Breaking News

Shaikh BigTv

ಜೋಶಿ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ.ವೈ.ವಿಜಯೇಂದ್ರ ಭೇಟಿ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ನೀಡಿದರು. ಶಾಸಕ ಅರವಿಂದ ಬೆಲ್ಲದ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಕೇಂದ್ರ ಸಚಿವರ ಮನೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅದ್ದೂರಿಯಾಗಿ ಸ್ವಾಗತಿಸಿಲಾಯಿತು. ಅಲ್ಲದೇ ಕಾರ್ಯಕರ್ತರು ಕೂಡ ಶಾಲು ಹಾಕಿ ಸನ್ಮಾನಿಸಿ ಸ್ವಾಗತಿಸಿದರು. ಇನ್ನೂ ಸಚಿವರ ನಿವಾಸದಲ್ಲಿಯೇ ವಿಜಯೇಂದ್ರ ಹಾಗೂ ಪ್ರಹ್ಲಾದ ಜೋಶಿಯವರು ಉಭಯ ಕುಶಲೋಪರಿಯ ಜೊತೆಗೆ ರಾಜಕೀಯ ಬೆಳವಣಿಗೆ ಮಾತು ನಡೆಸಿದರು ಎನ್ನಲಾಗುತ್ತಿದೆ.

Read More »

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ; ಜೋಶಿ ಶ್ಲಾಘನೆ

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ ಬಂದಿದೆ. ರಾಜ್ಯದ ವಿವಿಧ ವಿಮಾನ ನಿಲ್ದಾಣ ಭದ್ರತೆ ದೃಷ್ಟಿಯಿಂದ ಕಾರ್ಯ ನಿರ್ವಹಿಸಲು ಬ್ಯುರೋ ಆಫ್ ಸಿವಿಲ್ ಏವಿಯೇಶನ್ ಸೆಕ್ಯುರಿಟಿ ಪ್ರಾದೇಶಿಕ ಕಚೇರಿ ಆರಂಭವಾಗಿದೆ. ಬೆಂಗಳೂರು, ಮಂಗಳೂರು ಹೊರೆತು ಪಡಸಿ, ಉಳಿದ ಎಲ್ಲಾ ವಿಮಾನ ನಿಲ್ದಾಣಗಳ ಭದ್ರತಾ ಕ್ರಮಗಳ ತೀರ್ಮಾನ ಹುಬ್ಬಳ್ಳಿ ಕಚೇರಿಯಲ್ಲಿ ಆಗಲಿದೆ. ಸಹಾಯಕ ಕಮಿಷನರ್ ಇದರ ಮುಖ್ಯಸ್ಥರಾಗಿರುತ್ತಾರೆ, ಇಂತಹ ಕಚೇರಿಯನ್ನು ಹುಬ್ಬಳ್ಳಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳುನ್ನು ಕೇಂದ್ರ …

Read More »

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಜೋಶಿ

ಹುಬ್ಬಳ್ಳಿ: ನೀವು ರಾಷ್ಟ್ರಪತಿಗಳ ಮುಂದೆ ಪರೇಡ್ ಮಾಡೋದು ಬೇಡ, ಜನರೇ ನಿಮ್ಮ ಪೇರೆಡ್ ಮಾಡುತ್ತಾರೆ. ಕುಮಾರಸ್ವಾಮಿ ಅವರನ್ನು ಮುಗಿಸಿರುವ ಕಾಂಗ್ರೆಸ್ ಗೆ ಅನುಭವ ಇದೆ. ಹೀಗಾಗಿ ಅವರನ್ನು ಮತ್ತು ಜೆಡಿಎಸ್ ಮುಗಿಸುವ ಮಾತುಗಳನ್ನಾಡುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಿಮಗೆ ಬೇಕಾದಾಗ ಒಂದು ಥೇರಿ ಬೇಡವಾದಾಗ ಮತ್ತೊಂದು ಥೇರಿ ಇದು ನಿಮ್ಮ ವರ್ತನೆ. ನಾವು ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ದೇವೆ ಅಂತ ಈಗಾಗಲೇ ಲೆಕ್ಕ …

Read More »

ಲ್ಯಾಂಡ್ ಮಾಫಿಯಾದ ಬಗ್ಗೆ ಕಮೀಷನರ್ ಆ್ಯಕ್ಷನ್ ಭರವಸೆ: ಬಿಗ್ ಟಿವಿ ಬಿಚ್ಚಿಟ್ಟಿದೆ ಸ್ಪೋಟಕ ಸತ್ಯ..

Featured Video Play Icon

ಅವಳಿ ನಗರದ ಭೂಗಳ್ಳರಿಗೆ ನಡುಕ..!!! ಲ್ಯಾಂಡ್ ಮಾಫಿಯಾ ಬಗ್ಗೆ ಕಮೀಷನರ್ ಏನ ಅಂದ್ರು..!!! ಕಡಿಮೆ‌ ಬೆಲೆಗೆ ಸೈಟ್ ಅಂತ ವಂಚನೆ ಮಾಡ್ತಾರೆ! ಯಾರದೋ ಜಾಗಕ್ಕೆ ಯಾರೋ ಮಾಲಕರಾಗ್ತಾರೆ..!!! ಮನೆ ಮುರಕರಿಗೆ ಏನ ಗೊತ್ತು ಮನೆ ಕಟ್ಟೋ ಕನಸು..!!! ಬಿಗ್ ಟಿವಿ ಬಿಚ್ಚಿಡಲಿದೆ ಸ್ಪೋಟಕ ಸತ್ಯ….

Read More »

ಕೆಲ ಪ್ರಕರಣಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಕೆ

ಅಣ್ಣಿಗೇರಿ: ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ಕಲ್ಲಪ್ಪ ಹರಿಜನ್ ಎಂಬುವರ ಮೇಲೆ ಕಲ್ಲಪ್ಪ ಮೂಗಣ್ಣವರ್ ಎಂಬುವರು ಕೊಡಲಿಯಿಂದ ಕೊಲೆ ಮಾಡಲು ಯತ್ನ ತಪ್ಪಿ ಕಾಲು ಹಿಮ್ಮಡಿಗೆ ಹಲ್ಲೆ ಮಾಡಿದ್ದು ಹಾಗೂ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಯಮನೂರಪ್ಪ ಈರಪ್ಪ ಬಂಡಿಹಾಳ ಎಂಬುವರು ಕಟಿಂಗ್ ಮಾಡಿಸಿಕೊಳ್ಳಲು ಹೋದಾಗ ಮುದುಕಪ್ಪ ಅಂದಪ್ಪ ಹಡಪದ ಎಂಬುವವರು ನೀನು ಕೆಳಜಾತಿ ಕಟಿಂಗ್ ಮಾಡುವುದಿಲ್ಲ ಎಂದು ನಿರಾಕರಣೆ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸಲೂನ್ ಮಾಲಿಕ …

Read More »

ಗಣೇಶ ವಿಗ್ರಹಗಳ ಉತ್ಪಾದನೆ, ಮಾರಾಟ ಅಂಗಡಿಗಳಿಗೆ ತಹಶಿಲ್ದಾರ ಭೇಟಿ

ಧಾರವಾಡ : ನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಮಾರಾಟ ಅಂಗಡಿಗಳಿಗೆ ಧಾರವಾಡ ತಹಶಿಲ್ದಾರ ಡಿ.ಎಚ್.ಹೂಗಾರ ಅವರ ನೇತೃತ್ವದಲ್ಲಿ ಪಾಲಿಕೆ, ಪೆÇಲೀಸ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ, ಧಾರವಾಡ ಶಹರದಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

Read More »

ವಿಶ್ವೇಶ್ವರನ ಮೂರ್ತಿಗೆ ಸುತ್ತಿಕೊಂಡ ನಾಗರ ಹಾವು

ಹುಬ್ಬಳ್ಳಿ: ನಾಗರ ಹಾವು ವಿಶ್ವೇಶ್ವರನ ಮೂರ್ತಿಗೆ ಸುತ್ತಿಕೊಂಡಿರುವ ಅದ್ಭುತ ದೃಶ್ಯ ಇಲ್ಲಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಒಂದು ಕಾರ್ಖಾನೆಯಲ್ಲಿ ಚಿಕ್ಕದಾಗಿ ಗಣಪತಿ ದೇವಸ್ಥಾನ ಕಟ್ಟಿಸಿದ್ದಾರೆ. ನಿನ್ನೆ ರಾತ್ರಿ ವಿಘ್ನ ವಿನಾಯಕನ ಕೊರಳಲ್ಲಿ ನಾಗರ ಹಾವು ಸುತ್ತಿಕೊಂಡಿರುವ ಅದ್ಭುತ ದೃಶ್ಯ ಕಂಡು ಬಂದಿದ್ದು, ಭಕ್ತರು ಬಂದು ದರ್ಶನ ಪಡೆದಿದ್ದಾರೆ.

Read More »

ಶ್ರೀ ಏಳುಮಕ್ಕಳ ತಾಯಿ ಜಾತ್ರಾ ಮಹೋತ್ಸವ

ಕಲಘಟಗಿ : ಪಟ್ಟಣದ ಮಚಿಗಾರ ಓಣಿಯಲ್ಲಿ ಇರುವ ಶ್ರೀ ಏಳುಮಕ್ಕಳ ತಾಯಿ ಜಾತ್ರಾ ಮಹೋತ್ಸವ ಇಂದು ಜರುಗಲಿದೆ. ಮುಂಜಾನೆ ಎಂಟುಘಂಟೆಗೆ ದೇವಿಗೆ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.ಮದ್ಯಾಹ್ನ ಒಂದು ಘಂಟೆಗೆ ಅನ್ನ ಪ್ರಸಾದ ಜರುಗಲಿದ್ದು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಬೇಕೆಂದು ದೇವಸ್ಥಾನದ ಟ್ರಸ್ಟ್‌ ಕಮಿಟಿಯವರು ತಿಳಿಸಿದ್ದಾರೆ.

Read More »

ಅವಳಿ ನಗರಕ್ಕೆ ಮತ್ತೊಂದು ಗೌರವದ ಗರಿ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಈಗ ಮತ್ತೊಂದು ಗೌರವದ ಗರಿ ಮುಡಿಗೇರಿದೆ. ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆ ಅಡಿ ಉತ್ತಮ ಸಾಧನೆಗಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಒಟ್ಟು ಮೂರು ಪ್ರಶಸ್ತಿಗಳು ಲಭಿಸಿದೆ.ಬೀದಿ ಬದಿ ವ್ಯಾಪಾರಸ್ಥರಿಗೆ ಆತ್ಮನಿರ್ಭರ ನಿಧಿ ಯೋಜನೆಯಲ್ಲಿ ಪಾಲಿಕೆಯು ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಹೌದು.. ಸಚಿವ ಡಾ: ಶರಣಪ್ರಕಾಶ್ …

Read More »

ನೇಹಾ ಹಿರೇಮಠ ರೀತಿಯಲ್ಲಿ ಕೊಲೆ ಮಾಡುವಂತೆ ಬೆದರಿಕೆ : ಇದೀಗ ಪೋಲಿಸರ ಅತಿಥಿ

ಹುಬ್ಬಳ್ಳಿ : ಅಪ್ರಾಪ್ತಿಯನ್ನು ಪ್ರೀತಿ ಮಾಡು ಅಂತಾ ಬಲವಂತ ಮಾಡಿದ್ದಲ್ಲದೇ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅವರ ಪೋಷಕರ ಮುಂದೆಯೇ ನಿನ್ನ ಮಗಳನ್ನು ಮದುವೆ ಮಾಡಿ ಕೊಡದೇ ಹೋದ್ರೆ ಅವಳನ್ನು ಕೂಡಾ ನೇಹಾ ಹಿರೇಮಠ ರೀತಿಯಲ್ಲಿಯೇ ಕೊಲೆ ಮಾಡ್ತೀನಿ ಅಂತಾ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಓರ್ವ ಆರೋಪಿಯನ್ನು ಕಸಬಾಪೇಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಕಾರನಗರ ನೇತಾಜಿ ಕಾಲೊನಿಯ ಅಬ್ಬಾಸ್ ಸಿಕಂದರ್ ಎಂಬಾತ 16 ವರ್ಷದ ಬಾಲಕಿಯ ಸ್ನೇಹವನ್ನು …

Read More »