ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿ ಚಾಲಕ, ನಿರ್ವಾಹಕ ಸೇರಿದಂತೆ ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಬಳಿಯ ವಡ್ಡಿ ಘಾಟ್ನಲ್ಲಿ ನಡೆದಿದೆ.ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಾದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಅಂಕೋಲಾ ಠಾಣಾ ಪೊಲೀಸರು ತಕ್ಷಣ ಆಗಮಿಸಿ, ಗಾಯಾಳುಗಳನ್ನು ಅಂಕೋಲಾ ಹಾಗೂ ಕುಮಟಾ ಸರಕಾರಿ ಆಸ್ಪತ್ರೆಗಳಿಗೆ ರವಾನಿಸಿದರು. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಲಾಗಿದೆ.
Read More »ಪುತ್ತೂರು – ಆಟೋಚಾಲಕನ ಮೇಲೆ ಹಲ್ಲೆ ಮಾಡಿದ ಇಬ್ಬರು ಟ್ರಾಫಿಕ್ ಪೊಲೀಸ್ ಸಸ್ಪೆಂಡ್.
ಆಟೋ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಇಬ್ಬರು ಟ್ರಾಫಿಕ್ ಪೊಲೀಸರನ್ನು ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಆಟೋ ಚಾಲಕ ಗಾಡಿ ನಿಲ್ಲಿಸದೆ ವೇಗವಾಗಿ ಹೋಗಿದ್ದಾನೆ. ಈ ವೇಳೆ ವಾಹನವನ್ನು ಹಿಂಬಾಲಿಸಿದ ಇಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಾಹನ ನಿಲ್ಲಿಸಿ ಆಟೋ ಡ್ರೈವರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಆಗಿತ್ತು. ಇದೀಗ ಚಿದಾನಂದ …
Read More »ದೊಡ್ಡಬಳ್ಳಾಪುರ| ಕೆಟ್ಟು ನಿಂತ ಲಾರಿಗೆ ಬಸ್ ಡಿಕ್ಕಿ: 10ಕ್ಕೂ ಪ್ರಯಾಣಿಕರಿಗೆ ಗಾಯ.
ಹಿಂದೂಪುರ ರಾಜ್ಯ ಹೆದ್ದಾರಿಯ ನಾಯಕರಂಡನಹಳ್ಳಿ ಸಮೀಪ ರಸ್ತೆ ಬದಿಯಲ್ಲಿ ಶನಿವಾರ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಬಂದಿರುವ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಚಾಲಕ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.ಪಾವಗಡದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಕಲ್ಲಿದ್ದಲು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬಸಕ್ಕೆ ಬಸ್ಸಿನ ಮುಂದಿನ ಭಾಗ ನಜ್ಜುಗುಜ್ಜಾಗಿದೆ. ಬಸ್ಸಿನ ಮುಂದಿನ ಸೀಟ್ನಲ್ಲೇ ಕುಳಿತಿದ್ದ ಬಾಲಕ ಲಾರಿ ಸೇರಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಡಿಕ್ಕಿ ರಭಸಕ್ಕೆ ಬಸ್ …
Read More »ಪೊಲೀಸರ ಗುಂಡಿಗೆ ಬಲಿಯಾದ ಕುಖ್ಯಾತ ರೌಡಿ!
ದರೋಡೆ ಮಾಡಿ ಪರಾರಿಯಾಗಿದ್ದ ಕುಖ್ಯಾತ ರೌಡಿಯನ್ನು ಬಂಧಿಸಲು ತೆರಳಿದ್ದ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದಾಗ ಆತರಕ್ಷಣೆಗಾಗಿ ಇನ್ಸ್ ಪೆಕ್ಟರ್ ಹಾರಿಸಿದ ಗುಂಡು ತಗುಲಿ ರೌಡಿ ಮೃತಪಟ್ಟಿ ರುವ ಘಟನೆ ಇಂದು ಬೆಳಿಗ್ಗೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಬಳಿ ನಡೆದಿದೆ.ಯುನೀಶ್ ಅಕ್ಲಾಸ್ ಪಟೇಲ್ (35) ಪೊಲೀಸರ ಗುಂಡಿಗೆ ಬಲಿ ಯಾದ ಕುಖ್ಯಾತ ರೌಡಿ.ಈತ ಗಾಂಧಿ ಚೌಕ್ ಪೊಲೀಸ್ ಠಾಣೆಯ ರೌಡಿ ಶೀಟರ್. ವಿಜಯಪುರದಲ್ಲಿ ವಾಸವಾಗಿದ್ದ ಈತ ಇತ್ತೀಚೆಗೆ ಆಲಮೇಲ ತಾಲೂಕಿನ …
Read More »ಪೊಲೀಸರು ಎಸೆದ ಕಸವನ್ನು ಪೊಲೀಸರ ಕೈಲೇ ಹೆಕ್ಕಿಸಿದ ಕೊಡಗಿನ ಜನ.
ಕೊಡಗಿಗೆ ಪ್ರವಾಸಿಗರಿಗಿಂತ ಹೆಚ್ಚು ಸಮಸ್ಯೆಯಾಗಿರುವುದ ಅವರು ನಿಸರ್ಗದ ಮಡಿಲಲ್ಲಿ ಎಸೆದು ಹೋಗುತ್ತಿರುವ ಕಸ. ಇದು ಬರೀಯ ಕೊಡಗಿನ ಸಮಸ್ಯೆಯಲ್ಲ ಬಹುತೇಕ ಎಲ್ಲಾ ಪ್ರವಾಸಿ ತಾಣಗಳ ಕತೆಯೂ ಇದೇ ಆಗಿದೆ. ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಕೊಡಗಿನ ಮಡಿಲಲ್ಲಿ ಪರಿಸರದಲ್ಲಿ ಕರಗದ ಕಸವನ್ನು ಎಸೆದು ಪರಿಸರ ಹಾಳು ಮಾಡಿ ಹೋಗುತ್ತಿದ್ದಾರೆ. ಇದರ ವಿರುದ್ಧ ಈ ಹಿಂದೆಯೂ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊಡಗಿನ ಕೆಲ ಸಂಘಟನೆಗಳು ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದರು. ಕೆಲ …
Read More »ಬಾಗಲಕೋಟೆ: ಮನೆ ಬಾಗಿಲೆದುರು ಹಚ್ಚಿದ್ದ ದೀಪದಿಂದ ಅವಘಡ; 7 ಜನರಿಗೆ ಗಾಯ, ಮನೆ ಸುಟ್ಟು ಕರಕಲು!
ದೇಶಾದ್ಯಂತ ದೀಪಾವಳ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಈ ವೇಳೆ ಇತ್ತ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್ನಲ್ಲಿರುವ ಮನೆಯೊಂದರ ಬಾಗಿಲು ಎದುರು ಹಚ್ಚಿದ್ದ ದೀಪದಿಂದ ಅವಾಂತರ ಸಂಭವಿಸಿದೆ. ಪರಿಣಾಮ ಬೆಂಕಿಯ ಜಳ ತಗುಲಿ ಏಳು ಜನರಿಗೆ ಗಾಯಗಳಾಗಿವೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Read More »ಅಣ್ಣ ತಂಗಿ ನೇಣಿಗೆ ಶರಣು-ಕಾರಣ ನಿಗೂಢ
ಅಣ್ಣ-ತಂಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಲೇಬರ್ ಕಾಲೋನಿಯ ಜೋಪಡಿಯಲ್ಲಿ ನಡೆದಿದೆ. ಮಲ್ಲೇಶ್ (23) ಮತ್ತು ಪವಿತ್ರಾ (17) ಮೃತರಾಗಿದ್ದು, ಪವಿತ್ರಾ ತಾಯಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗಿದೆ.ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು ಅಕ್ಕ ಮತ್ತು ತಂಗಿಯರ ಮಕ್ಕಳಾಗಿರೋ ಇವರಿಬ್ಬರು ಯಾಕೆ ಇಂತಹ ನಿರ್ಧಾರ ತೆಗೆದುಕೊಂಡರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.ಬೇರೊಂದು ಮನೆಯಲ್ಲಿ ಕೆಲಸ ಮಾಡಿ, ಉಡುಪಿಯ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲಿ ಪವಿತ್ರಾ ಪ್ರಥಮ ಪಿಯುಸಿ …
Read More »ಪ್ರೇಯಸಿ ಜೊತೆ ಬೆಂಗಳೂರಿಗೆ ಬಂದಿದ್ದ ಯುವಕ ಲಾಡ್ಜ್’ ನಲ್ಲಿ ಶವವಾಗಿ ಪತ್ತೆ.!
ಪುತ್ತೂರಿನಿಂದ ಬಂದಿದ್ದ ಯುವಕ ತಕ್ಷಿತ್ ವಿರಾಜಪೇಟೆಯ ಯುವತಿ ರಕ್ಷಿತಾ ಜೊತೆ ಲಾಡ್ಜ್ ಮಾಡಿಕೊಂಡಿದ್ದನು. ಯುವಕನ ಸಾವಿಗೂ ಮುನ್ನ ಯುವತಿ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾಳೆ ಎನ್ನಲಾಗಿದೆ.ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿದ ಪ್ರೇಮಿಗಳು ಒಟ್ಟಿಗೆ ಊಟ ಮಾಡಿದ್ದರು. ನಂತರ ಇಬ್ಬರಿಗೆ ಫುಡ್ ಪಾಯ್ಸಿನ್ ಆಗಿ ಮಾತ್ರೆಗಳನ್ನು ತಿಂದಿದ್ದರು. ಸ್ವಲ್ಪ ಸುಧಾರಿಸಿಕೊಂಡ ಬಳಿಕ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾರೆ. ಆದರೆ ಯುವಕ ತಕ್ಷಿತ್ ಮಾತ್ರ ಮೃತಪಟ್ಟಿದ್ದಾನೆ.8 ದಿನವೂ ಊಟ ತರಿಸಿಕೊಂಡು …
Read More »ಬಿಯರ್ ಬಾಟಲ್ನಿಂದ ಶುರುವಾದ ಮುಗಿಯದ ಜಗಳ!
ಡಬಲ್ ಮರ್ಡರ್ ಹಿಂದಿನ ರೋಚಕ ಕಥೆ ಹೊರಬಿದ್ದಿದೆ. ಕನ್ನೂರು ಗ್ರಾಮದ ಈರನಗೌಡ ಎಂಬುವವರ ಹತ್ಯೆಯೇ ಇಂದಿನ ಡಬಲ್ ಮರ್ಡರ್ಗೆ ಮುಖ್ಯ ಕಾರಣವಾಗಿದೆ. ಸಾಗರ್ ಮತ್ತು ಇಸಾಕ್ ಎಂಬ ಇಬ್ಬರು ಕುಚುಕು ಗೆಳೆಯರು ಈರನಗೌಡರ ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳಾಗಿದ್ದರು. ಈರನಗೌಡರನ್ನು ಅವರು ಬಿಯರ್ ಬಾಟಲ್ನಿಂದ ಹೊಡೆದು** ಕೊಲೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಅವರು ಜೈಲು ಸೇರಿ ಇತ್ತೀಚೆಗೆ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ನಂತರವೂ ಸಾಗರ್ ಮತ್ತು ಇಸಾಕ್ ಇಬ್ಬರೂ …
Read More »ದೊಡ್ಡಪ್ಪನ ಕೊಲೆಗೆ ಸೇಡು- ಇಬ್ಬರು ಸ್ನೇಹಿತರ ಭೀಕರ ಡಬಲ್ ಮರ್ಡರ್!
ಸೇಡಿನ ಕಿಚ್ಚಿಗೆ ವಿಜಯಪುರ ಜಿಲ್ಲೆಯ ಶಾಂತವಾಗಿದ್ದ ಕನ್ನೂರು ಗ್ರಾಮದಲ್ಲಿ ಭೀಕರ ಡಬಲ್ ಮರ್ಡರ್ ನಡೆದಿದೆ. ದೊಡ್ಡಪ್ಪನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಇಬ್ಬರು ಸಹೋದರರು, ಹಂತಕರು ಎನ್ನಲಾದ ಕುಚುಕು ಗೆಳೆಯರನ್ನು ಕಲ್ಲುಗಳಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ.ಹತ್ಯೆಯ ನಂತರ, ಸೇಡಿನ ಸಂಕೇತವಾಗಿ ಮೃತದೇಹಗಳ ಪಕ್ಕದಲ್ಲೇ ಬಿಯರ್ ಬಾಟಲ್ಗಳನ್ನು ಇಟ್ಟು ಪರಾರಿಯಾಗಿದ್ದಾರೆ. ಈ ಭೀಕರ ದ್ವಂದ್ವ ಕೊಲೆ ಪ್ರಕರಣ ವಿಜಯಪುರ ಜಿಲ್ಲೆಯಾದ್ಯಂತ ಭೀತಿ ಹುಟ್ಟಿಸಿದೆ. ಕೃತ್ಯ ಎಸಗಿ ಪರಾರಿಯಾಗಲು ಯತ್ನಿಸಿದ ಇಬ್ಬರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





