Breaking News

BigTv News

ಉತ್ತರಪ್ರದೇಶ: ಮೊಬೈಲ್ ಶಾಪ್ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ 50,000 ರೂ.ದೋಚಿದ ಕಳ್ಳ!

ಉತ್ತರ ಪ್ರದೇಶದ ಭೀಕರ ದರೋಡೆಯೊಂದು ನಡೆದಿದ್ದು, ಮೊಬೈಲ್ ಶಾಪ್ ಗೆ ನುಗ್ಗಿದ ಕಳ್ಳನೊಬ್ಬ ಮೊಬೈಲ್ ಶಾಪ್ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿ 50 ಸಾವಿರ ರೂ. ದೋಚಿದ ಘಟನೆ ನಡೆದಿದೆ.ಗ್ರಾಹಕರಂತೆ ನಟಿಸಿ, ವಂಚಕ ಮೊದಲು 19 ರೂ.ಗೆ ಮತ್ತು ನಂತರ 29 ರೂ.ಗೆ ರೀಚಾರ್ಜ್ ಮಾಡಿದ್ದಾನೆ. ನಂತರ ಅವನು ತನ್ನ ಜಾಕೆಟ್‌ನಿಂದ ಮೆಣಸಿನ ಪುಡಿಯನ್ನು ತೆಗೆದು ಅಂಗಡಿಯವನ ಕಣ್ಣಿಗೆ ಎಸೆದಿದು, 50 ರೂ. ಹಣ ದೋಚಿ ಪರಾರಿಯಾಗಿದ್ದಾನೆ.

Read More »

ಬೆಂಗಳೂರು : ಜೋಗಿ ಸಿನಿಮಾ ಖ್ಯಾತಿಯ ನಟ ಕೋತಿ ಮಂಜ ನಿಧನ!

ʼಜೋಗಿʼ ಸಿನಿಮಾ ಖ್ಯಾತಿಯ ನಟ ಉಮೇಶ್ ಅಲಿಯಾಸ್ ಕೋತಿ ಮಂಜ ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ನಿನ್ನೆ ರಾತ್ರಿ ನಟ ಕೊನೆಯಸಿರೆಳೆದರು. ಶಿವರಾಜ್‌ ಕುಮಾರ್‌ ನಟನೆಯ ʼಜೋಗಿʼ ಚಿತ್ರದಲ್ಲಿ ಕೋತಿ ಮಂಜ ಎಂಬ ಪಾತ್ರದ ಮೂಲಕ ಖ್ಯಾತಿಯಾಗಿದ್ದ ಉಮೇಶ್, ಕೊನೆಗೆ ಅದೇ ಹೆಸರಿನಿಂದಲೇ ಗುರುತಿಸಲ್ಪಡುತ್ತಿದ್ದರು. ಜೋಗಿ ನಂತರ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಕೋತಿ ಮಂಜ ಬಣ್ಣ ಹಚ್ಚಿದ್ದರು. ನಿರ್ದೇಶಕ ಜೋಗಿ ಪ್ರೇಮ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಗವಿಪುರಂ ಗುಟ್ಟಳ್ಳಿಯ ನಿವಾಸದಲ್ಲಿ …

Read More »

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಲಾಸ್ಯಾ ನಾಗರಾಜ್ ತಾಯಿ ಮೇಲೆ ಹಲ್ಲೆ!!

ಸುಧಾ ನಾಗರಾಜ್ ಅವರ ಸಹೋದರಿ ಮಂಗಳಾ ಶಶಿಧರ್ ಮತ್ತು ಅವರ ಪತಿ ಶಶಿಧರ್ ಡ್ಯಾನ್ಸ್ ಕ್ಲಾಸ್ ವಿಚಾರಕ್ಕೆ ಜಗಳವಾಡಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.ಒಂದೇ ಕಟ್ಟಡದಲ್ಲಿ ಎರಡೂ ಕುಟುಂಬದವರು ವಾಸವಾಗಿದ್ದಾರೆ. ಕೆಳಮಹಡಿಯಲ್ಲಿ ಮಂಗಳಾ ವಾಸವಾಗಿದ್ದಾರೆ. ಮೇಲಿನ ನಿವಾಸದಲ್ಲಿ ಲಾಸ್ಯಾ ಮತ್ತು ಡಾ. ಸುಧಾ ಅವರು ವಾಸವಾಗಿದ್ದಾರೆ. ಗ್ರೌಂಡ್ ಫ್ಲೋರ್ ನ ಪಾರ್ಕಿಂಗ್ ಜಾಗದಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸುವ ವಿಚಾರಕ್ಕೆ ಪದೇಪದೇ ಮಂಗಳಾ ಕಿರಿಕಿರಿ ಮಾಡುತ್ತಿದ್ದರು ಎನ್ನಲಾಗಿದೆ. ಬಸವೇಶ್ವರನಗರ ಪೊಲೀಸ್ …

Read More »

ಬಂಟ್ವಳ :ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ!!

ಬಿ.ಸಿ.ರೋಡಿನ ಗೂಡಿನಬಳಿ ನೇತ್ರಾವತಿ ನದಿಯಲ್ಲಿ ಬುಧವಾರ ಸಂಜೆ ಗಂಡಸಿನ ಮೃತದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೃತ ವ್ಯಕ್ತಿಯ ವಯಸ್ಸು 40ರಿಂದ 45 ಎಂದು ಅಂದಾಜಿಸಲಾಗಿದ್ದು, ಆತ ಮೃತಪಟ್ಟು ಒಂದೆರಡು ದಿನಗಳಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಯಾವುದಾದರೂ ವ್ಯಕ್ತಿ ಕಾಣೆಯಾಗಿ ಪತ್ತೆಯಾಗದೇ ಇದ್ದರೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿ ಮೃತದೇಹದ ಪತ್ತೆಗೆ ಸಹಕರಿಸುವಂತೆ ಪೊಲೀಸರು ತಿಳಿಸಿದ್ದಾರೆ.

Read More »

ರಾಯಚೂರು: ಸ್ಟೇಷನ್‌ ರಸ್ತೆಯಲ್ಲಿ ಯುವಕನ ಕೊಲೆ!

ನಗರದ ಸ್ಟೇಷನ್‌ ರಸ್ತೆಯಲ್ಲಿ ಇಂದ್ರನಗರದ ಯುವಕನ ಕೊಲೆ ಮಾಡಲಾಗಿದೆ. ಇಂದ್ರನಗರದ ವೀರೇಶ (27) ಕೊಲೆಯಾಗಿದ್ದಾರೆ. ಮಂಗಳವಾರ ರಾತ್ರಿ ಕೊಲೆ ಮಾಡಲಾಗಿದ್ದು, ಬೆಳಿಗ್ಗೆ ಶವ ಬಿದ್ದರೂ ಜನ ಮದ್ಯ ಸೇವಿಸಿ ಬಿದ್ದಿರಬಹುದು ಎಂದು ಭಾವಿಸಿದ್ದರು. ಸಂಜೆ ದಾರಿ ಹೋಕರು ಅಲುಗಾಡಿಸಿ ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಪಶ್ಚಿಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Read More »

ಬೆಂಗಳೂರು :ಬೈಕ್‌ಗೆ ಹಾಲಿನ ಟ್ಯಾಂಕರ್‌ ವಾಹನ ಡಿಕ್ಕಿಯಾಗಿ ವಿದ್ಯಾರ್ಥಿ ದುರ್ಮರಣ!

ಸದಾಶಿವನಗರದ ಸಮೀಪ ಅಂಡರ್‌ ಪಾಸ್‌‍ ಬಳಿ ಹಿಂದಿನಿಂದ ವೇಗವಾಗಿ ಬಂದ ಹಾಲಿನ ಟ್ಯಾಂಕರ್‌ ವಾಹನ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಇಬ್ಬರು ಸವಾರರು ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರಿಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಹರ್ಷ ಮೃತಪಟ್ಟಿದ್ದಾನೆ.ಎಂಎಸ್‌‍ ರಾಮಯ್ಯ ಆಸ್ಪತ್ರೆಗೆ ಹರ್ಷನ ಮೃತದೇಹ ರವಾನಿಸಲಾಗಿದೆ. ಗಂಭೀರ ಗಾಯಗೊಂಡಿರುವ ಸಚಿನ್‌ ನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಸುದ್ದಿ ತಿಳಿದು ಸದಾಶಿವನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ …

Read More »

ಕಾರವಾರ: ಹೃದಯಾಘಾತದಿಂದ ಡಿಆರ್‌ಎಫ್‌ಒ ಸಾವು!!

ಅಂಕೋಲಾ ತಾಲ್ಲೂಕಿನ ಕುಂಬಾರಕೇರಿ ಮೂಲದವರಾಗಿದ್ದ ಅವರು ಅರಣ್ಯ ಇಲಾಖೆಯಲ್ಲಿ ಕಳೆದ ಎರಡೂವರೆ ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಅರಣ್ಯ ವ್ಯಾಪ್ತಿಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ (ಡಿಆರ್‌ಎಫ್‌ಒ) ಕಾರ್ಯನಿರ್ವಹಿಸುತ್ತಿದ್ದ ನವೀನ್ ಶೆಟ್ಟಿ (47) ಬುಧವಾರ ನಸುಕಿನ ಜಾವ ಹೃದಯಾಘಾತದಿಂದ ನಿಧನರಾದರು.ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.ಅಂತ್ಯಕ್ರಿಯೆ ಅಂಕೋಲಾ ಪಟ್ಟಣದ ರುದ್ರಭೂಮಿಯಲ್ಲಿ ನಡೆಯಿತು. ಇಲಾಖೆಯ ಸಿಬ್ಬಂದಿ ಸೇರಿದಂತೆ ನೂರಾರು ಜನರು ಅಂತಿಮ ದರ್ಶನ ಪಡೆದರು.

Read More »

ಹುಬ್ಬಳ್ಳಿ : ಮೊಬೈಲ್ ಕ್ರೇನ್ ಕಳ್ಳತನ ಮಾಡಿದ ಆರೋಪಿಗಳ ಬಂಧನ!

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ತಾರಿಹಾಳ್ ವ್ಯಾಪ್ತಿಯ ಕೈಗಾರಿಕಾ ಪ್ರದೇಶ ಬ್ಯಾಂಕ್ ಸರ್ಕಲ್ ನ ಎಡಬದಿಯಲ್ಲಿ ನಿಲ್ಲಿಸಿದ್ದ ರಘುನಾಥ್ ಸುರೇಶ್ ಕದಂ ಅವರಿಗೆ ಸಂಬಂಧಿಸಿದ ಹೈಡ್ರೋಲಿಕ್ ಮೊಬೈಲ್ ಕ್ರೇನ್ 14 ಲಕ್ಷ ಮೌಲ್ಯದ ಕ್ರೇನನ್ನು ಕಳ್ಳತನ ಮಾಡಿದರ ಬಗ್ಗೆ ಪೊಲೀಸ್ ದಿನಾಂಕ.ಎ. 27 ರಂದು ದೂರು ದಾಖಲು ಮಾಡಿದ್ದರು. ಪೊಲೀಸ್ ತಂಡವು ಚುರುಕಿನ ಕಾರ್ಯಾಚರಣೆಯನ್ನು ನಡೆಸಿ 72 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದು, ಆರೋಪಿ ಸೈಫುಲ್ಲಾ ಕಮಲಾ ಸಾಹೇಬ್ ಬಂಧಿತ ವ್ಯಕ್ತಿ. …

Read More »

ಬೆಂಗಳೂರು :ವಿದೇಶಿ ಮಹಿಳೆಯ ಬರ್ಬರ ಹತ್ಯೆ!!

ನಗರದ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಂತಕರು ಆಪ್ರಿಕನ್ ಮಹಿಳೆಯ ಹತ್ಯೆ ಮಾಡಿದ್ದಾರೆ. ಬೇರೆಡೆ ಹತ್ಯೆ ಮಾಡಿ ಚಿಕ್ಕಜಾಲ ವ್ಯಾಪ್ತಿಯಲ್ಲಿ ಮೃತದೇಹ ತಂದು ಬಿಸಾಡಿದ್ದಾರೆ ಎನ್ನಲಾಗಿದೆ. ಲೋವಿತ್ ಕೊಲೆಯಾಗಿರುವ ವಿದೇಶಿ ಮಹಿಳೆ ಎನ್ನಲಾಗಿದೆ. ಕೊಲೆಯಾಗಿರುವ ಲೋವಿತ್ ಅವರನ್ನು ಆಫ್ರಿಕಾದ ನೈಜೀರಿಯಾದ ಕ್ರಾಸ್ ರಿವರ್ ರಾಜ್ಯದ ಮಹಿಳೆ ಎಂದು ಗುರುತಿಸಲಾಗಿದೆ. ಪೊಲೀಸರು ಮಹಿಳೆಯ ಹಿನ್ನೆಲೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಬೆಟ್ಟಹಲಸೂರು ಮುಖ್ಯರಸ್ತೆ ಬಳಿ ಮೃತದೇಹ ಪತ್ತೆಯಾಗಿದೆ. ಮೃತದೇಹ …

Read More »

ಕಲಬುರಗಿ: ಕಾಂಗ್ರೆಸ್ ಮುಖಂಡ ಸೇರಿ ಮೂವರ ಮನೆ ಮೇಲೆ ಈಡಿ ದಾಳಿ!

ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್ ದುರ್ಬಳಕೆ ಮಾಡಿಕೊಂಡ ಆರೋಪದಡಿ ಸಂಸ್ಥೆಯ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ, ಎಂಆರ್‌ಎಂಸಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್‌.ಎಂ.ಪಾಟೀಲ್‌, ಅಕೌಂಟೆಂಟ್ ಸುಭಾಷ ಜಗನ್ನಾಥ ಮತ್ತು ಕೆನರಾ ಬ್ಯಾಂಕ್ ಎಂಆರ್‌ಎಂಸಿ ಶಾಖೆಯ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಭೀಮಾಶಂಕರ ಬಿಲಗುಂದಿ, ಡಾ.ಎಸ್.ಎಂ.ಪಾಟೀಲ, ಸುಭಾಷ ಜಗನ್ನಾಥ ಅವರ ಮನೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ತಿಳಿದುಬಂದಿದೆ.ಒಂಬತ್ತು ಇನ್ನೋವಾ ಕಾರುಗಳಲ್ಲಿ ನಾಲ್ಕು ತಂಡಗಳ 30ಕ್ಕೂ ಹೆಚ್ಚು ಈಡಿ ಅಧಿಕಾರಿಗಳು ಮೂವರ ಮನೆಗಳಿಗೆ …

Read More »