Breaking News

Shaikh BigTv

ಮಹಾತ್ಮಾಗಾಂಧಿ ಜನ್ಮ ದಿನ ಆಚರಣೆ

ಕುಂದಗೋಳ : ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಹಾಗೂ ಲಾಲ್ ಬಹುದ್ದೂ‌ರ್ ಶಾಸ್ತ್ರಿ ಅವರ ಜಯಂತಿಯನ್ನು ತಹಶೀಲ್ದಾ‌ರ್ ರಾಜು ಮಾವರಕರ ನೇತೃತ್ವದಲ್ಲಿ ಆಚರಿಸಲಾಯಿತು. ಬಳಿಕ ಪಟ್ಟಣದ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ತಾಲೂಕು ಆಡಳಿತ ಮಹಾತ್ಮಾಗಾಂಧಿ ಅವರಿಗೆ ಗೌರವ ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More »

“ನನ್ನ ಬದುಕೇ ನನ್ನ ಸಂದೇಶ” ಎಂದು ಸರಳವಾಗಿ ಹೇಳಿದವರು: ಎನ್.ಹೆಚ್.ಕೋನರಡ್ಡಿ

ನವಲಗುಂದ: ಹುಟ್ಟು ನಿಶ್ಚಿತ, ಸಾವು ಖಚಿತ ಇವೆರಡರ ನಡುವೆ ಇರುವ ಬದುಕಿನಲ್ಲಿ ನಾವು ಏನು ಸಾಧನೆ ಮಾಡುತ್ತೇವೆ, ಏನು ಸಂದೇಶ ನೀಡುತ್ತೇವೆ ಎನ್ನುವುದು ಮುಖ್ಯ. ಮಹಾತ್ಮ ಗಾಂಧೀಜಿ ಅವರು “ನನ್ನ ಬದುಕೇ ನನ್ನ ಸಂದೇಶ” ಎಂದು ಸರಳವಾಗಿ ಹೇಳಿದವರು ಎಂದು ಶಾಸಕ ಎನ್.ಹೆಚ್.ಕೋನರಡ್ಡಿ ಹೇಳಿದರು. ನಗರದ ತಹಶೀಲ್ದಾರ ಅವರ ಕಾರ್ಯಾಲಯದಲ್ಲಿ ತಾಲೂಕು ಆಡಳಿತದ ವತಿಯಿಂದ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಹಾಗೂ ಲಾಲ ಬಹದ್ದೂರ ಶಾಸ್ತ್ರೀ ಅವರ ಜನ್ಮ …

Read More »

ನಾಡಿಗೆಲ್ಲ ಅಹಿಂಸಾ ಧರ್ಮವನ್ನು ಬೋಧಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ : ಮಾಬುಸಾಬ ಯರಗುಪ್ಪಿ

ನವಲಗುಂದ: ನಾಡಿಗೆಲ್ಲ ಅಹಿಂಸಾ ಧರ್ಮವನ್ನು ಬೋಧಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದು ಅವರನ್ನೆಲ್ಲ ನೆನೆದು ಗೌರವ ಸಮರ್ಪಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಂ-3ರಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹಾದ್ದೂ‌ರ್ ಶಾಸ್ತ್ರಿಜಿಯವರ ಜಯಂತಿಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಬ್ರಿಟಿಷರಿಂದ ಅಹಿಂಸಾ ಮಾರ್ಗದ ಮೂಲಕ ನಮ್ಮ ದೇಶವನ್ನು …

Read More »

ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಹಾರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್

ಧಾರವಾಡ:ಧಾರವಾಡದಲ್ಲಿ ಟಿಪ್ಪು ಧ್ವಜವನ್ನು ಮೇಲೆ ಹಾರಿಸಿ, ಅದರ ಕೆಳಗಡೆ ರಾಷ್ಟ್ರಧ್ವಜ ಕಟ್ಟಲಾಗಿದೆ. ಇಲ್ಲಿ ರಾಷ್ಟ್ರದ್ರೋಹದ ಕೆಲಸ ನಡೆದಿದೆ. ತಕ್ಷಣ ಅಂತಹ ರಾಷ್ಟ್ರದ್ರೋಹಿಗಳನ್ನು ಬಂಧಿಸಿ ರಾಷ್ಟ್ರದ್ರೋಹಿ ಸೆಕ್ಷನ್ ಹಾಕಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಒತ್ತಾಯಿಸಿದ್ದಾರೆ. ಧಾರವಾಡದ ರಿಗಲ್ ಸರ್ಕಲ್‌ನಲ್ಲಿರುವ ಕಂಬದ ಮೇಲೆ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಹಾರಾಡಿದ್ದು, ಅದರ ಕೆಳಭಾಗದಲ್ಲಿ ರಾಷ್ಟ್ರಧ್ವಜ ಕಟ್ಟಿ ಅವಮಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿ …

Read More »

ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಬಾವುಟ ಹಾರಾಟ: ಸ್ಥಳಕ್ಕೆ ಎನ್.ಶಶಿಕುಮಾರ್ ಭೇಟಿ

ಧಾರವಾಡ: ಧಾರವಾಡದ ಟಿಪ್ಪು ಸರ್ಕಲ್‌ನಲ್ಲಿರುವ ಕಂಬದ ಮೇಲೆ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಬಾವುಟ ರಾಷ್ಟ್ರಧ್ವಜದ ಮೇಲ್ಬಾಗದಲ್ಲಿ ಹಾರಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಪೊಲೀಸ್‌ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ದಲಿತ ಪರ ಸಂಘಟನೆಗಳು ಇಂದು ಗಾಂಧಿ ಜಯಂತಿ ಆಚರಣೆ ಮಾಡಿವೆ. ಕೆಲವರು ಧ್ವಜಗಳನ್ನು ಅಲ್ಲಿಆರೋಹಣ ಮಾಡಿ ಹೋಗಿದ್ದರು. ಅದೇ ಸ್ಥಳದಲ್ಲಿ ಟಿಪ್ಪು ಸುಲ್ತಾನ್ ಪ್ರತಿಬಿಂಬಿಸುವ ಧ್ವಜ ಕಟ್ಟಿದ್ದರು. ಅದು ರಾಷ್ಟ್ರಧ್ವಜಕ್ಕಿಂತ ಸ್ವಲ್ಪ ಮೇಲೆ …

Read More »

ಅನಧಿಕೃತವಾಗಿ, ಹಾಕಲಾದ ಡಬ್ಬ ಅಂಗಡಿಗಳನ್ನು ತೆರವು ಗೊಳಿಸುವಂತೆ ಸೂಚನೆ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ 51 ಅಕ್ಷಯ ಪಾರ್ಕ್, ಪ್ರಿಯದರ್ಶಿನಿ ಕಾಲೋನಿ ಹಾಗೂ ಮಹೇಶ್ ಪಿಯು ಕಾಲೇಜು ಎದುರುಗಡೆ ರಸ್ತೆಗಳಿಗೆ ಭೇಟಿ ನೀಡಿದ ಪಾಲಿಕೆ ಆಯುಕ್ತ ಈಶ್ವರ ಉಳಾಗಡ್ಡಿ ಅವರು, ಅಕ್ಷಯ ಪಾರ್ಕ್‌ನಿಂದ ಮುರ್ಡೇಶ್ವರ ಫ್ಯಾಕ್ಟರಿಗೆ ಹೋಗುವ ರಸ್ತೆಯ ಅಕ್ಕಪಕ್ಕ ಅನಧಿಕೃತವಾಗಿ, ಹಾಕಲಾದ ಡಬ್ಬ ಅಂಗಡಿಗಳನ್ನು ತೆರವು ಗೊಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ವಲಯ ಸಹಾಯಕ ಆಯುಕ್ತರಾದ ಚಂದ್ರಶೇಖರ್ ಮಾಲಿಪಾಟೀಲ್‌ ಹಾಗೂ ಆರೋಗ್ಯ ನಿರೀಕ್ಷಕರಾದ …

Read More »

ಬ್ಯಾಂಕ್’ಗೆ ಹೋಗಿ ಬರುತ್ತೇನೆ ಎಂದು ಹೇಳಿ ಯುವತಿ ನಾಪತ್ತೆ

ಕುಂದಗೋಳ : ಯುವತಿಯೋರ್ವಳು ಬ್ಯಾಂಕ್’ಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಕಾಣೆಯಾದ ಬಗ್ಗೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ 24 ವರ್ಷದ ಯುವತಿಯೆ ಕಳೆದ ಸ.25 ರಂದು ಮನೆಯಿಂದ ಬ್ಯಾಂಕ್‌’ಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದವಳು ಮರಳಿ ಮನೆಗೆ ಬಾರದೆ ಕಾಣೆ ಆಗಿದ್ದಾಳೆ.ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೋಷಕರು ಪತ್ತೆಗೆ ಮನವಿ ಮಾಡಿದ್ದಾರೆ.

Read More »

ಅದ್ದೂರಿಯಾಗಿ ನೆರವೇರಿದ ಹಿಂದೂ ಮಹಾ ಗಣಪತಿ ವಿಸರ್ಜನೆ

ಹುಬ್ಬಳ್ಳಿ: 21 ದಿನಗಳ ಹುಬ್ಬಳ್ಳಿ ಧಾರವಾಡ ಹಿಂದೂ ಮಹಾ ಗಣಪತಿ ಉತ್ಸವ ಮಂಡಳಿ ಅಪ್ಪಾಜಿ ಜನ ಸೇವಾ ಟ್ರಸ್ಟ್ ಹಾಗೂ ನವಶಕ್ತಿ ಮಹಿಳಾ ಮಂಡಳ ವತಿಯಿಂದ, ಈ ಬಾರಿ ಈಶ್ವರನ ಅವತರಾದಲ್ಲಿ 21 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಈಗ ಅದ್ದೂರಿಯಾಗಿ ವಿಸರ್ಜನೆಗೊಂಡಿದೆ. ನವನಗರದ ಪಂಚಾಕ್ಷರಿ ನಗರದಲ್ಲಿ ಅಪ್ಪಾಜಿ ಜನ ಸೇವಾ ಟ್ರಸ್ಟ್ ಹಾಗೂ ನವಶಕ್ತಿ ಮಹಿಳಾ ಮಂಡಳ ಎರಡು ವರ್ಷಗಳಿಂದ ಗಣಪತಿ ಪ್ರತಿಷ್ಠಾಪನೆ ಮಾಡ್ತಾ ಬಂದಿದ್ದಾರೆ. ಈ …

Read More »

ಗಾಂಧೀಜಿ ಅವರ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ಎನ್.ಹೆಚ್.ಕೋನರಡ್ಡಿ

ನವಲಗುಂದ: ನಗರದಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಹ್ಮಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಬೆಳಗಾವಿ ಅಧಿವೇಶನಕ್ಕೆ ನೂರ ವರ್ಷಗಳ ಸಂಭ್ರಮ ಆಚರಿಸುವ ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಗಾಂಧಿ ಜಯಂತಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಿರ್ದೇಶನದಂತೆ ಆಚರಿಸಿ ಗಾಂಧೀಜಿ ಅವರ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಶಾಸಕ ಎನ್.ಹೆಚ್.ಕೋನರಡ್ಡಿ ಕರೆ ನೀಡಿದರು. ಪಟ್ಟಣದ ಗಣೇಶ ದೇವಸ್ಥಾನದಿಂದ ಗಾಂಧಿ ನಡಿಗೆ ಪ್ರಾರಂಭವಾಗಿ ಗಾಂಧಿ ಮಾರ್ಕೆಟ್, ಲಿಂಗರಾಜ್ ಸರ್ಕಲ್, ಶಿಕ್ಷಕರ …

Read More »

ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಸ್ಕೂಟಿ ಡಿಕ್ಕಿ : ಕಾರ್ಪೊರೇಟರ್ ಮಗ ಗಂಭೀರವಾಗಿ ಗಾಯ

ಹುಬ್ಬಳ್ಳಿ: ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಸ್ಕೂಟಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಾಲನೆ ಮಾಡುತ್ತಿದ್ದ ಕಾರ್ಪೊರೇಟರ್ ಮಗ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಹುಬ್ಬಳ್ಳಿ ಹೊರವಲಯದ ರಿಂಗ್ ರೋಡ್ ಬಳಿ ನಡೆದಿದೆ. ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿರುವ ದೊರೆರಾಜ್ ಮಣಿಕುಂಟಲ್ ಅವರ ಮಗ ಪ್ರಥ್ವಿರಾಜ್ ಗಂಭೀರವಾಗಿ ಗಾಯಗೊಂಡ ಬಾಲಕ ಅಂತ ತಿಳಿದು ಬಂದಿದೆ. ಗದಗ ಕಡೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಕ್ಯಾಂಟ‌ರ್ ವಾಹನಕ್ಕೆ ಗಟ್ಟೂರು ಕಡೆಯಿಂದ ಸ್ಕೂಟಿಯಲ್ಲಿ ವೇಗವಾಗಿ …

Read More »