Breaking News

BigTv News

ಮಚ್ಚು, ಲಾಂಗು ಹಿಡಿದು ಪುಂಡಾಟ- ವ್ಯಕ್ತಿಯ ಕೊಲೆಗೆ ಯತ್ನ!

ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ತಲ್ವಾರ್‌ಗಳಿಂದ ದಾಳಿಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ನಡೆದಿದೆ. ದುಷ್ಕರ್ಮಿಗಳು ಸಜೀಪಮುನ್ನೂರಿನ ಉಮರ್ ಫಾರೂಕ್ ಮೇಲೆ ದಾಳಿಗೆ ಯತ್ನಿಸಿದ್ದಾರೆ.ದಾಳಿಯಿಂದ ಸದ್ಯ ಫಾರೂಕ್‌ ತಪ್ಪಿಸಿಕೊಂಡರೂ ಆತನ ವಾಹನದ ಸೈಡ್ ಮಿರರ್​ಗೆ ಹಾನಿ ಆಗಿದೆ. ಘಟನೆಯ ಬಗ್ಗೆ ಉಮರ್ ಫಾರೂಕ್ ನಿನ್ನೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ …

Read More »

ಗದಗ :ಅಶ್ಲೀಲ ಸಂದೇಶ ಕಳುಹಿಸಿದ ಮೂವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿತ!

ಬಾಲಕಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪಿಸಿ ಮೂವರು ಬಾಲಕರನ್ನು 55 ಮಂದಿಯಿದ್ದ ಗುಂಪೊಂದು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ನಡೆದಿದೆ.ಬಾಲಕರ ಪೋಷಕರು ಮತ್ತು ಸಂಬಂಧಿಕರು 55 ಗ್ರಾಮಸ್ಥರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದರೆ, ಗ್ರಾಮಸ್ಥರು ಮೂವರು ಬಾಲಕರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಬಾಲಕರು ದಲಿತ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗುತ್ತಿದ್ದು, ಜಾತಿ ಸಂಘರ್ಷ ಬೆದರಿಕೆ ಇರುವುದರಿಂದ ಗ್ರಾಮದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ …

Read More »

ಗೌರಿಬಿದನೂರು : ಅಪಘಾತ ಇಬ್ಬರ ಸಾವು!!

ನಗರದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ನಡೆದ ಭೀಕರ ಅಪಘಾತದ ಕಾರಣವಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಗೌರಿಬಿದನೂರು ನಗರದಲ್ಲಿ ನಡೆದಿದೆ.ವೇಗವಾಗಿ ಮತ್ತು ಅಜಾಗರೂಕತೆಯಿಂದ ಬಂದ ಕಾರೊಂದು 4 ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ದ್ವಿಚಕ್ರ ವಾಹನ ಸವಾರರಾದ ಚನ್ನೇನ ಹಳ್ಳಿ ಗ್ರಾಮದ ನಂಜಪ್ಪ (೬೦) ಮತ್ತು ಕೊಲ್ಕತ್ತಾ ಮೂಲದ ಸೌರವ್ (೨೪) ಸ್ಥಳದಲ್ಲೇ ಮೃತ ಪಟ್ಟಿ ದ್ದಾರೆ, ಉಳಿದ ಎರಡು ದ್ವಿಚಕ್ರ ವಾಹನ ಸವಾರರ ಸ್ಥಿತಿ ಗಂಭೀರವಾಗಿದ್ದು, …

Read More »

ಕುಂದಗೋಳ : “ಶ್ರೀ ಬ್ರಹ್ಮದೇವರ” ಅಗ್ರಪೂಜೆ….

ಐತಿಹಾಸಿಕವಾಗಿ ತನ್ನದೇ ಆದ ಮಹತ್ವ ಪಡೆದಿರೋ ಕುಂದಗೋಳದಲ್ಲಿ ಆಚರಿಸುವ ಕಾರ ಹುಣ್ಣಿಮೆಯಲ್ಲಿ ಪಟ್ಟಣದ ಮಧ್ಯಭಾಗದಲಿರುವ ದೇವಾಲಯದ ಶ್ರೀ ಬ್ರಹ್ಮದೇವರಿಗೆ” ಅಗ್ರಪೂಜೆ ನಡೆಯುತ್ತದೆ.” ರೈತರಂತೂ ತಮ್ಮ ಬಸವಣ್ಣ (ಎತ್ತುಗಳ) ಕೋಡುಗಳನ್ನು ಸವರಿ ಕೊಂಬುಗಳಿಗೆ ವಿವಿಧ ಬಣ್ಣ ಹಚ್ಚಿ ಕರಿಬಂಡಿ ಉತ್ಸವವಿರುವ ದಿನದಂದು ವಿವಿಧ ಭೋಜನ ತಯಾರಿಸಿ ಕರಿ ಹರಿಯುತ್ತಾರೆ. ಕರಿಬಂಡಿ ಉತ್ಸವದಲ್ಲಿ ಎರಡು ಭಂಡಿಗಳು ಭಾಗವಹಿಸುತ್ತವೆ. ಗೌಡರು, ಶ್ಯಾನುಭೋಗರ ಮನೆತನದ ಬಂಡಿ ಒಂದು ಭಂಡಿಯನ್ನು ಗೌಡರ ಬಂಡಿ ಎಂದೂ, ಮತ್ತೊಂದನ್ನು ಶ್ಯಾನಭೋಗರ …

Read More »

ಹುಬ್ಬಳ್ಳಿ : ತಲವಾರ ಹಿಡಿದು ರೀಲ್ಸ್ ಮಾಡುತ್ತಿದ್ದವರ ಬಂಧನ!

ಹಳೇ ಹುಬ್ಬಳ್ಳಿ ಹೊಸ ಆನಂದನಗರದ ಸಮೀಪದ ಮಸೀದಿ ಬಳಿ ಇತ್ತೀಚಿಗೆ ಎರೆಡು ಜನ ತಲಾವಾರ ಹಿಡಿದು ರೀಲ್ಸ್ ಮಾಡುತ್ತಿದ್ದರು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧನ ಮಾಡಿ, ಇಂಡಿಯನ್ ಆರ್ಮ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಂಧಿತ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಿದ ಸಂದರ್ಭ, ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ, ಹೌದು ಬಂಧಿತ ಆರೋಪಿಗಳು ಜೊತೆಗೆ ಇನ್ನೆರೆಡು ಜನರನ್ನು ಸೇರಿಸಿಕೊಂಡು ನಗರದ ವಿವಿಧ ಕಡೆಗಳಲ್ಲಿ ಚಿನ್ನಾಭರಣ …

Read More »

ಸರ್ವಿಸಿಂಗ್‌ಗೆ ಬಂದ ಬೈಕ್​​ ಕದ್ದ ಶೋ ರೂಂ ಸೆಕ್ಯುರಿಟಿ ಗಾರ್ಡ್​ ಅರೆಸ್ಟ್!

ಮದೀನಗುಡದ ಆಟೋಮೊಬೈಲ್ ಶೋ ರೂಂನಲ್ಲಿ ಕೆಲಸ ಮಾಡುತ್ತಿರುವ ಕಿಶೋರ್ ಕುಮಾರ್ (35) ಜೂನ್ 2 ರಂದು ಅವರ ಶೋ ರೂಂಗೆ ಸರ್ವಿಸಿಂಗ್‌ಗೆ ಬಂದ ಬೈಕನ್ನು ಕದ್ದಿದ್ದಾನೆ.ತನಿಖೆ ನಡೆಸಿದಾಗ ಶೋ ರೂಂ ಮೇಲ್ವಿಚಾರಕರಿಗೆ ಬೈಕ್ ಕಳುವಾಗಿರುವುದು ಇತ್ತೀಚೆಗೆ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದೂರಿನ ಆಧಾರದ ಮೇಲೆ, ಮಿಯಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿಶೋರ್ ಕುಮಾರ್ ಅವರನ್ನು ಅನುಮಾನದ ಮೇಲೆ ಬಂಧಿಸಿದಾಗ ಅವರು ಅಪರಾಧವನ್ನು ಒಪ್ಪಿಕೊಂಡರು. ಅವರಿಂದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Read More »

ಹುಬ್ಬಳ್ಳಿ :ಮಳೆಗೆ ನೀರಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ: ಮೃತನ ನಿವಾಸಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ!

ದಿನಗಳ ಹಿಂದೆ ಧಾರಾಕಾರ ಮಳೆಗೆ ನೀರಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಹುಬ್ಬಳ್ಳಿ ಬೆಳಗಲಿ ರಸ್ತೆಯಲ್ಲಿ ನಿನ್ನೆ ಪತ್ತೆಯಾಗಿತ್ತು. ಬೀರಬಂದ ಓಣಿಯ ಹುಸೇನ ಕಳಸ ನಿವಾಸ ಮೃತ ವ್ಯಕ್ತಿ.ಘಟನೆಯಿಂದ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಮೃತ ವ್ಯಕ್ತಿ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಡಿಸಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಭಾಗಿಯಾಗಿದ್ದರು.

Read More »

ಶ್ರೀರಂಗಪಟ್ಟಣ: ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ!

ಪಶ್ಚಿಮವಾಹಿನಿ ಬಳಿ ಶನಿವಾರ ಮುಂಜಾನೆ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರೈಲು ಹರಿದ ರಭಸಕ್ಕೆ ರುಂಡ ಮತ್ತು ಮುಂಡ ಬೇರ್ಪಟ್ಟಿವೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ತಾಲ್ಲೂಕಿನ ಅರಕೆರೆ ಗ್ರಾಮದ ಮಹದೇವು ಅವರ ಮಗ ಆಕಾಶ್ (24) ಮೃತರು.ಸ್ಥಳಕ್ಕೆ ಮೈಸೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಪತ್ನಿ ಜೊತೆ ಗಲಾಟೆ ಮಾಡಿ ಶಾಂತವಾಗಲು 450 ಕಿ.ಮೀ. ನಡೆದ ವ್ಯಕ್ತಿ!

ಇಟಲಿಯ ಉತ್ತರ ಭಾಗದ ಕೊಮೊ ಎಂಬ ಊರಿನಲ್ಲಿ ವಾಸವಿದ್ದ, ತನ್ನ ಮನೆಯಿಂದ ಸುಮಾರು 450 ಕಿಮೀ ದೂರದ ಫಾನೊ ಎಂಬ ಕರಾವಳಿ ಪಟ್ಟಣವರೆಗೆ ಪಾದಯಾತ್ರೆ ನಡೆಸಿದ್ದಾನೆ. ಅವನ ದೀರ್ಘ ನಡಿಗೆ 7 ದಿನಗಳವರೆಗೆ ಮುಂದುವರೆದಿದ್ದು, ಪ್ರತಿದಿನ ಸರಾಸರಿ 60 ಕಿಮೀ ನಡೆಯುತ್ತಿದ್ದ.ಘಟನೆ ವೈರಲ್ ಆದ ಬಳಿಕ, ನೆಟಿಜನ್‌ಗಳು ಆ ವ್ಯಕ್ತಿಗೆ ಸೆಲ್ಯೂಟ್‌ ಮಾಡುತ್ತಿದ್ದಾರೆ. “ಅವನಿಗೆ ದಂಡವಲ್ಲ, ಒಂದು ಜೋಡಿ ಶೂಗಳನ್ನು ಬಹುಮಾನವಾಗಿ ಕೊಡಬೇಕಿತ್ತು!” “ಅವನನ್ನು ಕೊಂಡಾಡಬೇಕು. ತನ್ನ ಕೋಪವನ್ನು ಹಿಂಸಾಚಾರವಿಲ್ಲದೇ …

Read More »

ಪತಿಯ ಮದ್ಯದ ಚಟದಿಂದ ಬೇಸತ್ತ ಪತ್ನಿ ಆತ್ಮಹತ್ಯೆಗೆ ಶರಣು!

ಪತಿಯ ಮದ್ಯದ ಚಟದಿಂದ ಬೇಸತ್ತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.ರಾತ್ರಿ ಮನೆಯ ಚಾವಣಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Read More »