Breaking News

BigTv News

ಗ್ಯಾಸ್‌ ಸಿಲಿಂಡರ್‌ ಸ್ಫೋಟ: ಆಲಂಕಾರಿಕ ವಸ್ತುಗಳು ಭಸ್ಮ

ಹುಬ್ಬಳ್ಳಿ: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಅದರಗುಂಚಿ ಕ್ರಾಸ್‌ ಬಳಿಯ ವಾಹನಗಳ ಆಲಂಕಾರಿಕ ವಸ್ತುಗಳ ಅಂಗಡಿಯಲ್ಲಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ, ಸುಮಾರು ₹40 ಲಕ್ಷ ಮೌಲ್ಯದ ಸಾಮಗ್ರಿಗಳು ಸುಟ್ಟುಕರಕಲಾಗಿವೆ.ಬುಧವಾರ ಮಧ್ಯಾಹ್ನ ಘಟನೆ ನಡೆದಿದ್ದು, ಬೆಂಕಿಯ ಜ್ವಾಲೆ ಬಾನೆತ್ತರಕ್ಕೆ ಹಬ್ಬಿತ್ತು.ಅದರಿಂದ ದಟ್ಟವಾದ ಹೊಗೆ ಎದ್ದಿದ್ದು ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇಬ್ರಾಹಿಂ ಅಂಗುಖಾನ್, ನಾಸೀರ್, ಫಾರೂಕ್ ಹಾಗೂ ಶಬೀರ್ ಅವರಿಗೆ ಸೇರಿದ ಅಂಗಡಿ ಇದಾಗಿದೆ. ಗ್ರಾಮೀಣ ಠಾಣೆ ಪೊಲೀಸರು ಹಾಗೂ ಆಗ್ನಿ …

Read More »

ನಾಲ್ಕೂವರೆ ವರ್ಷದ ಪುತ್ರಿಯನ್ನು ಪತಿಗೆ ನೀಡಿ ಪ್ರಿಯತಮನ ಜೊತೆ ತೆರಳಿದ ಮಹಿಳೆ

ಕಾಸರಗೋಡು: ನಾಲ್ಕೂವರೆ ವರ್ಷದ ಪುತ್ರಿ ಸಹಿತ ನಾಪತ್ತೆಯಾಗಿದ್ದ ಮಹಿಳೆ ಪ್ರಿಯತಮನೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ನ್ಯಾಯಾಲಯ ಈಕೆಯ ಇಚ್ಛೆಯಂತೆ ತೆರಳಲು ತಿಳಿಸಿದ ಹಿನ್ನೆಲೆಯಲ್ಲಿ ಪುತ್ರಿಯನ್ನು ಪತಿಗೆ ನೀಡಿ ಮಹಿಳೆ ಪ್ರಿಯತಮನೊಂದಿಗೆ ತೆರಳಿದ್ದಾಳೆ.ದೇಲಂಪಾಡಿ ಮಯ್ಯಳ ನಿವಾಸಿ ಎಸ್‌.ಎ. ಕಾವ್ಯ (25) ಪ್ರಿಯತಮನಾದ ಅಣ್ಣಪ್ಪಾಡಿಯ ನಿವಾಸಿ ಅಶ್ವತ್ಥ್‌ ಜೊತೆ ತೆರಳಿದ್ದಾಳೆ. ಡಿ.22 ರಂದು ಬೆಳಗ್ಗೆ ಕಾವ್ಯ ಪುತ್ರಿಯ ಜೊತೆ ಮನೆಯಿಂದ ತೆರಳಿದ್ದಳು. ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ಆದೂರು ಪೊಲೀಸರಿಗೆ ದೂರು ನೀಡಿದ್ದರು. ಕಾವ್ಯ …

Read More »

ಪೆನ್ಸಿಲ್ ನಿಂದ ಗಂಟಲು ಚುಚ್ಚಿ ಯುಕೆಜಿ ವಿದ್ಯಾರ್ಥಿ ಸಾವು

ಯುಕೆಜಿ ವಿದ್ಯಾರ್ಥಿಯೊಬ್ಬ ಬರವಣಿಗೆಗಾಗಿ ಶಾಲೆಗೆ ತಂದ ಪೆನ್ಸಿಲ್ ಖಮ್ಮಂ ಜಿಲ್ಲೆಯಲ್ಲಿ ಬುಧವಾರ ತನ್ನ ಪ್ರಾಣವನ್ನು ಬಲಿ ತೆಗೆದುಕೊಂಡಿದೆ.ಮೃತ ಆರು ವರ್ಷದ ವಿಹಾರ್ ಕುಸುಮಂಚಿ ಮಂಡಲದ ನಾಯಕಕಂಗುಡೆಂನ ಖಾಸಗಿ ಶಾಲೆಯಲ್ಲಿ ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.ಮಧ್ಯಾಹ್ನದ ವಿರಾಮದ ಸಮಯದಲ್ಲಿ, ಅವನು ಶೌಚಾಲಯಕ್ಕೆ ಹೋದನು; ತನ್ನ ತರಗತಿಯ ಕಡೆಗೆ ಓಡುತ್ತಿರುವಾಗ ಅವನು ಆಕಸ್ಮಿಕವಾಗಿ ಕೆಳಗೆ ಬಿದ್ದನು. ಅವನು ಕೈಯಲ್ಲಿ ಹಿಡಿದಿದ್ದ ಪೆನ್ಸಿಲ್ ಅವನ ಗಂಟಲನ್ನು ಚುಚ್ಚಿತು, ಇದು ತೀವ್ರ ರಕ್ತಸ್ರಾವಕ್ಕೆ ಕಾರಣವಾಯಿತು. ತಕ್ಷಣ ಅವನನ್ನು …

Read More »

ಹಿರಿಯೂರು ಬಳಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್‌ಗೆ ಬೆಂಕಿ, 10 ಮಂದಿ ಸಜೀವ ದಹನ

ಚಿತ್ರದುರ್ಗ: ಲಾರಿ ಡಿಕ್ಕಿಯಿಂದಾಗಿ ಖಾಸಗಿ ಬಸ್ಸೊಂದು ಬೆಂಕಿಗಾಹುತಿಯಾಗಿ 10ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಘಟನೆ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ನಡೆದಿದೆ. ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತಿದ್ದ ಲಾರಿ ಬೆಂಗಳೂರಿನಿಂದ ಶಿವಮೊಗ್ಗ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್‌ ಕೋಚ್ ಬಸ್ಸಿಗೆ ಗುದ್ದಿದೆ.ಲಾರಿ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಡಿವೈಡರ್ ದಾಟಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಬಸ್ಸಿಗೆ ಬೆಂಕಿ ಹೊತ್ತುಕೊಂಡು 10ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ 9 …

Read More »

ಚಿನ್ನದ ಅಂಗಡಿ ಶಟರ್‌ ಒಡೆದು ಕೃತ್ಯ: ₹3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ಕಳ್ಳತನ

ಚಿಕ್ಕಬಳ್ಳಾಪುರ: ನಗರದ ಬಿ.ಬಿ ರಸ್ತೆಯ ಎ.ಯು ಚಿನ್ನಾಭರಣ ಮಾರಾಟ ಮಳಿಗೆ ಶಟರ್ ಮುರಿದು ಕಳ್ಳರು 140 ಕೆ.ಜಿ ಬೆಳ್ಳಿ ದೋಚಿ ಪರಾರಿಯಾಗಿದ್ದರೆ. ಇದರ ಮೌಲ್ಯ ₹3 ಕೋಟಿ ಎಂದು ಅಂದಾಜಿಸಲಾಗಿದೆ.ಸೋಮವಾರ ರಾತ್ರಿ ಅಂಗಡಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು ಚಿನ್ನದ ಆಭರಣಗಳ ಲಾಕರ್ ಮುರಿಯಲು ಸಾಧ್ಯವಾಗದ ಕಾರಣ ಬೆಳ್ಳಿ ದೋಚಿದ್ದಾರೆ.ತಮ್ಮ ಮಾಹಿತಿ ದೊರೆಯಬಾರದು ಎಂದು ಸಿಸಿಟಿವಿ ಕ್ಯಾಮೆರಾ ಡಿವಿಆರ್‌ ಸಹ ಕೊಂಡೊಯ್ದಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಸೇರಿದಂತೆ ಪೊಲೀಸ್ …

Read More »

ತಾರಸಿಯಿಂದ ಆಯ ತಪ್ಪಿ ಬಿದ್ದು ಸಾವು

ಕುಂದಾಪುರ: ರಾಜಸ್ಥಾನದ ಕರೋಲಿ ಮೂಲದ ಹೇಮೇಂದರ ಸಿಂಗ್‌ (40) ಅವರು ಬಸ್ರೂರಿನಲ್ಲಿ ತಾರಸಿಯಿಂದ ಆಯ ತಪ್ಪಿಬಿದ್ದು ಮೃತಪಟ್ಟಿದ್ದಾರೆ.ಬಸ್ರೂರು ಗ್ರಾಮದ ಮಾರ್ಗೊಳಿಯಲ್ಲಿ ಟೈಲ್ವ್ ಫಿಟ್ಟಿಂಗ್‌ ಕೆಲಸ ಮಾಡಿಕೊಂಡಿದ್ದ ಅವರು ಬಸ್ರೂರಿನ ಬಾಡಿಗೆ ಮನೆಯಲ್ಲಿದ್ದರು. ಮನೆಯ ತಾರಸಿ ಮೇಲೆ ಪೋನ್‌ನಲ್ಲಿ ಮಾತನಾಡುತ್ತಿರುವಾಗ ಆಯತಪ್ಪಿ ಕೆಳಗೆ ಬಿದ್ದರು.ಎತ್ತಿ ಉಪಚರಿಸಿದಾಗ ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಕುಂದಾಪುರ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು ಮಣಿಪಾಲದ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾಗಿದೆಂದು ಗ್ರಾಮಾಂತರ ಠಾಣೆಯಲ್ಲಿ …

Read More »

ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿಬಿದ್ದ ಕಾರ್: ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವು: 6 ಜನ ಗಂಭೀರ

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಕಾರ್ ಬಿದ್ದು ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮುಕ್ತಿಹಳ್ಳಿ ಸಮೀಪ ನಡೆದಿದೆ.19 ವರ್ಷದ ಮೋಹಿನ್ ಮೃತಪಟ್ಟವರು. ಖಾಸಗಿ ಕಾಲೇಜು ವಿದ್ಯಾರ್ಥಿ ಮೋಹಿನ್ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರ್ ನಲ್ಲಿದ್ದ ಆರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ.ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ನೇಹಿತರ ಜೊತೆಗೆ ಕಾರ್ ನಲ್ಲಿ ಕೊಟ್ಟಿಗೆಹಾರಕ್ಕೆ ಮೋಹಿನ್ ತೆರಳಿದ್ದ. ಅತಿ ವೇಗದ ಚಾಲನೆಯಿಂದ ತಿರುವಿನಲ್ಲಿ ನಿಯಂತ್ರಿಸಲು ಸಾಧ್ಯವಾಗದೆ ಕಾರ್ ಗದ್ದೆಗೆ …

Read More »

ತುಮಕೂರು: ಸುಟ್ಟು ಕರಕಲಾದ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಮುದ್ದರಂಗನಹಳ್ಳಿ ಹಾಗೂ ಮೇಲುಕುಂಟೆ ರಸ್ತೆ ಮಧ್ಯದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ದಾವಣಗೆರೆ ಮೂಲದ ಮಂಜುನಾಥ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಕಾರು ಸುಟ್ಟು ಹೋಗಿರುವುದನ್ನು ನೋಡಲು ಬಂದ ಸ್ಥಳೀಯರಿಗೆ ಕಾರಿನೊಳಗೆ ಮೃತದೇಹ ಇರುವುದನ್ನು ಕಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Read More »

ವಿದ್ಯಾರ್ಥಿನಿ ಮೈಮುಟ್ಟಿ ಥಳಿತ: ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್

ಹಾಸನ: ಸರಿಯಾಗಿ ಓದಲಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ವಸತಿ ಶಾಲೆಯೊಂದರ ಶಿಕ್ಷಕನೊಬ್ಬ ಬಾಲಕಿಗೆ ಥಳಿಸಿರುವ ಪ್ರಕರಣ ನಡೆದಿದೆ. ಅಪ್ರಾಪ್ತೆಯ ಮೈಮುಟ್ಟಿ ಮನಬಂದಂತೆ ಥಳಿಸಿ ಅನುಚಿತ ವರ್ತನೆ ತೋರಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕ ಶ್ರೀನಿವಾಸ್ ಎಂಬುವರ ವಿರುದ್ಧ ಹಾಸನ ತಾಲೂಕಿನ ಶಾಂತಿಗ್ರಾಮ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.ವಸತಿ ಶಾಲೆಯಲ್ಲಿ ಮಗಳು ಚೆನ್ನಾಗಿ ಓದದೇ ಇದ್ದರೆ ನಮಗೆ ಹೇಳಿದ್ದರೆ ಬುದ್ಧಿವಾದ ಹೇಳುತ್ತಿದ್ದೆವು, ಆದರೆ ಮಗಳಿಗೆ ಎಡಗೈ ಮುರಿಯುವಂತೆ ಹಲ್ಲೆ ಮಾಡಿದ್ದಲ್ಲದೆ ಅನುಚಿತವಾಗಿ ವರ್ತಿಸಿರುವ …

Read More »

ರಸ್ತೆ ಅಪಘಾತ: ಸಿಆರ್‌ಪಿ ವೀರೇಶ ಚೌಧರಿ ಸಾವು

ಸಿಂದಗಿ: ತಾಲ್ಲೂಕಿನ ವಂದಾಲ ಗ್ರಾಮದ ಬಳಿ ಕಬ್ಬಿನ ಟ್ರ್ಯಾಕ್ಟರ್‌- ಬೈಕ್‌ ಮಧ್ಯೆ ಡಿಕ್ಕಿ ಉಂಟಾಗಿ ಬೈಕ್‌ ಸವಾರ ಶಿಕ್ಷಣ ಇಲಾಖೆಯ ಸಿಆರ್‌ಪಿ ವೀರೇಶ ಮಡಿವಾಳಪ್ಪ ಚೌಧರಿ (39) ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.ಯಲಗೋಡದಲ್ಲಿ ನಡೆಯಬೇಕಿದ್ದ ಕಲಿಕಾ ಹಬ್ಬದ ಪೂರ್ವಸಿದ್ಧತಾ ಕಾರ್ಯ ಮುಗಿಸಿಕೊಂಡು ಸಿಂದಗಿ ಪಟ್ಟಣಕ್ಕೆ ಮರಳುವಾಗ ಅಪಘಾತವಾಗಿದೆ.ಮೃತರ ಪತ್ನಿ ಈಶ್ವರಿ ನಾಗಠಾಣ ಅವರು ಸಿಂದಗಿ ತಾಲ್ಲೂಕು ಬಂದಾಳ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರು ಪುತ್ರರು …

Read More »