ಹುಬ್ಬಳ್ಳಿ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಶಿಶುಗಳ ಸುರಕ್ಷತೆ ಮತ್ತು ಜನದಟ್ಟಣೆ ನಿಯಂತ್ರಣಕ್ಕಾಗಿ ಹೊಸ ಪ್ಲಾನ್ ಮಾಡಿದೆ. ಆಸ್ಪತ್ರೆಯಲ್ಲಿ ಇತ್ತೀಚೆಗೆ ಶಿಶುಗಳ ಕಳ್ಳತನ ಆಗುತ್ತಿದೆ. ಇದನ್ನು ತಡೆಗಟ್ಟಲು ಕ್ಯೂಆರ್ ಕೋಡ್ (QR Code) ವ್ಯವಸ್ಥೆಯನ್ನು ತಂದಿದೆ. ಇನ್ನು ಮುಂದೆ ಹೆರಿಗೆ ವಾರ್ಡ್ಗೆ ಬರಬೇಕಾದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬರಬೇಕು. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕುಟುಂಬದವರು ಒಳಹೋಗಬೇಕು ಎಂದು ಕಿಮ್ಸ್ ಹೇಳಿದೆ. ಹೆರಿಗೆ ವಾರ್ಡ್ ಪ್ರವೇಶಿಸುವ ಕುಟುಂಬದ ಸದಸ್ಯರಿಗೆ ಸಿಬ್ಬಂದಿ …
Read More »ಮನೆ ಹಿಂದಿನ ಸೆಪ್ಟಿಕ್ ಟ್ಯಾಂಕ್ನಲ್ಲಿ ತಲೆಬುರುಡೆ ಪತ್ತೆ; ಪ್ರೀತಿ, ಮದುವೆ ಹೆಸರಲ್ಲಿ ದ್ರೋಹ
ಸಾಗರ್: ಆಗಸ್ಟ್ 20ರಂದು ನಾಪತ್ತೆ ಆದ ಪ್ರಿನ್ಸ್ ಪ್ರಕರಣದಲ್ಲಿ ಹೊಸ ಘಟ್ಟ. ಪ್ರಿನ್ಸ್ನ ತಲೆ ಬುರುಡೆ ಮತ್ತು ಅವಶೇಷಗಳು ಸೆಪ್ಟಿಕ್ ಟ್ಯಾಂಕ್ನಲ್ಲಿ ಸಿಕ್ಕಿದ್ದು, ಪ್ರೇಮ, ದ್ರೋಹ, ಕೊಲೆ ಕಥೆಯನ್ನು ಬೆಳಕಿಗೆ ತಂದಿವೆ.ಪೊಲೀಸರು ಆರೋಪಿ ಶೋಯೆಬ್ನನ್ನು ನರಸಿಂಗ್ಪುರದಿಂದ ಬಂಧಿಸಿದ್ದಾರೆ. ತನಿಖೆಯಲ್ಲಿ ತಿಳಿದಂತೆ, ಪ್ರಿನ್ಸ್ನ ಪತ್ನಿ ತುಳಸಿ ಮತ್ತು ಶೋಯೆಬ್ಗೆ ಮದುವೆಗೂ ಮುಂಚೆ ಸಂಬಂಧವಿತ್ತು. ಪ್ರಿನ್ಸ್ನೊಂದಿಗೆ ಮದುವೆಯ ನಂತರವೂ ಅಕ್ರಮ ಸಂಬಂಧ ಮುಂದುವರೆದಿತ್ತು ಎಂದು ಆರೋಪ. ಶೋಯೆಬ್ ಪ್ರಿನ್ಸ್ಗೆ ಮಾದಕ ದ್ರವ್ಯ ನೀಡಿ …
Read More »ಬೆಳಗಾವಿಯಲ್ಲಿ ಹಲವೆಡೆ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರ ಬಂಧನ: 18 ಬೈಕ್ ವಶ
ನಗರದಲ್ಲಿ ಹಲವೆಡೆ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಗುರುವಾರ ಬಂಧಿಸಿರುವ ಪೊಲೀಸರು, 18 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ಉಮೇಶ ಹನುಮಂತ ಬಾಗೇವಾಡಿ (33), ಗುಡಸ ಗ್ರಾಮದ ಮೌಲಾ ಹಸನಸಾಬ ಹಲಕರ್ಣಿ (42), ಕಂಗ್ರಾಳಿ ಕೆ.ಎಚ್.ಗ್ರಾಮದ ರಜತ ಸಂಜಯ ಶಿವಣಗೇಕರ (29) ಹಾಗೂ ಬೈಲಹೊಂಗಲ ತಾಲ್ಲೂಕಿನ ಶೀಗಿಹಳ್ಳಿ ಗ್ರಾಮದ ವಿಠ್ಠಲ ಸದೆಪ್ಪ ಆರೇರ (38) ಬಂಧಿತರು. ಸಿಸಿಬಿಯ ಸಿಪಿಐ ನಂದೀಶ್ವರ ಕುಂಬಾರ ಹಾಗೂ ಪಿಎಸ್ಐ ಮಂಜುನಾಥ ಭಜಂತ್ರಿ …
Read More »ದೂರು ನೀಡಲು ಕುಡಿದ ಮತ್ತಿನಲ್ಲಿ ಠಾಣೆಗೆ ಬಂದು ಪೊಲೀಸರನ್ನೇ ನಿಂದಿಸಿದಾತ ಅರೆಸ್ಟ್
ಮಂಗಳೂರು ನಗರದ ಲ್ಯಾಂಡ್ ಲಿಂಕ್ಸ್ ನ ಅಪಾರ್ಟ್ ಮೆಂಟ್ ಒಂದರ ನಿವಾಸಿ, ಬ್ಯಾಂಕ್ ಉದ್ಯೋಗಿ ಮಂಜಪ್ಪ ಸುರೇಂದ್ರನ್ ಬಂಧನಕ್ಕೊಳಗಾದ ವ್ಯಕ್ತಿ. ಮನೆಯ ಪಕ್ಕದಲ್ಲಿ ಶಟಲ್ ಆಟ ಆಡುತ್ತಿದ್ದ ಯುವಕರ ಬಗ್ಗೆ ಮಂಜಪ್ಪ ಕಾವೂರು ಪೊಲೀಸರಿಗೆ ದೂರವಾಣಿ ಮೂಲಕ ಆಗಾಗ್ಗೆ ಫೋನ್ ಮಾಡಿ ದೂರು ನೀಡಿದ್ದ. ಸಂಜೆ ಹೊತ್ತು ಯುವಕರು ತಮ್ಮ ಪಾಡಿಗೆ ಶಟಲ್ ಆಡುತ್ತಿದ್ದಾಗ, ತನಗೆ ನಿದ್ರೆ ಮಾಡಲು ತೊಂದರೆ ಆಗುತ್ತಿದೆ ಎಂದು ಬೊಬ್ಬೆ ಹಾಕಿ ಪತ್ನಿಯ ಜತೆಗೆ ಕಾವೂರು …
Read More »ಕಾಫಿ ಬಿಲ್ ಕೇಳಿದ ಕ್ಯಾಂಟೀನ್ ಸಿಬ್ಬಂದಿ ಮೇಲೆ ಪೊಲೀಸರ ಹಲ್ಲೆ-ಆರೋಪ
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿರುವ ಆಲ್ಫಾ ಕ್ಯಾಂಟೀನ್ನಲ್ಲಿ ಕಾಫಿ ಸೇವಿಸಿದ ಪೊಲೀಸರನ್ನು ಬಿಲ್ ಕೇಳಿದ ಸಿಬ್ಬಂದಿ ಮೇಲೆ ಮೂವರು ಪೊಲೀಸ್ ಕಾನ್ಸ್ಟೆಬಲ್ಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈಚೆಗೆ ರಾತ್ರಿ ಬೀಟ್ನಲ್ಲಿ ಇದ್ದ ಗಂಗರಾಜು, ಬಾಳಪ್ಪ ಹಾಗೂ ಕುಮಾರ್ ಅವರು ಕ್ಯಾಂಟೀನ್ನಲ್ಲಿ ಕಾಫಿ ಕುಡಿದಿದ್ದರು.ನಂತರ ಸಿಬ್ಬಂದಿ ಬಿಲ್ ಕೇಳಿದ್ದಾರೆ. ಈ ವೇಳೆ ‘ನಾವು ಪೊಲೀಸರು. ನಮಗೆ ಬಿಲ್ ಏಕೆ?’ ಎಂದು ದರ್ಪದಿಂದ ವರ್ತಿಸಿದ್ದಾರೆ’ ಎಂಬ ಆರೋಪ ಕೇಳಿಬಂದಿದೆ. …
Read More »ಬಿಜೆಪಿ ನಾಯಕನ ಕಾರಿಗೆ ಬಾಂಬ್
ಕುಂಬಳೆ: ರಾಜಕೀಯ, ಧಾರ್ಮಿಕ ನಾಯಕರಾಗಿರುವ ಕುಂಬಳೆ ವ್ಯಾಪಾರಿ ವ್ಯವಸಾಯಿ ಘಟಕದ ಮಾಜಿ ಅಧ್ಯಕ್ಷ ಬಿ. ವಿಕ್ರಂ ಪೈ ಕುಂಬಳೆ ಅವರ ಕಾರಿಗೆ ಬಾಂಬ್ ಇಟ್ಟು ಸ್ಫೋಟಿಸಿದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.ಪೈ ಅವರು ತನ್ನ ಪೊಸತ್ತಡ್ಕ ಗೋಶಾಲೆಗೆ ಕಾರಿನಲ್ಲಿ ತೆರಳುವಾಗ ಕಾಂಕ್ರೀಟ್ ರಸ್ತೆಯಲ್ಲಿರಿಸಿದ್ದ ನಾಡ ಬಾಂಬ್ ಸಿಡಿಯಿತು. ಕಾರು ಎರಡು ಅಡಿ ಮೇಲಕ್ಕೆ ಹಾರಿ ರಸ್ತೆಯಲ್ಲಿ ನಿಂತಾಗ ಎರಡು ಚಕ್ರಗಳು ಸ್ಫೋಟಗೊಂಡವು. ಕಾರಿನಲ್ಲಿ ಪೈ ಅವರು ಮಾತ್ರವಿದ್ದು ಏನೂ ಅಪಾಯವಿಲ್ಲದೆ …
Read More »ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕ ಅರೆಸ್ಟ್
ಶಿವಮೊಗ್ಗ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಬಗ್ಗೆ ತೀರ್ಥಹಳ್ಳಿ ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ. ಹೊಸನಗರದ ಮಳಲಿ ಗ್ರಾಮದ ನಿವಾಸಿ ರಾಜೇಶ್ ಹಿರೇಮನೆ ಬಂಧಿತ ಆರೋಪಿ. ಬುಧವಾರ ಮಧ್ಯಾಹ್ನ ಬಂಧನಕ್ಕೆ ಒಳಗಾಗಿದ್ದ ಅವರಿಗೆ ಗುರುವಾರ ಜಾಮೀನು ದೊರೆತಿದೆ. ರಾಹುಲ್ ಗಾಂಧಿ ಅವರ ಮುಖದ ಅರ್ಧ ಭಾಗ ಮತ್ತು ಪಾಕಿಸ್ತಾನ …
Read More »ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಕ್ಯಾಂಟರ್, ಬೈಕ್, ಕಾರಿನ ನಡುವೆ ಡಿಕ್ಕಿಯಾಗಿ 7 ಮಂದಿ ಸ್ಥಳದಲ್ಲೇ ಸಾವು !
ಹೊಸಕೋಟೆ : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ.ಸತ್ಯವರ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಕ್ಯಾಂಟರ್ ವಾಹನ, ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊಸಕೋಟೆ-ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದ್ದು, ಕ್ಯಾಂಟರ್ ವಾಹನ, ಬೈಕ್ ಮತ್ತು ಕಾರಿನ ನಡುವೆ ಸರಣಿ ಅಪಘಾತವಾಗಿದ್ದು, ಕಾರಿನಲ್ಲಿದ್ದ 6 …
Read More »ಹಿಂದೂ ಯುವತಿ ಜತೆ ಮದುವೆ, ಮಗು ಆದ ಬಳಿಕ ಅನ್ಯಕೋಮಿನ ಯುವಕ ಪರಾರಿ
ಬೆಂಗಳೂರು: ಹಿಂದೂ ಯುವತಿಯನ್ನು ಮದುವೆ ಯಾಗಿ ಹೆಣ್ಣು ಮಗು ಹುಟ್ಟಿದ್ದ ಬಳಿಕ ಪರಾರಿಯಾಗಿರುವ ಅನ್ಯ ಕೋಮಿನ ಯುವಕನ ವಿರುದ್ಧ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಿಟಿಎಂ ಲೇಔಟ್ ನಿವಾಸಿ ಸೈಯದ್ ಇಮ್ತಿಯಾಜ್ ವಿರುದ್ಧ ಕೊಲ್ಕೋತ್ತಾ ಮೂಲದ ಮಹಿಳೆ ದೂರು ನೀಡಿದ್ದು, ಆರೋಪಿ ಪರಾರಿಯಾಗಿದ್ದಾನೆ.ಆತನಿ ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಸಾಮಾಜಿಕ ಜಾಲತಾಣದ ಮೂಲಕ ಕೊಲ್ಕೋತ್ತಾ ಮೂಲದ ಹಿಂದೂ ಯುವತಿಯನ್ನು ಪರಿಚಯಿಸಿ ಕೊಂಡ ಸೈಯದ್ ಇಮ್ತಿಯಾಜ್, ಬಳಿಕ ಆಕೆಯನ್ನು …
Read More »ಹೊತ್ತಿ ಉರಿದ ಕಾರು
ಬಳ್ಳಾರಿ : ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡ ಪರಿಣಾಮ ಬೆಂಕಿಗೆ ಕಾರು ಆಹುತಿಯಾದ ಘಟನೆ ಇಲ್ಲಿನ ಗವಿಯಪ್ಪ ವೃತ್ತದ ಬಳಿ ಸೋಮವಾರ ನಡೆದಿದೆ.ಸಂಡೂರು ತಾಲೂಕಿನ ತೋರಣಗಲ್ ಎಂ.ರಾಜು ಎಂಬುವವರ ಕಾರು ಆಗಿದೆ. ತೋರಣಗಲ್ನಿಂದ ನಗರಕ್ಕೆ ಆಗಮಿಸುವ ವೇಳೆ ಇದ್ದಕ್ಕಿದಂತೆ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಕಾರಿನಲ್ಲಿದ್ದವರನ್ನು ಇಳಿಸಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ದಳ ತಂಡ ಬೆಂಕಿ ನಂದಿಸಿದ್ದಾರೆ. ಸಂಚಾರ ಠಾಣಾ ಪೊಲೀಸರು ಸುಗಮ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





