ಗ್ರಾಮದ ಕಾವೇರಿ ನದಿ ತೀರದಲ್ಲಿ 20ರಿಂದ 30 ದಿನದ ಹೆಣ್ಣು ಮಗುವಿನ ಶವವೊಂದು ಸೋಮವಾರ ತೇಲಿ ಬಂದಿದೆ.ಬೆಳಿಗ್ಗೆ ಗ್ರಾಮದ ಮಹಿಳೆಯರು ಕಾವೇರಿ ನದಿಯ ಸಮೀಪ ಬಟ್ಟೆ ತೊಳೆಯಲು ಹೋಗಿದ್ದಾಗ ಶವ ಪತ್ತೆಯಾಗಿದೆ.ಸಿಡಿಪಿಒ ಕಚೇರಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಶಿಶುವಿನ ಶವವನ್ನು ನೀರಿನಿಂದ ಮೇಲಕ್ಕೆತ್ತಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಿಡಿಪಿಒ ಮೇಲ್ವಿಚಾರಕಿ ಪ್ರೇಮಲತಾ ದೂರು ನೀಡಿದ್ದಾರೆ.
Read More »ಕೊರಟಗೆರೆ :ಸ್ನೇಹಿತರೊಂದಿಗೆ ಈಜಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು!
ಅಣ್ಣ- ತಮ್ಮಂದಿರೊಂದಿಗೆ ಸ್ನೇಹಿತರು ಈಜಲು ಹೋಗಿದ್ದ ಸಂದರ್ಭ ಯುವಕನೋರ್ವ ಈಜು ಬಾರದೆ ಮುಳುಗಿ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಈಜಲು ಹೋಗಿ ಮುಳುಗಿದ್ದ ಹೇಮಂತನನ್ನು ಹುಡುಕಲು ಎಷ್ಟೇ ಪ್ರಯತ್ನಿಸಿದರೂ ಸುಳಿವು ಸಿಗದೆ ನಂತರ ಸಾರ್ವಜನಿಕರ ಸಹಕಾರದಿಂದ ಹೊರ ತೆಗೆದರಾದರೂ ಅಷ್ಟರಲ್ಲಾಗಲೇ ಉಸಿರು ಕಟ್ಟಿ ಸಾವಿಗೀಡಾಗಿದ್ದ ಎನ್ನಲಾಗಿದೆ.ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್ ಹಾಗೂ ಪಿ ಎಸ್ಐ ಅಭಿಷೇಕ್ …
Read More »ಬೆಂಗಳೂರು : ಕೆಲಸ ನೀಡಿದ್ದ ಮಾಲೀಕನ 1.51 ಕೋಟಿ ಹಣ ವಂಚಿಸಿದ ಡ್ರೈವರ್ ರಾಜೇಶ್!
ಕಳೆದ 10 ವರ್ಷಗಳಿಂದ ತನ್ನ ಬಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್ ಎಂಬಾತ, ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಮಾಲೀಕ ತೋಟ ಪ್ರಸಾದ್ ಅವರ 1.51 ಕೋಟಿ ರೂಪಾಯಿಯನ್ನು ಎಗರಿಸಿದ್ದಾನೆ.ಬ್ಯಾಂಕ್ನಲ್ಲಿ ಠೇವಣಿ ಮಾಡಲು 1.51 ಕೋಟಿ ರೂ. ನಗದು ಡ್ರೈವರ್ ರಾಜೇಶ್ ಗೆ ನೀಡಿದ್ದರು. ಈ ಹಣವನ್ನು ನೀಡಿದ ಬಳಿಕ, ರಾಜೇಶ್ ತನ್ನ ಕಾರನ್ನು ಪಾರ್ಕ್ ಮಾಡುವ ನೆಪದಲ್ಲಿ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದನು. ಆಂಧ್ರಪ್ರದೇಶದ ಗುಂಟೂರಿನ ಮೂಲ ಹೊಂದಿರುವ ರಾಜೇಶ್, …
Read More »ದಾಸರಹಳ್ಳಿ : ಪ್ರವಾಸಕ್ಕೆಂದು ಚಾಲಕನ ಕರೆಸಿಕೊಂಡು ಕಾರು, ಮೊಬೈಲ್ ದೋಚಿದ ಮಹಿಳೆ!
ಪ್ರವಾಸಕ್ಕೆಂದು ಕರೆಸಿಕೊಂಡ ಮಹಿಳೆಯೊಬ್ಬಳು ಚಾಲಕನಿಗೆ ಯಾಮಾರಿಸಿ ಕಾರು ಹಾಗೂ ಆತನ ಮೊಬೈಲ್ ಕಳವು ಮಾಡಿರುವ ಘಟನೆ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.15 ದಿನಗಳ ಹಿಂದೆ ಅನಂತಕುಮಾರ್ ಕಾರವಾರಕ್ಕೆ ಬಾಡಿಗೆಗೆ ಹೋಗಿದ್ದರು. ಆಗ ಮೋನಿಕಾ, ಬೆಂಗಳೂರು ಹಾಗೂ ಮೈಸೂರು ಪ್ರವಾಸಕ್ಕೆ ಹೋಗಬೇಕೆಂದು ದೂರುದಾರನ ಮೊಬೈಲ್ ನಂಬರ್ ಪಡೆದುಕೊಂಡಿದ್ದಾಳೆ. ಶೌಚಾಲಯದ ಕಿಟಕಿಯಿಂದ ಸ್ಥಳೀಯರನ್ನು ಕೂಗಿ ಬಳಿಕ ಬಾತ್ ರೂಮ್ ಬಾಗಿಲು ತೆರೆಸಿಕೊಂಡು ಹೊರಬಂದು ಠಾಣೆಗೆ ದೂರು ನೀಡಿದ್ದಾಗಿ ಅನಂತ್ಕುಮಾರ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
Read More »ಬೆಳ್ತಂಗಡಿ :ನಿದ್ರೆ ಮಾತ್ರೆ ಸೇವಿಸಿದ್ದ ತಾಯಿ ಸಾವು, ಮಗ ಗಂಭೀರ!
ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ಅತಿಯಾಗಿ ನಿದ್ರೆ ಮಾತ್ರೆ ಸೇವಿಸಿದ್ದ ವೃದ್ಧೆ ತಾಯಿ ಸಾವಿಗೀಡಾಗಿ ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಸಂಭವಿಸಿದೆ.ತಾಯಿ ಮಲಗಿದ ಜಾಗದಲ್ಲಿ ಜಯರಾಂ ಅವರು ಬರೆದಿರುವ ನಾಲ್ಕು ಪುಟ ಗಳ ಪತ್ರ ಲಭಿಸಿದ್ದು ಅದರಲ್ಲಿ ಸಾಲದ ಸಮಸ್ಯೆ, ತನ್ನ ಅನಾರೋಗ್ಯದ ಕಾರಣ ದಿಂದ ನಾವು ನಿದ್ರೆ ಮಾತ್ರೆ ಸೇವಿಸಿರುತ್ತೇವೆ. ನಮ್ಮನ್ನು ಬದುಕಿಸುವ ಪ್ರಯತ್ನ ಮಾಡಬೇಡಿ ಎಂದು ಬರೆಯಲಾಗಿದೆ. ತಾಯಿ ಕಳೆದ ನಾಲ್ಕು ವರ್ಷಗಳಿಂದ ವಯೋ …
Read More »ಶ್ರೀಲಂಕಾ: ಬಸ್ ಕಂದಕಕ್ಕೆ ಉರುಳಿ 21 ಪ್ರಯಾಣಿಕರು ಸಾವು!
ಶ್ರೀಲಂಕಾದಲ್ಲಿ ಭಾನುವಾರ ಬೆಳಿಗ್ಗೆ ಸರ್ಕಾರಿ ಬಸ್ ಬೆಟ್ಟದಿಂದ ಜಾರಿ ಬಂಡೆಯಿಂದ ಬಿದ್ದ ಪರಿಣಾಮ ಕನಿಷ್ಠ 21 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬಸ್ ದಕ್ಷಿಣದ ಯಾತ್ರಾ ಪಟ್ಟಣವಾದ ಕಾತರಗಾಮದಿಂದ ವಾಯುವ್ಯದ ಕುರುನಾಗಾಲಕ್ಕೆ 75 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.ಅಪಘಾತದಲ್ಲಿ 35 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇಬ್ಬರು ಮಕ್ಕಳು ಸೇರಿದಂತೆ 15 ಜನರ ಸ್ಥಿತಿ ಗಂಭೀರವಾಗಿದೆ.ಅಧಿಕಾರಿಗಳು ಗಾಯಾಳುಗಳನ್ನು ನುವಾರಾ ಎಲಿಯಾ, ಕಂಬಲೈ ಮತ್ತು ನವಲಪಟ್ಟಿಯ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ. ಗಂಭೀರ ಪ್ರಕರಣಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನುವಾರಾ ಎಲಿಯಾ …
Read More »ಕಾಸರಗೋಡು : ಒಂದೇ ದಿನಕ್ಕೆ 2 ಆತ್ಮಹತ್ಯೆ ಪ್ರಕರಣ!
ಬೋವಿಕ್ಕಾನ ತೇಜಸ್ ಹೌಸಿಂಗ್ ಕಾಲೊಮಿ ನಿವಾಸಿ ಚೋಮು (80) ಎಂಬುವರು ಮನೆ ಬಳಿಯ ಮಾವಿನಮರದ ಗೆಲ್ಲಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದು ಘಟನೆಯಲ್ಲಿ ಕಾರಡ್ಕ ಶಾಂತಿನಗರ ನಿವಾಸಿ ಸಿ.ಎಚ್.ಶಶಿ (58) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಸಿಪಿಎಂ ಶಾಖಾ ಕಾರ್ಯದರ್ಶಿಯಾಗಿದ್ದರು.
Read More »ಕಾಸರಗೋಡು : ಎಂಡಿಎಂಎ, ಗಾಂಜಾ ಪತ್ತೆ!!
ಶಿರಿಯ ಒಳಯಂ ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 12.087 ಗ್ರಾಂ ಎಂಡಿಎಂಎಯನ್ನು ಅಬಕಾರಿ ದಳ ಪತ್ತೆಮಾಡಿದೆ.ಇನ್ನೊಂದು ಪ್ರಕರಣದಲ್ಲಿ ಕುಂಬಳೆ ಬದ್ರಿಯಾನಗರದಲ್ಲಿ 10 ಗ್ರಾಂ ಗಾಂಜಾ ಸಹಿತ ಸ್ಥಳೀಯ ನೀರಾಳಿ ನಿವಾಸಿ ಅಫ್ಝಲ್ (28) ಎಂಬಾತನನ್ನು ಅಬಕಾರಿ ದಳ ಬಂಧಿಸಿದೆ.
Read More »ಕಾಸರಗೋಡು : ಮಣ್ಣು ಕುಸಿದು ವ್ಯಕ್ತಿ ಸಾವು,ಇಬ್ಬರಿಗೆ ಗಾಯ!
ಚೆರುವತ್ತೂರು ಮಟ್ಟಲಾಯಿ ಎಂಬಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಗುಡ್ಡದಿಂದ ಮಣ್ಣು ಕುಸಿದು ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.ನಿರ್ಮಾಣಗೊಳ್ಳುತ್ತಿದ್ದ ಮನೆಯ ಮೊದಲ ಅಂತಸ್ತಿನಿಂದ ಬಿದ್ದು, ಮೇಸ್ತ್ರಿ ಮೃತಪಟ್ಟಿದ್ದಾರೆ. ಚಿನ್ನಮೊಗರು ಎಂಬಲ್ಲಿ ಘಟನೆ ನಡೆದಿದ್ದು, ಜೋಡುಕಲ್ಲು ನಿವಾಸಿ ಶಶಿಧರ (32) ಮೃತಪಟ್ಟವರು.ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಅವರಿಗೆ ಪತ್ನಿ ಇದ್ದಾರೆ.
Read More »ಯಾದಗಿರಿ: ಭೀಮಾನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು!
ಭೀಮಾನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ಯಾರೇಜ್ ಮುಂಭಾಗ ನಡೆದಿದೆ.ಸ್ಥಳೀಯರ ಸಹಾಯದಿಂದ ನೀರಿನಿಂದ ಮೃತದೇಹವನ್ನು ತೆಗೆಯಲಾಗಿದ್ದು, ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ವಡಗೇರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರನ್ನು ಗುರುಸಣಗಿ ಗ್ರಾಮದ ಶಕೀಲ್ (18) ಮಹಿಬೂಬ್ (20) ಎಂದು ಗುರುತಿಸಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





