Breaking News

BigTv News

ಬೆಂಗಳೂರು: ಪ್ರಿಯಕರನ ಜೊತೆ ಓಡಿ ಹೋದ ಮಗಳು; ಪತಿಯ ಎದೆಗೆ ಚೂರಿ ಇರಿದು ಕೊಂದ ಪತ್ನಿ

ಎರಡನೇ ಮಗಳು ಪ್ರಿಯಕರನ ಜೊತೆ ಓಡಿ ಹೋದ ವಿಚಾರವಾಗಿ ದಿನೇ ದಿನೇ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಆಕ್ರೋಶಕೊಂಡ ಪತ್ನಿಯೇ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಮೃತನನ್ನು ಮುರುಗೇಶ್​​ ಎಂದು ಗುರುತಿಸಲಾಗಿದೆ.ಕೊಲೆ ಪ್ರಕರಣ ಸಂಬಂಧ ಆರೋಪಿ ಪತ್ನಿ ಲಕ್ಷ್ಮೀಯನ್ನು ಪೊಲೀಸರು ಬಂಧಿಸಿದ್ದಾರೆ. ಮುರುಗೇಶ್ ಮತ್ತು ಲಕ್ಷ್ಮೀ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದರು. ಈ ಪೈಕಿ ಮೊದಲ ಮಗಳಿಗೆ ಮದುವೆಯಾಗಿತ್ತು. ಆದರೆ ಎರಡನೇ ಮಗಳು ಪ್ರೀತಿಸಿದ ಯುವಕನ ಜೊತೆ …

Read More »

ಮದುವೆ ಆಗಿ 3 ವರ್ಷಗಳಾದರೂ ಮಕ್ಕಳಾಗಿಲ್ಲವೆಂದು ಹೆಂಡತಿ ಕಾಟ | ಸಿಟ್ಟಿಗೆದ್ದು ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಪತಿ

ಬೆಳಗಾವಿ: ಮದುವೆ ಆಗಿ 3 ವರ್ಷಗಳಾದರೂ ಮಕ್ಕಳಾಗಿಲ್ಲವೆಂದು ಹೆಂಡತಿ ಕಾಟಕ್ಕೆ ಸಿಟ್ಟಿಗೆದ್ದ ಪಾಪಿ ಗಂಡ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ನಡೆದಿದೆ.ರಾಜೇಶ್ವರಿ ಫಕೀರಪ್ಪ ಗಿಲಕ್ಕ (21) ಪತಿಯಿಂದ ಕೊಲೆಯಾದ ದುರ್ದೈವಿ. ಕೊಲೆಗೈದ ಬಳಿಕ ಪತ್ನಿ ಹೃದಯಾಘಾತದಿಂದ ಮೃತಳಾಗಿದ್ದಾಳೆಂದು ಕಥೆ ಕಟ್ಟಿದ್ದ ಭೂಪ, ಸಂಬಂಧಿಕರೆಲ್ಲರಿಗೂ ಫೋನ್ ಮಾಡಿ ಹೇಳಿದ್ದಾನೆ ಎನ್ನಲಾಗುತ್ತಿದೆ.ಅಂತ್ಯಕ್ರಿಯೆಗೆ ಬಂದ ಪೋಷಕರು ಮೃತದೇಹ ನೋಡಿ ರಾಜೇಶ್ವರಿ ಕೊರಳಲ್ಲಿ ಮಾರ್ಕ್ ಮೂಡಿದ ಹಿನ್ನೆಲೆಯಲ್ಲಿ …

Read More »

ರೈಲ್ವೆ ಹಳಿಯಲ್ಲಿ ಅಡ್ಡವಾಗಿ ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ರೈಲು

ಜಾರ್ಖಂಡ ರೈಲ್ವೆ ಕ್ರಾಸಿಂಗ್​ನಲ್ಲಿ ಮುಂದಕ್ಕೆ ಹೋಗಲಾಗದೆ ಹಳಿಗೆ ಅಡ್ಡಲಾಗಿ ನಿಂತಿದ್ದ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿರುವ ಭಯಾನಕ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ನವದಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಘಟನೆ ನಡೆದಿದೆ. ಗೊಂಡಾ-ಅಸನ್ಸೋಲ್ ಎಕ್ಸ್‌ಪ್ರೆಸ್ ಕ್ರಾಸಿಂಗ್ ಮೂಲಕ ಹಾದುಹೋಗುತ್ತಿತ್ತು. ಟ್ರಕ್ ಈ ಕಡೆಯಿಂದ ಹಳಿ ದಾಟಿದಾಗ ಗೇಟ್ ತೆರೆದಿತ್ತು ಅತ್ತ ಹೋಗುವಷ್ಟರಲ್ಲಿ ಮುಚ್ಚಿತ್ತು ಹೀಗಾಗಿ ಅರ್ಧದಾರಿಯಲ್ಲಿ ನಿಂತ ಟ್ರಕ್​ಗೆ ರೈಲು ಡಿಕ್ಕಿ ಹೊಡೆದಿತ್ತು. ರೈಲು ಡಿಕ್ಕಿ ಹೊಡೆದು ತಳ್ಳಿದ ಪರಿಣಾಮ ಟ್ರಕ್​ …

Read More »

ಅತ್ತೆ ಮಗನನ್ನೇ ಪ್ರೀತಿಸಿ ಮದುವೆಯಾದ ಯುವತಿ: ಹಳ್ಳಿಯಲ್ಲಿರಲು ಬೇಸರಗೊಂಡು ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆ

ಕಲಬುರಗಿ ನಗರದ ಸಿದ್ದೇಸ್ವರ ಕಾಲೋನಿಯಲ್ಲಿ ನವವಿವಾಹಿತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅನಸೂಯ ಆತ್ಮಹತ್ಯೆಗೆ ಶರಣಾಗಿರುವ ನವವಿವಾಹಿತೆ. ಅನಸೂಯ ಅತ್ತೆ ಮಗನನ್ನು ಪ್ರೀತಿಸಿ ವಿವಾಹವಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಸಂಬಂಧಿಕರ ಸಮ್ಮುದಲ್ಲಿ ಮದುವೆಯಾಗಿತ್ತು. ಮದುವೆಯಾದ ಕೆಲ ದಿನಗಳಲ್ಲೇ ನವವಿವಾಹಿತೆಯ ಕನಸು ಕಮರಿಹೋಗಿದೆ. ಹಳ್ಳಿಯಲ್ಲಿ ವಾಸವಾಗುತ್ತಿರುವುದಕ್ಕೆ ಅನಸೂಯ ಬೇಸರಗೊಂಡಿದ್ದಳು. ಅನುಸೂಯ ಸಹೋದರಿಯರು ಬೆಂಗಳೂರು ಹಾಗೂ ಮುಂಬೈನಲ್ಲಿ ವಾಸವಾಗಿದ್ದರು. ತಾನು ಮದುವೆ ಬಳಿಕ ಕಲಬುರಗಿಯಂತಹ ಹಳ್ಳಿಗೆ ಬಂದು ನೆಲೆಸಿದ್ದು ಆಕೆಯನ್ನು ಘಾಸಿಗೊಳಿಸಿತ್ತು. ಮದುವೆ ಬಳಿಕ …

Read More »

ಬ್ಯಾಂಕ್ ಕೆವೈಸಿ ನೆಪದಲ್ಲಿ 6.50 ಲಕ್ಷ ರೂ. ವಂಚನೆ

ಶಿವಮೊಗ್ಗ: ಬ್ಯಾಂಕ್ ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ಅಪರಿಚಿತರು ಕಳುಹಿಸಿದ ಲಿಂಕ್ ಹಾಗೂ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ವ್ಯಕ್ತಿ 6.50 ಲಕ್ಷ ರೂ. ಕಳೆದುಕೊಂಡಿದ್ದಾರೆ. ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಎಸ್‌ಬಿಐ(Sbi) ಖಾತೆ ಅಪ್‌ಡೇಟ್ ಮಾಡುವಂತೆ ಮೊಬೈಲ್‌ಗೆ ಮೆಸೇಜ್ ಬಂದಿತ್ತು.ಅದನ್ನು ನಂಬಿದ ಅವರು ಫೈಲ್ ಡೌನ್‌ಲೋಡ್ ಮಾಡಿ ಮಾಹಿತಿ ಭರ್ತಿ ಮಾಡಿದ್ದರು. ಮೊದಲು 50 ಸಾವಿರ ರೂ., ನಂತರ ಎರಡು ಬಾರಿ ತಲಾ 2 ರೂ. ಹಾಗೂ ಒಮ್ಮೆ 1 ಲಕ್ಷ …

Read More »

ಡ್ರಗ್ಸ್ ಪೆಡ್ಲಿಂಗ್‌: ಹೊರ ರಾಜ್ಯದ ವ್ಯಕ್ತಿ ಸೇರಿ ಮೂವರ ಸೆರೆ

ಬೆಂಗಳೂರು: ಡ್ರಗ್ಸ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಹೊರ ರಾಜ್ಯದ ವ್ಯಕ್ತಿ ಸೇರಿ ಮೂವರನ್ನು ಜ್ಞಾನಭಾರತಿ ಹಾಗೂ ಕೊತ್ತನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹4.90 ಲಕ್ಷ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಜ್ಞಾನಭಾರತಿ ಠಾಣೆಯ ಪೊಲೀಸರು, ಕೆಂಗೇರಿ 100 ಅಡಿ ರಸ್ತೆಯ ಉಲ್ಲಾಳ ಕೆರೆಯ ಪಕ್ಕದ ಬಸ್ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿ, ಹೊರ ರಾಜ್ಯದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನಿಂದ 11 ಗ್ರಾಂ …

Read More »

ಮರ್ಯಾದಾ ಹತ್ಯೆ: ಸಹೋದರರಿಂದ ತಂಗಿ, ಆಕೆಯ ಮುಸ್ಲಿಂ ಪ್ರೇಮಿಯ ಬರ್ಬರ ಹತ್ಯೆ!

ಮೊರಾದಾಬಾದ್‌(ಉತ್ತರ ಪ್ರದೇಶ): ಅಂತರ್ಧರ್ಮೀಯ ಪ್ರೇಮಿಗಳಿಬ್ಬರನ್ನು ಯುವತಿಯ ಸಹೋದರರೇ ಮಾರ್ಯಾದಾ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಹತ್ಯೆಗೀಡಾದವರು 19 ವರ್ಷದ ಕಾಜಲ್ ಮತ್ತು ಆಕೆಯ ಪ್ರೇಮಿ 27 ವರ್ಷದ ಅರ್ಮಾನ್ ಎಂದು ಗುರುತಿಸಲಾಗಿದೆ. ಇಬ್ಬರೂ ಮೊರಾದಾಬಾದ್‌ನ ಉಮ್ರಿ ಸಬ್ಜಿಪುರ ಗ್ರಾಮದ ನಿವಾಸಿಗಳಾಗಿದ್ದು, ಕಾಜಲ್ ಕಾಲೇಜು ವಿದ್ಯಾರ್ಥಿನಿಯಾಗಿದ್ದಳು. ಕಾಜಲ್ ಮತ್ತು ಅರ್ಮಾನ್ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಇಬ್ಬರೂ ಹಿಂತಿರುಗದಿದ್ದಾಗ, ಅವರ ಕುಟುಂಬಗಳು ದೂರು ದಾಖಲಿಸಿದ್ದರು. ಹುಡುಕಾಟದ ವೇಳೆ ಹಳ್ಳಿಯಿಂದ ಕೆಲವು ಮೀಟರ್ …

Read More »

ಬುದ್ದಿ ಮಾತು ಹೇಳಿದ್ದಕ್ಕೆ ಕೊಲೆ! ಹುಬ್ಬಳ್ಳಿಯಲ್ಲಿ ಸಂಬಂಧಿಯ ಕೈಯಲ್ಲಿ ವ್ಯಕ್ತಿ ಹತ್ಯೆ

ಹುಬ್ಬಳ್ಳಿ ನಗರದಲ್ಲಿ ಶಾಕ್ ನೀಡುವಂತಹ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬುದ್ದಿ ಮಾತು ಹೇಳಿದ್ದಕ್ಕೆ ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಗೌಶಿಯಾ ಟೌನ್‌ನಲ್ಲಿ ಕಳೆದ ರಾತ್ರಿ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಅಹ್ಮದ್ ರಜಾಕ್ ಶಹಪೂರ್ (48) ಎಂದು ಗುರುತಿಸಲಾಗಿದ್ದು, ಅವರು ಹಳೆ ಹುಬ್ಬಳ್ಳಿ ನಿವಾಸಿಯಾಗಿದ್ದು, ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಆರೋಪಿ ಸದ್ದಾಂ ಎಂಬಾತ ಅಹ್ಮದ್ ರಜಾಕ್ ಅವರ ಸಹೋದರನ ಮಗಳ ಪತಿಯಾಗಿದ್ದು, ಪತ್ನಿಯನ್ನು ಕರೆದುಕೊಂಡು …

Read More »

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬುಧವಾರ ತುಯಿಬೊಂಗ್ ಪ್ರದೇಶದಲ್ಲಿರುವ ಮನೆಯಿಂದ ರಿಷಿಕಾಂತ ಸಿಂಗ್ ಎಂಬ ವ್ಯಕ್ತಿಯನ್ನು ಮನೆಯಿಂದ ಅಪಹರಿಸಿದ ಬಂಡುಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಇಲ್ಲಿನ ಕೆಲವು ಸ್ಥಳಗಳಲ್ಲಿ ಕಲ್ಲು ತೂರಾಟ ನಡೆದಿದೆ. ಹಾಗೂ ಪ್ರತಿಭಟನೆಗಳು ನಡೆದಿವೆ ಎಂದು ಪೊಲೀಸರು ಹೇಳಿದ್ದಾರೆ. ಹತ್ಯೆ ಮಾಡಿದವರನ್ನು ಯುನೈಟೆಡ್ …

Read More »

ನಕಲಿ ದಾಖಲೆ ಮೂಲಕ ನಿವೇಶನ ಕಬಳಿಕೆ ; ಸಿಸಿಬಿ ಪೊಲೀಸರಿಂದ ಆರೋಪಿ ಬಂಧನ

ಮಾಜಿ ಸಂಸತ್ ಸದಸ್ಯೆ ತೇಜಸ್ವಿನಿ ಗೌಡ ಅವರ ಸಹೋದರನಿಗೆ ಸೇರಿದ ನಿವೇಶನವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ ಪ್ರಕರಣದಲ್ಲಿ, ಆರ್.ಎಂ.ವಿ. ಎರಡನೇ ಹಂತದ ನಾಗಶೆಟ್ಟಿಹಳ್ಳಿಯ ನಿವಾಸಿ ಎಂ. ನಾರಾಯಣಸ್ವಾಮಿ ಎಂಬ ಪ್ರಮುಖ ಆರೋಪಿಯನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಸಿಸಿಬಿ ಪೊಲೀಸರು, ಈ ಅಕ್ರಮದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಾದ ಮುನಿರಾಜು ಎಂ., ಎಂ. ಮುನಿಸ್ವಾಮಿ, ಮಮತಾ ಎಂ., ಸಂತೋಷ್ ಎಸ್. ಹಾಗೂ ಶ್ರೀಕಾಂತ್ ಅವರನ್ನು ಬಂಧಿಸುವುದಕ್ಕಾಗಿ ಕ್ರಮ …

Read More »