ಧಾರವಾಡ : ಅಕ್ಟೋಬರ ಮಾಹೆಯಲ್ಲಿ ಸುರಿದ ಅಕಾಲಿಕ, ನಿರಂತರ, ದಟ್ಟ ಮಳೆಯಿಂದಾಗಿ ಆಗಿರುವ ಬೆಳೆ ಹಾನಿಯ ಸಮೀಕ್ಷೆಯಲ್ಲಿ ಅನರ್ಹರು ಸೆರ್ಪಡೆ ಆಗದಂತೆ ಅಧಿಕಾರಿ, ಸಿಬ್ಬಂದಿಗಳು ಎಚ್ಚರಿಕೆ ವಹಿಸಬೇಕು ಮತ್ತು ಅರ್ಹ ಯಾವ ಒಬ್ಬ ರೈತರ ಜಮೀನುಗಳು ಬೆಳೆ ಹಾನಿ ಸಮೀಕ್ಷೆಯಿಂದ ಹೊರಗುಳಿಯದಂತೆ ಕಾಳಜಿವಹಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ಸಂಜೆ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲಾ …
Read More »516 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ : ಡಾ.ಆರ್.ಡಿ.ಪಾಟೀಲ್
ಕುಂದಗೋಳ : ಕಾಲು ಮತ್ತು ಬಾಯಿ ಬೇನೆ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲಾದ್ಯಂತ ಶೇ.50% 6ನೇ ಸುತ್ತಿನ ಸಾಧನೆಯಾಗಿದೆ, ಅದರಲ್ಲೂ ಕುಂದಗೋಳ ತಾಲೂಕು ಶೇ. 91% ಪ್ರತಿಶತ ಸಾಧನೆ ಮಾಡಿ ಮುಂದಿದೆ ಎಂದು ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ.ಆರ್.ಡಿ.ಪಾಟೀಲ್ ಹೇಳಿದರು. ಅವರು ಕುಂದಗೋಳ ಪಶು ಆಸ್ಪತ್ರೆಯಲ್ಲಿ ಮಾಧ್ಯಮ ಉದ್ದೇಶಿಸಿ ಮಾತನಾಡಿ ಇಂದು ಕುಂದಗೋಳ ತಾಲೂಕಿನ ಶಿರೂರು ಗ್ರಾಮಕ್ಕೆ ಲಸಿಕೆ ಕಾರ್ಯಕ್ರಮ ಪರಿಶೀಲನೆ ನಡೆಸಿ ಮಾತನಾಡಿ ಶಿರೂರುನಲ್ಲಿ ಒಟ್ಟು 548 ಜಾನುವಾರುಗಳಿದ್ದು, …
Read More »ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು ರಾತ್ರೋರಾತ್ರಿ ಬೆಂಕಿ
ಧಾರವಾಡ: ಮನೆಯ ಹಿಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು ರಾತ್ರೋರಾತ್ರಿ ಬೆಂಕಿ ಇಟ್ಟಿರುವ ಘಟನೆ ಧಾರವಾಡ ತಾಲೂಕಿನ ಹೊಸ ತೇಗೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಹೊಸತೇಗೂರು ಗ್ರಾಮದ ರಮೇಶ ಗಳಗಿ ಎಂಬುವವರಿಗೆ ಸೇರಿದ ಒಂದು ಕಾರು ಹಾಗೂ ಎರಡು ಬೈಕ್ಗಳಿಗೆ ಕಿಡಿಗೇಡಿಗಳು ರಾತ್ರೋರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಮೂರೂ ವಾಹನಗಳು ಸುಟ್ಟಿವೆ. ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂದು ವಾಹನಗಳ ಮಾಲೀಕರು ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಗರಗ …
Read More »ನ. 6 ರಿಂದ ಹತ್ತಿ ಖರೀದಿ ಪ್ರಾರಂಭ
ಅಣ್ಣಿಗೇರಿ: ಭಾರತೀಯ ಹತ್ತಿ ನಿಗಮದಿಂದ ನವಂಬರ್ 6 ರಿಂದ ಹತ್ತಿ ಖರೀದಿ ಮಾಡಲಾಗುವುದು ಎಂದು ಭಾರತೀಯ ಹತ್ತಿ ನಿಗಮದ ಅಧಿಕಾರಿ ಜಿ ರಮೇಶ್ ಅವರು ಹೇಳಿದರು. ಅವರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸರ್ಕಾರ ಪ್ರತಿ ಕ್ವಿಂಟಲ್ ಗೆ ರೂ. 7521 ನಿಗದಿ ಮಾಡಿದ್ದು, ರೈತರು ಉತಾರ ಹಾಗೂ ಮೊಬೈಲ್ ಸಂಖ್ಯೆ ಜೋಡಿನೆ ಆಗಿರುವ ಆಧಾರ್ ತರಬೇಕು ಹಾಗೂ ಒಂದು ವಾರದ ಒಳಗೆ ಖಾತೆಗೆ …
Read More »ಗ್ರಾಪಂ ನೂತನ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ
ನವಲಗುಂದ: ತಾಲೂಕಿನ ಅಳಗವಾಡಿ ಗ್ರಾಪಂ ನೂತನ ರಾಜೀವ ಗಾಂಧಿ ಸೇವಾ ಕೇಂದ್ರದ ಕಟ್ಟಡವನ್ನು ಶಾಸಕ ಎನ್. ಎಚ್. ಕೋರನರಡ್ಡಿ ಉದ್ಘಾಟಿಸಿದರು. ಈ ವೇಳೆ ತಹಶೀಲ್ದಾರ ಸುಧೀರ ಸಾವಕಾರ, ತಾಪಂ ಇಓ ಭಾಗ್ಯಶ್ರೀ ಜಾಗೀರದಾರ, ಲೋಕೋಪಯೋಗಿ ಎಇಇ ಎಸ್.ಎನ್. ಸಿದ್ದಾಪೂರ, ಪಿ.ಆರ್.ಇ.ಡಿ. ಎಇಇ ಎಂ.ಜಿ. ಶಿಂಧೆ, ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಸದಸ್ಯರುಗಳು ಇದ್ದರು.
Read More »ದಿವ್ಯಪ್ರಭು ನೇತೃತ್ವದಲ್ಲಿಂದು ಏರೋಡೋಮ್ ಕಾರ್ಯಾಗಾರ ಹಾಗೂ ಸಭೆ
ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಹಾಗೂ ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ಗುಣಮಟ್ಟದ ವಿಮಾನ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಸಾಕಷ್ಟು ಶ್ರಮವಹಿಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ವಿಶೇಷ ಸಭೆಯ ಮೂಲಕ ಮತ್ತಷ್ಟು ಕಾರ್ಯಪ್ರವೃತ್ತವಾಗಿದೆ.ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಎದುರಿಸುತ್ತಿರುವ ಪರಿಸರದ ಸವಾಲುಗಳ ಜಿಲ್ಲಾಧಿಕಾರಿ ದಿವ್ಯಪ್ರಭು ನೇತೃತ್ವದಲ್ಲಿಂದು ಏರೋಡೋಮ್ ಕಾರ್ಯಾಗಾರ ಹಾಗೂ ಸಭೆಯನ್ನು ನಡೆಸಲಾಗಿದೆ. ವಿಮಾನ ನಿಲ್ದಾಣದಲ್ಲಿನ ಪರಿಸರ ಸವಾಲುಗಳನ್ನು ಸಕ್ರಿಯವಾಗಿ ಎದುರಿಸುವ ಹಾಗೂ ಪ್ರಮುಖ ವಿಷಯಗಳ …
Read More »ಹೊಸದಾಗಿ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡುವ ಬಗ್ಗೆ ಚಿಂತನೆ: ಸಚಿವ ಆರ್.ಬಿ.ತಿಮ್ಮಾಪುರ
ಹುಬ್ಬಳ್ಳಿ: ಹೊಸದಾಗಿ ಮದ್ಯದಂಗಡಿಗಳಿಗೆ ಲೈಸನ್ಸ್ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಅಬಕಾರಿ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಮಾಡಿಲ್ಲ. ಸಹಜವಾಗಿ ಅಧಿಕಾರಿಗಳಿಗೆ ಬಡ್ತಿ ನೀಡಿದ್ದೇವೆ ಎಂದರು.
Read More »ವಿದ್ಯುತ್ ಕೇಬಲ್ ಗೆ ಸಿಕ್ಕಿಕೊಂಡಿದ್ದ ಗಾಳಿಪಟ ಬಿಡಿಸಲು ಹೋಗಿದ ಯುವಕನಿಗೆ ಶಾರ್ಟ್ ಸರ್ಕ್ಯೂಟ್
ಹುಬ್ಬಳ್ಳಿ: ವಿದ್ಯುತ್ ಕೇಬಲ್ ಗೆ ಸಿಕ್ಕಿಕೊಂಡಿದ್ದ ಗಾಳಿಪಟ ಬಿಡಿಸಲು ಹೋಗಿ ಶಾರ್ಟ್ ಸರ್ಕ್ಯೂಟ್ ನಿಂದ ಬಾಲಕ ಸಂಪೂರ್ಣ ಅಸ್ವಸ್ಥಗೊಂಡಿದ್ದಾನೆ. ಹುಬ್ಬಳ್ಳಿಯ ಸಂತೋಷ ನಗರದಲ್ಲಿ ಘಟನೆ ನಡೆದಿದ್ದು, ರಾಹುಲ್ ಬದ್ದಿ ಎಂಬುವ ಬಾಲಕನೇ ಅಪಘಾತಕ್ಕೆ ಒಳಗಾಗಿರುವ ಬಾಲಕನಾಗಿದ್ದಾನೆ. ವಿದ್ಯುತ್ ಕೇಬಲ್ ಗೆ ಗಾಳಿಪಟ ಸಿಲುಕಿಕೊಂಡಿದ್ದು, ಕಬ್ಬಿನಿಂದ ವಿದ್ಯುತ್ ಕೇಬಲ್ ಗೆ ಹೊಡೆದಿದ್ದು, ಇದರಿಂದ ಬಾಲಕನಿಗೆ ವಿದ್ಯುತ್ ತಗುಲಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ದೇಹ ಸುಟ್ಟ ಸ್ಥಿತಿಯಲ್ಲಿದ್ದು, ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
Read More »ಹಾವು ಕಚ್ಚಿ 5 ವರ್ಷದ ಹೆಣ್ಣು ಮಗು ಸಾವು
ಕುಂದಗೋಳ : ಹಾವು ಕಚ್ಚಿ 5 ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ಶಿಶುವಿನಹಾಳ ಗ್ರಾಮದಲ್ಲಿ ಮೃತಪಟ್ಟ ಘಟನೆ ನಿನ್ನೆ ಸೋಮವಾರ ನಡೆದಿದೆ. ಗುಡಗೇರಿ ಗ್ರಾಮದ ಮಗು ತನ್ನ ತಾಯಿಯ ತವರು ಮನೆ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮಕ್ಕೆ ತೆರಳಿದಾಗ ಹಾವು ಕಚ್ಚಿ ಸಾವನ್ನಪ್ಪಿದೆ. ಮಗು ಕಳೆದುಕೊಂಡ ಕುಟುಂಬಸ್ಥರು ರೋಧನೆ ಮುಗಿಲು ಮುಟ್ಟಿದ್ದು, ಗುಡಗೇರಿ ಗ್ರಾಮದಲ್ಲಿ ಯು.ಕೆ.ಜಿ ವ್ಯಾಸಂಗ ಮಾಡುತ್ತಿದ್ದ ಮಗುವೇ ಸಾವನ್ನಪ್ಪಿದೆ. ಶಿಗ್ಗಾಂವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ …
Read More »ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಹೈ ವೋಲ್ವೇಜ್ ಮೀಟಿಂಗ್
ಹುಬ್ಬಳ್ಳಿ: ರಾಜ್ಯದಲ್ಲಿ ಮೂರು ಉಪಚುಣಾವಣೆ ಹಿನ್ನೆಲೆ, ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದಲ್ಲಿ ಸಿಎಂ ನೋಟಿಸ್ ಜಾರಿ ಮಾಡಿದ ವಿಚಾರವಾಗಿ, ಹುಬ್ಬಳ್ಳಿಯ ಖಾಸಗಿ ಹೊಟೇಲ್ನಲ್ಲಿ ಮಂತ್ರಿ ಮಂಡಳ ಮತ್ತು ಶಾಸಕರು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಹೈ ವೋಲ್ವೇಜ್ ಮೀಟಿಂಗ್ ನಡೆಸಿದ್ದಾರೆ. ಈ ಗುಪ್ತ ಸಭೆಯಲ್ಲಿ ಸಚಿವರಾದ ಕೆ.ಜೆ ಜಾರ್ಜ್, ಎಚ್.ಕೆ ಪಾಟೀಲ್, ಸತೀಶ್ ಜಾರಕಿಹೂಳಿ, ಆರ್.ಬಿ ತಿಮ್ಮಾಪು, ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ಅಧಿಕಾರಿಗಳು ಸೇರಿದಂತೆ ಹಲವಾರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





