Breaking News

BigTv News

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ವ್ಯಕ್ತಿ ಕೊಂದು ಸುಟ್ಟ ಪ್ರಕರಣ, ಮೂವರ ಸೆರೆ!!

ಜೂ.2ರಂದು ಕಂಸಾಗರ ಗೇಟ್‌ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಹಗ್ಗದಿಂದ ಕುತ್ತಿಗೆ ಬಿಗಿದು ವ್ಯಕ್ತಿಯೊಬ್ಬರ ಕೊಲೆ ಮಾಡಿ ಪೆಟ್ರೋಲ್‌ ಸುರಿದು ಸುಟ್ಟು ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.ಕಡೂರು ಪಟ್ಟಣದ ಪ್ರದೀಪ್‌ ಆಚಾರಿ (33), ಕಡೂರು ಪಟ್ಟಣ ಕೋಟೆ ಬಡಾವಣೆಯ ಸಿದ್ದೇಶ್‌ (35) ಹಾಗೂ ವಿಶ್ವಾಸ್‌ (18) ಬಂಧಿತರು.

Read More »

ಪತ್ನಿಯ ತಲೆ ಕತ್ತರಿಸಿ ರುಂಡದ ಸಮೇತ ಪೊಲೀಸ್ ಠಾಣೆಗೆ ಬಂದ ಪತಿ!

ಕೋರಮಂಗಲದ ಕಂಪೆನಿಯೊಂದರಲ್ಲಿ ಆರೋಪಿ ಶಂಕರ್ ಕೆಲಸ ಮಾಡಿಕೊಂಡಿದ್ದ. ಕೊಲೆಯಾದ ಮಹಿಳೆ ಮಾನಸಾ ಕೂಡ ಬೇರೊಂದು ಕಂಪೆನಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಅಲ್ಲಿಯೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದಳೆಂದು ಶಂಕಿಸಿ ಆರೋಪಿ ಶಂಕರ್, ಮಾರಕಾಸ್ತ್ರದಿಂದ ಆಕೆಯ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಬಳಿಕ ತಲೆಯನ್ನು ಕವರ್‌ ನಲ್ಲಿ ತುಂಬಿಕೊಂಡು, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರದ ಸಮೇತ ಪೊಲೀಸ್ ಠಾಣೆಗೆ ಬಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಬಳಿಕ ಘಟನಾ ಸ್ಥಳಕ್ಕೆ ಡಿವೈಎಸ್ಪಿ …

Read More »

ನನ್ನ ಹೆಂಡತಿಯನ್ನು ಕರೆಸಿ, ಇಲ್ಲದಿದ್ರೆ ಮರ್ಡರ್‌ ಮಾಡ್ತೀನಿ – ದೆಹಲಿ ಸಿಎಂಗೆ ಕುಡುಕನ ಬೆದರಿಕೆ!

ಕುಡಿತದ ಚಟಕ್ಕೆ ದಾಸನಾಗಿದ್ದ ತ್ರಿಪಾಠಿ ಎಂಬಾತ ಹೆಂಡ್ತಿ ಜತೆ ನಿರಂತರ ಜಗಳ ಮಾಡುತ್ತಿದ್ದನು. ಇದ್ರಿಂದ ಬೇಸತ್ತು ಮಹಿಳೆ ತವರು ಮನೆ ಸೇರಿದ್ದಳು. ಇದ್ರಿಂದ ಕುಪಿತಗೊಂಡ ತ್ರಿಪಾಠಿ ಹಲವು ಭಾರಿ ಪ್ರಯತ್ನಪಟ್ಟರು ಆಕೆ ಮಾತಾಡಿಸಿರಲಿಲ್ಲ. ಯುವತಿ ವಾಸವಿದ್ದ ದಿಲ್ಲಿಗೆ ಬಂದ ತ್ರಿಪಾಠಿ ಅವಾoತರ ಮಾಡಿದ್ದಾನೆ. ಸಿಎಂ ರೇಖಾಗುಪ್ತಗೆ ಕುಡುಕ ಮಹಾಶಯನ್ನೊಬ್ಬ ಕೊಲೆ ಬೆದರಿಕೆವೊಡ್ಡಿದ್ದಾನೆ. ಈ ಸಂಬಂಧ ತ್ರಿಪಾಠಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Read More »

ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್‌ ಮಾಡಿ ಹಿಂದಕ್ಕೆ ತಳ್ಳಿದ ಬೈಕ್‌ ಸವಾರ…

ಅಂಗಡಿಯಲ್ಲಿ ದಿನಸಿ ಖರೀದಿಸಲು ಚಾಲಕ ಆಟೋವನ್ನು ರಸ್ತೆ ಬದಿ ನಿಲ್ಲಿಸಿ ತೆರಳಿದ್ದರು. ರಸ್ತೆ ಬದಿಯ ಪಾರ್ಕಿಂಗ್ ಸ್ಥಳದಲ್ಲಿ ಯುವಕ ಬೈಕ್ ನಿಲ್ಲಿಸಿದ್ದನು. ಬೈಕ್​ ಹಿಂದೆ ಆಟೋ ಪಾರ್ಕ್​ ಮಾಡಲಾಗಿತ್ತು. ಇದರಿಂದ ಬೈಕ್ ತೆಗೆಯಲಾಗದೆ ಯುವಕ ಪರದಾಡಿದ್ದಾನೆ. ಆಗ, ಸಿಟ್ಟಿನಿಂದ ಯುವಕ ಆಟೋ ಬಳಿ ಹೋಗಿ ಮಕ್ಕಳಿರುವುದು ನೋಡಿಯೂ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿದ್ದಾನೆ. ಆಟೋ ವೇಗವಾಗಿ ಹಿಂದೆ ಚಲಿಸುವುದನ್ನು ಕಂಡು ಸ್ಥಳದಲ್ಲಿದ್ದವರು ಕೂಗಾಡಿದ್ದಾರೆ. ಕೂಡಳೇ ಸ್ಥಳಕ್ಕೆ ಓಡಿ ಬಂದ ಚಾಲಕ …

Read More »

ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಕುಟುಂಬಸ್ಥರಿಗೆ ಊಟದಲ್ಲಿ ವಿಷ ಹಾಕಿದ ಮಹಿಳೆ ಅರೆಸ್ಟ್‌!

ಪಂಚಾಯಿತಿಯಾದ ಕೆಲ ದಿನಗಳ ಬಳಿಕ ಚೈತ್ರಾ, ಅದೇ ಗ್ರಾಮದ ಶಿವು ಎಂಬಾತನೊಂದಿಗೆ ಮತ್ತೊಂದು ಅನೈತಿಕ ಸಂಬಂಧ ಹೊಂದಿದ್ದಾಳೆ. ಈ ವಿಷಯ ಕುಟುಂಬಸ್ಥರಿಗೆ ತಿಳಿಯುವ ಮೊದಲೇ, ತನ್ನ ಸಂಬಂಧಕ್ಕೆ ಪತಿ, ಮಕ್ಕಳು ಹಾಗೂ ಅತ್ತೆ-ಮಾವ ಅಡ್ಡಿಯಾಗಬಹುದೆಂದು, ಎಲ್ಲರನ್ನೂ ಸಾಮೂಹಿಕವಾಗಿ ಕೊಲೆ ಮಾಡಲು ಯೋಜನೆ ರೂಪಿಸಿದ್ದಳು. ಶಿವು ಸಹಕಾರದೊಂದಿಗೆ, ಚೈತ್ರಾ ಊಟ, ತಿಂಡಿಗಳಲ್ಲಿ ವಿಷಕಾರಿ ಮಾತ್ರೆಗಳನ್ನು ಬೆರೆಸುತ್ತಿದ್ದಳು. ಕುಟುಂಬಸ್ಥರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ ವಿಷಪ್ರಾಶನ ಮಾಡಿರುವ ಕೃತ್ಯ ಗೊತ್ತಾಗಿದೆ.ಈ ಬಗ್ಗೆ ಮಹಿಳೆಯ ಪತಿ …

Read More »

ಬೆಂಗಳೂರು: ನಕಲಿ ಸಿಗರೇಟ್ ಮಾರಾಟ, ಇಬ್ಬರು ಅರೆಸ್ಟ್!

ನಗರದಲ್ಲಿ ನಕಲಿ ಸಿಗರೇಟ್ ಹಾವಳಿ ಹೆಚ್ಚಾಗಿದ್ದು, ದುಬೈನಿಂದ ಬೆಂಗಳೂರಿಗೆ ನಕಲಿ ಸಿಗರೇಟ್ ಸ್ಮಗ್ಲಿಂಗ್ ನಡೆಯುತ್ತಿದೆ.ದುಬೈನಿಂದ ಕಡಿಮೆ ಬೆಲೆಗೆ ನಕಲಿ ಸಿಗರೇಟ್ ತಂದು ಬೆಂಗಳೂರಲ್ಲಿ ಸೇಲ್ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಲಾಗಿದೆ.ಮೊಹಮ್ಮದ್ ಸಾಹೀರ್ ಹಾಗೂ ಅಬ್ದುಲ್ ರಜಾಕ್ ಬಂಧಿತ ಆರೋಪಿಗಳು. ಕೇರಳದ ಕಣ್ಣೂರು ಮೂಲದ ಆರೋಪಿಗಳು, ಸೂಟ್ ಕೇಸ್ ನಲ್ಲಿ ಕೆಜಿ ಲೆಕ್ಕದಲ್ಲಿ ಸಿಗರೇಟ್ ತರ್ತಿದ್ದರು. ಬಳಿಕ ಬೆಂಗಳೂರಲ್ಲಿ ಡಿಸ್ಟ್ರಿಬ್ಯೂಟ್ ಮಾಡ್ತಿದ್ರು.ಕಲಾಸಿಪಾಳ್ಯ ಪೊಲೀಸರಿಂದ ಆರೋಪಿಗಳನ್ನು ಬಂಧಿಸಿ …

Read More »

ಮದುವೆಯಲ್ಲಿ ನಡೆದ ಜಗಳದಲ್ಲಿ ವರನ ಹತ್ಯೆ!!

ಸಮಾರಂಭ ಪ್ರಾರಂಭವಾಗುವ ಹಂತದಲ್ಲಿದ್ದಾಗ ವಿವಾಹ ತಂಡದ ಸದಸ್ಯರು ಮತ್ತು ವಧುವಿನ ಕಡೆಯ ಕೆಲವು ಜನರ ನಡುವೆ ಡಿಜೆಗೆ ನೃತ್ಯ ಮಾಡುವ ವಿಚಾರದಲ್ಲಿ ಸಣ್ಣ ವಾಗ್ವಾದ ನಡೆಯಿತು. ವರನ ತಂದೆ ಪರಿಸ್ಥಿತಿಯನ್ನು ಶಾಂತಗೊಳಿಸಲು ಮತ್ತು ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಕುಡಿದು ಬಂದಿದ್ದ ಕೆಲವರು ಕೋಪದಿಂದ ಕೋಲುಗಳಿಂದ ಹೊಡೆಯಲು ಪ್ರಾರಂಭಿಸಿದ್ದಾರೆ.ಗಲಾಟೆಯ ಸಮಯದಲ್ಲಿ ಪಿಸ್ತೂಲಿನೊಂದಿಗೆ ನೃತ್ಯ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅಕ್ರಮ ಬಂದೂಕಿನಿಂದ ಹಿಂಭಾಗದಿಂದ ರಾಕೇಶ್‌ನ ತಲೆಗೆ ಹೊಡೆದಿದ್ದಾನೆ. ಗಾಯಗೊಂಡ ರಾಕೇಶ್ ಸ್ಥಳದಲ್ಲೇ ಪ್ರಜ್ಞೆ …

Read More »

ಕಡಬ : ಬೆಂಕಿ ಹಚ್ಚಿ ಅಣ್ಣನ ಹತ್ಯೆಗೆ ತಮ್ಮನ ಯತ್ನ!

ಟ್ರ್ಯಾಕ್‌ ನಲ್ಲಿ ಅಣ್ಣನನ್ನು ತಮ್ಮನೇ ಬೆನ್ನಟ್ಟಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಕೋಡಿಂಬಾಳದ ಕೋರಿಯಾರ್ ಬಳಿ ನಡೆದಿದ್ದು ಗಾಯಾಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.ಗಂಭೀರ ಸುಟ್ಟ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ಹನುಮಪ್ಪ ಎಂದು ಗುರುತಿಸಲಾಗಿದೆ.

Read More »

ಬಾಲಕಿಯರ ಅಪಹರಣ, ನಾಲ್ವರಿಂದ ಸಾಮೂಹಿಕ ಅತ್ಯಾಚಾರ!!

ಮದುವೆ ಸಮಾರಂಭದಿಂದ 14 ಮತ್ತು 15ರ ಹರೆಯದ ಇಬ್ಬರು ಬಾಲಕಿಯರನ್ನು ಅಪಹರಿಸಿದ್ದ ನಾಲ್ವರು ದುಷ್ಕರ್ಮಿಗಳು ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ನಡೆದಿದೆ.ಎಲ್ಲ ನಾಲ್ವರು ಆರೋಪಿಗಳು ವಿಶಾಖಪಟ್ಟಣಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಅವರನ್ನು ಪೋಲಿಸರು ಬಂಧಿಸಿದ್ದಾರೆ.

Read More »

ಲಿವ್-ಇನ್ ಸಂಗಾತಿ ಕೊಲೆಗೈದು ಬ್ಯಾಗ್ ನಲ್ಲಿ ಶವ ಇಟ್ಟು ಪರಾರಿ!!

ಹೈದ್ರಾಬಾದ್ ನಲ್ಲಿ 30 ವರ್ಷದ ನೇಪಾಳಿ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿ ಕೊಲೆ ಮಾಡಿದ್ದಾನೆ. ಗರ್ಭಧಾರಣೆಯ ವಿವಾದದ ನಂತರ ಕೊಲೆ ಮಾಡಿ ಆಕೆಯ ಶವವನ್ನು ಚೀಲದಲ್ಲಿ ತುಂಬಿಸಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾನೆ.ಸ್ಥಳೀಯ ಕಾವಲುಗಾರನೊಬ್ಬ ಅನುಮಾನಾಸ್ಪದ ಚೀಲವನ್ನು ನೋಡಿ ಅಧಿಕಾರಿಗಳಿಗೆ ತಿಳಿಸಿದಾಗ ಅಪರಾಧ ಬೆಳಕಿಗೆ ಬಂದಿತು. ವಿಧಿವಿಜ್ಞಾನ ತಜ್ಞರೊಂದಿಗೆ ಹೈದರಾಬಾದ್ ಪೊಲೀಸರು ತ್ವರಿತವಾಗಿ ವಿವರವಾದ ತನಿಖೆಯನ್ನು ಪ್ರಾರಂಭಿಸಿದರು.

Read More »