Breaking News

BigTv News

ಬೆಂಗಳೂರು: ಕದ್ದ ಹಣದಲ್ಲಿ 20 ಮಕ್ಕಳ ಶಾಲಾ, ಕಾಲೇಜು ಶುಲ್ಕ ಪಾವತಿಸಿದ್ದ ಆರೋಪಿಯ ಬಂಧನ!

ತಾನು ವಾಸಿಸುತ್ತಿದ್ದ ಸ್ಥಳದಲ್ಲಿ ತನ್ನ ಸ್ನೇಹಿತರು ಅವರ ಮಕ್ಕಳಿಗಾಗಿ ಶಾಲಾ, ಕಾಲೇಜು ಶುಲ್ಕವನ್ನು ಕಟ್ಟಲು ಪರದಾಡುತ್ತಿರುವುದನ್ನು ನೋಡಿದ್ದ. ಕಳ್ಳತನ ಮಾಡಿ 20 ಮಕ್ಕಳ ಶಾಲಾ, ಕಾಲೇಜು ಶುಲ್ಕ ಪಾವತಿಸಿದ್ದ ಪ್ರಕರಣದಡಿ ಆರೋಪಿಯನ್ನು ಇಲ್ಲಿನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.ತಮಿಳುನಾಡಿನಲ್ಲಿ 22 ಲಕ್ಷಕ್ಕೆ ಚಿನ್ನ ಮಾರಾಟ ಮಾಡಿಸಿದ್ದ ಶಿವು ಬಂದ ಹಣದಲ್ಲಿ ವಿವೇಕ್‍ಗೆ 4 ಲಕ್ಷ ರೂ., ಅನಿಲ್‍ಗೆ 4 ಲಕ್ಷ ರೂ. ಮೌಲ್ಯದ ಆಟೋ ಕೊಡಿಸಿದ್ದ. ಉಳಿದ 14 …

Read More »

ಹುಬ್ಬಳ್ಳಿ :ಪೊಲೀಸ್ ಕಮಿಷನರ್ ಮುಂದೆ ನೊಂದ ಪತಿ ಕಣ್ಣೀರು!

ಗಂಡ ತನ್ನ ಪತ್ನಿಯಿಂದ ಹಿಂಸೆಗೊಳಗಾಗಿರುವುದಾಗಿ ಆರೋಪಿಸಿ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಮುಂದೆ ಕಣ್ಣೀರು ಹಾಕಿದ್ದಾನೆ.ನನ್ನ ಹೆಂಡತಿ ದಿನಂಪ್ರತಿ ನನ್ನನ್ನು ಹೊಡೆಯುತ್ತಾಳೆ, ಕಿರುಕುಳ ಕೊಡುತ್ತಾಳೆ’ ಎಂದು ಕಮಿಷನರ್ ಶಶಿಕುಮಾರ್ ಅವರ ಎದುರು ಕಣ್ಣೀರಿಟ್ಟಿದ್ದಾನೆ. ಈ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.ಪತ್ನಿಯ ಆರೋಪದಂತೆ, ಗಂಡ ಆಗಾಗ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದನಂತೆ. ಇದರಿಂದ ಬೇಸತ್ತ ಪತ್ನಿ, ಕಾನೂನಿನ ರಕ್ಷಣೆಗಾಗಿ ಸಬ್ ಅರ್ಬನ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ. ಆದರೆ, ಈ ದೂರಿಗೆ ಪ್ರತಿಯಾಗಿ, …

Read More »

ಅಮರಾವತಿ : ದಲಿತ ವಿದ್ಯಾರ್ಥಿ ಮೇಲೆ ಅಮಾನವೀಯ ಹಲ್ಲೆ!

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ದಲಿತ ಬಿ.ಟೆಕ್ ವಿದ್ಯಾರ್ಥಿಯನ್ನು ಅಪಹರಿಸಿ, ಥಳಿಸಿ ಮೂತ್ರ ಕುಡಿಸಿರುವಂತಹ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಜೇಮ್ಸ್‌, ತನ್ನ ಜೂನಿಯರ್ ವಿದ್ಯಾರ್ಥಿಗಳು ಮತ್ತು ಕ್ರಿಮಿನಲ್‌ಗಳ ಗುಂಪೊಂದು ತನ್ನನ್ನು ಅಪಹರಿಸಿ ಕ್ರೂರ ಚಿತ್ರಹಿಂಸೆ ನೀಡಿದ್ದಾಗಿ ಆರೋಪಿಸಿದ್ದಾರೆ. ಜಾತಿ ಆಧಾರಿತ ದ್ವೇಷದಿಂದ ಈ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ. ಈ ಹಿಂದೆ ಜೇಮ್ಸ್‌ ಜಾತಿ ನಿಂದನೆಯನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದು, ತನ್ನನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಪದೇ ಪದೇ ವಿನಂತಿಸಿಕೊಂಡರೂ …

Read More »

ಕನ್ನಡತಿ & ಸಾಹಿತಿ ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ, ಕನ್ನಡಕ್ಕೆ ಸಂದ ಮೊದಲ ಪ್ರಶಸ್ತಿ!

ಕನ್ನಡದ ಪ್ರಮುಖ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಗರಿಮೆ ಸಂದಿದೆ. ಸಣ್ಣ ಕತೆಗಳ ಅನುವಾದಿತ ಸಂಕಲನವಾಗಿರುವ “ಹಾರ್ಟ್‌ ಲ್ಯಾಂಪ್”ಗೆ ಈ ಪ್ರಶಸ್ತಿ ಸಂದಿದೆ. ಕನ್ನಡದ ಕೃತಿಯೊಂದಿಗೆ ಈ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲು. ಹೀಗಾಗಿ, ಈ ಪ್ರಶಸ್ತಿ ಕನ್ನಡಿಗರಲ್ಲಿ ಪುಳಕವನ್ನುಂಟು ಮಾಡಿದೆ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾರೀ ಪೈಪೋಟಿ ಹಾಗೂ ಸ್ಪರ್ಧೆ ಇರುತ್ತದೆ. ಇಷ್ಟೊಂದು ಸ್ಪರ್ಧೆಗಳ ನಡುವೆ ಪ್ರಶಸ್ತಿ ಕನ್ನಡತಿಗೆ ಸಂದಿದೆ.ಕೆಲವೇ ದಿನಗಳ ಹಿಂದೆ …

Read More »

ಧಾರವಾಡ :ಹಸುವಿಗೆ ಸ್ನಾನ ಮಾಡಿಸಲು ಕೆರೆಗೆ ಹೋದ ಸಂದರ್ಭ ಸಿಡಿಲು ಬಡಿದು ಯುವಕ ಸಾವು!

ಆಕಳ ಮೈ ತೊಳೆಯಲು ಕೆರೆಗೆ ಹೋದ ಸಮಯದಲ್ಲಿ ಸಿಡಿಲು ಬಡಿದು ಯುವಕನೋರ್ವ ಸಾವಿಗೀಡಾಗಿರುವ ಘಟನೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ ಸಂಭವಿಸಿದೆ.ಮೈಲಾರಪ್ಪ ಬಸಪ್ಪ ಉಣಕಲ್ ಎಂಬಾತನೇ ಸಾವಿಗೀಡಾದ ದುರ್ಧೈವಿಯಾಗಿದ್ದು, ಮೂಲತಃ ಹಿರೇಹರಕುಣಿ ಗ್ರಾಮದವನೆಂದು ಗೊತ್ತಾಗಿದೆ.ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

Read More »

ಹುಣಸೂರು :ಗ್ಯಾಸ್ ಸೋರಿಕೆಯಿಂದ ಗಾಯಗೊಂಡಿದ್ದ ಇಬ್ಬರು ಮಹಿಳೆಯರ ಸಾವು!

ದಿನಗಳ ಹಿಂದೆ ನಗರದ ಕಲ್ಕುಣಿಕೆ ಬಡಾವಣೆಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಬದಲಾಯಿಸುವ ವೇಳೆ ಬೆಂಕಿ ತಗುಲಿ ತೀವ್ರ ಗಾಯಗೊಂಡಿದ್ದ ಐವರ ಪೈಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.ಹುಣಸೂರಿನ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಪ್ರಯೋಜನವಾಗದೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯ ವಿಭಾಗಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜ್ಯೋತಿ ಹಾಗೂ ನಾಗಮ್ಮ ಸಾವನ್ನಪ್ಪಿದ್ದಾರೆ.ನಿಂಗರಾಜ್, ರಾಣಿಯಮ್ಮ, ಶೀಲ ಸೇರಿದಂತೆ ಮೂವರು ಕೆ.ಆರ್.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ …

Read More »

ರಾಯಚೂರು :ಮೊಬೈಲ್ ನಲ್ಲಿ ಮಾತನಾಡುವಾಗಲೇ ಸಿಡಿಲು ಬಡಿದು ಮಹಿಳೆ ಸಾವು.!

ರಾಯಚೂರಿನಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಲಿಂಗದಹಳ್ಳಿ ಗ್ರಾಮದ ಜಮೀನಿನಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಸಿಡಿಲು ಬಡಿದು ದೇವಕಿ ಮ್ಯಾಗೇರಿ (40)ಸಾವನ್ನಪ್ಪಿದ್ದಾರೆ.ಮಳೆ ನಿಂತ ನಂತರ ಗ್ರಾಮಸ್ಥರು ಸ್ಥಳಕ್ಕೆ ಓಡಿ ಹೋಗಿ ನೋಡಿದಾಗ ಸಿಡಿಲು ಬಡಿದು ದೇವಕಿ ಮೃತಪಟ್ಟಿರುವುದು ತಿಳಿದುಬಂದಿದೆ.

Read More »

ಬೆಳ್ತಂಗಡಿ :ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆ! ವ್ಯಕ್ತಿ ಗುರುತು ಪತ್ತೆ.

ಶಿಬಾಜೆ ಗ್ರಾಮದ ಬರ್ಗುಳ ಸಮೀಪ, ಶೀನ ಎಂಬವರ ಮನೆಯ ಪಕ್ಕ ಹರಿಯುತ್ತಿರುವ ಹಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು.ಇದು ಪತ್ತಿಮಾರು ನಿವಾಸಿ ಪ್ರಸಾದ್ ಪೂಜಾರಿ ಅವರದ್ದು ಎಂದು ಆತನ ಮನೆಯವರು ಶವದ ಗುರುತು ಹಿಡಿದ ಬಳಿಕ ತಿಳಿದು ಬಂದಿದೆ.ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ತಂಡದವರಾದ ಅವಿನಾಶ್ ಭಿಡೆ, ಕಿರಣ್, ಕೃಷ್ಣಪ್ಪ, ಬೇಬಿ ಪೆರ್ಲ, ಸಚಿನ್ ಭಿಡೆ, ರವೀಂದ್ರ ರವರು ಸ್ಥಳಕ್ಕೆ ಆಗಮಿಸಿ ಶವ ಮೇಲೆ ತೆಗೆಯುವ ಕೆಲಸ ಮಾಡಿದ್ದಾರೆ.ಧರ್ಮಸ್ಥಳ ಠಾಣಾ …

Read More »

ಮೂಡಿಗೆರೆ :ಕಾರಿಗೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಜಾರಿದ KSRTC ಬಸ್!

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಭಾರೀ ಮಳೆಯಿಂದಾಗಿ ನಿಯಂತ್ರಣ ತಪ್ಪಿದ KSRTC ಬಸ್ ಕಾರಿಗೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಜಾರಿದ ಘಟನೆ ಇಂದು ನಡೆದಿದೆ.ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಎದುರಿನಿಂದ ಬಂದ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ನಂತರ ರಸ್ತೆ ಬದಿಗೆ ಜಾರಿದೆ.ಈ ಅಪಘಾತದಲ್ಲಿ ಕಾರು ಚಾಲಕ ಸೇರಿ ಬಸ್‌ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ …

Read More »

ಮಧ್ಯಪ್ರದೇಶ :ಮದುವೆಗೂ ಮುನ್ನ ಅತ್ಯಾಚಾರ ಆರೋಪದಲ್ಲಿ ವರ ಅರೆಸ್ಟ್‌ !

ಬಾಲಕಿಯೊಬ್ಬಳು ರಘುನಾಥ್‌ಗಢದ ನಿವಾಸಿ ದೇವೇಂದ್ರ ಕುಮಾರ್ ಸಾಕೇತ್ (25 ವರ್ಷ) ಹಲವು ತಿಂಗಳುಗಳಿಂದ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ್ದ ಎಂದು ದೂರು ನೀಡಿದ್ದಾಳೆ. ಬಾಲಕಿ ತನ್ನ ವಿಶ್ವಾಸವನ್ನು ಗಳಿಸಿದ ನಂತರ ಆರೋಪಿ ಪ್ರತಿ ಬಾರಿಯೂ ಮದುವೆಯಾಗುವುದಾಗಿ ಹೇಳಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ.ಬಾಲಕಿ ಮದುವೆಗೆ ಒತ್ತಾಯಿಸಿದಾಗ, ಆರೋಪಿ ಬಲವಂತವಾಗಿ ಆಕೆಯ ಮನೆಗೆ ನುಗ್ಗಿ ಕೊಲೆ ಬೆದರಿಕೆ ಹಾಕಿದ್ದಾನೆ. ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದಾಗ …

Read More »