ಹುಬ್ಬಳ್ಳಿ: ಮಹದಾಯಿ ವಿಚಾರವಾಗಿ ರೈತರು ಮನವಿ ಕೊಟ್ಟಿದ್ದಾರೆ. ಇದು ಜುಲೈನಲ್ಲಿ ನಡೆದ ಮೀಟಿಂಗ್ ನಮ್ಮ ಗಮನಕ್ಕೆ ಬಂದಿಲ್ಲ. ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯೋ ಪ್ರಯತ್ನ ಮಾಡಲಾಗ್ತಿದೆ. ಕೇವಲ ಗೋವಾಕ್ಕೆ ಅಲ್ಲ,ದಾಬೋಲ್ ದಿಂದ ಯೋಜನೆ ಇದೆ. ಇದು ಎಲ್ಲರಿಗೂ ಅನಕೂಲವಾಗೋ ಯೋಜನೆ. ಮಹದಾಯಿ ಏನೇನೂ ಒಳ್ಳೆದ ಆಗಿದೆ ಅದು ನಮ್ಮ ಕಾಲದಲ್ಲಿ. ಕಾಂಗ್ರೆಸ್ ಮಹದಾಯಿ ವಿಚಾರವಾಗಿ ಏನೂ ಕೆಲಸ ಮಾಡಿಲ್ಲವೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ …
Read More »ಕಿಮ್ಸ್ ಕ್ಕೆ ಆಗಮಿಸಿದ ವೈದ್ಯಕೀಯ ಸಚಿವ ಶರಣ ಪ್ರಕಾಶ ಪಾಟೀಲ
ಹುಬ್ಬಳ್ಳಿ: ನಗರಕ್ಕೆ ಆಗಮಿಸಿದ ವೈದ್ಯಕೀಯ ಸಚಿವ ಶರಣ ಪ್ರಕಾಶ ಪಾಟೀಲ ಅವರು ಕಿಮ್ಸ್ ನಲ್ಲಿ ಕಿಮ್ಸ್ ವೈದ್ಯರ ಹಾಗೂ ತಾಲೂಕಿನ ಸರಕಾರಿ ವೈದ್ಯರ ಸಮಸ್ಯೆಯನ್ನು ಆಲಿಸಿದರು. ನಂತರ ಅವರ ಬೇಡಿಕೆ ಪತ್ರವನ್ನು ಪಡೆದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಅವರ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವಂತೆ ಕರೆ ಮಾಡಿ ತಿಳಿಸಿದರು. ಈ ಸಂದರ್ಭದಲ್ಲಿ ಕಿಮ್ಸ್ ನ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ವೈದ್ಯರು ಉಪಸ್ಥಿತರಿದ್ದರು.
Read More »ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದ ಶೆಟ್ಟರ್
ಹುಬ್ಬಳ್ಳಿ: ಈದ್ದಾ ಮೈದಾನದಲ್ಲಿ ಗಜಾನನ ಮಹಾ ಮಂಡಳಿ ವತಿಯಿಂದ ಪ್ರತಿಷ್ಠಾಪನೆಗೊಂಡಿರುವ ಗಣೇಶನ ದರ್ಶನವನ್ನು ಸಂಸದ ಜಗದೀಶ್ ಶೆಟ್ಟರ್ ಅವರು ಕುಟುಂಬ ಸಮೇತ ಪಡೆದುಕೊಂಡರು. ನಂತರ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದಿಪ್ ಶೆಟ್ಟರ್, ಜಗದೀಶ್ ಶೆಟ್ಟರ್ ಅವರ ಧರ್ಮಪತ್ನಿ ಶಿಲ್ಪಾ ಶೆಟ್ಟರ್, ನಾಗೇಶ ಕಲಬುರಗಿ, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.
Read More »ಉಣಕಲ್ಲದಲ್ಲಿ ಶ್ರೀ ತ್ರಿಲಿಂಗೇಶ್ವರ ಸ್ವರೂಪ ಗಣಪತಿಯ ಪ್ರತಿಷ್ಠಾಪನೆ
ಹುಬ್ಬಳ್ಳಿ: ಇಲ್ಲಿಯ ಸಿದ್ಧ ಕಲ್ಯಾಣ ನಗರ ಉಣಕಲ್ಲದ ಶ್ರೀ ತ್ರಿಲಿಂಗೇಶ್ವರ ಸ್ವರೂಪ ಗಣಪತಿಯ ಪ್ರತಿಷ್ಠಾಪನೆಯನ್ನು ಅತಿ ವಿಜೃಂಭಣೆಯಿಂದ ಮಾಡಲಾಯಿತು. ಈ ವಿಶೇಷ ಸಂದರ್ಭದಲ್ಲಿ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಭಾಗಿಯಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿದ್ದಲಿಂಗೇಶ್ವರ ನಗರದ ನಿವಾಸಿಗಳು ಹಾಗೂ ನೂರಾರು ಯುವಕರು ಸೇರಿದಂತೆ ಹಿರಿಯ ಮುಖಂಡರು ಭಾಗಿಯಾಗಿದ್ದರು.
Read More »ವಾಲ್ಮೀಕಿ ಜಿಲ್ಲಾ ಸಮುದಾಯ ಭವನದ ಅಡಿಗಲ್ಲು ಸಮಾರಂಭ
ಕಲಘಟಗಿ: ರಾಯಪುರದ ಮಹರ್ಷಿ ವಾಲ್ಮೀಕಿ ಜಿಲ್ಲಾ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಕಲಘಟಗಿ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂತೋಷ ಲಾಡ್ ಅವರಿಗೆ ಸನ್ಮಾನ ಜೊತೆ ಧನ್ಯವಾದಗಳನ್ನು ಅಲ್ಲಿನ ಜನರು ತಿಳಿಸಿದರು. ಈ ಸಮಾರಂಭದಲ್ಲಿ ಹಿರಿಯ ಮುಖಂಡರು ಸೇರಿದಂತೆ ಇತರ ಗಣ್ಯಯ ಭಾಗಿಯಾಗಿದ್ದರು.
Read More »ಹೊರಗಡೆ ಸಿಎಂ ಮುಂದುವರೆಯಲ್ಲಿ ಅಂತಾ ಹೇಳಿ , ಒಳಗಡೆ ಕುಸ್ತಿ ಆರಂಭವಾಗಿದೆ : ಶೆಟ್ಟರ್
ಹುಬ್ಬಳ್ಳಿ: ಹೊರಗಡೆ ನಾವು ಎಲ್ಲರೂ ಸಿಎಂ ಸಿದ್ದರಾಮಯ್ಯನವರ ಜೊತೆಗೆ ಇದ್ದೇವೆ. ಅವರೇ ಸಿಎಂ ಆಗಿ ಮುಂದುವರೆಯಲಿ ಅಂತ ಹೇಳಿಕೆ ನೀಡುತ್ತಾರೆ. ಆದ್ರೆ, ಒಳಗಡೆ ಕುಸ್ತಿ ಆರಂಭವಾಗಿದೆ. ಇದು ಬರುವ ದಿನಗಳಲ್ಲಿ ಇನ್ನೂ ಜಾಸ್ತಿ ಆಗಲಿದೆ. ಸಿಎಂ ಆಗಲು ದೊಡ್ಡ ಲಿಸ್ಟ್ ಕ್ಯೂ ನಿಂತಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಟೀಕೆ ಮಾಡಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಶೆಟ್ಟರ್, ಸಿಎಂ ಆಗಲು ಆರ್.ವಿ. ದೇಶಪಾಂಡೆಯವರು ಮೊದಲು ಮಾತು ಆರಂಭಿಸಿದರು. …
Read More »ನಟ ದರ್ಶನ್ ಪ್ರಕರಣದ ಕುರಿತು ಮಾಹಿತಿ ನೀಡಿದ ಶೆಟ್ಟರ್
ಹುಬ್ಬಳ್ಳಿ: ನಟ ದರ್ಶನ್ ಪ್ರಕರಣದ ಜಾರ್ಜ್ ಶೀಟ್ ಸಾಕ್ಷಿಗಳು, ಫೋಟೊಗಳು ಸದ್ಯ ನ್ಯಾಯಾಲಯದ ಬಳಿ ಇವೆ. ಇಂದು ಅವು ಹೊರಗಡೆ ಬಂದಿವೆ. ಅಂದರೆ, ಇದರಲ್ಲಿ ರಾಜ್ಯ ಸರ್ಕಾರ, ಸಂಬಂಧಿತ ಇಲಾಖೆಯೇ ಬಿಡುಗಡೆ ಮಾಡಿದೆ. ಜನರ ಮನಸ್ಸನ್ನು ಡೈವರ್ಟ್ ಮಾಡಲು ಇದನ್ನು ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಯಾವಾಗಲೂ ಡೈವರ್ಟ್ಮಾ ಮಾಡುವ ಪ್ರಯತ್ನ ಮಾಡುತ್ತದೆ. ಅದರ ಒಂದು ಭಾಗವಾಗಿ ಫೋಟೊ ಬಿಡುಗಡೆ ಮಾಡಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ …
Read More »ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ಮಧ್ಯೆ ರಕ್ತಪಾತ
ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಸ್ನೇಹಿತರು ತಲ್ವಾರ್ ನಿಂದ ಹೊಡೆದಾಡಿಕೊಂಡ ಘಟನೆ ತಾಲ್ಲೂಕಿನ ವರೂರು ಗ್ರಾಮದಲ್ಲಿ ನಡೆದಿದ್ದು,ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನು ಅರಳಿಕಟ್ಟಿ ಗ್ರಾಮದವರು ಎಂದು ಹೇಳಲಾಗುತ್ತಿದ್ದು, ಇವರಿಬ್ಬರು ಸ್ನೇಹಿತರು ಅಂತಾ ತಿಳಿದು ಬಂದಿದೆ. ಇಂದು ರಾತ್ರಿ ಎಂಟು ಗಂಟೆಯ ಸುಮಾರಿಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದ ಪರಿಣಾಮ ಪರಸ್ಪರ ತಲ್ವಾರ್ ತೆಗೆದುಕೊಂಡು ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಓರ್ವನ ಎರಡೂ ಕೈ ಬೆರಳು ಕಟ್ ಆದ್ರೆ ಇನ್ನೊಬ್ಬನ ಮುಖ ಹಾಗೂ …
Read More »ಮಂಚಕ್ಕೆ ಕರೆದ ರೈಲ್ವೆ ಇಲಾಖೆಯ ಕೆಲಸ ಮಾಡುತ್ತೀದ್ದ ಅಕೌಂಟೆಂಟ್ ಮರಳಿ ಮನೆಗೆ
ಹುಬ್ಬಳ್ಳಿ: ವಿವಾಹಿತ ಮಹಿಳೆಯೊಬ್ಬರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ. ಅದಕ್ಕಾಗಿ ನೀನು ನನ್ನ ಜೊತೆ ಮಂಚವನ್ನು ಹಂಚಿಕೊಳ್ಳಬೇಕು ಎಂದು ಮಹಿಳೆಯನ್ನು ರೈಲ್ವೆ ಇಲಾಖೆಯ ಆಫೀಸರ್ ರೆಸ್ಟ್ ಹೌಸ್ ಗೆ ಕರೆದಿದ್ದ ಕಾಮುಕನನ್ನು ಇದೀಗ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಅಮಾನತ್ತು ಮಾಡಿದ್ದಾರೆ. ಹುಬ್ಬಳ್ಳಿಯ ರೈಲ್ವೆ ಇಲಾಖೆಯ GM ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನದೀಮ್ ಎಂಬಾತ ನಕಲಿ ಫೇಸ್ ಬುಕ್ ಅಕೌಂಟ್ ಮೂಲಕ ಮಹಿಳೆಗೆ ಮೆಸೇಜ್ ಮಾಡಿ, ನಾನು …
Read More »ಶಾಂತಿನಿಕೇತನ (ಅರ್ಜುನ) ವಿಜ್ಞಾನ ಪದವಿ-ಪೂರ್ವ ಕಾಲೇಜು ದ್ವೀತಿಯ ಸ್ಥಾನ
ಧಾರವಾಡ: ಧಾರವಾಡದ ಆರ್.ಎನ್. ಶೆಟ್ಟಿ ಜಿಲ್ಲಾ ಒಳಾಂಗಣದಲ್ಲಿ ನಡೆದ ಧಾರವಾಡ ಶಹರ ಪದವಿ-ಪೂರ್ವ ಕಾಲೇಜುಗಳ ತಾಲೂಕಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಶಾಂತಿನಿಕೇತನ (ಅರ್ಜುನ) ವಿಜ್ಞಾನ ಪದವಿ-ಪೂರ್ವ ಕಾಲೇಜು ದ್ವೀತಿಯ ಸ್ಥಾನ ಪಡೆದು ಸಾಧನೆ ಮಾಡಿದೆ. ಧಾರವಾಡದ ವಿದ್ಯಾರ್ಥಿಗಳಾದ ಕುಮಾರ, ಅನಮೋಲ್ ಪ್ರಭು, ಮಲ್ಲಿಕಾರ್ಜುನ ಅಕ್ಕಿ ಮತ್ತು ಕೃಪಾಲ ವಿಟೇಕರ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಮುಂಬರುವ ಪಂದ್ಯಗಳಿಗೆ ಶುಭಾಶಯ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





