ಉತ್ತರ ಕರ್ನಾಟಕ,ಸೇವಾ ಭಾರತೀಯ ವಿದ್ಯಾವಿಕಾಸ ಪ್ರಕಲ್ಪದ ಅಡಿಯಲ್ಲಿ ನಡೆಯುತ್ತಿರುವ ಹಿಂದುಳಿದ ಬಸ್ತಿಗಳ ಮಕ್ಕಳ ಉಚಿತ ಮನೆಪಾಠ ಕಾರ್ಯಕ್ರಮದ ವಾರ್ಷಿಕೋತ್ಸವ ಭಾನುವಾರ ಜರುಗಿತು. ಸಂಸ್ಕಾರ, ವಿದ್ಯೆ ಮತ್ತು ಶಿಸ್ತು ಈ ಮೂರು ಅಂಶಗಳನ್ನು ಒಳಗೊಂಡ ಈ ಕಾರ್ಯಕ್ರಮದಲ್ಲಿ 800ಕ್ಕೂ ಹೆಚ್ಚು ಮಕ್ಕಳು, 100ಕ್ಕೂ ಹೆಚ್ಚು ಶಿಕ್ಷಕಿಯರು ಮತ್ತು ಪಾಲಕರು ಪಾಲ್ಗೊಂಡಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾವಿಕಾಸ ಪ್ರಕಲ್ಪದ ರಾಜ್ಯ ಅಧ್ಯಕ್ಷೆ ಶೀಮತಿ ಭಾರತಿ ನಂದಕುಮಾರ ಅವರು, ಉತ್ತರ ಕರ್ನಾಟಕದ ವಿವಿಧ ನಗರಗಳಲ್ಲಿ 300ಕ್ಕೂ …
Read More »ರೈಲಿನಿಂದ ಬಿದ್ದು ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಸಾವು
ಪುತ್ತೂರು: ಚಲಿಸುತ್ತಿದ್ದ ರೈಲಿನಿಂದ ಬಿದ್ದು 25ರ ಹರೆಯದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ಮುಂಜಾನೆ ಚನ್ನರಾಯಪಟ್ಟಣ ಬಳಿ ನಡೆದಿದೆ. ಮೃತರನ್ನು ಪುಣಚ ನಿವಾಸಿ ನಿಶಿತ್ ನಾಯ್ಕ್ ಎಂದು ಗುರುತಿಸಲಾಗಿದೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಅವರು ಬೆಂಗಳೂರಿನ ಕಲ್ಯಾಣ್ ಜ್ಯುವೆಲರ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ನಿಶಿತ್ ಸೋಮವಾರ ರಾತ್ರಿ ಬೆಂಗಳೂರಿನಿಂದ ತನ್ನ ಊರಿಗೆ ತೆರಳಲು ರೈಲಿನಲ್ಲಿ ತೆರಳಿದ್ದರು. ಮೂಲಗಳ ಪ್ರಕಾರ, ಅವರು ಜನರಲ್ ಕಂಪಾರ್ಟ್ಮೆಂಟ್ನಲ್ಲಿ …
Read More »ಶಿವಮೊಗ್ಗದ ತೀರ್ಥಹಳ್ಳಿ ಬಳಿ ಭೀಕರ ಅಪಘಾತ: ದೇಹದಿಂದ ಬೇರ್ಪಟ್ಟ ತಲೆ
ಶಿವಮೊಗ್ಗದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ತಡೆಗೋಡೆಗೆ ರಭಸವಾಗಿ ಆಟೋವೊಂದು ಢಿಕ್ಕಿಯಾಗಿದ್ದು, ಮಹಿಳೆಯ ರುಂಡ-ಮುಂಡ ಬೇರ್ಪಟ್ಟಿದೆ.ತೀರ್ಥಹಳ್ಳಿಯ ನಾಲೂರು ಗ್ರಾಮದ ಬಳಿ ಅಪಗಾತ ಸಂಭವಿಸಿದೆ. ಮೃತರಾದ ನಿಶ್ಮಿತಾ ಶೆಟ್ಟಿ, ಪತಿ ಸುದರ್ಶನ್ ಶೆಟ್ಟಿ ಹಾಗೂ ಮಗ ಸಂಚಿತ್ ಜತೆ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಸಮೀಪ ಇರುವ ಶಬರಿ ಹೊಟೇಲ್ನಲ್ಲಿ ಸುದರ್ಶನ್ ಮತ್ತು ಫ್ಯಾಮಿಲಿ ಸಂಬಂಧಿಕರ ಮನೆಗೆ ಗೃಹಪ್ರವೇಶಕ್ಕಾಗಿ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಬರುವಾಗ …
Read More »ರಾಯಚೂರಲ್ಲಿ ಆಟೋಗೆ ‘KKRTC’ ಬಸ್ ಡಿಕ್ಕಿಯಾಗಿ, ಸ್ಥಳದಲ್ಲೇ ಇಬ್ಬರ ಸಾವು, 12 ಜನರಿಗೆ ಗಾಯ!
ರಾಯಚೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕೆಕೆಆರ್ಟಿಸಿ ಬಸ್ ಡಿಕ್ಕಿಯಾಗಿ ಆಟೋದಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕರಿಗುಡ್ಡ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಮೃತರನ್ನ ಮಲ್ಲಪ್ಪ (60) ಸ್ಥಳದಲ್ಲಿ ಸಾವನಪ್ಪಿದ್ದರೆ, ಇನ್ನು ರಿಮ್ಸ್ ನಲ್ಲಿ ದಾಖಲಾಗಿದ್ದ ಮೋನಮ್ಮ (35) ಎನ್ನುವವರು ಚಿಕಿತ್ಸೆ ಫಲಕರಿಯಾಗದೆ ಸಾವನಪ್ಪಿದ್ದಾರೆ. ಓವರ್ ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಆಟೋಗೆ ಬಸ್ ಡಿಕ್ಕಿ ಹೊಡೆದಿದೆ. ಆ …
Read More »ಬೊಲೆರೋ ಡಿಕ್ಕಿಯಾಗಿ ಬೈಕ್ ಸವಾರ ಸಾವು
ಕನಕಪುರ:ರಾಮನಗರ & ಚಿಕ್ಕೇನಹಳ್ಳಿ ರಸ್ತೆಯಲ್ಲಿ ಬಳಿ ಬೊಲೆರೋ ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತಾಲೂಕಿನ ಚಿಕ್ಕೇನಹಳ್ಳಿ ಸಮೀಪದ ಕೆಂಬರಲು ಗ್ರಾಮದ ಸಾಗರ್(24) ಮೃತ. ರಾಮನಗರ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಬೊಲೆರೋ ಡಿಕ್ಕಿಯಾದ್ದು, ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಗ್ರಾಮಾಂತರ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಕಾಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ …
Read More »ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ: ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಕುಟುಂಬದ ಪ್ರಾಣ
ಉಡುಪಿ: ಕಾಪು ತಾಲೂಕಿನ ಶಿರ್ವ ಎಂಬಲ್ಲಿ ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಚಾಲಕ ಸೇರಿದಂತೆ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಶಿರ್ವ ಕಡೆ ಬರುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಪ್ರಯಾಣಿಕರು ಕಾರಿನಿಂದ ಇಳಿಯುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕಾರು ನಡು ರಸ್ತೆಯಲ್ಲಿ ಸುಟ್ಟು ಕರಕಲಾಗಿದೆ. ಬೆಂಕಿಯೂ ಎಂಜಿನ್ ಭಾಗದಲ್ಲಿ ಮೊದಲು ಕಾಣಿಸಿಕೊಂಡ ಹೊಗೆ ಬಂದಿದೆ. ಇದನ್ನು ನೋಡಿ ಚಾಲಕ ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾನೆ. …
Read More »ವಿಜಯಪುರದ ಕನ್ನೂರಿನಲ್ಲಿ ಲಘು ಭೂಕಂಪ: ಭಯಭೀತರಾಗಿ ಮನೆಯಿಂದ ಹೊರಗೆ ಓಡಿದ ಜನ
ವಿಜಯಪುರ: ತಾಲ್ಲೂಕಿನ ಕನ್ನೂರು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ 11.43ಕ್ಕೆ ಲಘು ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 2.6 ಭೂಕಂಪನದ ತೀವ್ರತೆ ದಾಖಲಾಗಿದೆ. ಭೂಮಿ ಒಳಗಿನಿಂದ ಸ್ಪೋಟದ ಸದ್ದು ಕೇಳಿಬಂದಿಂದೆ. ಭೂಮಿ ಕಂಪಿಸಿದ್ದರಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ‘ಭೂಕಂಪನ ತೀವ್ರತೆ ಕಡಿಮೆಯಿದ್ದು, ಈ ರೀತಿಯ ಭೂಕಂಪವು ಸ್ಥಳೀಯರಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಭೂಕಂಪನ ಕೇಂದ್ರಬಿಂದುವು ಭೂಕಂಪನ ವಲಯ ಮೂರರಲ್ಲಿ ಬರುವುದರಿಂದ ಜನರು ಭಯಭೀತರಾಗಬೇಕಾಗಿಲ್ಲ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ …
Read More »ಇಬ್ಬರು ಸರಗಳ್ಳರ ಬಂಧನ :ಚಿನ್ನಾಭರಣ ವಶ
ಗೌರಿಬಿದನೂರು: ನಗರದ ಮಾದನಹಳ್ಳಿಯಲ್ಲಿ ಜ.27ರಂದು ನಡೆದಿದ್ದ ಸರಗಳ್ಳತನ ಪ್ರಕರಣ ಸಂಬಂಧ ಇಬ್ಬರು ಸರಗಳ್ಳರನ್ನು ಬಂಧಿಸಿ ಚಿನ್ನಾಭರಣ, ಬೈಕ್ ವಶಪಡಿಸಿಕೊಳ್ಳಲಾಗಿದೆ. ಆಂಧ್ರ ಮೂಲದ ಎಸ್.ಕೆ. ಕೃಪಾರಾವ್, ಮಲ್ಲೇಲ ಕೊಂಡಾರೆಡ್ಡಿ ಬಂಧಿತರು. 65 ಗ್ರಾಂ ಬಂಗಾರದ ಮಾಂಗಲ್ಯ ಸರಗಳು, 2 ಬೈಕ್ಗಳನ್ನು ಸೋಮವಾರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜ.27ರಂದು ಮಾದನಹಳ್ಳಿ ಲಕ್ಷ್ಮಮ್ಮ (70) ಎಂಬುವವರು 22 ಗ್ರಾಂ ಮಾಂಗಲ್ಯಸರ, ಲಕ್ಷ್ಮಿ ಬೊಟ್ಟು, ಚೈನ್ ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಿಸಿದರು. ದೂರಿನ …
Read More »ಬಸ್ ಹತ್ತುವಾಗ ₹4.50 ಮೌಲ್ಯದ ಚಿನ್ನಾಭರಣ ಕಳವು
ಕಲಬುರಗಿ: ನಗರದ ರಾಮಮಂದಿರ ವೃತ್ತದಲ್ಲಿ ಮಹಿಳೆಯೊಬ್ಬರು ಬಸ್ ಹತ್ತುವಾಗ ಅವರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಶಹಾಬಾದ್ನ ಭಂಕೂರ ಗ್ರಾಮ ನಿವಾಸಿ ಸಂಗೀತಾ ಗೌರ ಚಿನ್ನಾಭರಣ ಕಳೆದುಕೊಂಡ ಮಹಿಳೆ. ‘ಕಲಬುರಗಿಯಲ್ಲಿ ಸಂಬಂಧಿಕರ ಧಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ಊರಿಗೆ ಹೋಗಲು ರಾಮಮಂದಿರಲ್ಲಿ ಬಸ್ ಏರಿ ಕುಳಿತೆ. ಟಿಕೆಟ್ ತೆಗೆಸಲು ನೋಡಿದಾಗ ನನ್ನ ವ್ಯಾನಿಟಿ ಬ್ಯಾಗ್ ಚೈನ್ ತೆರೆದಿತ್ತು. ಅದರಲ್ಲಿ ಇಟ್ಟಿದ್ದ ₹4.50 ಲಕ್ಷ ಮೌಲ್ಯದ 30 ಗ್ರಾಂ ಚಿನ್ನಾಭರಣಗಳು …
Read More »ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಕಳವು: ಮಹಿಳೆ ಸಾವು
ನೆಲಮಂಗಲ: ಮುಂಜಾನೆ ಮನೆಯಂಗಳದ ಕಸ ಗುಡಿಸುತ್ತಿದ್ದ ಮಹಿಳೆ ಮುಖಕ್ಕೆ ಖದೀಮರು ಸ್ಪ್ರೇ ಸಿಂಪಡಿಸಿ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದು ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹುಸ್ಕೂರು ಗ್ರಾಮದಲ್ಲಿ ನಡೆದಿದೆ. ಜ್ಯೋತಿ (45) ಮೃತರು. ಮನೆಯಂಗಳದ ಕಸ ಗುಡಿಸಿ, ರಂಗೋಲಿ ಹಾಕಲು ಮುಂದಾಗಿದ್ದಾಗ ಬೈಕ್ನಲ್ಲಿ ಬಂದ ಕಳ್ಳರು, ಜ್ಯೋತಿಯ ಮುಖಕ್ಕೆ ಸ್ಪ್ರೇ ಸಿಂಪಡಿಸಿ 70 ಗ್ರಾಂನ ಸರ ಕಸಿದು ಪರಾರಿಯಾದರೆ, ಇತ್ತ ಕುಸಿದು ಬಿದ್ದ ಜ್ಯೋತಿ ಮೇಲೇಳಲೇ ಇಲ್ಲ.ಕುಟುಂಬದವರು ಕೂಡಲೇ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





