ಇಲ್ಲೊಂದು ಮಂಗ ನೇರವಾಗಿ ಪಶು ಆಸ್ಪತ್ರೆಗೆ ಹೋಗಿದೆ. ತನಗಾದ ಸಮಸ್ಯೆಯನ್ನು ವೈದ್ಯರಿಗೆ ತಾನೆ ಸನ್ನೆ ಮೂಲಕ ತೋರಿಸಿದೆ. ಬಳಿಕ ಚಿಕಿತ್ಸೆ ಪಡೆದುಕೊಂಡು ಹೋಗಿದೆ.ತನ್ನ ಗುದದ್ವಾರದ ಬಳಿ ಗಾಯವಾಗಿ, ತೀವ್ರ ನೋವಿನಿಂದ ಬಳಲುತ್ತಿದ್ದ ಕೋತಿಯೊಂದಕ್ಕೆ ತನ್ನ ನೋವಿಗೆ ಪರಿಹಾರ ಕಂಡುಕೊಂಡು ತಾನೆ ಚಿಕಿತ್ಸೆಗಾಗಿ ಪಶು ಆಸ್ಪತ್ರೆ ಬಳಿ ಬಂದಿದೆ. ಇದನ್ನು ಗಮನಿಸಿದ ಸಿಬ್ಬಂದಿ ವೈದ್ಯರನ್ನು ಕರೆದಿದ್ದಾರೆ. ಸ್ಥಳದಲ್ಲೇ ಇದ್ದ ಪಶುವೈದ್ಯಕೀಯ ಪರಿವೀಕ್ಷಕ ಜಿ.ಜಿ.ಬಿಲ್ಲೊರ ತಪಾಸಣೆ ಮಾಡುವಾಗ ಕೋತಿ ತನಗಾದ ಗಾಯದ ಬಗ್ಗೆ …
Read More »ಬೆಂಗಳೂರ: 30 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓರ್ವ ಯುವತಿ ಸೇರಿದಂತೆ ನಾಲ್ವರು ಆರೋಪಿಗಳು ಅರೆಸ್ಟ್!
ಬೆಂಗಳೂರಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ನಾಲ್ವರು ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಯುವತಿ ಸೇರಿದಂತೆ ಅಬಕಾರಿ ಅಧಿಕಾರಿಗಳು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.ಬಂಧಿತರಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಒಡಿಶಾ ಮೂಲದ ಸಂಪತ್ ಪ್ರಧಾನ (23) ತಪಸ್ ಪ್ರಧಾನ್ (22) ಜಗನ್ ಪತಂಜಲಿ (24) ಹಾಗೂ ದೀಪಾಂಜಲಿ (22) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. …
Read More »ಮಧುಗಿರಿ: ಅವೈಜ್ಞಾನಿಕ ಕಾಮಗಾರಿ,ಜಿಲ್ಲಾಧಿಕಾರಿ ತರಾಟೆ!
15ನೇ ವಾರ್ಡ್ನಲ್ಲಿ ಯುಜಿಡಿ ಪೈಪ್ಲೈನ್ ಮತ್ತು ಅಮೃತ ಯೋಜನೆಯ ಪೈಪ್ಲೈನ್ಗಳು ಒಂದಕ್ಕೊಂದು ಸೇರಿಕೊಂಡಿದ್ದು, ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.yಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿದಾಗ ಮುಂದಿನ ದಿನಗಳಲ್ಲಿ ಯುಜಿಡಿಯ ಪೈಪ್ಲೈನ್ನಲ್ಲಿ ಹಾದು ಹೋಗುವ ನೀರು ಮತ್ತು ಶುದ್ಧ ಕುಡಿಯುವ ನೀರು ಸೇರಿಕೊಳ್ಳುವ ಸಂಭವ ಇರುತ್ತದೆ. ಇಂತಹ ಸಮಸ್ಯೆಗಳನ್ನು ನೋಡಿಕೊಂಡು ಸರಿಯಾಗಿ ಕೆಲಸ ಮಾಡಬೇಕು ಎಂದು ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಪುರಸಭೆ ಮುಖ್ಯ ಅಧಿಕಾರಿ ಸುರೇಶ್, ಇಂಜಿನಿಯರ್ ಜಿ.ಸಂಜೀವ್ ಮೂರ್ತಿ, …
Read More »ಬೆಳ್ತಂಗಡಿ: ಜಾತಿ ನಿಂದನೆ ಮಾಡಿ ಯುವಕನಿಗೆ ಕೊಲೆ ಬೆದರಿಕೆ, ಇಬ್ಬರ ಬಂಧನ!
ಶಿಬಾಜೆಯ ಕುರುಂಜ ಮನೆಯ ಎದುರು ನಿಂತಿದ್ದ ವೇಳೆ ಸ್ಥಳೀಯ ನಿವಾಸಿ ಪ್ರವೀಣ್ ಎಂಬಾತನ ಮೇಲೆ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಹಲ್ಲೆಗೆ ಯತ್ನಿಸಿದ್ದರು. ಆನಂದ ಗೌಡ ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡು ಹಾಗೂ ತಿಮ್ಮಪ್ಪ ಪೂಜಾರಿ ಕಬ್ಬಿಣದ ಸಲಾಕೆಯನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಲು ಬಂದಿದ್ದು, ಈ ವೇಳೆ ಪ್ರವೀಣ್ ತಪ್ಪಿಸಿಕೊಂಡು ಮನೆಯೊಳಗೆ ಹೋಗಿ ಬಾಗಿಲು ಹಾಕಿದ್ದಾನೆ. ಈ ವೇಳೆ ಮನೆಯ ಅಂಗಳಕ್ಕೆ ಅಕ್ರಮ …
Read More »ಮಂಗಳೂರು : ಪತಿ ಪತ್ನಿ ಜಗಳ ಬಿಡಿಸಲು ಬಂದವನ ಹತ್ಯೆ!
ದಂಪತಿ ನಡುವೆ ಯಾವಾಗಲೂ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.ಹೀಗಾಗಿ ಮಾತುಕತೆ ಮೂಲಕ ಗಲಾಟೆ ಬಗೆಹರಿಸಲು ಸುಲೈಮಾನ್ ರಿಯಾಬ್ & ಸಿಯಾಬ್ ಎಂಬ ಇಬ್ಬರು ಪುತ್ರರೊಂದಿದೆ ಬಂದಿದ್ದು, ಈ ವೇಳೆ ಮುಸ್ತಫಾ ಸುಲೆಮಾನ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಈ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ವೇಳೆ ಆರೋಪಿಯ ದಾಳಿ ತಡೆಯಲು ಮುಂದಾದ ಮುಸ್ತಾಫಾ ಪುತ್ರ ಶಿಯಾಬ್ ಎದೆ ಭಾಗಕ್ಕೆ ಮತ್ತು ರಿಯಾಬ್ ಬಲ ತೋಳಿಗೆ ಚೂರಿಯಿಂದ ಹಲ್ಲೆ ಮಾಡಿದ್ದು …
Read More »ಚಲಿಸುತ್ತಿದ್ದ ಬಸ್ಸಿನ ಕಿಟಕಿ ಏರಿ ಬಸ್ ಡ್ರೈವರ್ ಮೇಲೆ ಹಲ್ಲೆಗೆ ಯತ್ನಿಸಿದ ಆಟೋ ಚಾಲಕ!!
ಹೈದರಾಬಾದ್ನ ಮಿಯಾಪುರದಲ್ಲಿ ಆರ್ ಟಿಸಿ ಬಸ್ ಚಾಲಕನ ಮೇಲೆ ಆಟೋ ಚಾಲಕನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಆಟೋ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕನು ಕೋಪಗೊಂಡು ಹಲ್ಲೆ ಮಾಡಲು ಮುಂದಾಗಿದ್ದಾನೆ. ಆರ್ಟಿಸಿ ಬಸ್ ಕಾಚೆಗುಡದಿಂದ ಪತೆಂಚೇರಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.ವಿಡಿಯೋದಲ್ಲಿ ಆಟೋ ಚಾಲಕನು ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸುತ್ತಿರುವುದನ್ನು ನೋಡಬಹುದು. ಆಟೋ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕನು ಕೋಪಗೊಂಡಿದ್ದಾನೆ. ಚಲಿಸುತ್ತಿದ್ದ …
Read More »ಬೆಂಗಳೂರು :ಮದ್ಯದ ಅಮಲಿನಲ್ಲಿ ರಂಪಾಟ, ಕೆಳಗೆ ಬಿದ್ದ ಆಟೊ ಚಾಲಕ ಸಾವು!
ರಂಗಸ್ವಾಮಿ ಹಾಗೂ ವಿನಯ್ ಕುಮಾರ್ ವೃತ್ತಿಯಲ್ಲಿ ಆಟೊ ಚಾಲಕರು. ಒಂದೇ ಬಡಾವಣೆಯ ನಿವಾಸಿಗಳು. ಮೇ 18ರ ರಾತ್ರಿ ಬಸವನಕಟ್ಟೆಯ ಬಾರ್ ಬಳಿ ರಂಗಸ್ವಾಮಿ ಕುಡಿದು ರಂಪಾಟ ಮಾಡುತ್ತಾ ಅಕ್ಕಪಕ್ಕದ ಮನೆಯವರನ್ನು ನಿಂದಿಸುತ್ತಿದ್ದರು. ಇದನ್ನು ವಿನಯ್ ಪ್ರಶ್ನಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ತಳ್ಳಾಟ, ನೂಕಾಟ ಸಂಭವಿಸಿದಾಗ ರಂಗಸ್ವಾಮಿ ಕೆಳಗೆ ಬಿದ್ದರು’ ಎಂದು ಪೊಲೀಸರು ತಿಳಿಸಿದರು.ಕೆಳಗೆ ಬಿದ್ದ ಗಾಯಗೊಂಡಿದ್ದ ರಂಗಸ್ವಾಮಿ ತಲೆಗೆ ಗಂಭೀರ ಪೆಟ್ಟಾಗಿತ್ತು. ಅವರನ್ನು ವಿಕ್ಟೋರಿಯಾ …
Read More »ಹೊಸನಗರ : ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ,ವ್ಯಕ್ತಿಗೆ ಗಾಯ!
ಶಿವಮೊಗ್ಗ ಕಡೆಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಕಾರು ಮತ್ತು ಮಾಸ್ತಿಕಟ್ಟೆಯಿಂದ ಕೊಡಚಾದ್ರಿ ಕಡೆ ಹೋಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದೆ.ಎರಡೂ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಶಿವಮೊಗ್ಗದಲ್ಲಿ ನಡೆದ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಳಿಕ ಕೊಡಚಾದ್ರಿಗೆ ಹೋಗುತ್ತಿದ್ದರು. ನಗರದಲ್ಲಿ ರಸ್ತೆ ತಪ್ಪಿ ಮಾಸ್ತಿಕಟ್ಟೆ ಹೋಗಿದ್ದರು. ಬಳಿಕ ವಾಪಸ್ ಬರುವ ವೇಳೆ ಅಪಘಾತವಾಗಿದೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Read More »ಮಾಲೀಕನ ಹೆಂಡತಿ ಜತೆ ಮಲಗಿದ್ದಕ್ಕೆ ಬಾಡಿಗೆದಾರನ ಕೊಲೆ!!
ಮಾಲೀಕ ಮುಖೇಶ್ ಠಾಕೂರ್ ಮತ್ತು ಬಾಡಿಗೆದಾರ ಜತಿನ್ ಒಟ್ಟಿಗೆ ಮದ್ಯ ಸೇವಿಸುತ್ತಿದ್ದರು. ರಾತ್ರಿ, ಮುಖೇಶ್ ಎಚ್ಚರಗೊಂಡಾಗ, ಜತಿನ್ ತನ್ನ ಪತ್ನಿ ಸುಧಾಳ ಜೊತೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇರುವುದನ್ನು ಕಂಡು ಕೋಪಗೊಂಡನು.ಇದರಿಂದ ಮೂವರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಮರುದಿನ ಬೆಳಗ್ಗೆ ಸುಧಾ ಕಾರ್ಖಾನೆಗೆ ಕೆಲಸಕ್ಕೆ ಹೋದ ನಂತರ ಮುಖೇಶ್ ಮತ್ತು ಜತಿನ್ ನಡುವೆ ಮತ್ತೊಮ್ಮೆ ಕಲಹ ನಡೆದು ಕೊಲೆಗೆ ಕಾರಣವಯಿತು.
Read More »ಆನಂದಪುರ ಬಳಿ ಧರೆಗೆ ಗುದ್ದಿದ ಸರ್ಕಾರಿ ಬಸ್!!
ಬಸ್ಸುಗಳೆರಡು ಡಿಕ್ಕಿ ಹೊಡೆದ ಪರಿಣಾಮ ಒಂದು ಬಸ್ಸು ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಗುದ್ದಿ ನಿಂತಿರುವ ಘಟನೆ ಆನಂದಪುರ ಸಮೀಪ ಸಾಗರ ರಸ್ತೆಯ ಮುಂಬಾಳು ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದೆ.ಘಟನೆ ವೇಳೆ ಬಸ್ಸಿನಲ್ಲಿ 20 ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ. ಮಧ್ಯಾಹ್ನ ವಿಪರೀತ ಮಳೆ ಸುರಿಯುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ ಪರಿಣಾಮ ಬಸ್ ಚಾಲಕ ಬಸ್ಸನ್ನು ಚರಂಡಿಯ ದರಗೆ ಇಳಿಸಿದ್ದಾನೆ ಸ್ವಲ್ಪ ಮುಂದೆ ಬಸ್ಸು ಚಲಿಸಿದ್ದರೆ ಗದ್ದೆಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





