಶವ ದೊರೆತಿದೆ. ಬಾಲಕ ಆಟವಾಡುವಾಗ ಆಕಸ್ಮಿಕವಾಗಿ ಕೃಷಿಹೊಂಡಕ್ಕೆ ಬಿದ್ದು ಮೃತಪಟ್ಟಿರಬಹುದು ಎನ್ನಲಾಗಿದೆ.
Read More »ಹೆತ್ತ ಮಕ್ಕಳಿಂದ ನಿರ್ಲಕ್ಷ್ಯ: ಸಾವಿನ ಕದ ತಟ್ಟಿದ ವೃದ್ಧ ದಂಪತಿ
ಹಾಸನ: ಜೀವನದ ಸಂಧ್ಯಾಕಾಲದಲ್ಲಿ ಹೆತ್ತ ಮಕ್ಕಳು ನೋಡಿಕೊಳ್ಳಲಿಲ್ಲವೆಂದು ವೃದ್ಧ ದಂಪತಿ ಸಾವಿನ ಕದ ತಟ್ಟಿದ್ದಾರೆ. ರೈಲಿಗೆ ಸಿಲುಕಿ ವೃತ್ತ ದಂಪತಿ ಸಾವನ್ನಪ್ಪಿದ ಘಟನೆ ಹಾಸನದಲ್ಲಿ ಶನಿವಾರ ರಾತ್ರಿ ನಡೆದಿದೆ. ಸೋಮವಾರಪೇಟೆ ತಾಲೂಕು ಹಾರೆಹೊಸೂರು ಗ್ರಾಮದ ಡೇನಿಯಲ್(80), ಮೇರಿ(73) ಮೃತಪಟ್ಟವರು. ಹಾಸನದ ಕರಿಗೌಡ ಕಾಲೋನಿ ಸಮೀಪ ರೈಲಿಗೆ ತಲೆ ಕೊಟ್ಟಿದ್ದಾರೆ. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಡೇನಿಯಲ್ ಅವರಿಗೆ ಇಬ್ಬರು ಪುತ್ರರಿದ್ದು ಇಬ್ಬರಿಗೂ ಮದುವೆಯಾಗಿದೆ. ಒಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಮತ್ತೊಬ್ಬರು ಹಾರೆಹೊಸೂರಿನಲ್ಲಿ …
Read More »ಡ್ಯೂಟಿ ನೀಡದಿದ್ದಕ್ಕೆ ಕೆಎಸ್ಸಾರ್ಟಿಸಿ ಚಾಲಕ ನೇಣಿಗೆ ಶರಣು
ಸವಣೂರು: ಬೇಡಿಕೆಗೆ ಅನುಗುಣವಾಗಿ ಡ್ಯೂಟಿ ನೀಡದ ಹಿನ್ನೆಲೆಯಲ್ಲಿ ಮನನೊಂದು ಕೆಎಸ್ಆರ್ಟಿಸಿ ಚಾಲಕ ಮಹಾದೇವಪ್ಪ ಫಕ್ಕಿರಪ್ಪ ಯರೇಶಿಮಿ (49) ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಬಸ್ ನಿಲ್ದಾಣದ ಡೀಸೆಲ್ ಪಂಪ್ ಕಚೇರಿಯಲ್ಲಿ ನಡೆದಿದೆ. ಹಾವೇರಿ ವಲಯ ಸಾರಿಗೆ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಸವಣೂರ ಕೆಎಸ್ಆರ್ಟಿಸಿ ಬಸ್ ಘಟಕದಲ್ಲಿ ಚಾಲಕನಾಗಿ ನೇಮಕವಾಗಿದ್ದ ಮಹಾದೇವಪ್ಪ ಅವರನ್ನು ಚಾಲಕರಿಗೆ ತರಬೇತಿ ಜತೆಗೆ ಇಂಧನ ವಿಭಾಗದಲ್ಲಿ ನಿಯೋಜಿಸಲಾಗಿತ್ತು. ಚಾಲಕನಾಗಿ ನೇಮಕ ಆಗಿದ್ದರಿಂದ …
Read More »ನಾಗಮಂಗಲ ಮಾಜಿ ಶಾಸಕ ಸುರೇಶ್ಗೌಡ ಕಾರು ಅಪಘಾತ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು
ಮಂಡ್ಯ: ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್ಗೌಡ ಪ್ರಯಾಣಿಸುತ್ತಿದ್ದ ಕಾರು ಬಸರಾಳು ಗ್ರಾಮದ ಸಮೀಪ ಭೀಕರ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಸುರೇಶ್ಗೌಡ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಮದುವೆ ಸಮಾರಂಭವೊಂದನ್ನು ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದೆ. ಸುರೇಶ್ಗೌಡ ಅವರ ಕೈ ಬೆರಳುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕಾರಿನಲ್ಲಿದ್ದ ಚಾಲಕ ಶೇಖರ್, ಬಿಂಡಿನಹಳ್ಳಿ ಪ್ರಸನ್ನ, ಗನ್ಮ್ಯಾನ್ಗೂ ಸಹ ಗಂಭೀರ …
Read More »ಬೆಂಗಳೂರಲ್ಲಿ ಎಟಿಎಂ ಮಷಿನ್ ದರೋಡೆಗೆ ಯತ್ನ, ನೇಪಾಳದ ಯುವಕನ ಬಂಧನ
ನಗರದ ಇಂದಿರಾನಗರದಲ್ಲಿ ನಡೆದಿದ್ದ ಎಟಿಎಂ ದರೋಡೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ 23 ವರ್ಷದ ರಾಜೇಂದ್ರ ಸಿಂಗ್ ಎಂಬ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 10ರ ಮಧ್ಯರಾತ್ರಿ, ಇಂದಿರಾನಗರ ಡಬಲ್ ರೋಡ್ ಸಮೀಪದ ಬ್ಯಾಂಕ್ ಆಫ್ ಬರೋಡಾ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಈತ ಯತ್ನಿಸಿದ್ದ. ಆರೋಪಿ ಶಟ್ಟರ್ ಬಂದ್ ಮಾಡಿ ಒಳಗೆ ಪ್ರವೇಶಿಸಿ, ಕಟ್ಟಿಂಗ್ ಮಷೀನ್ ಬಳಸಿ ಯಂತ್ರ ಒಡೆದು ಹಣ ಕಸಿಯಲು ಯತ್ನಿಸಿದ್ದಾನೆ. ಅಲ್ಲದೆ, …
Read More »ಕಾವೇರಿ ನರ್ಸಿಂಗ್ ಕಾಲೇಜಿನಲ್ಲಿ ಬೆಂಕಿ
ನಗರದ ಬನ್ನೂರು ರಸ್ತೆಯ ಕಾವೇರಿ ನರ್ಸಿಂಗ್ ಕಾಲೇಜಿನ ಕಟ್ಟಡದಲ್ಲಿ ಶನಿವಾರ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿಸಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಾಲ್ಕು ಅಂತಸ್ತಿನ ಕಾಲೇಜಿನ ಕಟ್ಟಡದ ಬಾಲ್ಕನಿಯಲ್ಲಿ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತು. ತಕ್ಷಣ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ಕಾಲೇಜಿನ ಸಿಬ್ಬಂದಿ, ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಕಾಲೇಜಿನ ವಿದ್ಯಾರ್ಥಿಗಳನ್ನು …
Read More »ಆನೇಕಲ್ನಲ್ಲಿ ಪೈಶಾಚಿಕ ಕೃತ್ಯ: ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕೇಸ್ ದಾಖಲು
ಬೆಂಗಳೂರು ಹೊರವಲಯದ ಆನೇಕಲ್ನ ಲ್ಲಿ ಶಾಲಾ ಮಕ್ಕಳ ಮೇಲೆ ನಡೆದ ಪೈಶಾಚಿಕ ಲೈಂಗಿಕ ದೌರ್ಜನ್ಯ ಪ್ರಕರಣ ಆತಂಕ ಮೂಡಿಸಿದೆ. ಆರೋಪಿಯು ಕೃಷ್ಣಮೂರ್ತಿ @ ಕಿಟ್ಟಿ ಎಂಬಾತನಾಗಿದ್ದು, ಶಾಲಾ ಆವರಣ ಹಾಗೂ ಶೌಚಾಲಯದಲ್ಲಿ ಒಟ್ಟು 9 ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಚಾಕಲೇಟ್ ನೀಡುವುದಾಗಿ ಆಮಿಷವೊಡ್ಡಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದನು ಎನ್ನಲಾಗಿದೆ. ಈ ದುಷ್ಕೃತ್ಯಗಳ ಬಗ್ಗೆ ಮಕ್ಕಳು ಪೋಷಕರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. …
Read More »ಟೆಕಿ ಶರ್ಮಿಳಾ ಕೊಲೆ ಕೇಸಿನ ಮತ್ತಷ್ಟು ರಹಸ್ಯ ಬಹಿರಂಗ: ಶವದ ಮೇಲೂ ಅತ್ಯಾಚಾರಕ್ಕೆ ಯತ್ನ
ಬೆಂಗಳೂರು: ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜ.16ರಂದು ನಡೆದಿದ್ದ ಸಾಫ್ಟ್ವೇರ್ ಎಂಜಿನಿಯರ್ ಶರ್ಮಿಳಾ ಕೊಲೆ ಪ್ರಕರಣದ ಹಿಂದಿನ ಇನ್ನಷ್ಟು ರಹಸ್ಯಗಳು ಹೊರ ಬಿದ್ದಿದ್ದು, ಶವದ ಮೇಲೆಯೂ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಕೇರಳ ದ ಆರೋಪಿ ಕರ್ನಲ್ ಕುರೈ ಪೊಲೀಸರ ವಿಚಾರಣೆ ವೇಳೆ ಇನ್ನಷ್ಟು ಸಂಗತಿಯನ್ನು ಬಿಚ್ಚಿಟ್ಟಿ ದ್ದಾನೆ. ಶರ್ಮಿಳಾ ಫ್ಲಾಟ್ ಗೆ ನುಗ್ಗಿದ್ದ ಆರೋಪಿ, ಆಕೆಯನ್ನು ತಬ್ಬಿ ಹಿಡಿದಾಗ ಆಕೆ ಬೇಡಿಕೊಂಡರೂ ಬಿಟ್ಟಿರಲಿಲ್ಲ. ಸೋಪಾಗೆ ಶರ್ಮಿಳಾ …
Read More »ವಿರಾಜಪೇಟೆ | 1.60 ಕೆಜಿ ಗಾಂಜಾ ಸಹಿತ ಇಬ್ಬರ ಬಂಧನ
ಮಡಿಕೇರಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದು, ಅವರಿಂದ 1 ಕೆಜಿ 60 ಗ್ರಾಂ ಗಾಂಜಾ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ವಿರಾಜಪೇಟೆಯ ಸುಣ್ಣದ ಬೀದಿಯ ಹಸೈನಾರ್ ರಝಾಕ್ (43) ಹಾಗೂ ಬಾಳುಗೋಡು ಬಿಟ್ಟಂಗಾಲ ಗ್ರಾಮದ ಮೋಹನ ಎ.ಜಿ.ಅಶೋಕ (42) ಬಂಧಿತ ಆರೋಪಿಗಳಾಗಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಒಂಟಿಯಂಗಡಿ ರಸ್ತೆಯ ಪ್ರೌಢಶಾಲೆ ಮೈದಾನದ ಬಳಿಯ ಬಸ್ ತಂಗುದಾಣದಲ್ಲಿ ಇವರಿಬ್ಬರು ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾರೆ ಎಂದು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





