ಅಣ್ಣಿಗೇರಿ: ಪುರಸಭೆ ಸದಸ್ಯ ಶಿವಾನಂದ ಬೆಳಹಾರ ಅವರು ಲೇಔಟ್ ಪರ್ಮಿಷನ್ ಒಳಗೆ ಹಣ ಪಡೆದಿದ್ದಾರೆ ಎಂದು ಸದಸ್ಯ ನಾಗರಾಜ್ ದಳವಾಯಿ ಅವರ ಮೇಲೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಸದಸ್ಯ ನಾಗರಾಜ್ ಅವರು ಮಾತನಾಡಿ ಪರ್ಮಿಷನ್ ಕೊಡುವುದರಲ್ಲಿ ನಾನು ಹಣ ತೆಗೆದುಕೊಂಡಿದ್ದು ಸಾಬೀತುಪಡಿಸಿದರೆ ಪುರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವೆ ಎಂದು ಹೇಳಿದರು. ಅವರು ಪುರಸಭೆ ಸಾಮಾನ್ಯ ಸಭೆ ಬಳಿಕ ಮಾಧ್ಯಮದ ಜೊತೆ ಮಾತನಾಡಿ ನಾನು ಹಣ ಪಡೆದಿದ್ದು ಸಾಕ್ಷಿ ಇದ್ದರೆ ತೆಗೆದುಕೊಂಡು …
Read More »ಗ್ಯಾಸ್ ಸಿಲಿಂಡರ್ ಸಿಬ್ಬಂದಿಗಳಿಂದ ಧಾರವಾಡದಲ್ಲಿ ಪ್ರತಿಭಟನೆ
ಧಾರವಾಡ: ಗ್ಯಾಸ್ ಸಿಲಿಂಡರ್ ನ್ನು ಮನೆ, ಮನೆಗೆ ಹೋಗಿ ವಿತರಣೆ ಮಾಡುವ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಸಿಲಿಂಡರ್ ವಿತರಣೆ ಮಾಡುವ ಸಿಬ್ಬಂದಿಯಿಂದ ಅನ್ಯ ಕೆಲಸಗಳನ್ನೂ ಮಾಡಿಸಲಾಗುತ್ತಿದೆ. ಕೇವಲ ವಿತರಣೆ ಮಾಡುವ ಕೆಲಸವಷ್ಟೇ ಅಲ್ಲದೇ ಓಟಿಪಿ ಅಪ್ಲೇಟ್ ಮಾಡಿಸುವುದು, ಪಂಚ್ ಮಾಡಿಸುವ ಕೆಲಸವನ್ನು ಮಾಡಿಸಲಾಗುತ್ತಿದೆ. ಈ ಕೆಲಸ ಸಿಬ್ಬಂದಿಗೆ ಹೊರೆಯಾಗುವ ಜೊತೆಗೆ ಮಾನಸಿಕ ಹಿಂಸೆ ಕೂಡ ಆಗುತ್ತಿದೆ ಎಂದು ಸಿಬ್ಬಂದಿ ಆರೋಪಿಸಿದರು. ಧಾರವಾಡದಾದ್ಯಂತ ಸುಮಾರು 100ಕ್ಕೂ ಅಧಿಕ ಗ್ಯಾಸ್ ಸಿಲಿಂಡರ್ ವಿತರಣೆ …
Read More »ಕಾಂಗ್ರೆಸ್ ಶಾಸಕರಿಂದ ಹಿಡಿದುಕೊಂಡು ಎಲ್ಲಾ ಪಾರ್ಟಿಯ ಶಾಸಕರಿಗೂ ತೊಂದರೆ : ಟೆಂಗಿನಕಾಯಿ
ಹುಬ್ಬಳ್ಳಿ: ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸರಿಯಾಗಿಯೇ ಹೇಳಿದ್ದಾರೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದರ್ಶನ್ ಪುಟ್ಟಣ್ಣಯ್ಯ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯವಾದ ಸಂಗತಿ. ಇದು ಕಾಂಗ್ರೆಸ್ ಪಾರ್ಟಿಯ ಶಾಸಕರಿಂದ ಹಿಡಿದುಕೊಂಡು ಎಲ್ಲಾ ಪಾರ್ಟಿಯ ಶಾಸಕರಿಗೂ ಬಹಳ ತೊಂದರೆ ಆಗ್ತಾ ಇದೆ ಎಂದರು. ಡೆವಲಪ್ಟೆಂಟ್ ಎಂಬುವುದು ಮರೀಚಿಕೆಯಾಗಿ ಹೋಗುವಂತ ಸಂದರ್ಭ ಬಂದಿದೆ. ಒಂದು ವರ್ಷದಿಂದ …
Read More »ಹುಬ್ಬಳ್ಳಿಯಲ್ಲಿರುವ ಸಾಂಸ್ಕೃತಿಕ ಭವನ ಮರು ಜೀವ
ಹುಬ್ಬಳ್ಳಿ : ನಗರದ ಕಾಟನ್ ಮಾರ್ಕೆಟ್ ನಲ್ಲಿರುವ ಸಾಂಸ್ಕೃತಿಕ ಭವನ ಯಾವುದೇ ರೀತಿಯ ವ್ಯವಸ್ಥೆ ಇಲ್ಲದೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿರುವ ಈ ಭವನ ಪಾಳು ಬಿದ್ದುತ್ತು. ಪಾಲಿಕೆ ಆಯುಕ್ತರು ಸಾಂಸ್ಕೃತಿಕ ಭವನವನ್ನು ನಿರ್ವಹಣೆ ಮಾಡಲು ಮುಂದಾಗಿದ್ದಾರೆ. ಭವನದ ವಾಸ್ತವ ಸತ್ಯವನ್ನು, ಕಲಾವಿದರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ನೀರ್ಧಾರ ತೆಗೆದುಕೊಳ್ಳಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಈ ಸಾಂಸ್ಕೃತಿಕ ಭವನವನ್ನು ನಿರ್ಮಾಣ …
Read More »ಹುಬ್ಬಳ್ಳಿ-ಪುಣೆ ನಡುವೆ “ವಂದೇ ಭಾರತ್’ ರೈಲು ಸಂಚಾರಕ್ಕೆ ಎಲ್ಲ ಸಿದ್ಧತೆ
ಹುಬ್ಬಳ್ಳಿ : ಬಹು ನಿರೀಕ್ಷಿತ ಹುಬ್ಬಳ್ಳಿ-ಪುಣೆ ನಡುವೆ “ವಂದೇ ಭಾರತ್’ ರೈಲು ಸಂಚಾರಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಸೆಪ್ಟೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಸೆಪ್ಟೆಂಬರ್ 13 ಅಥವಾ 14ರಂದು ಪ್ರಾಯೋಗಿಕ ಸಂಚಾರ ನಡೆಯಲಿದೆ. ರೈಲು 558 ಕಿ.ಮೀ ದೂರವನ್ನು 9 ಗಂಟೆ 15 ನಿಮಿಷಗಳಲ್ಲಿ ಕ್ರಮಿಸಲಿದೆ. ಬೆಳಿಗ್ಗೆ 5ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮಧ್ಯಾಹ್ನ 2.10ಕ್ಕೆ ಪುಣೆ ತಲುಪಲಿದೆ. ಅದೇ ರೀತಿ ಮಧ್ಯಾಹ್ನ 2.40ಕ್ಕೆ …
Read More »ಮುನೇನಕೊಪ್ಪ ಅವರ ಆರೋಪಕ್ಕೆ ಲಾಡ್ ಪ್ರತಿಕ್ರಿಯೆ
ಧಾರವಾಡ: ನವಲಗುಂದ ತಾಲೂಕಿನಲ್ಲಿ ಅವೈಜ್ಞಾನಿಕವಾಗಿ ಚಕ್ಕಡಿ ರಸ್ತೆ ನಿರ್ಮಾಣ ಮಾಡುವುದರ ಜೊತೆಗೆ ಪಾರಂಪರಿಕ ಗುಡ್ಡದ ಮಣ್ಣಿನಲ್ಲಿ ಅವ್ಯವಹಾರ ನಡೆಸಲಾಗುತ್ತಿದೆ ಎಂದು ಆರೋಪ ಮಾಡಿರುವ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಆರೋಪಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಶಂಕರ ಪಾಟೀಲ ಮುನೇನಕೊಪ್ಪ ಅವರು ನನ್ನ ಸ್ನೇಹಿತರು. ರಾಜಕಾರಣದಲ್ಲಿ ಈ ರೀತಿ ಆರೋಪ ಮಾಡುವುದು ಸಹಜ. ಈ ಬಗ್ಗೆ ತನಿಖೆ …
Read More »ಬಿಜೆಪಿ ಹಗರಣದ ತನಿಖೆಗಾಗಿ ಕಾಂಗ್ರೆಸ್ 5 ಸಚಿವರ ತಂಡವನ್ನು ರಚನೆ ಕುರಿತು ಪ್ರತಿಕ್ರಿಯಿಸಿದ ಟೆಂಗಿನಕಾಯಿ
ಹುಬ್ಬಳ್ಳಿ: ಕಾಂಗ್ರೇಸ್ 5 ಮಂದಿ ಟೀಮ್ ಅಲ್ಲ 500 ಮಂದಿ ಟೀ ಮಾಡ್ರಿ. ಸುಮ್ಮನೆ ಹೇಳುತ್ತೇನೆ.. ಹೇಳುತ್ತೇನೆ ಅಂತ ಗಾಳಿಯಲ್ಲಿ ಗುಂಡು ಹೊಡಿಯೋ ಕೆಲಸ ಮಾಡಬೇಡಿ. ನಮ್ಮದು ಏನ್ ಐತಿ ಸ್ಕ್ಯಾಮ್ ಅದನ್ನು ತೆಗಿರಿ ಮೊದಲು ನೋಡೋಣ ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವಂತ ಕೆಲಸ ಮಾಡಬೇಡಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಬಿಜೆಪಿ ಹಗರಣದ ತನಿಖೆಗಾಗಿ ಕಾಂಗ್ರೆಸ್ 5 ಸಚಿವರ ತಂಡವನ್ನು ರಚನೆ ಮಾಡಿದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ …
Read More »ಜಿಲ್ಲಾ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಮಾರುದ್ರಪ್ಪ ಬಸಟ್ಟೆಪ್ಪ ಮೂಲಿಮನಿ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ ಕೆ ಶಿವಕುಮಾರ ಅವರ ಆದೇಶದ ಮೇರೆಗೆ ಧಾರವಾಡ ಜಿಲ್ಲಾ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಅವರನ್ನು ಹುಬ್ಬಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಆದೇಶ ಪಾತ್ರವನ್ನು ಅವರಿಗೆ ನೀಡಿ ಅವರನ್ನು ಗೌರವಿಸಿದರು.
Read More »ವಸಂತ ನಾಡಿಗೇರ ನಿಧನ; ಕವಿವಿಯಲ್ಲಿ ಸಂತಾಪ ಸಭೆ
ಧಾರವಾಡ:ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ವಸಂತ ನಾಡಿಗೇರ ತೀವ್ರ ಹೃದಯಾಘಾತದಿಂದ ವಿಧಿವಶರಾದ ಹಿನ್ನೆಲೆಯಲ್ಲಿ ಮೃತರ ಆತ್ಮಕ್ಕೆ ಶಾಂತಿಸಿಗಲೆಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸಂತಾಪ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಸಂಜಯಕುಮಾರ ಮಾಲಗತ್ತಿ, ವಿಭಾಗದ ಪ್ರಾಧ್ಯಾಪಕ ಡಾ. ಜೆ. ಎಂ. ಚಂದುನವರ ಸೇರಿದಂತೆ ಹಲವರು ಇದ್ದರು.
Read More »ಛಬ್ಬಿ ಗಣೇಶನ ದರ್ಶನ ಪಡೆದ ಶಾಸಕ
ಧಾರವಾಡ : ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದ ಕೆಂಪು ಗಣೇಶನ ದರ್ಶನವನ್ನು ಶಾಸಕ ಮಹೇಶ ಟೆಂಗಿನಕಾಯಿ ಪಡೆದುಕೊಂಡರು. ಭಯ ಭಕ್ತಿ ಭಾವದಿಂದ ಕೆಂಪು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಮಹೇಶ ಟೆಂಗಿನಕಾಯಿ ಭಕ್ತಿ ಸೇವೆ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಬಿಜೆಪಿ ಮುಖಂಡ ರಮೇಶ ಮಹಾದೇವಪ್ಪನವರ, ಕಲ್ಲಪ್ಪ ಮೊರಬದ, ಮಹೇಶ ಶೆರೆಗಾರ ಸೇರಿದಂತೆ ಹಲವರು ಇದ್ದರು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





