Breaking News

BigTv News

ಅಪಘಾತದಲ್ಲಿ ಗಾಯಗೊಂಡಿದ್ದ ಬಸ್ ಚಾಲಕ ರಫೀಕ್ ಸಾವು: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಬಸ್ ಚಾಲಕ ಮಹಮ್ಮದ್ ರಫೀಕ್(42) ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಬೆಂಕಿಗಾಹುತಿಯಾಗಿತ್ತು. ಅಪಘಾತದಲ್ಲಿ ಚಾಲಕ ಮಹಮ್ಮದ್ ರಫೀಕ್ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾವೇರಿ ಜಿಲ್ಲೆ ಶಿಗ್ಗಾಂವಿ ನಿವಾಸಿಯಾಗಿದ್ದ ರಫೀಕ್ ಅವರನ್ನು ನಿನ್ನೆ ಮಧ್ಯಾಹ್ನ …

Read More »

ಲೇಡಿ ನರ್ಸ್ ಗಳು, ಸಹೋದ್ಯೋಗಿಗಳು ಬಟ್ಟೆ ಬದಲಿಸುವುದನ್ನು ವಿಡಿಯೋ ಚಿತ್ರೀಕರಿಸಿ ವಿಕೃತಿ: ಆರೋಪಿ ಅರೆಸ್ಟ್

ಬೆಂಗಳೂರು: ಆಸ್ಪತ್ರೆಯಲ್ಲಿ ಮಹಿಳಾ ಸಹೋದ್ಯೋಗಿಗಳ ಖಾಸಗಿ ಫೋಟೋ, ವಿಡಿಯೋ ಚಿತ್ರೀಕರಿಸಿ ವಿಕೃತಿ ಮೆರೆಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಆಸ್ಪತ್ರೆಯಲ್ಲಿ ಲೇಡಿ ನರ್ಸ್ ಗಳು ಬಟ್ಟೆ ಬದಲಿಸುವ ವಿಡಿಯೋ ಚಿತ್ರೀಕರಿಸಿ ವಿಕೃತಿ ಮೆರೆಯುತ್ತಿದ್ದ ಬೆಂಗಳೂರಿನ ನಾಗರಭಾವಿ ಖಾಸಗಿ ಆಸ್ಪತ್ರೆಯ ನೌಕರ ಸುವೆಂದು ಮೊಹಂತಿ ಈ ಕೃತ್ಯವೆಸಗುತ್ತಿದ್ದ.ಇದನ್ನು ಗಮನಿಸಿದ ನರ್ಸ್, ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದರು. ವೈದ್ಯ ಚೇತನ್ ತಕ್ಷಣ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ …

Read More »

ವರದಕ್ಷಿಣೆ ಕಿರುಕುಳದಿಂದ ಬೆಸತ್ತು ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ಅಕ್ಟೋಬರ್ 29ರಂದು ಗಾನ್ವಿ ಮತ್ತು ಸೂರಜ್ ಮದುವೆಯಾಗಿತ್ತು. ಸೂರಜ್ ಮನೆಯವರ ಬೇಡಿಕೆಯಂತೆ ಅದ್ದೂರಿಯಾಗಿ ಆರತಕ್ಷತೆ ನಡೆದಿತ್ತು.

ಬೆಂಗಳೂರಲ್ಲಿ ವರದಕ್ಷಿಣೆ ಕಿರುಕುಳ : 2 ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆಗೆ ಯತ್ನ!ಹನಿಮೂನ್ ಗೆ ಶ್ರೀಲಂಕಾ ಗೆ ಹೋಗಿ ದಂಪತಿ ಅರ್ಧಕ್ಕೆ ಹಿಂದಿರುಗಿದ್ದಾರೆ.ವರದಕ್ಷಿಣೆ ಕಿರುಕುಳದಿಂದ ಬೆಸತ್ತು ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ಅಕ್ಟೋಬರ್ 29ರಂದು ಗಾನ್ವಿ ಮತ್ತು ಸೂರಜ್ ಮದುವೆಯಾಗಿತ್ತು. ಸೂರಜ್ ಮನೆಯವರ ಬೇಡಿಕೆಯಂತೆ ಅದ್ದೂರಿಯಾಗಿ ಆರತಕ್ಷತೆ ನಡೆದಿತ್ತು.

Read More »

ಜೈಲಿನಲ್ಲಿ ಮೊಬೈಲ್ ಫೋನ್‌ ಪತ್ತೆ

ಮಂಗಳೂರು ನಗರನಲ್ಲಿರುವ ಜಿಲ್ಲಾ ಕಾರಾಗೃಹದೊಳಗೆ ಮತ್ತೊಂದು ಮೊಬೈಲ್ ಪತ್ತೆಯಾಗಿದೆ.ಕಾರಾಗೃಹದ ಅಧೀಕ್ಷಕ ಶರಣಪ್ಪ ಅವರು ಸೋಮವಾರ ರಾತ್ರಿ 8.40ಕ್ಕೆ ಅಧಿಕಾರಿ, ಸಿಬಂದಿಯೊಂದಿಗೆ ‘ಎ’ ವಿಭಾಗದ 5ನೇ ಕೊಠಡಿಗೆ ತಪಾಸಣೆಗೆ ಹೋದಾಗ ಕೊಠಡಿಯ ಒಳಭಾಗದ ಶೌಚಾಲಯದ ಹತ್ತಿರ ಪ್ಲಾಸ್ಟಿಕ್ ಕವರ್ ಸುತ್ತಿದ ಪೊಟ್ಟಣ ಕಂಡುಬಂದಿತ್ತು.ತೆರೆದು ನೋಡಿದಾಗ ಅದರಲ್ಲಿ ನೋಕಿಯಾ ಕಂಪೆನಿಯ ಬ್ಯಾಟರಿ ಸಮೇತ ಇರುವ ಕೀ ಪ್ಯಾಡ್ ಮೊಬೈಲ್, ಚಾರ್ಜರ್ ಹಾಗೂ ಚಾರ್ಜರ್ ಪಿನ್ ದೊರೆತಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ …

Read More »

ಟೈರ್‌ ಬ್ಲಾಸ್ಟ್‌ ಆಗಿ ಎರಡು ಕಾರ್‌ಗೆ ಡಿಕ್ಕಿ ಹೊಡೆದ ದೈತ್ಯ ಬಸ್‌: ಏಳು ಮಂದಿ ದುರ್ಮರಣ

ಸಾರಿಗೆ ಬಸ್‌ನ ಟೈರ್ ಸ್ಫೋಟಗೊಂಡು 2 ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸಾವಿಗೀಡಾದ ಘಟನೆ ತಿರುಚಿರಾಪಳ್ಳಿ – ಚೆನ್ನೈ ಹೆದ್ದಾರಿಯಲ್ಲಿ ನಡೆದಿದೆ.ಬಸ್‌ ತಿರುಚಿರಾಪಳ್ಳಿಯಿಂದ ಚೆನ್ನೈಗೆ ತೆರಳುತ್ತಿತ್ತು. ಈ ವೇಳೆ ತಿತ್ತಕುಡಿ ಸಮೀಪ ಬಸ್‌ನ ಟೈರ್ ಸಿಡಿದು ಚಲಿಸುತ್ತಿದ್ದ ದಿಕ್ಕನ್ನೇ ಬದಲಿಸಿ, ಎರಡು ಕಾರುಗಳಿಗೆ ಡಿಕ್ಕಿಯಾಗಿದೆ.ಪರಿಣಾಮ 7 ಮಂದಿ ಸಾವನ್ನಪ್ಪಿದ್ದಾರೆ. ಬಸ್‌ ಟೈರ್‌ ಸ್ಫೋಟದಿಂದ ಡಿವೈಡರ್‌ ದಾಟಿ ಎದುರಿನಿಂದ ಬರುತ್ತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಹಲವರು …

Read More »

ಚಿತ್ರದುರ್ಗ ಭೀಕರ ಬಸ್ ಅಪಘಾತ: ಟೆಕ್ಕಿ ಯುವತಿಯರಿಬ್ಬರು ಕಣ್ಮರೆ

ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಹಾಸನದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ.ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯ ನವ್ಯ ಹಾಗೂ ಚನ್ನರಾಯಪಟ್ಟಣ ನಗರದ ಮಾನಸ ಕಣ್ಮರೆಯಾಗಿದ್ದಾರೆ. ಇಬ್ಬರು ಹಾಸನ ನಗರದ ಇಂಜಿನಿಯರಿOಗ್ ಕಾಲೇಜಿನಲ್ಲಿ ಒಟ್ಟಿಗೆ ಇಂಜಿನಿಯರಿOಗ್ ಮುಗಿಸಿದ್ದರು.ಬಳಿಕ ಬೆಂಗಳೂರಿನಲ್ಲಿ ಎಂಟೆಕ್ ಮುಗಿಸಿ, ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನಿOದ ಬುಧವಾರ ರಾತ್ರಿ ಬಸ್ ಹತ್ತಿ ಹೊರಟಿದ್ದರು. ಅಪಘಾತದಲ್ಲಿ ಕಣ್ಮರೆಯಾಗಿದ್ದು, ಚಿತ್ರದುರ್ಗದ ಹಿರಿಯೂರಿನತ್ತ ಯುವತಿಯರ ಪೋಷಕರು ತೆರಳಿದ್ದಾರೆ.

Read More »

ಶಹಾಪುರ: ಮಹಿಳೆ ಆತ್ಮಹತ್ಯೆ; ಕೊಲೆ ಶಂಕೆ

ಇಲ್ಲಿನ ಇಂದಿರಾನಗರದ ಹೊರವಲಯದಲ್ಲಿ ಬುಧವಾರ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.ತಾಲ್ಲೂಕಿನ ಗೋಗಿ (ಕೆ) ಗ್ರಾಮದ ಜಯಮ್ಮ ಗಂಡ ಪರಶುರಾಮ ಹೊಸ್ಮನಿ (35) ಎಂದು ಗುರುತಿಸಲಾಗಿದೆ. ‘ಜಯಮ್ಮ ಅವರಿಗೆ ಮೂರು ಜನ ಗಂಡು ಮಕ್ಕಳು ಇದ್ದಾರೆ. ಎರಡು ತಿಂಗಳಿನಿಂದ ಮೂಲವ್ಯಾದಿ ಕಾಯಿಲೆಯಿಂದ ಬಳಲುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಜಯಮ್ಮಳ ಸಹೋದರ (ಅಣ್ಣ) ತಿಮ್ಮಯ್ಯ ಗುಂಕಲಗದೊಡ್ಡಿ ಅವರು ನನ್ನ ಸಹೋದರಿಯ ಸಾವಿನಲ್ಲಿ ಸಂಶಯವಿದೆ ಎಂದು ಶಹಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read More »

ಕಲಘಟಗಿ: ಮಾರಕಾಸ್ತ್ರಗಳಿಂದ ಹೊಡೆದು ಕೊಲೆ

ಕಲಘಟಗಿ: ತಾಲ್ಲೂಕಿನ ಹುಣಸಿಕಟ್ಟಿ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿದೆ. ಕೊಲೆಯಾದ ವ್ಯಕ್ತಿ ಕುಂದಗೋಳ ತಾಲ್ಲೂಕಿನ ರಾಮನಕೊಪ್ಪ ಗ್ರಾಮದ ನಿವಾಸಿ ವಿಠ್ಠಲ ಬಸಪ್ಪ ಕುರಾಡೆ (30) ಎಂದು ಗುರುತಿಸಲಾಗಿದೆ.ದ್ಯಾವನಕೊಂಡ ಹುಣಸಿಕಟ್ಟಿ ಗ್ರಾಮದ ಮದ್ಯದ ರಸ್ತೆ ಪಕ್ಕದ ಬನ್ನಿ ಬಸವೇಶ್ವರ ದೇವಸ್ಥಾನದ ಎದುರುಗಡೆ ಯಾರೋ ದುಷ್ಕರ್ಮಿಗಳು ಕಬ್ಬಿಣದ ರಾಡ್‌ನಿಂದ ತಲೆ, ಮುಖ, ಕಾಲಿಗೆ ಹೊಡೆದು ಕೊಲೆ ಮಾಡಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಸಿಪಿಐ ಶ್ರೀಶೈಲ …

Read More »

ಬೈಕ್ ಢಿಕ್ಕಿ; ಶಿಕ್ಷಕನಿಗೆ ಗಾಯ

ಮಡಂತ್ಯಾರು: ಕೊಯ್ಯೂರು ಗ್ರಾಮದ ಅದೂರು ಪೆರಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಮೇಶ್ ಅವರು ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುವ ವೇಳೆ ಸರಕಾರಿ ಪ್ರೌಢ ಶಾಲಾ ಸಮೀಪ ಹಿಂದಿನಿಂದ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಸ್ಥಳೀಯ ಯುವಕ ಶಿಕ್ಷಕನಿಗೆ ಬಲವಾಗಿ ಢಿಕ್ಕಿ ಹೊಡೆದ ಘಟನೆ ಸಂಭವಿಸಿದೆ.ಈ ಘಟನೆಯಲ್ಲಿ ಶಾಲಾ ಶಿಕ್ಷಕ ರಮೇಶ್ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡರು. ತತ್‌ಕ್ಷಣ ಸ್ಥಳೀಯರು ಅವರನ್ನು ಬೆಳ್ತಂಗಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು …

Read More »

ಮರ್ಯಾದೆಗೇಡು ಹತ್ಯೆ ಪ್ರಕರಣ: ಇಬ್ಬರು ಅಮಾನತು

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ.ಠಾಣೆಯ ವಿಶೇಷ ವಿಭಾಗದ ಕಾನ್ಸ್ಟೇಬಲ್ ಸಂಗಮೇಶ್ ಸಾಗರ ಮತ್ತು ಬೀಟ್ ಕಾನ್ಸ್ಟೇಬಲ್ ಚಂದ್ರಕಾಂತ್ ರಾಥೋಡ ಅವರನ್ನು ಅಮಾನತು ಮಾಡಲಾಗಿದೆ.ಘಟನೆಯ ಬಗ್ಗೆ ಮಾಹಿತಿ ನೀಡಿದ ಕಾರಣ ಆಂತರಿಕ ತನಿಖೆ ಕಾಯ್ದಿರಿಸಿ ಅಮಾನತು ಮಾಡಿ ಆದೇಶಿಸಿರುವುದಾಗಿ ಧಾರವಾಡ ಎಸ್‌ಪಿ ಗುಂಜನ್ ಆರ್ಯ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು …

Read More »