ಚೇತನ್ ಅವರು ಬಾಲಕನನ್ನು ಗದರಿಸಿ, ಕೋಲಿನಿಂದ ಹೊಡೆಯುತ್ತಿರುವ ವಿಡಿಯೋ ಮೊಬೈಲ್ ಮೂಲಕ ಹರಡಿಕೊಂಡಿದ್ದು, ಇದು ಬಾಲಕನ ತಾಯಿಯ ಗಮನಕ್ಕೆ ಬಂದಿದೆ.ಈ ಸಂಬಂಧ ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 60/2025, ಕಲಂ 118(1) BNS-2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸ್ ಕ್ರಮವಾಗತೆಯೆಂದು ತಿಳಿಸಲಾಗಿದೆ. ಪ್ರಕರಣ ತನಿಖೆಯಲ್ಲಿದೆ.
Read More »15 ವರ್ಷದ ವಿದ್ಯಾರ್ಥಿ ಜೊತೆ ನಿರಂತರ ರಿಲೇಷನ್ಶಿಪ್: ಶಿಕ್ಷಕಿ ಅರೆಸ್ಟ್
ಸೋಶಿಯಲ್ ಮೀಡಿಯಾಗಳಾದ ಸ್ನ್ಯಾಪ್ಚಾಟ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಆರೋಪಿ ಶಿಕ್ಷಕಿಯೂ, ಬಾಲಕನಿಗೆ ಲೈಂಗಿಕ ಸಂಬಂಧಕ್ಕಾಗಿ ಪ್ರೇರೆಪಿಸಿದ್ದಾಳೆ. ಶಾಲೆಗೆ ಹೋಗುವ ಮೊದಲು ನಾವು ಭೇಟಿಯಾಗಬಹುದು. ನಾನು ನನ್ನ ಆಟಿಕೆ ತರುತ್ತೇನೆ ಎಂದು ಆಕೆ ಹುಡುಗನಿಗೆ ಸಂದೇಶ ಕಳುಹಿಸಿದ್ದಳು ಆತನ ಸಂಪರ್ಕಿಸಲು ಮನಸ್ಸು ಸಾಕಷ್ಟು ಸೆಳೆಯುತ್ತಿತ್ತು ಎಂದು ಆಕೆ ಹೇಳಿದ್ದಾಳೆ. ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ನಿಂದ ಪರಸ್ಪರರನ್ನು ಡಿಲೀಟ್ ಮಾಡಲು ಸೂಚಿಸುವ ವಿದ್ಯಾರ್ಥಿಯ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾ, ಇದು ನನ್ನ ತಪ್ಪು. …
Read More »ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ: ಮೂರು ಮನೆಗಳು ಸುಟ್ಟು ಕರಕಲು
ಬೆಳಗಾವಿ:- ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಳಿಹೊಸುರ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ಕಾರಣವಾಗಿ ಬೆಂಕಿ ಹೊತ್ತಿದ್ದು, ಮೂರು ಮನೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.ಈ ಬೆಂಕಿಯಿಂದ ಬಾಳೇಶ್ ಹಜೇರಿ, ಲಕ್ಷ್ಮಣ ಡವಳೆ, ಕಿರಣ ಹಜೇರಿ ಅವರ ಮನೆಗಳಿಗೆ ಹಾನಿ ಸಂಭವಿಸಿದೆ.ಮನೆಗಳಲ್ಲಿ ಇದ್ದ ದಿನಬಳಕೆ ವಸ್ತುಗಳು, ಚಿನ್ನಾಭರಣ ಮತ್ತು ನಗದು ಸಹ ಬೆಂಕಿಗೆ ಆರ್ಭಟವಾಗಿದೆ. ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಾಥಮಿಕ …
Read More »ಸಲಿಂಗರತಿ ಕಿರುಕುಳ; ಫೋಕ್ಸೋ ದೂರು ದಾಖಲು
ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಂಬಂಧಿಕರೋರ್ವರ ಮನೆಗೆ ರಜೆಯಲ್ಲಿ ಬಂದಿದ್ದ 13 ರ ಹರೆಯದ ಬಾಲಕನಿಗೆ 16 ರ ಹರೆಯದ ಬಾಲಕ ಸಲಿಂಗರತಿ ಕಿರುಕುಳ ನೀಡಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.ಘಟನೆಗೆ ಸಂಬಂಧಿಸಿದಂತೆ 16 ರ ಬಾಲಕನ ವಿರುದ್ಧ ಫೋಕ್ಸೋ ಕೇಸು ದಾಖಲಿಸಲಾಗಿದೆ.ಕೊಯಿಲಾಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮೂಲತ: ದೂರು ನೀಡಿದಾತನ ಮನೆಯಿಂದ ಕಳೆದ ರಜೆಯಲ್ಲಿ ಆದೂರಿಗೆ ತಲುಪಿದ್ದ. ಈ ಸಮಯದಲ್ಲಿ ಸಂಬಂಧಿಕನಾದ 16 ರ ಹರೆಯದ ಬಾಲಕನ …
Read More »ಮೈಸೂರು ಪೋಲೀಸರ ಭರ್ಜರಿ ಕಾರ್ಯಾಚರಣೆ: 2 ಕೆಜಿ ಗಾಂಜಾ, 7 ಲಕ್ಷ ನಗದು ಸೀಜ್ – ಇಬ್ಬರು ಅರೆಸ್ಟ್
ಮೈಸೂರು ಪೊಲೀಸ್ ಇಲಾಖೆಯ ಭರ್ಜರಿ ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾಣದ ವಸ್ತುಗಳು ವಶವಾಗಿವೆ.ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಪೊಲೀಸರು 2 ಕೆಜಿ ಗಾಂಜಾ, ₹7.30 ಲಕ್ಷ ನಗದು, 10 ತಲ್ವಾರ್ಗಳು ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಈ ಪ್ರಕರಣದ ಸಂಬಂಧ ಫೀರ್ಧೋಶ್ ಮತ್ತು ರೋಷನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರೂ ಮಾಲು ಸಮೇತ ಸಿಕ್ಕಿಬಿದ್ದಿರುವುದು ಪೊಲೀಸರು ತಿಳಿಸಿದರು. ಬಂಧಿತರಿಗೆ ವಿರುದ್ಧವಾಗಿ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. …
Read More »ಪ್ರವಾಸದ ವೇಳೆ ಬಸ್ ಪಲ್ಟಿ ಪ್ರಕರಣ: ಮೈಸೂರಿಗೆ ಆಗಮಿಸಿದ ಪ್ರವಾಸಕ್ಕೆ ತೆರಳಿದ್ದ ಮಕ್ಕಳು
ಮೈಸೂರು: ಶಾಲಾ ಮಕ್ಕಳ ಪ್ರವಾಸದ ವೇಳೆ ಬಸ್ ಪಲ್ಟಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಜಾನೆ 3 ಗಂಟೆಗೆ ಮಕ್ಕಳೆಲ್ಲಾ ಮೈಸೂರಿಗೆ ಆಗಮಿಸಿದ್ದಾರೆ.ಎರಡು ದಿನದ ಹಿಂದೆ ಬಸ್ ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮೃತ ಬಾಲಕನ ಮೃತ ದೇಹವನ್ನು ನಿನ್ನೆಯೇ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.ಪ್ರವಾಸಕ್ಕೆ ತೆರಳಿದ್ದ ಎಲ್ಲಾ ಮಕ್ಕಳು ಬಂದಿದ್ದಾರೆ. ಈ ಪೈಕಿ ನಾಲ್ಕು ಮಕ್ಕಳಿಗೆ ಸಣ್ಣ ಪುಟ್ಟ ಗಾಯವಾಗಿರುವ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದ ಎಲ್ಲಾ …
Read More »ಹಿರ್ಗಾನ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಮೂವರಿಗೆ ಗಾಯ
ಕಾರ್ಕಳದಿಂದ ಹೆಬ್ರಿ ಕಡೆಗೆ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಮಂಗಳವಾರ ಸಂಭವಿಸಿದೆ.ಕಾರ್ಕಳದ ಪಂಚಾಯತ್ರಾಜ್ ವಿಭಾಗದ ಎಂಜಿನಿಯರ್ ಸದಾನಂದ ನಾಯ್ಕ್ ಹಾಗೂ ಪತ್ನಿ ಮಗು ಗಾಯಗೊಂಡವರು.ಹಿರ್ಗಾನ ಗ್ರಾಮದ ಮೂರೂರು ಬಳಿ ಸದಾನಂದ ನಾಯ್ಕ್ ತನ್ನ ಕಾರಿನಲ್ಲಿ ಪತ್ನಿ ಹಾಗೂ ಮಗುವಿನ ಜತೆಗೆ ತಮ್ಮ ಮನೆ ಬ್ರಹ್ಮಾವರದ ಚಾಂತಾರಿಗೆ ಹೊರಟಿದ್ದರು. ಮುರೂರು ಬಳಿ ಏಕಾಏಕಿ ಸೈಕಲ್ ಸವಾರ ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿತು. …
Read More »ಕಳಚಿ ಬಿದ್ದ ಟ್ರ್ಯಾಕ್ಟರ್ ಟ್ರೈಲರ್: ಇಬ್ಬರು ಸಾವು, 8 ಮಂದಿಗೆ ಗಾಯ
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ -ಶಿಕಾರಿಪುರ ರಸ್ತೆಯ ಹಳೆಜೋಗ -ಜಯನಗರ ಗ್ರಾಮದ ಮಧ್ಯೆ ಟ್ರ್ಯಾಕ್ಟರ್ ಟ್ರೈಲರ್ ಕಳಚಿ ಇಬ್ಬರು ಸಾವನ್ನಪ್ಪಿದ್ದು, ಎಂಟು ಜನ ಗಾಯಗೊಂಡಿದ್ದಾರೆ. ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದ ಟ್ರೈಲರ್ ಕಳಚಿ ಬಿದ್ದು ಅಪಘಾತ ಸಂಭವಿಸಿದೆ.ಶಿಕಾರಿಪುರ ತಾಲೂಕು ಅತ್ತಿಬೈಲು ಗ್ರಾಮದ ಕೂಲಿ ಕಾರ್ಮಿಕರಾದ ಗುತ್ಯಪ್ಪ(50), ದುರ್ಗಮ್ಮ(53) ಮೃತಪಟ್ಟವರು. ಅಪಘಾತದಲ್ಲಿ ಲೋಕಮ್ಮ, ಜಯಮ್ಮ, ಮಂಜಮ್ಮ, ನೀಲಪ್ಪ, ಕರಿಯಮ್ಮ, ಕಲ್ಪನಾ, ಕರಿಬಸಪ್ಪ, ದುರ್ಗಮ್ಮ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನ್ಯಾಮತಿ …
Read More »ಬ್ರಹ್ಮಾವರ: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ
ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂ. ಆನ್ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಪ್ಪಿನಕೋಟೆಯ ನಡುಹಿತ್ಲು ನಿವಾಸಿ ಶ್ರೇಯಾ(21) ಎಂಬವರಿಗೆ ನ.24ರಂದು ಟೆಲಿಗ್ರಾಂ ಖಾತೆಗೆ ಅಪರಿಚಿತ ವ್ಯಕ್ತಿಯೊಬ್ಬ ಲಿಂಕ್ ಕಳುಹಿಸಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದರು.ಅದರಂತೆ ಶ್ರೇಯಾ ತನ್ನ ಖಾತೆಯಿಂದ ಆರೋಪಿ ತಿಳಿಸಿದ ಖಾತೆಗೆ ಒಟ್ಟು 1,05,000ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ ಆರೋಪಿ …
Read More »ಬೆಂಗಳೂರು: ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಾವು
ಸಿದ್ದಾಪುರದ ನಿವಾಸಿ ಅಬ್ದುಲ್ ಹುಸೇನ್ ಅವರು ಮಾವನ ಪುತ್ರಿಯನ್ನು ಪ್ರೀತಿಸುತ್ತಿದ್ದರು. ಪುತ್ರಿ ಮದುವೆ ಮಾಡಿಕೊಡುವಂತೆ ಮಾವನ ಬಳಿ ಹುಸೇನ್ ಮನವಿ ಮಾಡಿದ್ದರು. ಅದಕ್ಕೆ ಮಾವ ಒಪ್ಪಿರಲಿಲ್ಲ. ಈ ಮಧ್ಯೆ ಆರು ತಿಂಗಳ ಹಿಂದೆ ಕುಟುಂಬ ಸಮೇತರಾಗಿ ಮಾವ ಅಂದ್ರಹಳ್ಳಿಗೆ ಸ್ಥಳಾಂತರಗೊಂಡಿದ್ದರು. ಗೋದಾಮು ಬಾಡಿಗೆ ಪಡೆದು ಗುಜರಿ ವ್ಯಾಪಾರ ಮಾಡುತ್ತಿದ್ದರು. ಇತ್ತೀಚೆಗೆ ಆ ಗೋದಾಮಿಗೆ ಬೆಂಕಿ ಬಿದ್ದು ನಷ್ಟವಾಗಿತ್ತು. ಅದಾದ ಮೇಲೆ ಯುವಕ, ಮಾವನ ಜತೆಗೆ ಸೇರಿಕೊಂಡು ಗುಜರಿ ವ್ಯಾಪಾರ ಆರಂಭಿಸಿದ್ದರು. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





