ದಕ್ಷಿಣ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಕೊಲೆ ಮಾಡಿ ಆರೋಪಿಗಳು ಹಾಡಹಗಲೇ ಶವವನ್ನು ಮೂಟೆಕಟ್ಟಿ ಬೈಕ್ ನಲ್ಲಿ ಸಾಗಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಮದುವೆಯಾಗಿದ್ದರೂ ತನ್ನ ಪ್ರಿಯಕರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ತನ್ನ ಪ್ರಿಯಕರನ ನೆರವಿನಿಂದ ಗಂಡನನ್ನು ಕೊಲೆ ಮಾಡಿದ್ದಾಳೆ. ಇಬ್ಬರೂ ದೇಹವಿದ್ದ ಚೀಲದೊಂದಿಗೆ ಬೈಕ್ ನಲ್ಲಿ ಹೋಗುತ್ತಿರುವುದು ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಪೊಲೀಸರು ಆರೋಪಿ ಮಹಿಳೆ ಸೇರಿದಂತೆ ವಶಕ್ಕೆ ಪಡೆದು ತೀವ್ರ ತನಿಖೆ ನಡೆಸಿದಾಗ …
Read More »ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ, ನಟ ಎ.ಟಿ. ರಘು ನಿಧನ.
ಅನಾರೋಗ್ಯದಿಂದ ಬಳಲುತ್ತಿದ್ದ ರಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನ್ಯಾಯ ನೀತಿ ಧರ್ಮ, ಅವಳ ನೆರಳು, ಅವಳ ನೆರಳು, ಅಂತಿಮ ತೀರ್ಪು, ಇನ್ಸ್ಪೆಕ್ಟರ್ ಕ್ರಾಂತಿಕುಮಾರ್, ಮಿಡಿದ ಹೃದಯಗಳು, ಮಂಡ್ಯದ ಗಂಡು, ಅಗ್ನಿಸಾಕ್ಷಿ ಸೇರಿದಂತೆ ಸುಮಾರು 55 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಅಂಬರೀಶ್ ಅವರ ಅಭಿನಯದ 27 ಸಿನಿಮಾಗಳನ್ನು ಎ.ಟಿ. ರಘು ನಿರ್ದೇಶನ ಮಾಡಿದ್ದಾರೆ. ಅನೇಕ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.
Read More »ದೆಹಲಿ: ಮೃತದೇಹಕ್ಕೆ ಕಲ್ಲು ಕಟ್ಟಿ ಚಾವ್ಲಾ ಕಾಲುವೆ ಪಾಲು ಮಾಡಿದ ಸ್ನೇಹಿತ.
ಸೀಮಾಪುರಿ ಸುಂದರ್ ನಗರದ ನಿವಾಸಿ. ಕೋಮಲ್ ಆಪ್ತ ಸ್ನೇಹಿತ ಆಸೀಫ್ ಕೊಲೆ ಮಾಡಿರುವ ಆರೋಪಿ.ಟ್ಯಾಕ್ಸಿ ಚಾಲಕನಾಗಿದ್ದ ಆಸೀಫ್ ಹಾಗೂ ಕೋಮಲ್ ಹಲವು ವರ್ಷಗಳ ಪರಿಚಯದವರು. ಸೀಮಾಪುರಿಯಿಂದ ಕೋಮಲನ್ನು ಕಾರಿನಲ್ಲಿ ಕರೆದೊಯ್ದಿದ್ದ. ದಾರಿಯುದ್ದಕ್ಕೂ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಕೋಪಗೊಂಡ ಆಸೀಫ್, ಕೋಮಲ್ ಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಮೃತದೇಹಕ್ಕೆ ಕಲ್ಲು ಕಟ್ಟಿ ಚಾವ್ಲಾ ಕಾಲುವೆಗೆ ಎಸೆದಿದ್ದಾನೆ. ಚಾವ್ಲಾ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. …
Read More »ಚೆನೈ: ಹಾಡಹಗಲೇ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ, ವಿಡಿಯೋ ವೈರಲ್.!
ಚೆನ್ನೈನಲ್ಲಿ ಹಾಡಹಗಲೇ ಹೆದ್ದಾರಿಯಲ್ಲಿ ಕೆಲವು ಆಕ್ರಮಣಕಾರರು ಪೊಲೀಸ್ ಅಧಿಕಾರಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ.ಚಾಕುಗಳಿಂದ ಪೊಲೀಸ್ ಅಧಿಕಾರಿಯ ತಲೆಯನ್ನು ಕತ್ತರಿಸಿ ಕೊಂದಿದ್ದಾರೆ. ರಂಜಾನ್ ಉಪವಾಸದ ಭಾಗವಾಗಿ ದರ್ಗಾಕ್ಕೆ ಹೋಗಿ ನಂತರ ಮನೆಗೆ ಮರಳಿದರು. ಅದೇ ಸಮಯದಲ್ಲಿ, ಕೆಲವು ಆಕ್ರಮಣಕಾರರು ಬೈಕ್ನಲ್ಲಿ ಬಂದು ಜಾಕಿರ್ ಹುಸೇನ್ ಮೇಲೆ ಚಾಕುಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಝಾಕೀರ್ ಎಷ್ಟೇ ಪ್ರಯತ್ನಿಸಿದರೂ ವಿಫಲರಾಗಿದ್ದಾರೆ. ಅವರು ಕಾರಿನಲ್ಲಿದ್ದಾಗ ಅವರ ಮೇಲೆ ಚಾಕುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
Read More »ಅಂಕಲ್ ಕಿರುಕುಳಕ್ಕೆ ಬೇಸತ್ತು ಯುವತಿ ದುಡುಕಿನ ನಿರ್ಧಾರ
ಗದಗ ಜಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದ ಯುವತಿಗೆ 47 ವರ್ಷದ ಕಿರಣ ಕಾರಬಾರಿ ಎಂಬಾತ ಮದುವೆ ಆಗು ಅಂತಾ ಕಿರುಕುಳ ನೀಡುತ್ತಿದ್ದನಂತೆ. ಕಿರಣನ ಕಿರುಕುಳಕ್ಕೆ ಬೇಸತ್ತ ಯುವತಿ ಗದಗ ನಗರದ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಪೆನಾಯಿಲ್ ಕುಡಿದು ಅಸ್ವಸ್ಥಳಾಗಿದ್ದಳ್ಳು. ಕೂಡಲೇ ಗದಗ ಜಿಮ್ಸ್ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾಳೆ.ಮದುವೆ ಆಗದಿದ್ದರೆ ಇಬ್ಬರ …
Read More »ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಘಟಿತ ಪ್ರಯತ್ನಗಳಿಂದಾಗಿನಕ್ಸಲರ ಹತ್ಯೆ,
ಬಿಜಾಪುರ ಮತ್ತು ದಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ಗಂಗಲೂರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗೆ ಜಂಟಿ ತಂಡ ಹೊರಟಿತ್ತು. ಎನ್ಕೌಂಟರ್ ಸ್ಥಳದಿಂದ 22 ನಕ್ಸಲರ ಮೃತದೇಹಗಳು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಡಿಜಿ ನಕ್ಸಲ್ ವಿವೇಕಾನಂದ ಸಿನ್ಹಾ ತಿಳಿಸಿದ್ದಾರೆ. ಈ ಎನ್ಕೌಂಟರ್ನಲ್ಲಿ ಬಿಜಾಪುರ ಡಿಆರ್ಜಿ ಸೈನಿಕ ಹುತಾತ್ಮರಾದರು. ಹುತಾತ್ಮ ಸೈನಿಕನ ಹೆಸರು ರಾಜು ಓಯಮ್ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಎಲ್ಲಾ …
Read More »ಬೆಂಗಳೂರು : ಶಾಲಾ ವಾಹನದ ಮೇಲೆ ಕಲ್ಲು ಎಸೆದು ಹಲ್ಲೆ
ಮಿತಿಮೀರಿದೆ.ಹೋಳಿ ಹಬ್ಬದ ದಿನ ಲಾಲ್ ಬಾಗ್ ನ ಪುಂಡಾಟ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೇಸ್ ವರದಿಯಾಗಿದೆ.ಹೋಳಿ ಆಡುವಾಗ ದಾರಿಗಾಗಿ ಹಾರ್ನ್ ಹೊಡೆದಿದ್ದಕ್ಕೆ ಶಾಲಾ ವಾಹನದ ಮೇಲೆ ಕಲ್ಲು ಎಸೆದು ಕಿಡಿಗೇಡಿಗಳು ಅಟ್ಟಹಾಸ ತೋರಿದ್ದಾರೆ.ಇದನ್ನ ಪ್ರಶ್ನಿಸಿದ ಸ್ಕೂಲ್ ಬಸ್ ಡ್ರೈವರ್ ಮೇಲೂ 5-6 ಜನ ಯುವಕರಿಂದ ಹಲ್ಲೆ ಮಾಡಿರೋದಾಗಿ ಕೇಸ್ ದಾಖಲಾಗಿದೆ.ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಹೋಳಿ ಹಬ್ಬದ ದಿನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎನಿಟೈಮ್ ವಾಟರ್ ಪ್ಲಾಂಟ್ ನಲ್ಲಿ …
Read More »ಹಾವೇರಿ : ಸ್ವಾತಿ ಬ್ಯಾಡಗಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ
ಸ್ವಾತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಯಾವುದೇ ಕಾರಣಕ್ಕೂ ಅಪರಾಧಿಗಳು ಶಿಕ್ಷೆಯಿಂದ ಪಾರಾಗುವ ಅವಕಾಶ ನೀಡುವುದಿಲ್ಲ. ಹತ್ಯೆಗೀಡಾದ ಸ್ವಾತಿ ಅವರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧವಾಗಿದ್ದು, ಹತ್ಯೆ ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು. ಪ್ರಕರಣವನ್ನು ದುರ್ಬಲಗೊಳಿಸದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
Read More »ರಾಜ್ಯ ಸರ್ಕಾರ್:”ಕಾವೇರಿ ಆರತಿ “
ವಿಶ್ವ ಜಲ ದಿನದ ಅಂಗವಾಗಿ “ಜಲವೇ ಜೀವನ” ಅಭಿಯಾನದ ಅಡಿಯಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಮಾರ್ಚ್ 21 ಶುಕ್ರವಾರ ಸಂಜೆ 6:00ಗೆ ಸ್ಯಾಂಕಿ ಕೆರೆಯಲ್ಲಿ ಪವಿತ್ರ ಕಾವೇರಿ ಆರತಿ ಕಾರ್ಯಕ್ರಮ ಜರುಗಲಿದೆ. ಈ ಜಲವೇ ಜೀವನ ಅಭಿಯಾನದ ಅಡಿಯಲ್ಲಿ ಸಾರ್ವಜನಿಕರಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಜಲ ಸಂರಕ್ಷಣೆಯ ಪ್ರತಿಜ್ಞೆ ಮಾಡಿಸುವ ಮೂಲಕ BWSSB ಗಿನ್ನಿಸ್ ವಿಶ್ವ ದಾಖಲೆ ರೂಪಿಸಲು ಸಜ್ಜಾಗಿದೆ. ಅತಿ …
Read More »ದೇಶದ ಅತ್ಯಂತ ಕಿರಿಯ ಅಂಗದಾನಿ!”ಧನಿಷ್ಠ “
ದೆಹಲಿಯ 20 ತಿಂಗಳ ಪುಟ್ಟ ಬಾಲಕಿ ತನ್ನ ಮನೆಯ ಮಹಡಿಯ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಳು. ತಂದೆ ತಾಯಿಯು ಈ ಮಗುವಿನ ಹೃದಯ ಕಣ್ಣು ಮೂತ್ರಪಿಂಡ ಯಕೃತ್ತು ಮತ್ತು ಎರಡು ಕಾರ್ನಿಯಾ ಗಳನ್ನು ದಾನ ಮಾಡುವ ಮೂಲಕ ಐದು ಜನರ ಪ್ರಾಣವನ್ನು ಉಳಿಸಿದ್ದಾರೆ. “ಧನಿಷ್ಠ” ಎಂಬ ಹೆಣ್ಣು ಮಗು ಅಂಗಾಂಗಗಳ ದಾನ ಮಾಡುವ ಮೂಲಕ ದೇಶದ ಅತ್ಯಂತ ಕಿರಿಯ ಅಂಗದಾನಿಯಾಗಿದ್ದಾಳೆ
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





