Breaking News

BigTv News

ವೃದ್ಧೆಯನ್ನು ಹತ್ಯೆಗೈದು ಶವದ ಮೇಲೆ ಅತ್ಯಾಚಾರ – ತನಿಖೆಯಲ್ಲಿ ಘೋರ ಕೃತ್ಯ ಬಯಲು!

ಬೆಂಗಳೂರು: ಕೆಂಗೇರಿಯಲ್ಲಿ 65 ವರ್ಷದ ವೃದ್ಧೆಯನ್ನು ಚಿನ್ನಾಭರಣಕ್ಕಾಗಿ ಹತ್ಯೆ ಮಾಡಿ, ಬಳಿಕ ಮೃತದೇಹದ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 20 ವರ್ಷದ ಸಾತ್ವಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೃದ್ಧೆಯ ಸಾವು ಮೊದಲಿಗೆ ಅಸಹಜ ಸಾವು ಎಂದು ದಾಖಲಾಗಿತ್ತು. ಆದರೆ, ಸ್ಥಳದಿಂದ ಯುವಕನೊಬ್ಬ ಓಡಿಹೋದ ಬಗ್ಗೆ ಕ್ಯಾಬ್ ಚಾಲಕ ನೀಡಿದ ಮಾಹಿತಿ ಹಾಗೂ ಚಿನ್ನದ ಉಂಗುರ ನಾಪತ್ತೆಯಾಗಿರುವುದು ಪೊಲೀಸರಿಗೆ ಸುಳಿವು ನೀಡಿತು. ವಿಚಾರಣೆ ವೇಳೆ ಚಿನ್ನಾಭರಣಕ್ಕಾಗಿ ವೃದ್ಧೆಯ ಮೇಲೆ ಹಲ್ಲೆ …

Read More »

ದೀಪಾವಳಿ ಹಬ್ಬದ ದಿನವೇ ಕುಟುಂಬಸ್ಥರು ಕಣ್ಣೀರು! ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್​ ಸವಾರನ ಪ್ರಾಣ ತೆಗೆದ ಮಹಿಳೆ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ವೇಗವಾಗಿ ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ ಸಂತೋಷ್ ಸಿಂಗ್ ಚೌಹಾಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶನಿವಾರ ಸಂಜೆ ಈ ಘಟನೆ ನಡೆದಿದೆ. ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕಾರು ವ್ಯಕ್ತಿಯನ್ನು ಸುಮಾರು 25ರಿಂದ 30 ಮೀಟರ್ ಎಳೆದೊಯ್ದು ರಸ್ತೆ ರೇಲಿಂಗ್‌ಗೆ ಗುದ್ದಿ ನಿಂತಿದೆ. ಅಪಘಾತದ ಬಳಿಕ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಮೃತರ ಕುಟುಂಬದ ದೂರಿನ …

Read More »

ಲಕ್ಷಕ್ಕೆ ₹30 ಸಾವಿರ ಆಮಿಷವೊಡ್ಡಿ ₹2.68 ಕೋಟಿ ದೋಚಲು ಪ್ಲಾನ್! ಮಾಜಿ ಸಚಿವರ ಗನ್‌ಮ್ಯಾನ್ ಹಾಕಿದ್ದ ಸ್ಕೆಚ್ ಗೆ ಬೆಚ್ಚಿಬಿದ್ದ ಬೆಳಗಾವಿ!

ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಹಣ ಡಬ್ಲಿಂಗ್ ಆಮಿಷವೊಡ್ಡಿ ₹2.68 ಕೋಟಿ ದರೋಡೆಗೆ ಸಂಚು ರೂಪಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಶಾಸಕ ರಮೇಶ ಜಾರಕಿಹೊಳಿ ಅವರ ಗನ್‌ಮ್ಯಾನ್ ಚಿದಾನಂದ ಕುರಬೇಟ್ ಪ್ರಮುಖ ಆರೋಪಿಯಾಗಿದ್ದಾನೆ. ಪ್ರತಿ ₹1 ಲಕ್ಷಕ್ಕೆ ₹30 ಸಾವಿರ ಹೆಚ್ಚುವರಿ ಹಣ ನೀಡುವುದಾಗಿ ನಂಬಿಸಿ ಕಲ್ಮೇಶ ರಂಗಾಪೂರ ಅವರಿಂದ ಹಣ ಸಂಗ್ರಹಿಸಲಾಗಿತ್ತು. ಅ.30ರಂದು ಶೆಡ್‌ನಲ್ಲಿ ಹಣ ಎಣಿಸುವ ನೆಪದಲ್ಲಿ ದರೋಡೆಗೆ ಯತ್ನಿಸಿದಾಗ ಕಲ್ಮೇಶ ತಂಡ ಆರೋಪಿಗಳನ್ನು ಹಿಡಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ …

Read More »

ಬಿಲ್ಲಾಡಿಯಲ್ಲಿ ರಬ್ಬರ್ ಕಳವಿಗೆ ಯತ್ನ: ತೋಟದ ಮಾಲಕನ ಮೇಲೆ ಹಲ್ಲೆ

ಬಿಲ್ಲಾಡಿ ಗ್ರಾಮದಲ್ಲಿ ರಬ್ಬರ್ ಕಳವು ಮಾಡಲು ಯತ್ನಿಸಿದ ವೇಳೆ ಉಂಟಾದ ಜಗಳದಲ್ಲಿ ತೋಟದ ಮಾಲೀಕ ಸಂತೋಷ್ ಮೇಲೆ ಚಾಕು ಹಾಗೂ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ. ಪಕ್ಕದ ತೋಟದ ಕೆಲಸಗಾರರಾದ ಅಜಯನ್, ಮುರುಳಿ, ಮ್ಯಾಥ್ಯೂಸ್, ಬಿಬಿನ್ ಮತ್ತಿತರರು ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ರಬ್ಬರ್ ಕದಿಯಲು ಯತ್ನಿಸಿದ್ದರು ಎನ್ನಲಾಗಿದೆ. ಈ ವೇಳೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಆರೋಪಿಗಳು ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಸಂತೋಷ್ ಆಯತಪ್ಪಿ ಬಿದ್ದಿದ್ದಾರೆ …

Read More »

ಬ್ಲಡ್ಡಲ್ಲೇ ಬಂದಿತ್ತಾ ಕ್ರೌರ್ಯ- 7 ಜನರ ಹಂತಕನ ಸೋದರನೂ ಡಬಲ್ ಮರ್ಡರ್ ಮಾಡಿದ್ದ!

ಬೆಂಗಳೂರು: ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣದ ಆರೋಪಿ ಇಂದುಶೇಖರ್‌ನ ಕೌಟುಂಬಿಕ ಹಿನ್ನೆಲೆ ಬಯಲಾಗಿದೆ. ಎಂಟು ವರ್ಷಗಳ ಹಿಂದೆ ಬೆಳತೂರು ರಮೇಶ್ ಎಂಬ ಕುಖ್ಯಾತ ರೌಡಿಶೀಟರ್‌ನ ಸ್ವಂತ ಸಹೋದರನೇ ಇಂದುಶೇಖರ್ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಬೆಳತೂರಿನಲ್ಲಿ ₹15 ಕೋಟಿ ಮೌಲ್ಯದ 1.8 ಎಕರೆ ಜಮೀನು ಕಬಳಿಸಲು ರಮೇಶ್ ನಕಲಿ ದಾಖಲೆ ಸೃಷ್ಟಿಸಿ, ಇಬ್ಬರನ್ನು ಕೊಲೆ ಮಾಡಿದ್ದ ಆರೋಪ ಎದುರಿಸಿದ್ದ. ಅಲ್ಲದೆ, ಕೃತ್ಯಕ್ಕೆ ಸಾಕ್ಷಿಯಾಗಿದ್ದ ಸುಧಾರಾಣಿಯನ್ನು ಜೀವಂತವಾಗಿ ಸುಟ್ಟು …

Read More »

ಭದ್ರಾವತಿ: ಶಂಕಿತ ಉಗ್ರನ ಮೊಬೈಲಿನಲ್ಲಿ “ಸ್ಫೋಟ’ಕ!

ಭದ್ರಾವತಿ: ಐಸಿಸ್‌ ಸಂಘಟನೆಯೊಂದಿಗೆ ಆನ್‌ಲೈನ್‌ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಮೊಹಮ್ಮದ್‌ ಗೌಸ್‌ನ ಮೊಬೈಲ್‌ನಲ್ಲಿ ಐಇಡಿ ತಯಾರಿಕೆ ವಿಡಿಯೋಗಳು, ಐಸಿಸ್‌ ಪೋಸ್ಟರ್‌ಗಳು ಹಾಗೂ ವಿದೇಶಿ ಹ್ಯಾಂಡ್ಲರ್‌ಗಳ ಧ್ವನಿ ಸಂದೇಶಗಳು ಪತ್ತೆಯಾಗಿವೆ. ಸ್ಫೋಟಕ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಕೂಡ ಸಂಗ್ರಹಿಸಿದ್ದ ಎನ್ನಲಾಗಿದೆ. ಉತ್ತರ ಪ್ರದೇಶದಲ್ಲಿ ಬಂಧಿತನಾಗಿದ್ದ ಹ್ಯಾರೀಸ್‌ ಅಲಿ ಜತೆ ಗೌಸ್‌ ಸಿಗ್ನಲ್‌ ಆ್ಯಪ್‌ ಮೂಲಕ ಸಂಪರ್ಕದಲ್ಲಿದ್ದ. ಆತನ ಸೂಚನೆಯಂತೆ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಸ್ಫೋಟಕ ಸಾಮಗ್ರಿಗಳನ್ನು ಖರೀದಿಸಿ …

Read More »

ನಂಬಿಸಿ ಕೊಂದ ಪಾಪಿ ಪ್ರಿಯಕರ : ಶವ ಪೊದೆಗೆ ಎಸೆದು ನಾಪತ್ತೆ ನಾಟಕವಾಡಿದ್ದ ಯೋಧ ಜೈಲಿಗೆ

ಬೆಳಗಾವಿ: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಪ್ರಿಯತಮೆಯನ್ನು ಗೋಕಾಕ್ ಫಾಲ್ಸ್‌ಗೆ ಕರೆದೊಯ್ದು ಕೊಲೆ ಮಾಡಿದ ಆರೋಪದ ಮೇಲೆ ಎಸ್‌ಎಸ್‌ಬಿ ಯೋಧ ಬಸಪ್ಪ ಸಾತಣ್ಣವರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಾಯಬಾಗ ತಾಲೂಕಿನ ಹಾರೂಗೇರಿಯ 25 ವರ್ಷದ ರಕ್ಷಿತಾ ಕೊಲೆಯಾದ ಯುವತಿ. ಕಳೆದ 3–4 ವರ್ಷಗಳಿಂದ ಪ್ರೀತಿಸುತ್ತಿದ್ದ ಬಸಪ್ಪ, ಅಕ್ಟೋಬರ್ 28ರಂದು ಆಕೆಯನ್ನು ಗೋಕಾಕ್ ಜಲಪಾತಕ್ಕೆ ಕರೆದೊಯ್ದಿದ್ದನು. ಮದುವೆ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಕುತ್ತಿಗೆ ಹಿಸುಕಿ ಹಾಗೂ ವೇಲ್‌ನಿಂದ ಬಿಗಿದು ಕೊಲೆ …

Read More »

ಕೊಲೆ ಆರೋಪಿಯನ್ನು ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು

ವಿಜಯಪುರ: ಮುಂಡೇವಾಡಿ ಆಸ್ಪತ್ರೆ ಬಳಿ ನಡೆದಿದ್ದ ಯಾಸೀನ್ ಝುಬೇರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಮೀರ್ ಮುಲ್ಲಾನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಅತಾಲಟ್ಟಿ ಗ್ರಾಮದ ಬಳಿ ಶನಿವಾರ ಮುಂಜಾನೆ ಬಂಧನ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಸಮೀರ್ ಪೊಲೀಸರ ಮೇಲೆ ಕಂಟ್ರಿ ಮೇಡ್ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆತನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದ್ದು, ಇಬ್ಬರನ್ನೂ …

Read More »

ಅಪ್ರಾಪ್ತ ಬಾಲಕಿ ಗರ್ಭಿಣಿ: ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಚಾಮರಾಜನಗರ: ಯಳಂದೂರು ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಕಳೆದ ನಾಲ್ಕು ತಿಂಗಳಿಂದ ಋತುಸ್ರಾವವಾಗದ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ಈ ವೇಳೆ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿದೆ ಎನ್ನಲಾಗಿದೆ. ತಾಯಿಯ ದೂರಿನ ಮೇರೆಗೆ ಯಳಂದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ರಕ್ಷಿಸಿ ಹೆಚ್ಚಿನ ಆರೈಕೆ ಹಾಗೂ ರಕ್ಷಣೆಗಾಗಿ …

Read More »

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಲಕಿಯನ್ನು ಪುಸಲಾಯಿಸಿ, ಚಾಕು ತೋರಿಸಿ ದೌರ್ಜನ್ಯ ಎಸಗಿದ್ದಲ್ಲದೆ, ಮನೆಯವರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಬಾಲಕಿ ಹೊಟ್ಟೆನೋವಿನಿಂದ ಬಳಲಿದಾಗ ಆಕೆ ಒಂಬತ್ತು ತಿಂಗಳ ಗರ್ಭಿಣಿಯಾಗಿರುವ ವಿಚಾರ ಕುಟುಂಬಸ್ಥರಿಗೆ ತಿಳಿದುಬಂದಿದೆ. ವಿಷಯ ತಿಳಿದ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು …

Read More »