Breaking News

Shaikh BigTv

ಪೊಲೀಸ್ ಠಾಣೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ ಅಧಿಕಾರಿಗಳು; ಕಂಠಪೂರ್ತಿ ಕುಡಿದು ತೂರಾಡಿದ…? video viral…

Featured Video Play Icon

ಲಖನೌ ಆಘಾತಕಾರಿ ಘಟನೆಯೊಂದರಲ್ಲಿ ಕರ್ತವ್ಯನಿರತ ಪೊಲೀಸ್​ ಅಧಿಕಾರಿಗಳು ಠಾಣೆಯೊಳಗೇ ಎಣ್ಣೆ ಪಾರ್ಟಿ ಮಾಡುತ್ತ ಸಂಭ್ರಮಿಸುತ್ತಿರುವ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಮೊಹ್ಲಾ ರೈಲ್​ಪಾರ್​ ಕಂಟ್ರೋಲ್​ ರೂಮ್​ನಲ್ಲಿ ನಡೆದಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಮೂವರು ಅಧಿಕಾರಿಗಳು ಠಾಣೆಯೊಳಗೆ ಮದ್ಯ ಸೇವಿಸುತ್ತಾ ಆರಾಮಾಗಿ ಕುಳಿತುಕೊಂಡು ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಅಧಿಕಾರಿಯೋರ್ವ ತನ್ನ ಸಹೋದ್ಯೋಗಿಗಳನ್ನು ಕಿಚ್ಚಾಯಿಸುತ್ತಿರುವುದನ್ನು ವೈರಲ್​ ಆಗಿರುವ …

Read More »

BREAKING : 2 ಕೋಟಿಗೂ ಅಧಿಕ ಅಕ್ಕಿ ಕಳುವು ಕೇಸ್ : ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಶಕ್ಕೆ..

ಕಲಬುರ್ಗಿ : ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಸರ್ಕಾರಿ ಗೋಧಾವಿನಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಮೌಲ್ಯದ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ನನ್ನು ಇದೀಗ ಕಲ್ಬುರ್ಗಿಯಲ್ಲಿ ಶಹಪುರದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ನನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 2 ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 6077 ಕ್ವಿಂಟಲ್ ಅಕ್ಕಿ ಕಳ್ಳತನ ಮಾಡಿದ್ದು, ಅಕ್ಕಿ ಕಳ್ಳತನ …

Read More »

ಬೆಂಗಳೂರು ಪೊಲೀಸ್‌ ಸಿಬ್ಬಂದಿ ವರ್ಗಾವಣೆಗೆ ಮಾರ್ಗಸೂಚಿ..

ಪೊಲೀಸ್‌ ಇಲಾಖೆ ಸಿಬ್ಬಂದಿಯನ್ನು (ಪೊಲೀಸ್‌ ಕಾನ್‌ಸ್ಟೆಬಲ್‌) ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ಕೋರಿಕೆ ಆಧಾರದ ಮೇಲೆ ವರ್ಗಾವಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ ಅಂತರ ಜಿಲ್ಲಾ/ಘಟಕಗಳ ವರ್ಗಾವಣೆಗೆ ಇಲಾಖೆಯಿಂದ ರೂಪಿಸಿಲಾಗಿರುವ ಅಧಿಕೃತ ಆನ್‌ಲೈನ್‌ ಪೋರ್ಟಲ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾತ್ರವೇ ಪರಿಗಣಿಸಬೇಕು. ಪ್ರತಿ ಘಟಕದಿಂದ ವರ್ಗಾವಣೆ ಆಗಿ ಹೋಗುವ ಸಿಬ್ಬಂದಿ ಸಂಖ್ಯೆ ಶೇ 15ಕ್ಕಿಂತ ಹೆಚ್ಚಿರಬಾರದು. ಸೇವಾ ಜ್ಯೇಷ್ಠತೆ ಆಧಾರದ ಮೇಲೆಯೇ ವರ್ಗಾವಣೆ ನಡೆಸಬೇಕು. ಎಲ್ಲ ವೃಂದದ ವರ್ಗಾವಣೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳ …

Read More »

ಮತ್ತೇ ಮುನ್ನೆಲೆಗೆ ಬಂದ ಮೇಯರ್ ಗೌನ್ ವಿಚಾರ: ಸ್ವಪಕ್ಷದಲ್ಲಿಯೇ ದ್ವಂದ್ವ ನಿಲುವು..!

Featured Video Play Icon

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತ್ತೆ ಮುನ್ನಲೆಗೆ ಬಂದಿದೆ ಮೇಯರ್ ಗೌನ್ ಚರ್ಚೆ. ಅಭಿವೃದ್ಧಿಗಿಂತ ಮೇಯರ್ ಗೌನ್ ಬಗ್ಗೆ ಚರ್ಚೆ ಜೋರಾಗಿದ್ದು, ಸ್ವಪಕ್ಷದಲ್ಲಿಯೇ ಮೇಯರ್ ಗೌನ್‌ ವಿಷಯದಲ್ಲಿ ದ್ವಂದ್ವ ನಿಲುವು ವ್ಯಕ್ತವಾಗಿದೆ.. ಈ ಹಿಂದೆ ಮೇಯರ್ ಆಗಿದ್ದ ಈರೇಶ ಅಂಚಟಗೇರಿ ಮತ್ತು ವೀಣಾ ಭಾರದ್ವಾಡ ಗೌನ್ ಹಾಕಿಕೊಳ್ಳಲು ನಿರಾಕರಣೆ ಮಾಡಿದ್ದರು. ಗೌ‌ನ ಬೇಡ ಎಂದು ಸರ್ಕಾರದ ಮೊರೆ ಹೋಗಿದ್ದ ಅವಾಗಿನ ಮೇಯರ್ ಈರೇಶ ಅಂಚಟಗೇರಿ,‌ ಮೇಯರ್ ಗೌನ್ ಹಾಕಿಕೊಳ್ಳುವುದು …

Read More »

ಉಪನಗರ ಪೋಲಿಸ್ ಠಾಣೆ ಭರ್ಜರಿ ಕಾರ್ಯಚರಣೆ: ಇಪ್ಪತ್ತನಾಲ್ಕು ಗಂಟೆಯಲ್ಲಿ ಕಳ್ಳರ ಬಂಧನ…

ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಾಜಿಬಾನಪೇಟೆಯಲ್ಲಿರುವ ಗ್ಯಾಸ್ ಡಿಸ್ಟ್ರಿಬ್ಯೂಟರ್ ಏಜನ್ಸಿಯೊಂದರಲ್ಲಿ 13 ರಂದು 5,37,900 ರೂ/- ನಗದು ಕಳ್ಳತನ ಮಾಡಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ-ಉಪ ವಿಭಾಗದ ಎಸಿಪಿ ಶಿವಪ್ರಕಾಶ ನಾಯ್ಕ ರವರ ಮಾರ್ಗದರ್ಶನದ ಮೇರೆಗೆ ಉಪನಗರ ಪೋಲಿಸ್ ಠಾಣೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ 24 ಗಂಟೆಯಲ್ಲೆ ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಆರೋಪಿಗಳು ಅದೇ ಏಜೆನ್ಸಿ ಯಲ್ಲಿ ಕೆಲಸ ಮಾಡುತ್ತಿದ್ದರು ಇನ್ನೂ ಎಲ್ಲಾ ಮಾಹಿತಿ ಪಡೆದುಕೊಂಡ ಪೋಲಿಸರು ಕಳ್ಳತನವಾಗಿದ್ದ …

Read More »

ಗ್ಯಾಸ್ ಕಟರ್ ಬಳಸಿ ಬಂಗಾರದ ಅಂಗಡಿ ಕಳ್ಳತನ: ಲಕ್ಷಾಂತರ ಮೌಲ್ಯದ ಆಭರಣ ದೋಚಿ ಪರಾರಿ..!

Featured Video Play Icon

ಹುಬ್ಬಳ್ಳಿ: ಗ್ಯಾಸ್ ಕಟರ್ ಬಳಸಿ ಬಂಗಾರದ ಅಂಗಡಿ ಕೀ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ಕೇಶ್ವಾಪುರದ ರಮೇಶ ಭವನದ ಬಳಿ ನಡೆದಿದೆ.ಹುಬ್ಬಳ್ಳಿಯ ಕೇಶ್ವಾಪುರದ ರಮೇಶ್ ಭವನದ ಬಳಿಯ ಭುವನೇಶ್ವರಿ ಜ್ಯುವೆಲರಿ ಶಾಪ್ ನ ಕೀಲಿಯನ್ನು ಗ್ಯಾಸ್ ಕಟ್ಟರ್ ನಿಂದ ತುಂಡು ಮಾಡಿದ ಖದೀಮರು, ನಂತರ ಗ್ಲಾಸ್ ಒಡೆದು ಒಳನುಗ್ಗಿ 800 ಗ್ರಾಮ್ ಚಿನ್ನ ಮತ್ತು 50 ಕೆ.ಜಿ ಬೆಳ್ಳಿ ಕಳ್ಳತನ …

Read More »

ಅಕ್ರಮ ಗಾಂಜಾ ಮಾರಾಟ: ಹದಿಮೂರು ಜನರ ಹೆಡೆಮುರಿ ಕಟ್ಟಿದ ಖಾಕಿ…

Featured Video Play Icon

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗಾಂಜಾ ಘಾಟು ಜೋರಾಗಿದೆ. ಅಕ್ರಮವಾಗಿ ಗಾಂಜಾ ಮಾರಾಟ ಹಾಗೂ ಖರೀದಿಗೆ ಬಂದಂತಹ 13 ಜನರನ್ನು ಶಹರ ಠಾಣೆಯ ಪೊಲೀಸರು ನಗರದ ಗುಡ್ ಶೆಡ್ ರೋಡ್ ಬುದ್ಧ ವಿಹಾರ ಹತ್ತಿರ ಖಚಿತ ಮಾಹಿತಿ ಮೇರೆಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನವಾಜ್, ಹಜರತ್, ಅಹ್ಮದ್ ಖಾನ್, ಪಾಂಡು, ಶಂಕರನಾಗ್, ಆಕಾಶ, ಅಜುರುದ್ದೀನ್, ವೆಂಕಟೇಶ್, ಮಹಮ್ಮದ್ ಗೌಸ್, ಸರ್ಪರಾಜ್, ನೂರ ಅಹ್ಮದ್, ಆರ್ಯನ್ ಹಾಗೂ ಶಿಖಂದರ್ ಎಂಬಾತರೇ ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತರಿಂದ ಸುಮಾರು ಎರೆಡು …

Read More »

ನೂರಾರು ಕೋಟಿ ಅವ್ಯವಹಾರದ ತನಿಖೆಗೆ ಆಗ್ರಹ: ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ..!

Featured Video Play Icon

ಹುಬ್ಬಳ್ಳಿ: ನಿವೇಶನ ಹಂಚಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ನೇತೃತ್ವದಲ್ಲಿಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಕಚೇರಿ ಎದರು ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಆಳುವ ಸರ್ಕಾರಗಳಿಂದ ಕೈಮಗ್ಗ ನೇಕಾರರಿಗೆ ಅನ್ಯಾಯವಾಗುತ್ತಿದೆ. ಇದರಿಂದಾಗಿ ನೇಕಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಕೆ.ಎಚ್.ಡಿ.ಸಿ ನಿಗಮದ ಮೂಲಕ ನೇಕಾರರಿಗೆ ನಿವೇಶನ …

Read More »

ಇಂಜಿನಿಯ‌ರ್ ಸತ್ತು 6 ತಿಂಗಳ ಬಳಿಕ ವರ್ಗಾವಣೆ ಮಾಡಿ ಆದೇಶ ನಗರಾಭಿವೃದ್ಧಿ ಇಲಾಖೆ ಎಡವಟ್ಟು…

ಕಲಬುರಗಿ. ಮೃತ ಇಂಜಿನಿಯರ್ ವರ್ಗಾಮಾಡಿ ನಗರಾಭಿವೃದ್ಧಿ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ಹೌದು, ಜನವರಿಯಲ್ಲಿ ಮೃತಪಟ್ಟ ಇಂಜಿನಿಯರ್ ನನ್ನ ಕೊಡಗಿಗೆ ಜುಲೈ 9 ರಂದು ಸರ್ಕಾರ ವರ್ಗಾವಣೆ ಆದೇಶ ಮಾಡಿದ್ದು, ಆದೇಶ ಬೆನ್ನಲ್ಲೇ ಮಹಾ ಎಡವಟ್ಟು ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್‌ ಅಶೋಕ ಪುಟಪಾಕ್‌, ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದರು… ಆದರೆ ರಾಜ್ಯ ಸರ್ಕಾರ ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ …

Read More »

ಅಪರಾಧ ಕೃತ್ಯಗಳ ಸ್ಥಳಗಳ ಹಾಗೂ ನೊಂದವರನ್ನು ಭೇಟಿ ಮಾಡಿದ ಹು ಧಾ ಪೊಲೀಸ್ ಕಮೀಷನರ್…

ನೊಂದು ಬೆಂದವರಿಗೆ ಭರವಸೆಯ ನುಡಿಅನ್ಯಾಯ ಸಹಿಸಲ್ಲ …ನ್ಯಾಯ ಸಾಯಲು ಬಿಡಲ್ಲ ..ಇದು ಖಡಕ್ ಆಫಿಸರ್ ನಡೆನ್ಯಾಯಕ್ಕಾಗಿ ಕುಳಿತವರಿಗೆ ಆಪತ್ಬಾಂಧವ ನ ಬೇಟೆನಿಮ್ಮಲ್ಲಿ‌ ನಾನು… ನಿಮಗಾಗಿ ನಾನು… ಜನಸ್ನೆಹಿ ಅನ್ನೊ ಪದಕ್ಕೆ ನಿಜವಾದ ಅರ್ಥ ಇದು ಹುಬ್ಬಳ್ಳಿ ಧಾರವಾಢ ಅವಳಿ ನಗರದ ಪೊಲೀಸ್ ಕಮೀಷನರ್ ಶ್ರೀ N ಶಶಿಕುಮಾರ್, ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಂತಹ ಕೊಲೆ ಪ್ರಕರಣಗಳು, ದರೋಡೆ ಪ್ರಕರಣಗಳು, ಸರಗಳ್ಳತನ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಕೃತ್ಯ …

Read More »