ವಿಮಾನವು ಟೇಕ್ ಆಫ್ ಆದ ಐದು ನಿಮಿಷಗಳ ನಂತರ ಮೇಘಾನಿ ನಗರದ ಜನವಸತಿ ಪ್ರದೇಶಕ್ಕೆ ಅಪ್ಪಳಿಸಿತ್ತು. ಆ ವಿಮಾನದಲ್ಲಿದ್ದ 242 ಜನರ ಪೈಕಿ 68 ವರ್ಷದ ರೂಪಾನಿ ಕೂಡ ಇದ್ದರು. ಲಂಡನ್ಗೆ ತೆರಳುತ್ತಿದ್ದ ವಿಮಾನವನ್ನು ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ಓಡಿಸುತ್ತಿದ್ದರು. ಗುಜರಾತ್ನ 16ನೇ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕರಾಗಿದ್ದ ವಿಜಯ್ ರೂಪಾನಿ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ AI 171 ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
Read More »ಎಂಬಿಎ ಮಾಡಿದ್ದ ಅಣ್ಣ-ತಂಗಿ: ವಿಮಾನ ದುರಂತದಲ್ಲಿ ದಾರುಣ ಸಾವು!
ಉದಯಪುರದ ಅಮೃತಶಿಲೆಯ ಉದ್ಯಮಿ ಪಿಂಕು ಮೋದಿ ಅವರ ಮಕ್ಕಳಾದ ಶುಭ್ ಮೋದಿ (24) ಮತ್ತು ಶಗುನ್ ಮೋದಿ (22) ಈ ವಿಮಾನದಲ್ಲಿದ್ದರು. ಇಬ್ಬರೂ ಎಂಬಿಎ ಪದವೀಧರರಾಗಿದ್ದು, ತಮ್ಮ ತಂದೆಯ ವ್ಯವಹಾರವನ್ನು ನಿರ್ವಹಿಸಲು ಸಹಾಯ ಮಾಡುತ್ತಿದ್ದರು.ಲಂಡನ್ಗೆ ಪ್ರವಾಸಕ್ಕಾಗಿ ತೆರಳುತ್ತಿದ್ದರು, ಅಲ್ಲಿ ಅವರು ಸ್ನೇಹಿತರೊಂದಿಗೆ ಇರಲು ಯೋಜಿಸಿದ್ದರು. ಅಪಘಾತದ ಸುದ್ದಿ ತಿಳಿದ ತಕ್ಷಣ ಪಿಂಕು ಮೋದಿ ಕುಟುಂಬವು ಅಹಮದಾಬಾದ್ಗೆ ಧಾವಿಸಿತು. ಸ್ಥಳೀಯ ಜನರು ಪಿಂಕು ಮೋದಿ ಮನೆಯಲ್ಲಿ ಸೇರಿ ಸಾಂತ್ವನ ಹೇಳುತ್ತಿದ್ದಾರೆ.
Read More »ಧಾರವಾಡ: ಹಂಚಿನಾಳ ಹಳ್ಳದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸಾವು!
ಕುಂದಗೋಳ ತಾಲ್ಲೂಕಿನ ಹಂಚಿನಾಳ- ದೇವನೂರ ಮದ್ಯದ ಹಂಚಿನಾಳ ಹಳ್ಳದಲ್ಲಿ ಬುಧವಾರ ತಡರಾತ್ರಿ ಟ್ರ್ಯಾಕ್ಟರ್ ಪಲ್ಟಿಯಾಗಿ ವ್ಯಕ್ತಿಯೋರ್ವ ಸಾವಿಗೀಡಾಗಿದ್ದಾರೆ, ಇಬ್ಬರು ಪಾರಾಗಿದ್ದಾರೆ. ಬಿತ್ತನೆ ಚಟುವಟಿಕೆಗೆ ಟ್ರ್ಯಾಕ್ಟರ್, ಕೂರಿಗೆ ಒಯ್ಯುವಾಗ ಅವಘಡ ಸಂಭವಿಸಿದೆ.ಕುಂದಗೋಳದ ಶಿವಯ್ಯ ವಾಟ್ನಾಳಮಠ (29) ಮೃತಪಟ್ಟವರು. ವಾಸುದೇವ ಹೈಭತ್ತಿ, ಮಲ್ಲಿಕಾರ್ಜುನ ಪಾರಾಗಿದ್ದಾರೆ.
Read More »ಕಂದಕಕ್ಕೆ ಉರುಳಿದ ಬಸ್, ಐವರು ಭಾರತೀಯರು ಸಾವು, 27 ಜನರಿಗೆ ಗಾಯ!
ಕತಾರ್ ನಲ್ಲಿರುವ ಭಾರತೀಯ ರಾಯಭಾರಿಕಛೇರಿಯ ವರದಿಯ ಪ್ರಕಾರ, ರಜೆಯ ಪ್ರಯುಕ್ತ 28 ಜನ ಭಾರತೀಯರಿದ್ದ ಬಸ್ ವೊಂದು ಕೀನ್ಯಾಗೆ ಪ್ರವಾಸ ಕೈಗೊಂಡಿದ್ದರು.ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿದೆ. ಪರಿಣಾಮ ಕೇರಳ ಮೂಲದ 5 ಜನ ಸಾವನ್ನಪ್ಪಿದ್ದರೆ, ಬಸ್ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಸೇರಿದಂತೆ 27 ಜನ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, 27 ಜನರ ಪೈಕಿ ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಹಿನ್ನಲೆ …
Read More »ಪೊಲೀಸರ ಮೇಲೆ ಹರಿದ ಕಾರು, ಮಹಿಳಾ ಸಿಬ್ಬಂದಿ ಸಾವು!!
ವೇಗವಾಗಿ ಬಂದ ಎಸ್ ಯುವಿ ಕಾರೊಂದು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹರಿದ ಪರಿಣಾಮ ಓರ್ವ ಮಹಿಳಾ ಕಾನ್ ಸ್ಟೇಬಲ್ ಮೃತಪಟ್ಟು ಇಬ್ಬರು ಇನ್ಸ್ಪೆಕ್ಟರ್ಗಳು ಗಂಭೀರ ಗಾಯಗೊಂಡಿರುವ ಘಟನೆ ಪಾಟ್ನಾದ ಅಟಲ್ ಪಥ್ ನಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.ಅಪಘಾತದ ವೇಳೆ ಕಾರಿನೊಳಗೆ ಇದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಅಲ್ಲದೆ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Read More »ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನ!!
ಅಹಮದಾಬಾದ್ ನಿಂದ ಲಂಡನ್ಗೆ ಪ್ರಯಾಣಿಸುತ್ತಿದ್ದ ಈ ಏರ್ ಇಂಡಿಯಾ ವಿಮಾನವು ಮಧ್ಯಾಹ್ನ 1:38 ಕ್ಕೆ ಟೇಕ್ ಆಫ್ ಆಯಿತು. ಮೇಘನಿ ನಗರ ಪ್ರದೇಶದಲ್ಲಿ ಮೇಲೆ ಸರಿಯಾಗಿ ಅಪಘಾತಕ್ಕೀಡಾಯಿತು. ರನ್ ವೇ ನಿಂದ ಟೇಕ್ ಆಫ್ ಆದ 10 ನಿಮಿಷಗಳಲ್ಲಿ ಈ ಘಟನೆ ನಡೆದಿದೆ..ದುರಂತದ ಮುನ್ಸೂಚನೆ ಅರಿತ ವಿಮಾನದ ಪೈಲಟ್ ATC ಗೆ ಸಂದೇಶ Mayday Mayday ಸಂದೇಶವನ್ನು ಕಳುಹಿಸಿದ್ದರು. Mayday ಎಂಬುವುದರ ಅರ್ಥ.. ನಾವು ಅಪಘಾತಕ್ಕೀಡಾಗುತ್ತಿದ್ದೇವೆ, ವಿಮಾನವನ್ನು ಸುರಕ್ಷಿತವಾಗಿ ಇಳಿಸಲು …
Read More »ಹುಬ್ಬಳ್ಳಿಯಲ್ಲಿ ಭಾರೀ ಮಳೆ: ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ!
ಧಾರಾಕಾರ ಮಳೆ ಸುರಿದ ಹಿನ್ನೆಲೆ ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಭಾರೀ ಮಳೆ ಹಿನ್ನೆಲೆ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಯಿಂದ ನೀರು ಹೊರ ಹಾಕಲು ಜನ ಹರಸಾಹಸ ಪಟ್ಟಿದ್ದಾರೆ.ನಗರ ಪ್ರದೇಶದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೆಲವೆಡೆ ಮರ, ಗಿಡಗಳು ಉರುಳಿವೆ.ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಕಲಘಟಗಿಯಲ್ಲಿ ಸಹ ಭಾರೀ ಮಳೆ ಆಗಿದ್ದು ಅಪಾರ ಪ್ರಮಾಣದಲ್ಲಿ ಬಿತ್ತನೆ …
Read More »ಹುಬ್ಬಳ್ಳಿ ಧಾರವಾಡದಲ್ಲಿ ಧಾರಾಕಾರ ಮಳೆಗೆ ಶಾಲೆ, ಕಾಲೇಜುಗಳಿಗೆ ರಜೆ…
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಡಿಯಾಗಿದೆ. ಹುಬ್ಬಳ್ಳಿ-ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದು, ಕೆರೆಯಂತಾಗಿದೆ.ರೆಡ್ ಅಲರ್ಟ್ ಘೋಷಣೆ ಹಾಗೂ ಜಿಲ್ಲೆಯ ಬಹುತೇಕ ಕಡೆ ನಿನ್ನೆ ಸಂಜೆಯಿಂದಲೇ ನಿರಂತರ ಮತ್ತು ವ್ಯಾಪಕ ಮಳೆ ಆಗುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಇಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ.
Read More »ಹುಬ್ಬಳ್ಳಿ ಧಾರಾಕಾರ ಮಳೆ- ಚರಂಡಿ ನೀರಿನಲ್ಲಿ ಕೊಚ್ಚಿ ಹೋದ ರೈತ!
ಧಾರವಾಡದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇದೇ ಸಂದರ್ಭ ಹುಬ್ಬಳ್ಳಿಯಲ್ಲಿ ಅವಘಡವೊಂದು ಸಂಭವಿಸಿದೆ. ಮಳೆ ನೀರಿನಲ್ಲಿ ರೈತರೊಬ್ಬರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.ಹುಬ್ಬಳ್ಳಿಯಲ್ಲಿ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಹುಬ್ಬಳ್ಳಿಯ ಬೆಳಗಲಿ ರಸ್ತೆಯಲ್ಲಿನ ಚರಂಡಿಯಲ್ಲಿ ಹುಸೇನ್ ಕಳಸ ಎಂಬುವವರು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
Read More »ಹುಬ್ಬಳ್ಳಿ-ಧಾರವಾಡದಲ್ಲಿ ವ್ಯಾಪಕ ಮಳೆ, ಕೊಚ್ಚಿ ಹೋದ ವ್ಯಕ್ತಿ!
ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಕಳೆದ ರಾತ್ರಿ ಒಬ್ಬರು ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





