ಬುಧವಾರ ರಾತ್ರಿ ಊಟ ಮುಗಿಸಿಕೊಂಡು ಬಸ್ನಲ್ಲಿ ಪುರಿಗೆ ತೆರಳುತ್ತಿದ್ದಾರೆ ಬಾಲೇಶ್ವರ ಜಿಲ್ಲೆಯ ಸೊರೊ ಎಂಬಲ್ಲಿ ಈ ಘಟನೆ ನಡೆದಿದೆ.ಪ್ರವಾಸಿಗರು ಮಾರ್ಗಮಧ್ಯೆ ಅಸ್ವಸ್ಥಗೊಂಡಿದ್ದಾರೆ.ಪ್ರವಾಸಿಗರನ್ನು ಸೊರೊ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೊರೊ ಎಂಬಲ್ಲಿ ತಾವೇ ತಯಾರಿಸಿದ್ದ ಅನ್ನ ಮತ್ತು ಸಾಂಬರ್ ಸೇವಿಸಿದ್ದರು. ಬಸ್ ಸೊರೊ ನಗರ ತಲುಪುವಷ್ಟರಲ್ಲಿ 20 ಪ್ರವಾಸಿಗರು ವಾಂತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರವಾಸಿಗರ ಅಸ್ವಸ್ಥತೆಗೆ ಬಿಸಿಗಾಳಿ ಕಾರಣವಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
Read More »ಮಂಗಳೂರಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಹಡಗು ಮುಳುಗಡೆ!!
ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಹಡಗು ಮುಳುಗಡೆಯಾಗಿದೆ. ಸರಕು ತುಂಬಿದ್ದ ಮಂಗಳೂರಿನ ಹಡಗು ಮುಳುಗಡೆಯಾಗಿದೆ.ತಾಂತ್ರಿಕ ಸಮಸ್ಯೆಯಿಂದಾಗಿ ಹಡಗಿನೊಳಗೆ ನೀರು ನುಗ್ಗಿ ಮುಳುಗಿದೆ.ಮುಳುಗುತ್ತಿದ್ದ ಹಡಗಿನಿಂದ ಸಣ್ಣ ಬೋಟಿಗೆ ಹಾರಿ ಆರು ಜನ ಸಿಬ್ಬಂದಿ ಪ್ರಾಣ ಉಳಿಸಿಕೊಂಡಿದ್ದಾರೆ. ಡಿಂಗಿ ಬೋಟ್ ಮೂಲಕ ಸಿಬ್ಬಂದಿ ಪ್ರಾಣ ಉಳಿಸಿಕೊಂಡಿದ್ದಾರೆ. ಕರಾವಳಿ ರಕ್ಷಣಾ ಪಡೆಗೆ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ.ಇಸ್ಮಾಯಿಲ್ ಶರೀಫ್, ಅಲೆಮನ್ ಅಹಮದ್ ಶಾಕಲ್, ಸುಲೇಮಾನ್, ಅಕ್ಬರ್ ಅಬ್ದುಲ್ ಸುರಾನಿ, ಅಜ್ಮಲ್ ಅವರನ್ನು ಕೋಸ್ಟ್ …
Read More »ಚಿತ್ರದುರ್ಗ: ಬಾಂಬ್ ಸ್ಫೋಟ, ಅಗ್ನಿ ಅವಘಡ, ಗಾಯಳುಗಳು ಗಂಭೀರ!
ಬಾಂಬ್ ಸ್ಫೋಟಗೊಂಡ ಕೂಡಲೇ ಸಾರ್ವಜನಿಕರು ಓಡಲಾರಂಭಿಸಿದರು, ಗಾಯಾಳುಗಳು ಕೆಳಕ್ಕೆ ಬಿದ್ದು ನರಳಾಡುತ್ತಿದ್ದರು. ಬಾಂಬ್ ಸ್ಫೋಟದ ಶಬ್ದ ಕೇಳಿದ ತಕ್ಷಣ ತುರ್ತು ಸಂದರ್ಭದ ಸೈರನ್ ಮೊಳಗಿತು. ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಲಾಯಿತು.ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ರೆಡ್ಕ್ರಾಸ್ ಸಂಸ್ಥೆಯ ತಂಡದ ಸದಸ್ಯರು ಗಾಯಾಳುಗಳ ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ವೈದ್ಯಕೀಯ ತಂಡ ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ಆರಂಭಿಸಿತು.ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ …
Read More »ಬೆಂಗಳೂರು : ಅವಘಡ, ಮೂವರು ಮಕ್ಕಳಿಗೆ ವಿದ್ಯುತ್ ಶಾಕ್!
ಸಂಬಂಧಿಕರ ಮನೆಗೆ ಬಂದಿದ್ದ ಮೂವರು ಮಕ್ಕಳು ವಿದ್ಯುತ್ ಶಾಕ್ ನಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮದುವೆಯ ಬಳಿಕ ಪೋಷಕರ ಜೊತೆಗೆ ಸಂಬಂಧಿಕರೊಬ್ಬರ ಮನೆಗೆ ತೆರಳಿದ್ದರು. ಅಲ್ಲಿ ಮಕ್ಕಳು ಆಟವಾಡುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಗಾಯಗೊಂಡಿದ್ದಾರೆ. ವಿದ್ಯುತ್ ಕಂಬಕ್ಕೆ ಅಳವಡಿಸಿರುವ ತಂತಿ ತಗುಲಿ ಒಂದು ಮಗು ಗಂಭೀರವಾಗಿ ಗಾಯಗೊಂಡಿದೆ. ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
Read More »ಕಲಬುರಗಿ :ಒಳಮೀಸಲಾತಿ ಸಮೀಕ್ಷೆ ವೇಳೆ `ಹೃದಯಾಘಾತ’ದಿಂದ ಶಿಕ್ಷಕ ಸಾವು.!
ಪರಿಶಿಷ್ಟ ಜಾತಿಗಳ ಸಮೀಕ್ಷೆ ಕಾರ್ಯ ನಡೆಸುತ್ತಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿಂಚೋಳಿ ತಾಲೂಕಿನ ಚತ್ರಸಾಲ ಗ್ರಾಮದಲ್ಲಿ ಗುರುವಾರ ನಡೆದಿದೆ.ಆದರೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.ನಾಗಶೆಟ್ಟಿ ಅವರು ಬುರಗಪಳ್ಳಿ ಗ್ರಾಮದವರು. 1998 ರಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದರು. ಮೃತರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ
Read More »ಬಂಟ್ವಳ :ಉರುಳಿಬಿದ್ದ ಲಾರಿಗಳು; ಬಿಸಿ ಡಾಂಬರು ಮೈಮೇಲೆ ಬಿದ್ದು ಓರ್ವ ಚಾಲಕ ಮೃತ್ಯು; ಕ್ಲೀನರ್ ಗೆ ಗಂಭೀರ ಗಾಯ!!
ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದ ವೇಳೆ ಒಂದು ಲಾರಿಯಲ್ಲಿದ್ದ ಬಿಸಿ ಡಾಂಬರು ಮೈಮೇಲೆ ಬಿದ್ದು ಲಾರಿ ಚಾಲಕರೊಬ್ಬರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಗುರುವಾರ ಸಜೀಪದಲ್ಲಿ ನಡೆದಿದೆ.ಬಿಸಿ ಡಾಂಬರು ತುಂಬಿದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಎರಡು ಲಾರಿಗಳು ಆಳೆತ್ತರದಲ್ಲಿದ್ದ ಅಡಿಕೆ ತೋಟಕ್ಕೆ ಉರುಳಿಬಿದ್ದಿವೆ. ಈ ವೇಳೆ ಟಿಪ್ಪರ್ ನಲ್ಲಿದ್ದ ಬಿಸಿ ಡಾಂಬರು ಕೆಂಪು ಕಲ್ಲು ಸಾಗಾಟದ ಲಾರಿ ಚಾಲಕ ರಫೀಕ್ ಅವರ ಮೈ ಮೇಲೆ …
Read More »ಶಾಂತಿಗಾಗಿ ಭಾರತದೊಂದಿಗೆ ಮಾತುಕತೆಗೆ ಸಿದ್ಧ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್!
ಉಭಯ ಪರಮಾಣು ಸಶಸ್ತ್ರ ರಾಷ್ಟ್ರಗಳು ತಮ್ಮ ಅತ್ಯಂತ ತೀವ್ರವಾದ ಮಿಲಿಟರಿ ಮುಖಾಮುಖಿಯನ್ನು ಕೊನೆಗೊಳಿಸಿದ ಕೆಲವು ದಿನಗಳ ನಂತರ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಗುರುವಾರ ಭಾರತದೊಂದಿಗೆ ಶಾಂತಿ ಮಾತುಕತೆಯಲ್ಲಿ ತೊಡಗಲು ಇಸ್ಲಾಮಾಬಾದ್ ಸಿದ್ಧವಾಗಿದೆ ಎಂದು ಹೇಳಿದರು.ವಿಸ್ತರಣೆಯು ಎರಡೂ ದೇಶಗಳ ನಡುವಿನ ಸಂಭಾಷಣೆಯನ್ನು ಮುಂದುವರಿಸಲು ಮತ್ತು ಶಾಂತಿಯುತ ಸಂಬಂಧವನ್ನು ಉತ್ತೇಜಿಸಲು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.ಪಾಕಿಸ್ತಾನದ ಉಪ ಪ್ರಧಾನಮಂತ್ರಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ದಾರ್, ಈ ಕದನ ವಿರಾಮವನ್ನು ಕಾಪಾಡಿಕೊಳ್ಳಲು ಎರಡೂ ದೇಶಗಳು ಬದ್ಧವಾಗಿವೆ ಎಂದು …
Read More »ಜಮಖಂಡಿ :ಕ್ರಿಕೆಟ್ ಬಾಲ್ ವಿಷಯಕ್ಕೆ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಯುವಕ!
ಯುವಕನೊಬ್ಬ ಶಿಕ್ಷಕನಿಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ನಂತರ ಚಾಕುವಿನಿಂದ ಇರಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ.ಶಿಕ್ಷಕನ ಮನೆಯ ಒಳಗೆ ಕ್ರಿಕೆಟ್ ಚೆಂಡು ಬಿದ್ದಿದೆ ಕೊಡು ಎಂದು ಯುವಕ ಪ್ರಶ್ನಿಸಿದ್ದಾನೆ. ಆದರೆ ಚೆಂಡು ಮನೆಯಲ್ಲಿ ಬಿದ್ದಿಲ್ಲ ಎಂದು ಶಿಕ್ಷಕ ಉತ್ತರಿಸಿದ್ದಾನೆ. ಇದರಿಂದ ಅಸಮಾಧಾನಗೊಂಡ ಪವನ್ ಜಾಧವ್ ಹಲ್ಲೆ ನಡೆಸಿ ನಂತರ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ರಾಮು ಪೂಜಾರಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಅಪಾಯದಿಂದ ಪಾರಾಗಿದ್ದಾರೆ.ಈ …
Read More »ಶಿವಮೊಗ್ಗ :ಸಾಗರದಲ್ಲಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿ ಅರೆಸ್ಟ್!
ಸಾಗರದಲ್ಲಿ ಕಾಲೇಜಿನೊಳಗೆ ಅಕ್ರಮವಾಗಿ ಪ್ರವೇಶಿಸಿ ಅಲ್ಲಿನ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದಂತ ಆರೋಪದಡಿ ವ್ಯಕ್ತಿಯೊಬ್ಬನನ್ನು ದೂರು ದಾಖಲಾದ ಒಂದೇ ದಿನದಲ್ಲಿ ಬಂಧಿಸಿ, ಜೈಲಿಗಟ್ಟಲಾಗಿದೆ.ಶಿಕಾರಿಪುರ ತಾಲ್ಲೂಕಿನ ಭದ್ರಾಪರು ಗ್ರಾಮದ ವೆಸ್ಟ್ ಪೇಪರ್ ವ್ಯಾಪಾರ ಮಾಡುತ್ತಿದ್ದಂತ ಕುಮಾರ್ ಎಂಬಾತನನ್ನು ಪೊಲೀಸರು ಒಂದೇ ದಿನದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಂತಹ ಆರೋಪಿಯನ್ನು ಮೇ.25ರವರೆಗೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ.
Read More »ಸುಳ್ಯ :ಬೈಕ್ಗೆ ಸ್ಕೂಟಿ ಡಿಕ್ಕಿ, ಬೈಕ್ ಸವಾರ ಗಂಭೀರ ಗಾಯ!
ಆಲೆಟ್ಟಿಯಿಂದ ಸುಳ್ಯ ಕಡೆಗೆ ಬರುವ ರಸ್ತೆಯ ನಾರ್ಕೋಡು ದ್ವಾರದ ಬಳಿ ಬುಧವಾರ ರಾತ್ರಿ ಕೇಬಲ್ ನೆಟ್ವರ್ಕ್ ಕೆಲಸ ಮುಗಿಸಿ ಸುಳ್ಯಕ್ಕೆ ಬರುತ್ತಿದ್ದ ಅರಂಬೂರಿನ ಸುಧಾಕರ ರೈ ಅವರ ಬೈಕಿಗೆ ಸ್ಕೂಟಿ ಢಿಕ್ಕಿ ಹೊಡೆದಿದೆ.ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಅವರನ್ನು ಮತ್ತು ಸ್ಕೂಟಿ ಸವಾರರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





