Breaking News

Shaikh BigTv

ಹವಾಲ ದಾಳಿ ಬೆನ್ನಲ್ಲೇ ನಡೆಯಿತಾ ಇನ್‌ಸ್ಪೆಕ್ಟ‌ರ್ ರವಿ ಸಸ್ಪೆಂಡ್ ಹಿಂದಿನ ರಹಸ್ಯವೇನು…?

ಬೆಂಗಳೂರು, ಜನವರಿ 21:ತಮ್ಮ ವ್ಯಾಪ್ತಿಯಲ್ಲಿದ್ದ ಕೊಲೆ ಪ್ರಕರಣವನ್ನು ನಿರ್ಲಕ್ಷ್ಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ಎಸ್. ರವಿ ಅವರನ್ನು ಅಮಾನತು ಮಾಡಿರುವ ಬೆನ್ನಲ್ಲೇ, ಈ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ.ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಅವರು ಮಂಗಳವಾರ ಇನ್‌ಸ್ಪೆಕ್ಟರ್ ರವಿ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಳಿಸುವಂತೆ ಆದೇಶಿಸಿದ್ದರು. ಆದರೆ, ಈ ಅಮಾನತಿನ ಹಿಂದೆ ಹವಾಲ ದಂಧೆ ವಿರುದ್ಧ ನಡೆಸಿದ ದಾಳಿಯೇ …

Read More »

ಧಾರವಾಡ ಯುವತಿಯ ಶವ ಪತ್ತೆ – ಕೊಲೆ ಶಂಕೆ!

ಬೆಚ್ಚಿಬೀಳಿಸಿದ ಯುವತಿ ಕೊಲೆ ರಹಸ್ಯ..? ವಿದ್ಯಾಕಾಶಿ ಧಾರವಾಡದಲ್ಲಿ 19 ವರ್ಷದ ಪ್ಯಾರಾಮೆಡಿಕಲ್‌ ವಿದ್ಯಾರ್ಥಿನಿ ಝಕಿಯಾ ಮುಲ್ಲಾ ಶವವಾಗಿ ಪತ್ತೆಯಾಗಿರುವ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ. ಧಾರವಾಡದ ಹೊರವಲಯದ ಮನಸೂರು ರಸ್ತೆಯ ಸಮೀಪ ಇಂದು ಮುಂಜಾನೆ ಯುವತಿಯ ಶವ ಪತ್ತೆಯಾಗಿದೆ. ಗಾಂಧಿ ಚೌಕ್ ನಿವಾಸಿಯಾಗಿರುವ ಝಕಿಯಾ ಮುಲ್ಲಾ (19), ಪ್ಯಾರಾಮೆಡಿಕಲ್‌ ಶಿಕ್ಷಣ ಮುಗಿಸಿ ಉದ್ಯೋಗ ಹುಡುಕಾಟದಲ್ಲಿದ್ದಳು. ನಿನ್ನೆ ಮಂಗಳವಾರ ಸಂಜೆ ಸುಮಾರು 4:30ರ ವೇಳೆಗೆ “ಲ್ಯಾಬ್‌ಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ …

Read More »

ರಾಸಲೀಲೆ ವಿಡಿಯೋ ವೈರಲ್ ಬೆನ್ನಲ್ಲೇ ತಲೆದಂಡ….

ರಾಜ್ಯದಲ್ಲಿ ಇಡೀ ಪೊಲೀಸ್ ಇಲಾಖೆಯ ತಲಿತಗ್ಗಿಸುವಂತಹ ಘಟನೆ ನಡೆದಿದ್ದು, ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ, ರಾಜ್ಯ ಸರ್ಕಾರ ಇದೀಗ ರಾಮಚಂದ್ರರಾವ್ ಅವರನ್ನು ಸಸ್ಪೆಂಡ್ ಮಾಡಿದೆ.ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್, ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ಬಂದ ಬಳಿಕ ಆರೋಪ ಸಾಬೀತಾದರೆ ಅವರನ್ನು ವಜಾ ಮಾಡಲಾಗುತ್ತೆ ಎಂದು ತಿಳಿಸಿದರು. ಡಿಜಿಪಿ ರಾಮಚಂದ್ರರಾವ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಕಚೇರಿಯಲ್ಲೇ ಮಹಿಳೆ ಜೊತೆಗಿನ …

Read More »

ಡಿಜಿಪಿ ಶ್ರೇಣಿಯ IPS ಅಧಿಕಾರಿ ರಾಸಲೀಲೆ…? ಕಚೇರಿಯಲ್ಲೇ ಮಹಿಳೆಯರ ಜತೆ ಅಸಭ್ಯ ವರ್ತನೆ ವಿಡಿಯೋ ವೈರಲ್…

ಕರ್ನಾಟಕದ ಡಿಜಿಪಿ ಶ್ರೇಣಿಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ರಾಸಲೀಲೆ ನಡೆದಿಸ ವಿಡಿಯೋ ವೈರಲ್‌ ಆಗಿದೆ. ಸಿಎಂ ಸಿದ್ದರಾಮಯ್ಯವರೆಗೂ ಪ್ರಕರಣ ತಲುಪಿದ್ದು, ಗಂಭೀರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ವೈರಲ್‌ ವಿಡಿಯೋಗಳಲ್ಲಿ ಅಧಿಕಾರಿಯು ಕಚೇರಿಯಲ್ಲಿದ್ದುಕೊಂಡು ಸಮವಸ್ತ್ರದಲ್ಲಿಯೇ ಮಹಿಳೆಯರನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ… ಕೇವಲ ಒಂದೇ ವಿಡಿಯೋ ಮಾತ್ರವಲ್ಲದೇ ಹಲವು ವಿಡಿಯೋಗಳಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೋರ್ಟ್‌ನಿಂದ ನಿರ್ಬಂಧ! ವಿಡಿಯೋ ವೈರಲ್‌ ಆದ ಅಧಿಕಾರಿಯು ಹೈಕೋರ್ಟ್‌ನಿಂದ ಮಾಧ್ಯಮಗಳ ಮೇಲೆ ಮಾನಹಾನಿಕರ …

Read More »

ಯುವಕನ ಮೇಲೆ ಗೂಂಡಾಗಿರಿ.. ಹಾಡಹಗಲೇ ಯುವಕನನ್ನ ಆಟೋದಲ್ಲಿ‌ ಅಪಹರಣ…

ಎಲ್ಲಿ ದ್ದೀರಿ ಪೋಲೀಸ್ ಅಧಿಕಾರಿಗಳೇ… ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ನಿಲ್ಲುವ ಲಕ್ಷಣವೇ ಕಾಣಿಸುತ್ತಿಲ್ಲ.ದಿನೇ ದಿನೇ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಸಾರ್ವಜನಿಕರ ಭದ್ರತೆ ಪ್ರಶ್ನಾರ್ಥಕವಾಗುತ್ತಿದೆ.ಹಾಡಹಗಲೇ ಯುವಕನ ಮೇಲೆ ಗೂಂಡಾಗಿರಿ ನಡೆಸಿ, ಆಟೋದಲ್ಲಿ ಅಪಹರಣ ಮಾಡಿರುವ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಣತಿ ದೂರದಲ್ಲೇ ನಡೆದಿದೆ.ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ಹಾಗೂ ಸಹೋದರರು ಯುವಕನ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಬಲವಂತವಾಗಿ ಆಟೋದಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ …

Read More »

15 ಕೆಜಿ 483 ಗ್ರಾಂ ಗಾಂಜಾ ವಶ : ಮುಂಬೈ ಮೂಲದ ಇಬ್ಬರು ಗಾಂಜಾ ಪೆಡ್ಲರ್‌ಗಳು ಬಂಧನ…

ಹುಬ್ಬಳ್ಳಿಯಲ್ಲಿ ಮುಂಬೈನಿಂದ ಹಾವೇರಿ ಕಡೆಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಸಬಾಪೇಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದ ತಂಡವು ಅರೆಸ್ಟ್ ಮಾಡಿ, ಬರೋಬ್ಬರಿ 15 ಕೆ. ಜಿ. ಗಾಂಜಾ ವಶಪಡಿಸಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಮುಂಬೈ ಮೂಲದ ಪರೀಜ್ ಜಹೀರ್ ಖಾನ್ ಹಾಗೂ ಸಲ್ಮಾನ್ ರೈಜಾಖಾನ್ ಎಂಬುವರನ್ನು ಬಂಧಿಸಲಾಗಿದೆ. ನಿನ್ನೆ ದಿನದಂದು ಹಾವೇರಿ ಜಿಲ್ಲೆಯ ಹಾನಗಲ್‌ ಕಡೆಗೆ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ಇಬ್ಬರು ಗಾಂಜಾ ಪೆಡ್ಲರ್‌ಗಳನ್ನು …

Read More »

ಈ ರೀತಿಯ ಪೊಲೀಸ್ ಮಹಾನಿರ್ದೇಶಕರ (DGP) ಹಾಗೂ ಸರ್ಕಾರದ ಆದೇಶಗಳಿಗೆ ಇಂದು ಕವಡೆ ಕಾಸಿನಷ್ಟು ಬೆಲೆಯೂ ಉಳಿದಿಲ್ಲ…?

ಡಿಜಿ ಆದೇಶಗಳನ್ನು ಗಾಳಿಗೆ ತೂರಿ, ಕೆಲ ಟ್ರಾಫಿಕ್ ಪೊಲೀಸರು ಖಡಕ್ ಅಧಿಕಾರಿಯ ಹೆಸರನ್ನೇ ಬಂಡವಾಳ ಮಾಡಿಕೊಂಡು ತಮ್ಮ ಆಟವನ್ನಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಜನರ ಮುಂದೆ ನಿಂತಿದೆ.ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನ ಸವಾರರ ಗೋಳು ಕೇಳೋರು ಯಾರು..? ಗಸ್ತು ತಿರುಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾದವರು ಮಾಡಿದ್ದೇನು ಗೊತ್ತಾ…? ಪೊಲೀಸ್ ಕಂಡ ಕಥೆಗಳು… ಕಡ್ಡಾಯವಾಗಿ ವಾರದ ರಜೆ ನೀಡಬೇಕು ಎಂಬ ಆದೇಶ ಬಂದು ಸಾಕಷ್ಟು ವರ್ಷಗಳೇ ಕಳೆದರೂ, ಅದು ಇಂದಿಗೂ ಕಾಗದದಲ್ಲೇ ಉಳಿದಿದೆ. …

Read More »

ಗುತ್ತಿಗೆದಾರ ವಿಠ್ಠಲ ರಾಠೋಡ್ ಕೊಲೆ: ಛತ್ತೀಸಗಡ ಮೂಲದ ಮೂವರ ಬಂಧನ…

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ತಿಕ್ಕೋಟಾದ ಕಟ್ಟಡ ಗುತ್ತಿಗೆದಾರ ವಿಠ್ಠಲ ರಾಠೋಡ್ ಅವರನ್ನು ಕೊಲೆ ಮಾಡಿರುವ ಆರೋಪದ ಮೇಲೆ ನವನಗರ ಠಾಣೆ ಪೊಲೀಸರು ಛತ್ತೀಸಗಡ ಮೂಲದ ಮೂವರು ಕಾರ್ಮಿಕರನ್ನು ಬಂಧಿಸಿದ್ದಾರೆ. ಛತ್ತೀಸಗಡದ ಕಬಿರ್ದಾಮ ಜಿಲ್ಲೆಯ ಜೋಗೀಪುರದ ಮೇಘವ್‌ ಸತನಾವಿ, ವಿಮಲಾ ಸತನಾವಿ ಮತ್ತು ಭಗವಾನದಾಸ ಸತನಾವಿ ಕೊಲೆ ಆರೋಪಿಗಳು. ‘ವಿಮಲಾ ಅವರು ವಿಠ್ಠಲ ಅವರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ಕೋಪಗೊಂಡ ಅವರ ಪತಿ ಮೇಘವ್‌ ಅವರು, ಮಗ …

Read More »

ಬೆಂಗಳೂರಿನಲ್ಲಿ ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ…

ಬೆಂಗಳೂರು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕೊಲೆ ನಡೆದಿದೆ. ಹಾಡಹಗಲೇ ಮಹಿಳೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರುಯಾಗಿರುವ ಘಟನೆ ನಡೆದಿದೆ…ಬೆಂಗಳೂರು ಉತ್ತರ ತಾಲೂಕಿನ ಕುದುರಗೆರೆ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಹಾಡಹಗಲೇ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 55 ವರ್ಷದ ದಾಕ್ಷಾಯಣಮ್ಮ ಕೊಲೆಯಾದ ಮಹಿಳೆ. ಘಟನ ಅಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ…

Read More »

ಹುಬ್ಬಳ್ಳಿಯಲ್ಲಿ ಘೋರ ಕೃತ್ಯ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಆರೋಪಿಗಳು ಅರೆಸ್ಟ್

ನಗರದಲ್ಲಿ ಅಸಹಾಯಕ ಮಹಿಳೆಯೊಬ್ಬಳ ಮೇಲೆ ಇಬ್ಬರು ನರಾಧಮರು ಸಾಮೂಹಿಕ ಅತ್ಯಾಚಾರ ಎಸಗಿ, ಆ ವಿಕೃತ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಅಮಾನವೀಯ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ 9ರಂದು ನಗರದ ಅಂಬೇಡ್ಕರ್ ಮೈದಾನದ ಸಮೀಪ ಆಟೋದಲ್ಲಿ ಮಹಿಳೆಯನ್ನು ಕರೆದೊಯ್ದ ಆರೋಪಿಗಳು, ಮದ್ಯಪಾನ ಮಾಡಿಸಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಈ ಘೋರ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣ …

Read More »