Breaking News

Shaikh BigTv

ಅನಾರೋಗ್ಯಕ್ಕೆ ತುತ್ತಾದ ರೋಗಿಗಳಿಗೆ ಸಂತೋಷ್ ಲಾಡ್ ಪೌಂಢಷನ್ ವತಿಯಿಂದ ಸಹಾಯ ಹಸ್ತ

ಕಲಘಟಗಿ : ಮುತ್ತಗಿ ಗ್ರಾಮದ ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕಾರ್ಯಕರ್ತರೊಂದಿಗೆ ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕರೆ ಮಾಡಿ ರೋಗಿಗಳ ಆರೋಗ್ಯದ ಬಗ್ಗೆ ವಿಚಾರಿಸಿ ಕೆಲವರೊಂದಿಗೆ ಮಾತನಾಡಿ ದೈರ್ಯಗೆಡದಂತೆ ತಿಳಿಸಿದರು. ಹಾಗೂ ಚಿಕಿತ್ಸೆ ಪಡೆಯುತ್ತಿರುವ ೪೪ ರೊಗಿಗಳಿಗೆ ಸಂತೋಷ್ ಲಾಡ್ ಪೌಂಢಷನ್ ವತಿಯಿಂದ ತಲಾ ಒಬ್ಬ ರೋಗಿಗೆ 2 ಸಾವಿರ ರೂಗಳಂತೆ ಸಹಾಯಧನವನ್ನು ವಿತರಣೆ ಮಾಡಲಾಯಿತು. ಈ …

Read More »

ಕಳ್ಳತನ ಪ್ರಕರಣ: ಗರಗ ಠಾಣೆ ಪೋಲಿಸ್ ರಿಂದ ಯುವಕನಿಗೆ ಮನಸೋಇಚ್ಛೆ ಥಳಿತ

ಧಾರವಾಡ: ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಮಾಯಕನನ್ನು ಕರೆದುಕೊಂಡು ಬಂದ ಗರಗ ಠಾಣೆ ಪಿಎಸ್‌ಐ ಹಾಗೂ ಕೆಲ ಪೊಲೀಸರು ಆ ಯುವಕನನ್ನು ಮನಸೋಇಚ್ಛೆ ಥಳಿಸಿದ್ದಾರೆ. ಗರಗ ಗ್ರಾಮದ ಕಾರ್ತಿಕ್ ಈಟಿ ಎಂಬ ಯುವಕನನ್ನು ಪೊಲೀಸರು ಥಳಿಸಿದ್ದಾರೆ. ಕಾರ್ತಿಕ್ ಎಂಬ ಈ ಯುವಕ ಗರಗ ಗ್ರಾಮದ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಗ್ಯಾಸ್ ಏಜೆನ್ಸಿಯಲ್ಲಿ ಮೂರು ತಿಂಗಳ ಹಿಂದೆ ಹಣ ಕಳ್ಳತನವಾಗಿತ್ತು. ಈ ಪ್ರಕರಣದ ವಿಚಾರಣೆಗೆಂದು ಕಾರ್ತಿಕ್ ಎಂಬ ಯುವಕನನ್ನು …

Read More »

ಕೆಲಸ ಮಾಡುತ್ತಿದ್ದ ಹೋಟೆಲ್ ಗೆ ಕನ್ನ ಹಾಕಿದ ಭೂಪ

ಹುಬ್ಬಳ್ಳಿ: ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಡುಗೆಯಾಳು, ಹೋಟೆಲ್ ನಲ್ಲಿನ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಶಾಂತಿನಗರದ ಟೇಸ್ಟಿ ಟಿಫಿನ್ಸ್ ನಲ್ಲಿ ಕಳ್ಳತನವಾಗಿದ್ದು, ಅಡುಗೆಯಾಳು ಶಂಭು ಮುದ್ದೆಗೌಡ‌ರ್ (28) ಎಂಬಾತನೇ ಚೋರ ಶಿಖಾಮಣಿ. ಇನ್ನು ಕಳೆದ ಒಂದು ವಾರದಿಂದ ಹೋಟೆಲ್ ನ್ನು ಬಂದ್ ಮಾಡಲಾಗಿತ್ತು. ಈ ವೇಳೆ ಅಡುಗೆಯಾಳು ಶಂಭು, ಹೋಟೆಲ್ ನಲ್ಲಿದ್ದ ಕುಕ್ಕರ್, ಗ್ಯಾಸ್, ಫ್ರಿಡ್ಜ್, ಹೆಂಚು, ಹೀಟ‌ರ್ …

Read More »

ಬಡತನದಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ಸೀಟು ಪಡೆದ ಯುವತಿಗೆ ಕಮಿಷನರ್ ಎನ್‌. ಶಶಿಕುಮಾ‌ರ್ ಸನ್ಮಾನ

ಹುಬ್ಬಳ್ಳಿ: ನಗರದ ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ಹಪ್ಪಾ ಬಾನು ಎಂಬ ಯುವತಿ ಬಡತನದಲ್ಲಿಯೂ ಕೂಡಾ ಸರ್ಕಾರಿ ಕೋಟಾದಡಿಯಲ್ಲಿ ಕೊಪ್ಪಳ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಪಡೆದುಕೊಂಡ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಕಮಿಷನ‌ರ್ ಎನ್‌. ಶಶಿಕುಮಾ‌ರ್ ಹಪ್ಪಾ ಬಾನುಗೆ ಸನ್ಮಾನ ಮಾಡಿದರು. ಹಪ್ಪಾ ಬಾನು ತಂದೆ ಬಡತನದಲ್ಲಿದ್ದರೂ ಕೂಡಾ ಮಗಳಿಗೆ ಉನ್ನತ ವ್ಯಾಸಂಗ ಕೊಡಿಸಬೇಕು ಎಂದು ಹಗಲು ರಾತ್ರಿ ದುಡಿದು ಮಗಳಿಗೆ ಉತ್ತಮ ವ್ಯಾಸಂಗ ಮಾಡಿಸಿದ್ದಾರೆ. ಮಗಳು ಕೂಡಾ ತಂದೆ- …

Read More »

ಶಿಗ್ಗಾಂವಿ ಕ್ಷೇತ್ರದಲ್ಲೇ ನಮಗೆ ಹೆಚ್ಚು ಮತ ಬಂದಿದೆ. ನಮ್ಮ ಅಭ್ಯರ್ಥಿ ಸಮರ್ಥರು ಇದ್ದಾರೆ: ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ 64 ಸಾವಿರ ಮತ ಪಡೆದಿದ್ದರು. ಆಗ ಬಸವರಾಜ ಬೊಮ್ಮಾಯಿ ಅವರು ಗೆದ್ದಿರಬಹುದು. ಆದರೆ ನಮ್ಮಅಭ್ಯರ್ಥಿ ಒಳ್ಳೆಯ ಫೈಟ್ ಕೊಟ್ಟಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲೇ ನಮಗೆ ಹೆಚ್ಚು ಮತ ಬಂದಿದೆ. ನಮ್ಮ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಸಮರ್ಥರಾಗಿದ್ದಾರೆ. ನಮಗೆ ಭರತ್ ಬೊಮ್ಮಾಯಿ ಸಮರ್ಥ …

Read More »

ಮುತ್ತಗಿ ಗ್ರಾಮದ ತಾಲೂಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಭೇಟಿ

ಕಲಘಟಗಿ: ಕಲಘಟಗಿ ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮದ ಎಪ್ಪತ್ತಕ್ಕೂ ಅಧಿಕ ಜನರು ವಾಂತಿಭೇದಿಯಿಂದ ಆಸ್ವಸ್ಥಗೊಂಡಿದ್ದು ಇಂದು ಜಿಲ್ಲಾಧಿಕಾರಿಗಳು ಮುತ್ತಗಿ ಗ್ರಾಮಕ್ಕೆ ಆಗಮಿಸಿ ಗ್ರಾಮದ ಒಣಿಗಳಲ್ಲಿ ಭೇಟಿ ನೀಡಿ ಸಾರ್ವಜನಿಕರಲ್ಲಿ ಮಾಹಿತಿ ಪಡೆದರು. ನಂತರ ಕಲಘಟಗಿ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾದ ರೋಗಿಗಳ ಅರೋಗ್ಯ ವಿಚಾರಿಸಿದರು.

Read More »

ಕರ್ತವ್ಯದಲ್ಲಿ ನಿರ್ಲಕ್ಷತೆ ವಹಿಸಿದ್ದರಿಂದ ಪಿಡಿಓ ಪ್ರವೀಣಕುಮಾರ ಗಣಿ ಅಮಾನತ್ತು

ಕಲಘಟಗಿ: ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಕೆರೆಗಳಿಂದ ಗ್ರಾಮಗಳಿಗೆ ಬರುತ್ತಿರುವ ನೀರು ಕಲುಷಿತಗೊಂಡಿರುವುದರಿಂದ, ಮುತ್ತಗಿ ಗ್ರಾಮದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು ಹಾಗೂ ಕುಡಿಯುವ ನೀರಿಗೆ ಕ್ಲೋರಿನೇಷನ್ ಮಾಡಿ ಸ್ವಚ್ಛ ಹಾಗೂ ಶುದ್ಧವಾದ ನೀರನ್ನು ಗ್ರಾಮದ ಸಾರ್ವಜನಿಕರಿಗೆ ಒದಗಿಸಲು ಮುತ್ತಗಿ ಗ್ರಾಮ ಪಂಚಾಯತಿಯ ಪಿಡಿಓ ಪ್ರವೀಣಕುಮಾರ ಗಣಿ ಇವರಿಗೆ ದೂರವಾಣಿ ಮುಖಾಂತರ ಸೂಚಿಸಲಾಗಿತ್ತು. ಶುದ್ಧವಾದ ಕುಡಿಯುವ ನೀರನ್ನು ಗ್ರಾಮ ಪಂಚಾಯತಿಯಿಂದ ಸರಬರಾಜು ಮಾಡದೇ ಇರುವುದರಿಂದ ಕಲುಷಿತ ನೀರನ್ನು ಸೇವಿಸಿ, ೪೪ …

Read More »

ಕುಮಾರಸ್ವಾಮಿ ಗೆ ವ್ಯಂಗ್ಯ ಮಾಡಿದ ಸಿಎಂ

ಹುಬ್ಬಳ್ಳಿ: ಉಪಚುನಾವಣೆಗೆ ಬಹಳಷ್ಟು ತಯಾರಿ ಮಾಡಿದ್ದೇವೆ. ಮೂರು ಕ್ಷೇತ್ರದಲ್ಲಿ ಜನ ಆಶೀರ್ವಾದ ಮಾಡ್ತಾರೆ. ಕುಮಾರಸ್ವಾಮಿ ಅವರ ಭಾವನಾತ್ಮಕವಾಗಿ ಮಾತನಾಡೋದು ಅಳೋದನ್ನ ನೋಡಿ ಜನರಿಗೆ ಸಾಕಾಗಿದೆ. ಇದನ್ನೆಲ್ಲ ಜನ ನೋಡಲ್ಲ, ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಕುರಿತು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಶಿಗ್ಗಾವಿಯಲ್ಲಿ ಬಂಡಾಯವಾಗಿ ಅಜ್ಜಂಪೀರ್ ಖಾದ್ರಿ ನಾಮಪತ್ರ ಸಲ್ಲಿಸಿದ್ದಾರೆ. ಪಠಾಣ್ ಅವರಿಗೆ ಈಗಾಗಲೇ ಟಿಕೆಟ್ ಕೊಟ್ಟಿದ್ದೇವೆ. ಇಬ್ಬರಿಗೆ ಕೊಡಲು ಆಗುವುದಿಲ್ಲ ಎಂದರು.

Read More »

ಹುಬ್ಬಳ್ಳಿ ಧಾರವಾಡ ಕಮಿಷನ‌ರ್ ಎನ್ ಶಶಿಕುಮಾರ್ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಅವಳಿ ನಗರದ ಪೊಲೀಸ್ ಕಮಿಷನ‌ರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ ಶಶಿಕುಮಾರ್ ಅವರ ಆರೋಗ್ಯದಲ್ಲಿ ಧಿಡೀರ್ ಏರುಪೇರಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಕಳೆದ ಮೂರು ತಿಂಗಳಿಂದ ಅವಳಿ ನಗರದ ಕಮಿಷನ‌ರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಮಿಷನ‌ರ್ ಎನ್ ಶಶಿಕುಮಾ‌ರ್ ಅವಳಿ ನಗರದಲ್ಲಿರುವ ಎಲ್ಲ ಪ್ರದೇಶಗಳಿಗೂ ಕೂಡಾ ಕಾಲ್ನಡಿಗೆಯಲ್ಲಿ ಪ್ರತಿದಿನ ನಾಲ್ಕರಿಂದ ಐದು ಕಿ.ಲೋ ಮೀಟ‌ರ್ ಓಡಾಡಿ …

Read More »

ಪತ್ರಕರ್ತ ಬಸವರಾಜ ಎಸ್‌ ದೀಪಾವಳಿ ಅವರಿಗೆ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕ ಪ್ರಶಸ್ತಿ ಪ್ರಧಾನ

ಕುಂದಗೋಳ: ಪತ್ರಕರ್ತ ಬಸವರಾಜ ಎಸ್‌ ದೀಪಾವಳಿ ಅವರಿಗೆ ಸವಾಯಿ ಗಂಧರ್ವ ಸಭಾ ಭವನದಲ್ಲಿ ಇತ್ತಿಚೆಗೆ ನಡೆದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ತಾಲೂಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಯರೇಬೂದಿಹಾಳ ಗ್ರಾಮದ ವಾಲ್ಮೀಕಿ ಸಮಾಜದ ಮತ್ತು ಕಾರ್ಯನಿರತ ಪತ್ರಕರ್ತ ಸಂಘದ ಸಹ ಕಾರ್ಯದರ್ಶಿಗಳಾದ ಬಸವರಾಜ ಎಸ್‌. ದೀಪಾವಳಿ ಅವರಿಗೆ ತಾಲೂಕ ದಂಡಾಧಿಕಾರಿ ರಾಜು ಮಾವರಕರ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ …

Read More »