ಕಲಘಟಗಿ:ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ನಡೆದಿದೆ. ಸದ್ದಾಂ ಕಟನೂರ್ ಎಂಬ 23 ವಯಸ್ಸಿನ ಯುವಕ ಸಾಲದ ಕಿರುಕುಳ ತಾಳಲಾರದೆ ನಿನ್ನೆ (ಮಂಗಳವಾರ) ಆತ್ಮಹತ್ಯೆ ದಿ ಮಾಡಿಕೊಂಡಿರುವ ಘಟನೆ ಜರುಗಿದೆ. ಸದ್ದಾಂ ಕಟನೂರ್” ಮನೆ ಕಟ್ಟಲು ಬ್ಯಾಂಕ್ ಹಾಗೂ ಗ್ರಾಮದಲ್ಲಿ ಬಡ್ಡಿ ಸಾಲ ತೆಗೆದುಕೊಂಡಿದ್ದ. ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಮೃತನ ಪತ್ನಿ ತಿಳಿಸಿದ್ದಾರೆ. ಕಲಘಟಗಿ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಸಂಜೆ …
Read More »ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ಧೂರ ಶಾಸ್ತ್ರೀಜಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧಾರ
ಧಾರವಾಡ : ಜಿಲ್ಲಾಡಳಿತದಿಂದ ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ಬಹಾದ್ದೂರ ಶಾಸ್ತ್ರಿಜಿಯವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಅಧ್ಯಕ್ಷತೆಯಲ್ಲಿ ಇಂದು ರಂದು ಜರುಗಿದ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಗಾಂಧಿ ಶಾಂತಿ ಪ್ರತಿಷ್ಠಾನ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಕ್ಟೋಬರ್ 2 ರಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ …
Read More »ಮಕ್ಕಳ ಪಾಲಕರು ಅಥವಾ ಪೋಷಕರ ಪತ್ತೆ
ಧಾರವಾಡ : ಬಾಲನ್ಯಾಯ ಕಾಯ್ದೆ 2015 ರ ಪ್ರಕಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಧಾರವಾಡದಡಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪಾಲನೆ, ಪೋಷಣೆಗೆಂದು ದಾಖಲಾಗಿರುವ ಮಕ್ಕಳ ಪಾಲಕರು ಅಥವಾ ಪೋಷಕರ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಹುಬ್ಬಳ್ಳಿಯ ಮನೋವಿಕಲ ಬಾಲಕಿಯರ ಸರ್ಕಾರಿ ಬಾಲಮಂದಿರದ ಯಲ್ಲಮ್ಮ, ಮೌನಾ, ಶೃತಿ, ಪ್ರಿಯಾ, ಹಾಗೂ ರೂಪಾ ಎಂಬ ಮಕ್ಕಳ ಪಾಲಕರು ಅಥವಾ ಪೋಷಕರ ಕಾನೂನು ರೀತಿ ಹಕ್ಕುಳ್ಳವರು ಎಲ್ಲಿದ್ದರೂ 4 ತಿಂಗಳ ಅವಧಿ ಮುಗಿಯುವದರ ಒಳಗಾಗಿ …
Read More »ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ; ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್.
ಧಾರವಾಡ : ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ಗಾಂಧಿಭವನದಲ್ಲಿ ಆಯೋಜಿಸಲಾದ 74ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ವಿವಿಧ ಕೈಗಾರಿಕೆಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ …
Read More »ಪತ್ರಿಕೋದ್ಯಮ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಜಯಶ್ರೀ ತಳವಾರ
ಧಾರವಾಡ: ಹೆಚ್ಚಿಗೆ ಸಮಯ ಓದುವುದಕ್ಕಿಂತ ಇಷ್ಟುಪಟ್ಟು ಒಂದು ತಾಸು ಓದಬೇಕು ಎಂದು ಪತ್ರಿಕೋದ್ಯಮ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದ ಜಯಶ್ರೀ ತಳವಾರ ಎಂಬ ವಿದ್ಯಾರ್ಥಿನಿ ತನ್ನ ಮನದಾಳದ ಮಾತು ಹಂಚಿಕೊಂಡಿದ್ದಾಳೆ. ಮಂಗಳವಾರ ನಡೆದ ಧಾರವಾಡದ ಕವಿವಿ ಘಟಿಕೋತ್ಸವದಲ್ಲಿ ಜಯಶ್ರೀ ತಳವಾರ ಅವರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಇವತ್ತಿನ ನನ್ನ ಈ ಸಾಧನೆಗೆ ನನ್ನ ತಂದೆ, ತಾಯಿ, ವಿದ್ಯೆ ಕಲಿಸಿದ ಗುರುಗಳು, ಸ್ನೇಹಿತೆಯರ ಸಹಕಾರ ಬಹಳಷ್ಟಿತ್ತು ಎಂದಿದ್ದಾಳೆ.
Read More »ಸಿಎಂ ಸಾಚಾ ಆಗಿದ್ದರೇ ರಾಜೀನಾಮೆ ನೀಡಲಿ: ಶೆಟ್ಟರ್ ಕಿಡಿ
ಹುಬ್ಬಳ್ಳಿ: ಸಿಎಂ ಸಾಚಾ ಆಗಿದ್ದರೇ ರಾಜೀನಾಮೆ ನೀಡಲಿ. ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಈ ಭಂಡತನ ಸರಿಯಲ್ಲಾ.. ಅಧಿಕಾರದಲ್ಲಿದ್ದು, ತನಿಖೆ ಎದುರಿಸುವುದು ನ್ಯಾಯ ಸಮ್ಮತವಾಗಲ್ಲ. ಈ ಭಂಡತನ ಮುಂದುವರಿದ್ರೆ ಜನ ದಂಗೆ ಎಳ ಬೇಕಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಈ ಕೂಡಲೇ ಸಿಎಂ …
Read More »ಮೂಡಾ ಹಗರಣವನ್ನು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕೋನರಡ್ಡಿ
ಹುಬ್ಬಳ್ಳಿ: ಹೈಕೋರ್ಟ್ ರಾಜ್ಯಪಾಲರ ನಡೆಯನ್ನು ಎತ್ತಿ ಹಿಡಿದಿದ್ದು ಇದರ ವಿರುದ್ಧ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ ಎನ್.ಎಚ್. ಶಾಸಕ ಕೋನರೆಡ್ಡಿ ಹೇಳಿದರು. ಹೈಕೋರ್ಟ್ ಮೂಡಾ ಹಗರಣವನ್ನು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು,ಒಂದು ನ್ಯಾಯಾಲಯದಲ್ಲಿ ಒಂದು ತೀರ್ಪು ಬಂದಾಗ ಮತ್ತೊಂದು ನ್ಯಾಯಾಲಯದಲ್ಲಿ ಹೋರಾಡಲು ಅವಕಾಶ ಇದೆ. ನಾವು ಹೋರಾಡುತ್ತೇವೆ ಎಂದರು.
Read More »ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಸಂಗೀತೋತ್ಸವ ಕಾರ್ಯಕ್ರಮ
ಹುಬ್ಬಳ್ಳಿ : ಗುರುವರ್ಯ ಪಂಡಿತ ಶ್ರೀ ಸವಾಯಿ ಗಂಧರ್ವರ 72 ನೇ ಪುಣ್ಯತಿಥಿಯ ಅಂಗವಾಗಿ ಕುಂದಗೋಳದ ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಸಂಗೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಪ್ರಸಿದ್ದ 46 ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮ ನೆರವೇರಲಿದೆ ಎಂದು ಅರವಿಂದ ಕಟಗಿ ಹೇಳಿದರು. ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು,ಇದೇ ಸಪ್ಟೆಂಬರ್ 26 ಹಾಗೂ 27 ರಂದು ಎರಡು ದಿನಗಳ ಕಾಲ ಅಹೋರಾತ್ರಿ ಈ ಸಂಗೀತೋತ್ಸವ ನೆರವೇರಲಿದ್ದು, ಕಾರ್ಯಕ್ರಮವನ್ನು ಸಚಿವ ಸಂತೋಷ …
Read More »ನಕಲಿ ಕಂಪನಿಯ ಹೆಸರಲ್ಲಿ ಹುಬ್ಬಳ್ಳಿಯ ವ್ಯಕ್ತಿಗೆ ವಂಚನೆ
ಹುಬ್ಬಳ್ಳಿ: ನಕಲಿ ಕಂಪನಿಯ ಹೆಸರಲ್ಲಿ ಅಪರಿಚಿತ ವ್ಯಕ್ತಿ ಕಳಿಸಿದ ಸಂದೇಶವನ್ನು ನಂಬಿ ಬರೋಬ್ಬರಿ 22.34 ಲಕ್ಷ ರೂಪಾಯಿ ವಂಚನೆಗೆ ಒಳಗಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನವನಗರದ ಮೊಹಮ್ಮದ್ ನದಾಫ್ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ.ನಕಲಿ ಕಂಪನಿ ಹೆಸರಿನಲ್ಲಿ ಏಜೆಂಟ್ ಸಂದೇಶ ಕಳುಹಿಸಿದ್ದ ವಂಚಕ, ಲಾಭಗಳಿಸಬಹುದು ಎಂದು ನಂಬಿಸಿ ಹಂತ ಹಂತವಾಗಿ ಹಣ ವರ್ಗಯಿಸಿಕೊಂಡು ವಂಚನೆ ಮಾಡಿದ್ದಾನೆ. ಒಟ್ಟು 22,33,932 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ …
Read More »ತಮಿಳುನಾಡಿನಲ್ಲಿ ಯುವಕನ ಜನಿವಾರ ಕತ್ತರಿಸಿದ ಪ್ರಕರಣಕ್ಕೆ ಕಿಡಿಕಾರಿದ ವಕೀಲ ಲಕ್ಷ್ಮಣ ಚಿದಂಬರ್ ಕುಲಕರ್ಣಿ
ಹುಬ್ಬಳ್ಳಿ: ತಮಿಳುನಾಡಿನಲ್ಲಿ 12 ವರ್ಷದ ಅಖಿಲೇಶ ಎಂಬ ಬಾಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ 6-7 ಜನರ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಮಾಡಿ, ಪವಿತ್ರ ಜನಿವಾರವನ್ನು ಕತ್ತರಿಸಿ, ಮತ್ತೊಮ್ಮೆ ಜನಿವಾರವನ್ನು ಹಾಕಿಕೊಳ್ಳಬಾರದೆಂದು ಬೆದರಿಕೆ ಹಾಕಿದ್ದಾರೆ. ಇದು ಸನಾತನ ಹಿಂದೂ ಧರ್ಮಕ್ಕೆ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಈ ಘಟನೆ ಅತ್ಯಂತ ಖಂಡನೀಯ ಎಂದು ವಿಶ್ವ ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ವಕೀಲರಾದ ಲಕ್ಷ್ಮಣ ಚಿದಂಬರ್ ಕುಲಕರ್ಣಿ ಕಿಡಿಕಾರಿದ್ದಾರೆ. ನಗರದಲ್ಲಿಂದು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





