Breaking News

BigTv News

ಧಾರವಾಡ: ರಸ್ತೆ ಅಪಘಾತ, ಸ್ಥಳದಲ್ಲೇ ಮೂವರು ಸಾವು!

ಗದಗ್ ಹುಬ್ಬಳ್ಳಿ ನಡುವೆ ಇರುವ ಭದ್ರಾಪುರ ಬಳಿ ಹುಬ್ಬಳ್ಳಿ ಗೆ ಹೊರಟಿದ್ದ ವೇಳೆ ಕಾರ್ ಅಪಘಾತವಾಗಿದೆ.ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ಜರುಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.ಕಾರ್ ನಲ್ಲಿದ್ದ ಮೂವರು ಧಾರುಣ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕಾರ್ ನಲ್ಲಿದ್ದವರನ್ನು ಪೊಲೀಸರು ಗುರುತು ಪತ್ತೆ ಹಚ್ಚುತ್ತಿದ್ದಾರೆ.

Read More »

ಹುಬ್ಬಳ್ಳಿ : ಘಟನಾ ಸ್ಥಳ ಮತ್ತು ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ.

ತಾಯಿ ಕೊಲೆ ಪ್ರಕರಣ ಸಂಬಂಧಿಸಿದಂತೆ ತೋರವಿ ಹಕ್ಕಲ್ ನಲ್ಲಿರೋ ಮನೆಗೆ ಭೇಟಿ ನೀಡಿ ಶಶಿಕುಮಾರ್ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಎನ್ ಶಶಿಕುಮಾರ್, ಮಹಿಳೆಯೊಂದಿಗಿನ ಅನೈತಿಕ ಸಂಬಂಧವೆ ಕೊಲೆಗೆ ಕಾರಣ ಎಂದು ತಿಳಿಸಿದ್ದಾರೆ.ಮಂಜುನಾಥ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ,ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮನೆಯಲ್ಲಿ ಆಗಾಗ ಜಗಳ ಆಗುತ್ತಿತ್ತು. ನಿನ್ನೆ ಜಗಳ ವಿಕೋಪಕ್ಕೆ ಹೋಗಿದೆ ಕಿಟಕಿಯ ಗಾಜಿನಿಂದ ಹೊಟ್ಟೆಗೆ ತಿವಿಯಲಾಗಿದೆ ಮುವ್ವರ ಪೈಕಿ ಯಾರು ಚಾಕುವಿನಿಂದ ಇರಿದಿದ್ದರೆ …

Read More »

ಹುಬ್ಬಳ್ಳಿ: ತಾಯಿ ಕೊಲೆ ಪ್ರಕರಣ ಕೊಲೆಯಾದ ಪದ್ಮಾ ಪತಿ ಶ್ರೀನಿವಾಸ ಕೊಲೆ ಬಗ್ಗೆ ಮಾಹಿತಿ…

ಅಣ್ಣನ ಅಕ್ರಮ ಸಂಬಂಧದ ಬಗ್ಗೆ ಕೇಳಿದಕ್ಕೆ ತಮ್ಮನ ಕೊಲೆ ಮಾಡಲು ಯತ್ನ ನಡೆದಿತ್ತು. ಜಗಳ ಬಿಡಿಸಲು ನಡುವೆ ಹೋದ ತಾಯಿ ಬಲಿಯಾಗಿದ್ದು, ಮದುವೆಯಾದರೂ ಪರ ಸ್ತ್ರೀ ಜೊತೆಗೆ ಸಂಬಂಧ ಇಟ್ಟುಕೊಂಡಿದ, ಮಂಜುನಾಥನ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ತಮ್ಮ ಲಕ್ಷ್ಮಣ ಮೇಲೆ ಹಲ್ಲೆಗೆ ಯತ್ನ ನಡೆಸಿ, ಗಲಾಟೆ ಬಿಡಿಸಲು ಹೋದಾಗ ಗ್ಲಾಸ್ ನಿಂದ ಇರಿದಿದ್ದ,ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಪದ್ಮಾ ಕಿಮ್ಸ್ ಗೆ ರವಾನೆ ಮಾಡಲಾಗಿತ್ತು. ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪದ್ಮಾ …

Read More »

ಹುಬ್ಬಳ್ಳಿ: ಅಣ್ಣ-ತಮ್ಮ‌ನ‌ ಜಗಳದಲ್ಲಿ ಕೊಲೆಯಾದ ತಾಯಿ!!

ಹುಬ್ಬಳ್ಳಿಯ ತೊರವಿ ಹಕ್ಕಲದಲ್ಲಿ ನಡೆದ ಘಟನೆ ಕಟಿಂಗ್ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಸಹೋದರರು,ಮಂಜುನಾಥ ಮತ್ತು ಲಕ್ಷ್ಮಣ ನಡುವೆ ಜಗಳ ಬಿಡಿಸಲು ಬಂದ ತಾಯಿಯ ಕೊಲೆ!.ವಿಂಡೋ ಗ್ಲಾಸ್ ತೆಗೆದುಕೊಂಡು ತಾಯಿ ಪದ್ಮಾ ಹೊಟ್ಟೆಯ ಭಾಗಕ್ಕೆ ಇರಿದ ಮಂಜುನಾಥ.ಪದ್ಮಾ ಚಲೂರಿ(45) ಕೊಲೆಯಾದ ತಾಯಿ. ತೀವ್ರ ರಕ್ತಸ್ರಾವ ಆಗಿದ್ದರಿಂದ ಕಿಮ್ಸ್ ಗೆ ದಾಖಲಿಸಿದ್ದು,,ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನಪ್ಪಿದರೆ. ಇಬ್ಬರು ಸಹೋದರರನ್ನ ವಶಕ್ಕೆ ಪಡೆದ ಪೊಲೀಸರು.ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ, ಐವರು IPS ಅಧಿಕಾರಿ ವರ್ಗಾವಣೆ ಮಾಡಿ ಆದೇಶ!

ಇಂದು ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಅನುಪಮ್ ಅಗರವಾಲ್, ಐಪಿಎಸ್ (2008) ಮಂಗಳೂರು ನಗರದ ಉಪ ನಿರೀಕ್ಷಕ ಮತ್ತು ಪೊಲೀಸ್ ಆಯುಕ್ತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಉಪ ನಿರೀಕ್ಷಕ ಜನರಲ್ ಆಫ್ ಪೊಲೀಸ್, ಆರ್ಥಿಕ ಅಪರಾಧಗಳು, ಅಪರಾಧ ತನಿಖಾ ಇಲಾಖೆ, ಸಿ. ವಂಶಿ ಕೃಷ್ಣ, ಐಪಿಎಸ್ ಅವರನ್ನು ಏಕಕಾಲೀನ ಆರೋಪದಿಂದ ಮುಕ್ತಗೊಳಿಸಲಾಗಿದೆ.ಬೊರಸೆ ಭೂಷಣ್ ಗುಲಾಬ್ರಾವ್, ಐಪಿಎಸ್ (2009) ಸೈಬರ್ ಅಪರಾಧ ಮತ್ತು ಮಾದಕ …

Read More »

ರಾಜ್ಯದಲ್ಲಿ ಕೋಮುಗಲಭೆ, ಹತ್ಯೆಗಳು ಹೆಚ್ಚಳ ಹಿನ್ನೆಲೆ : `ವಿಶೇಷ ಕಾರ್ಯಪಡೆ ರಚನೆಗೆ ಸರ್ಕಾರ ಮಹತ್ವದ ಆದೇಶ.!

ರಾಜ್ಯದಲ್ಲಿ ಕೋಮುಗಲಭೆ, ಹತ್ಯೆಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ವಿಶೇಷ ಕಾರ್ಯಪಡೆ ರಚನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಹೊಸದಾಗಿ ಸ್ಥಾಪನೆಯಾಗುವ ವಿಶೇಷ ಕಾರ್ಯಪಡೆಯು ಮೂರು ಕಂಪನಿಗಳನ್ನು ಹೊಂದಿರಲಿದ್ದು, ಈ ಕಂಪನಿಗಳನ್ನು ಉಡುಪಿ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸ್ಥಾಪಿಸುವುದು ಹಾಗೂ ಸದರಿ ವಿಶೇಷ ಕಾರ್ಯಪಡಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಕೆಳಕಂಡಂತೆ ಇರುತ್ತದೆ.ರಾಜ್ಯ ಸರ್ಕಾರವು ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿಯಲ್ಲಿ ವಿಶೇಷ ಕಾರ್ಯಪಡೆ ರಚನೆಗೆ ಆದೇಶ ಹೊರಡಿಸಿದೆ.ಒಟ್ಟು 656 ಹುದ್ದೆಗಳಲ್ಲಿ ಕೆಳಕಂಡ …

Read More »

ಮಂಗಳೂರು: ಗಣಿ ಇಲಾಖೆಯ ಉಪನಿರ್ದೇಶಕಿ ಲೋಕಾಯುಕ್ತ ಬಲೆಗೆ!!

ಉಪನಿರ್ದೇಶಕರೊಬ್ಬರು ಇರಾ ಗ್ರಾಮದ ವ್ಯಕ್ತಿಯೊಬ್ಬರಿಗೆ ಮನೆ ನಿರ್ಮಾಣಕ್ಕೆ ಕಟ್ಟಡಕಲ್ಲು ತೆಗೆದು ಸಮತಟ್ಟು ಮಾಡುವುದಕ್ಕಾಗಿ ಅನುಮತಿ ನೀಡಲು ಬುಧವಾರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆ ಬಿದ್ದಿರುವ ಘಟನೆ ವರದಿಯಾಗಿದೆ.ಉಳ್ಳಾಲ ತಹಶೀಲ್ದಾರರು ಸಮತಟ್ಟು ಮಾಡುವ ಸಲುವಾಗಿ ಜಮೀನಿನಲ್ಲಿ ಲಭ್ಯವಿರುವ ಕಟ್ಟಡಕಲ್ಲು ತೆಗೆಯಲು ಪ್ರಮಾಣಪತ್ರ, ದೃಢಿಕರಣ ಪತ್ರ ನೀಡಬಹುದಾಗಿದೆ ಎಂದು 2025 ಮಾರ್ಚ್ 21 ರಂದು ವರದಿ ಸಲ್ಲಿಸಿದ್ದರೂ ಕೂಡ ಗಣಿ ಇಲಾಖೆಯಿಂದ ಅನುಮತಿ ನೀಡಿಲ್ಲ ಎಂದು ಆರೋಪಿಸಲಾಗಿದೆ.ಉಪನಿರ್ದೇಶಕರಾದ ಕೃಷ್ಣವೇಣಿ ರವರು ಸಿಬ್ಬಂದಿ …

Read More »

ಗಾಂಜಾ ಸಾಗಣೆ ಆರೋಪಿಗಳಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು!!

ತೆನಾಲಿ ಮಂಗಳಗಿರಿಯಲ್ಲಿ ಮೂವರು ಯುವಕರು ಗಾಂಜಾ ಸಾಗಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಕಾನ್‌ಸ್ಟೆಬಲ್ ಒಬ್ಬರು ಅವರ ಬಂಧನಕ್ಕೆ ತೆರಳಿದ್ದರು.ಆದರೆ, ಆರೋಪಿಗಳು ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದ ಸ್ಥಳಕ್ಕೆ ಕರೆದುಕೊಂಡು ಬಂದು ಕಾಲಿಗೆ ಹಗ್ಗ ಕಟ್ಟಿ ಲಾಠಿಯಿಂದ ಥಳಿಸಲಾಗಿದೆ. ಇನ್‌ಸ್ಟೆಪಕ್ಟರ್ ಚಿರಂಜೀವಿ ಎನ್ನುವರು ಹಾಗೂ ಸಿಬ್ಬಂದಿ ಯುವಕರಿಗೆ ಥಳಿಸಿದ್ದಾರೆ.

Read More »

ಬಳ್ಳಾರಿ :ಜೈಲಿನಲ್ಲಿ ಹರ್ಷ ಕೊಲೆ ಆರೋಪಿಗಳು ಕಿರಿಕ್‌!!

ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ ಸೈಯ್ಯದ್ ನಿಹಾಲ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಈ ಇಬ್ಬರೂ ಜೈಲಿನ ಸಿಬ್ಬಂದಿ, ಅಧಿಕಾರಿಗಳ ಜೊತೆ ನಿತ್ಯ ಜಗಳ ಮಾಡಿ ಅವಾಜ್ ಹಾಕಿ, ಕಿರಿಕ್ ಮಾಡುತ್ತಿದ್ದಾರೆ. ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಬಳ್ಳಾರಿ ಜೈಲಿನಲ್ಲಿ ರಂಪಾಟ ಮಾಡಿದ್ದಾರೆ.ಜೈಲಿನಲ್ಲಿ ಬೇರೇ ಬೇರೆ ಕೋಣೆಗೆ ಅಥವಾ ಜೈಲರ್ ಕೊಠಡಿಗೆ ಹೋಗುವಾಗ ಕಡ್ಡಾಯವಾಗಿ ಚೆಕಪ್ ಮಾಡಲಾಗುತ್ತದೆ. ಆದರೆ ನಮ್ಮನ್ನು …

Read More »

ಗಂಗಾವತಿ: 18.06 ಲಕ್ಷ ಮೌಲ್ಯದ ಹೈಡ್ರೋ ಗಾಂಜಾ ವಶ; 8 ಮಂದಿ ಆರೋಪಿಗಳ ಬಂಧನ!

ಗಂಗಾವತಿ ನಗರದಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗುಸುತ್ತಿದ್ದ 1.8 ಕೆ.ಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.ಒಟ್ಟು ಎಂಟು ಜನರ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಬಂಧಿತ ಆರೋಪಿಗಳನ್ನು ಸೌಜೇಶ ಕೆ.ಕೆ.(28), ಸಲಿಂ ಪಿ.ಪಿ.(27) , ಬಿ.ದುರ್ಗಾ ಪ್ರಸಾದ್(27), ಬಾದ್‌ ಷಾ(32), ಮದನ್(26), ಸೂರ್ಯ ಪ್ರತಾಪ್ ರೆಡ್ಡಿ(19), ಮುಹಮ್ಮದ್‌ ಹಮೀದ್(22), ಮಣಿಕಂಠ(23) ಎಂದು …

Read More »