Breaking News

Shaikh BigTv

ರಾಜ್ಯಮಟ್ಟಕ್ಕೆ ಜಿಲ್ಲಾಮಟ್ಟದ ಕುಸ್ತಿಯಲ್ಲಿ ಆಯ್ಕೆ

ಕಲಘಟಗಿ : ತಾಲೂಕಿನ ಉಗ್ಗಿನಕೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಧಾರವಾಡದಲ್ಲಿ ನಡೆದ ೨೦೨೪ ೨೫ ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ಜಿಲ್ಲಾಮಟ್ಟದ ಕುಸ್ತಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 80 ಕೆ.ಜಿಯ ಕುಸ್ತಿಯಲ್ಲಿ ಸುನೀಲ ರಾಮಣ್ಣ ಬಂಡಿವಡ್ಡರ ಪ್ರಥಮ ಸ್ಥಾನ ಪಡೆದಿದ್ದು ಕಾವ್ಯಾ ತುಕಾರಾಮ ದಾನ್ವೆನವರ ೫೩ ಕೆಜಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಬ್ಬರು ವಿದ್ಯಾರ್ಥಿಗಳಿಗೆ ಶಾಲೆಯ ಎಸ್ ಡಿ ಎಮ್ ಸಿ …

Read More »

ಹುಬ್ಬಳ್ಳಿ ಪೋಲಿಸರ ಭರ್ಜರಿ ಕಾರ್ಯಚರಣೆ: 9 ಜನ ಬಂಧನ

ಹುಬ್ಬಳ್ಳಿ: ಬೆಳ್ಳಂಬೆಳಿಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ 9 ಜನರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು..ಹುಬ್ಬಳ್ಳಿ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಆನಂದನಗರ ಕುಷ್ಠರೋಗ ಆಸ್ಪತ್ರೆಯ ಎದುರಿಗೆ ಇರುವ ಶೆಡ್ ಹತ್ತಿರ ಗಾಂಜಾ ಮಾದಕ ಪದಾರ್ಥವನ್ನು ಮಾರಾಟ ಮಾಡುತ್ತಿದ್ದ 9 ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು, ಬಂಧಿತರಿಂದ 1.25 ಲಕ್ಷ ಮೌಲ್ಯದ 1,500 ಗ್ರಾಂ …

Read More »

ಭಾರತೀಯ ಅಂಚೆ ಇಲಾಖೆಯ ಅಧಿಕಾರಿಗಳು ತಿರಂಗಾ ಧ್ವಜ ವಿತರಣೆ

ಹುಬ್ಬಳ್ಳಿ: ಹರಗರ್ ತಿರಂಗಾ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಭಾರತ ಧ್ವಜವನ್ನು ನೀಡುತ್ತಿದ್ದು ರಾಷ್ಟ್ರಪತಿ ಅವರ ಪರವಾಗಿ ಭಾರತೀಯ ಅಂಚೆ ಇಲಾಖೆಯ ಅಧಿಕಾರಿಗಳು ಸ್ವಯಂ ಇಂದು ಹುಬ್ಬಳ್ಳಿಯ ಕಚೇರಿಯಲ್ಲಿ ಶಾಸಕ ಕೋನರಡ್ಡಿ ಅವರಿಗೆ ಭೇಟಿ ನೀಡಿ ರಾಜ್ಯಪಾಲರು ಕಳುಹಿಸಿದ ಪತ್ರವನ್ನು ಹಾಗೂ ಭಾರತದ ಧ್ವಜವನ್ನು ನೀಡಿದರು. ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು, ಮುಖಂಡರು ಶ್ರೀ ಡಿ. ಕೆ. ಹಳ್ಳದ. ಶ್ರೀ ಮತ್ತು ಕಾಲವಾಡ ಅವರು ಉಪಸ್ಥಿತರಿದ್ದರು.

Read More »

ಮೃತ ಅಮೃತಾಗೆ 5 ಲಕ್ಷ ರೂ. ಪರಿಹಾರ

ಕುಂದಗೋಳ: ಮೇಲ್ಪಾವಣಿ ಕುಸಿದು ಸಾವನ್ನಪ್ಪಿದ ಬಾಲಕಿ ಅಮೃತಾ ಗದಿಗೆಪ್ಪ ಮೆಣಸಗೊಂಡ 5 ವರ್ಷದ ಬಾಲಕಿ ಕುಟುಂಬಕ್ಕೆ ಪರಿಹಾರ ಒದಗಿಸುವ ಕಾರ್ಯವನ್ನು ತಾಲೂಕು ಆಡಳಿತ ಮಾಡಿದೆ. ಕಳೆದ ಶುಕ್ರವಾರವಷ್ಟೇ ಮಗು ಮೃತಪಟ್ಟಿತ್ತು, ಘಟನೆಯ ವಿಷಯ ತಿಳಿದ ತಾಲೂಕು ಆಡಳಿತ ಜಿಲ್ಲಾಡಳಿತಕ್ಕೆ ಮಾಹಿತಿ ಸಲ್ಲಿಸಿ ಎನ್. ಡಿ. ಆರ್. ಎಫ್ ನಿರ್ದೇಶನದ ಪ್ರಕಾರ 4 ಲಕ್ಷ ಹಣ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂಪಾಯಿ ಸೇರಿ ಒಟ್ಟು 5 ಲಕ್ಷ …

Read More »

ಹೆಸರು ಬೆಳೆಯನ್ನು ವೀಕ್ಷಣೆ ಮಾಡಿದ ಕೋನರಡ್ಡಿ

ನವಲಗುಂದ: ನವಲಗುಂದ ವಿಧಾನಸಭಾ ಮತಕ್ಷೇತ್ರದ ಅಣ್ಣಿಗೇರಿ ನಗರದ ಸುತ್ತಮುತ್ತಲೂ ಹೆಸರು ಬೆಳೆಯ ಕಟಾವು ಹಾಗೂ ಸ್ವಚ್ಚಗೊಳಿಸುವ ಕಾರ್ಯ ನಡೆದಿದ್ದು, ಮಣಕವಾಡ ದಾರಿಯಲ್ಲಿ ಹೆಸರು ಬೆಳೆದ ರೈತರುಗಳನ್ನು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಕೋನರಡ್ಡಿ ಅವರು ಭೇಟಿಯಾಗಿ ಬೆಳೆಯನ್ನು ವಿಕ್ಷಣೆ ಮಾಡಿ, ಬೆಳೆಯ ಬಗ್ಗೆ ರೈತರಲ್ಲಿ ಮಾಹಿತಿ ಪಡೆದುಕೊಂಡರು. ಈ ವೇಳೆ ಗ್ರಾಮದ ರೈತರು ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

Read More »

ಟಿಬಿ ಡ್ಯಾಂ ಅವಾಂತರ ಸಂಸದ ಶೆಟ್ಟರ್ ಕಿಡಿ

ಹುಬ್ಬಳ್ಳಿ: ತುಂಗಭದ್ರಾ ಡ್ಯಾಂ ಕ್ರಸ್ಟ್ ಗೆಟ್ ಕೊಚ್ಚಿ ಹೋದ ಪ್ರಕರಣದ ವಿಚಾರ, ಇದಕ್ಕೆಲ್ಲ ಮೂಲ ಕಾರಣ ರಾಜ್ಯ ಸರ್ಕಾರ. ಇದಕ್ಕೆಲ್ಲ ಕಾರಣೀಭೂತರು ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು. ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದ್ರೆ,ಅಧಿಕಾರಿಗಳು ನಿರ್ಲಕ್ಷ್ಯ ಮಾಡ್ತಾರೆಂದು ಹುಬ್ಬಳ್ಳಿಯಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡ್ಯಾಂನಲ್ಲಿ ಇಂಜನೀಯರ್ಸ್ ಗಳೇ ಇಲ್ಲ.ಎಲ್ಲರೂ ಇನ್ ಚಾರ್ಜ್ ಮೇಲೆ ಇದ್ದಾರೆ.ಅವರ ಮೇಲೆ ಬಂದಿರೋ ಹಗರಣಕ್ಕೆ ಉತ್ತರ ಕೊಡೋದಕ್ಕೆ ಸಮಯ ವ್ಯಯ ಮಾಡ್ತೀದಾರೆ.ಸರ್ಕಾರ …

Read More »

ರೋಹಿಂಗ್ಯಾ ಮುಸ್ಲಿಮರನ್ನು ಭಾರತ ದೇಶದಿಂದ ಒದ್ದು ಓಡಿಸಬೇಕು ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ: ಬಾಂಗ್ಲಾದೇಶದ ಹಿಂದೂಗಳ ರಕ್ಷಣೆ ಮಾಡಬೇಕು ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿರುವ ರೋಹಿಂಗ್ಯಾ ಮುಸ್ಲಿಮರನ್ನು ಭಾರತ ದೇಶದಿಂದ ಒದ್ದು ಓಡಿಸಬೇಕು ಎಂದು ಆಗ್ರಹಿಸಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಶ್ರೀ ರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಅವರಿಗೆ ಮನವಿ ಸಲ್ಲಿಸಿದರು. ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯ ತಡೆಯಲು ಭಾರತ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

Read More »

ಅ. 12ರಂದು ಕಲಘಟಗಿ ತಾಲುಕಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಕಲಘಟಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಲಘಟಗಿ ತಾಲುಕಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ದಿ. ೧೩ ರ ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ಇಲ್ಲಿನ ಹನ್ನೆರಡುಮಠದ ಸಭಾಭವನದಲ್ಲಿ ಜರುಗಲಿದೆ. ಹನ್ನೆರಡುಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯರ ಸಾನಿಧ್ಯದಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಘಟನೆಯ ರಾಜ್ಯಾಧ್ಯಕ್ಷ ಡಾ/ ವಾಸುದೇವ ಮೇಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧ್ಯಕ್ಷ ಸಿದ್ದಯ್ಯ ಕಟ್ಟೂರಮಠ …

Read More »

ಸಿಎಂ ತೇಜೊವಧೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ: ಬಿಜೆಪಿ ಹಾಗೂ ಜೆಡಿಎಸ್‌ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಮಾಡುತ್ತಿವೆ ಎಂದು ಆರೋಪಿಸಿ ಧಾರವಾಡ ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ದಾರವಾಡದ ಕಡಪ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜಭವನದ ದುರುಪಯೋಗ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೋಟಿಸ್‌ ನೀಡಲಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Read More »

ಪಿಎಸ್ ಐ ಪರಶುರಾಮ ಕುಟುಂಬಕ್ಕೆ ನ್ಯಾಯ ಒದಗಿಸಿ : ಶೆಟ್ಟರ್

ಹುಬ್ಬಳ್ಳಿ: ಮೃತ ಪಿಎಸ್ಐ ಪರಶುರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೂಡಲೇ ಆರೋಪಿಗಳನ್ನು ಬಂಧಿಸಿ ಪರಶುರಾಮ ಕುಟುಂಬಕ್ಕೆ ಸರ್ಕಾರ ನ್ಯಾಯ ಕೊಡಿಸುವ ಮೂಲಕ, ಅವರಿಗೆ ರಕ್ಷಣೆ ನೀಡಬೇಕೆಂದು ಮಾಜಿ ಸಿಎಂ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಒತ್ತಾಯಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರನ್ನು ರಕ್ಷಣೆ ಮಾಡೋ ಕೆಲಸ ಒಂದಡೆಯಾದರೆ, ಪರಶುರಾಮ್ ಅವರ ಕುಟುಂಬಸ್ಥರು ನೋವಿನಲ್ಲಿದ್ದಾರೆ. ಅವರ ಹೇಳಿಕೆಯನ್ನು ಇದುವರೆಗೂ ಪಡೆದಿಲ್ಲ. ನಿಮಗೆ ತಾಕತ್ ಇದ್ದರೆ ಆರೋಪಿಗಳನ್ನು ಅರೆಸ್ಟ್ ಮಾಡಿ …

Read More »