Breaking News

Shaikh BigTv

ಹುಬ್ಬಳ್ಳಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಹುಬ್ಬಳ್ಳಿ: ನಗರದ ವ್ಯಕ್ತಿಯೊಬ್ಬನ ಮೃತ ದೇಹ ಪತ್ತೆಯಾಗಿರುವ ಘಟನೆ ವಿದ್ಯಾನಗರ ಠಾಣಾ ವ್ಯಾಪ್ತಿಯ ಪ್ರೆಸಿಡೆಂಟ್‌ ಹೊಟೇಲ್ ಎದುರಿಗೆ ಶ್ರೀನಗರಕ್ಕೆ ಹೋಗುವ ದಾರಿಯಲ್ಲಿ ನಡೆದಿದೆ. ಅನುರಾಜ್ ಕಿರಾಣಿ ಸ್ಟೋರ್ ಪಕ್ಕದಲ್ಲಿ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿ ಯಾರೆಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ವಿದ್ಯಾನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Read More »

ಬಸ್‌ ನಿಲ್ದಾಣದಲ್ಲಿ ಪಾರ್ಕ್ ಮಾಡಿದ ವಾಹನ ಎಸ್ಕೆಪ್

ಕುಂದಗೋಳ: ಬಸ್‌ ನಿಲ್ದಾಣ ಸಮೀಪದ ಅಂಗಡಿಯೊಂದರ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನಡೆದಿದೆ. ಆಗಷ್ಟ 20ರಂದು ಸಂಶಿ ಗ್ರಾಮದ ಬಸ್ ನಿಲ್ದಾಣ ಬಳಿಯ ಬಂಡಿವಾಡ ಜನರಲ್ ಸ್ಟೋರ್ ಬಳಿ ನಿಲ್ಲಿಸಿದ್ದ ಹಿರೋ ಎಚ್.ಎಫ್ ಕಂಪನಿ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ಅರುಣಕುಮಾರ ಬಾಬುಗೌಡ ಯರಡ್ಡಿ ಎಂಬುವವರೇ ದ್ವಿಚಕ್ರ ವಾಹನ ಕಳೆದುಕೊಂಡವರು. ಈ …

Read More »

ರೇಣುಕಸ್ವಾಮಿ ಹತ್ಯೆ ಪ್ರಕರಣ: A9 ಆರೋಪಿ ಧನರಾಜ್ ಧಾರವಾಡಕ್ಕೆ ಶಿಫ್ಟ್

ಧಾರವಾಡ: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದ ಪಾಲಾಗಿದ್ದ ನಟ ದರ್ಶನ್ ಆ್ಯಂಡ್ ಟೀಮ್‌ಅನ್ನು ಬೇರೆ ಬೇರೆ ಕಾರಾಗೃಹಗಳಿಗೆ ಶಿಫ್ಟ್ ಮಾಡಲು ನ್ಯಾಯಾಲಯ ಅನುಮತಿ ಕೊಟ್ಟಿದೆ. A9 ಆರೋಪಿಯಾಗಿರುವ ಧನರಾಜ್ ಎಂಬಾತನನ್ನು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತಿದೆ.ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದ್ದ ಫೋಟೋ ಹಾಗೂ ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಸರ್ಕಾರ ಎಲ್ಲಾ ಆರೋಪಿಗಳನ್ನು ಬೇರೆ ಬೇರೆ ಕಾರಾಗೃಹಗಳಿಗೆ ಶಿಫ್ಟ್ ಮಾಡಲು ಸೂಚನೆ ಕೊಟ್ಟಿತ್ತು. ಇದಕ್ಕೆ ಇಂದು …

Read More »

ಕಳಘಟಗಿ ಬಳಿ ಭೀಕರ ಅಪಘಾತ : ಸಂತೋಷ ಲಾಡ್ ಭೇಟಿ

ಕಲಘಟಗಿ: ಹೊರವಲಯದ ತಡಸ ಕ್ರಾಸ್ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಲಾರಿ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿಯಾಗಿದ್ದು ಓರ್ವ ಮಹಿಳೆ ಸ್ಥಳದಲ್ಲೇವ ಸಾವುನಪ್ಪಿದ್ದು, ಓರ್ವ ಗಾಯಗಳನ್ನು ಕಿಮ್ಸ್ ಆಸ್ಪತ್ರೆ ಗೆ ದಾಖಲೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅಪಘಾತದಲ್ಲಿ 18 ಮಂದಿ ಪೈಕಿ ಓರ್ವ ಮಹಿಳೆ ಸಾವು ಸಂಭವಿಸಿದೆ. ಉಳಿದ 17 ಜನರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆಮ ಇನ್ನುಳಿದ 15 ಜನರಿಗೆ …

Read More »

ಲಾರಿ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿ : ಓರ್ವ ಮಹಿಳೆ ಸಾವು

ಕಲಘಟಗಿ: ಪಟ್ಟಣದ ಹೊರವಲಯದ ತಡಸ ಕ್ರಾಸ್ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಲಾರಿ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿಯಾಗಿದ್ದು ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಹಿಳಾ ಕೂಲಿ ಕಾರ್ಮಿಕರನ್ನು ಹೊತ್ತ ಟಾಟಾ ಏಸ್ ಮಡಕಿಹೊನ್ನಳ್ಳಿಯಿಂದ ಹುಬ್ಬಳ್ಳಿ ರಸ್ತೆಯ ಕಡೆ ಹೊರಟಿತ್ತು. ಆದರೆ ತಡಸ ಕ್ರಾಸ್ ಬಳಿ ಲಾರಿ ಹಾಗೂ ಟಾಟಾ ಎಸ್ ಮಧ್ಯೆ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ಮಹಿಳೆ ಮೃತಪಟ್ಟಿದ್ದು, ಇನ್ನು ಐವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. …

Read More »

ಸಾರ್ವಜನಿಕರೇ ಎಚ್ಚರ ಹುಬ್ಬಳ್ಳಿಯಲ್ಲಿ ಹೆಚ್ಚಿದೆ ಸೈಬರ್ ಕ್ರೈಮ್..

Featured Video Play Icon

ಹುಬ್ಬಳ್ಳಿ: ಹಣದ ಆಸೆ ತೋರಿಸಿ, ಬೇರೆ ಬೇರೆ ಡಿಮ್ಯಾಂಡ್ ತೋರಿಸಿ ಮಕ್ಮಲ್ ಟೋಫಿ ಹಾಕಿ ವಂಚನೆ ಮಾಡುವ ಸೈಬರ್ ವಂಚಕರ ಜಾಲ ಸಕ್ರಿಯವಾಗಿದೆ. ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದೆಷ್ಟೋ ಜಾಗೃತಿ ಮೂಡಿಸಿದರೂ ಜನರು ಮಾತ್ರ ಜಾಗೃತರಾಗುತ್ತಿಲ್ಲ. ವಿದ್ಯಾವಂತ ನಾಗರಿಕರೇ ಹೆಚ್ಚು ಮೋಸ ಹೋಗುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಈಗಾಗಲೇ ಪೊಲೀಸ್ ಕಮೀಷನರೇಟ್ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದೆ. ಹೀಗಿದ್ದರೂ ಜನರು ಮಾತ್ರ …

Read More »

ಧಾರವಾಡದಲ್ಲಿ ಪತ್ತೆಯಾದ ಇನ್ ಸ್ಟಾಗ್ರಾಂನಲ್ಲಿ ಅಶ್ಲೀಲವಾಗಿ ಪೋಟೊ ಎಡಿಟ್ ಮಾಡು ತಂಡ

ಧಾರವಾಡ: ಇನ್‌ಸ್ಟಾಗ್ರಾಂನ ಆ್ಯಪ್‌ನಲ್ಲಿ ಫೋಟೋಗಳನ್ನು ತೆಗೆದುಕೊಂಡು ಅಶ್ಲೀಲ ಧ್ವನಿ ಸೇರಿಸಿ ಎಡಿಟ್ ಮಾಡಿ ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವ ಗ್ಯಾಂಗೊಂದು ಪತ್ತೆಯಾಗಿದೆ. ಧಾರವಾಡದಲ್ಲಿ ಇದೀಗ ಸೆರೆಯಾಗಿದ್ದಾರೆ. ಈಗಾಗಲೇ ಮೂವರನ್ನು ಉಪನಗರ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಸಚಿನ್ ಖಡಕಬಾವಿ, ಅಕ್ಷಯ ಕಾಂಬಳೆ, ಆಕಾಶ ಮೇಟಿ ಹಾಗೂ ಸಚಿನ್ ಖಡಕಬಾವಿ ಎಂಬಾತನ ತಂದೆಯ ವಿರುದ್ಧ ಧಾರವಾಡದ ಉಪನಗರ ಠಾಣೆಯಲ್ಲಿ ಕೆಲ ವಿದ್ಯಾರ್ಥಿಗಳು ದೂರು ದಾಖಲಿಸಿದ್ದರು. ಧಾರವಾಡದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯರು …

Read More »

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಕಾರಿಣಿಯಾಗಿ ನಾಗರಾಜ ಗೌರಿ ಆಯ್ಕೆ

ಧಾರವಾಡ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಧಾರವಾಡದ ನಾಗರಾಜ ಗೌರಿ ಚುನಾಯಿತರಾಗಿದ್ದಾರೆ. ಈ ಚುನಾವಣೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಡೆದಿತ್ತು. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು ಚುನಾಯಿತರಾಗಿದ್ದು, ಧಾರವಾಡದಿಂದ ನಾಗರಾಜ ಗೌರಿ ಚುನಾಯಿತರಾಗಿದ್ದಾರೆ. ಮೊನ್ನೆಯಷ್ಟೇ ಈ ಚುನಾವಣೆ ಲಿಂಗಾಯತ ಮಹಾಸಭಾದ ಸಭಾಭವನದಲ್ಲಿ ನಡೆದಿತ್ತು. ಜಿಲ್ಲೆಯಲ್ಲಿ ಒಟ್ಟು 31145 ಮತದಾರರಿದ್ದು, ಅದರಲ್ಲಿ 18016 ಮತದಾರರು ಮತದಾನ ಮಾಡಿದ್ದರು. ಇದರಲ್ಲಿ ನಾಗರಾಜ ಗೌರಿ ಅವರು …

Read More »

ಮನೆಗಳ ಖುಲಾಸೆ ಸಂಬಂಧಿಸಿದಂತೆ ಕೋನರಡ್ಡಿ ಚರ್ಚೆ

ನವಲಗುಂದ: ನಗರದ ಪುರಸಭೆ ಕಛೇರಿಯಲ್ಲಿ ಇಂದು ನವಲಗುಂದ ನಗರ ಆಶ್ರಯ ಸಮಿತಿಯ ಆಶ್ರಯ ಮನೆಗಳ ಖುಲಾಸೆ ಸಂಬಂಧಿಸಿದಂತೆ ಧಾರವಾಡ ಎ.ಸಿ ಶಹಲಮ್ ಹುಸೇನ್ ಅವರೊಂದಿಗೆ ಶಾಸಕ ಎನ್.ಹೆಚ್.ಕೋನರಡ್ಡಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಸುಧೀರ ಸವಕಾರ, ಪುರಸಭೆ ಮುಖ್ಯಾಧಿಕಾರಿ ಎಸ್.ಬಿ.ಪೂಜಾರ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.

Read More »

ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಕೋನರಡ್ಡಿ ಭೇಟಿ

ನವಲಗುಂದ: ನವಲಗುಂದ ಶಹರದ ಗೊಲ್ಲರ ಓಣಿಯಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಎನ್.ಹೆಚ್.ಕೋನರಡ್ಡಿ ಭಾಗವಹಿಸಿ ಆ ದೇವರ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಜೀವನ ಪವಾರ, ಜ್ಯೋತಿ ಗೊಲ್ಲರ, ಪರಶು ಗೊಲ್ಲರ, ಗೋವಿಂದಪ್ಪ ಸಾಲಿ, ವೆಂಕಟೇಶ ಗೊಲ್ಲರ, ದೊಡ್ಡಗೋವಿಂದ ಗೊಲ್ಲರ, ರಮೇಶ ಗೊಲ್ಲರ, ಸಾಯಿಬಾ ಗೊಲ್ಲರ, ರಾಮ ಗೊಲ್ಲರ ಸೇರಿದಂತೆ ಇನ್ನು ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.

Read More »