Breaking News

ಕಳ್ಳತನ ಪ್ರಕರಣ: ಗರಗ ಠಾಣೆ ಪೋಲಿಸ್ ರಿಂದ ಯುವಕನಿಗೆ ಮನಸೋಇಚ್ಛೆ ಥಳಿತ

ಧಾರವಾಡ: ಕಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಮಾಯಕನನ್ನು ಕರೆದುಕೊಂಡು ಬಂದ ಗರಗ ಠಾಣೆ ಪಿಎಸ್‌ಐ ಹಾಗೂ ಕೆಲ ಪೊಲೀಸರು ಆ ಯುವಕನನ್ನು ಮನಸೋಇಚ್ಛೆ ಥಳಿಸಿದ್ದಾರೆ.

ಗರಗ ಗ್ರಾಮದ ಕಾರ್ತಿಕ್ ಈಟಿ ಎಂಬ ಯುವಕನನ್ನು ಪೊಲೀಸರು ಥಳಿಸಿದ್ದಾರೆ. ಕಾರ್ತಿಕ್ ಎಂಬ ಈ ಯುವಕ ಗರಗ ಗ್ರಾಮದ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಗ್ಯಾಸ್ ಏಜೆನ್ಸಿಯಲ್ಲಿ ಮೂರು ತಿಂಗಳ ಹಿಂದೆ ಹಣ ಕಳ್ಳತನವಾಗಿತ್ತು. ಈ ಪ್ರಕರಣದ ವಿಚಾರಣೆಗೆಂದು ಕಾರ್ತಿಕ್ ಎಂಬ ಯುವಕನನ್ನು ಯಾರಿಗೂ ಹೇಳದೇ ಕೇಳದೇ ವಿಚಾರಣೆಗೆಂದು ಕರೆದುಕೊಂಡು ಹೋದ ಗರಗ ಠಾಣೆ ಪಿಎಸ್‌ಐ ಹಾಗೂ ಕೆಲ ಪೊಲೀಸರು ಶಿಂಗನಹಳ್ಳಿ ಓಪಿಗೆ ಕರೆದುಕೊಂಡು ಹೋಗಿ ಅಲ್ಲಿ ಆತನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.

“ಕಳವು ಮಾಡಿದ್ದನ್ನು ಒಪ್ಪಿಕೋ” ಎಂದು ಆ ಅಮಾಯಕ ಯುವಕನನ್ನು ಪೊಲೀಸರು ಥಳಿಸಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಪೊಲೀಸರು ಆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಕೈಕಾಲು, ತೊಡೆಗೆ ಬಲವಾಗಿ ಹಲ್ಲೆ ನಡೆಸಿದ್ದಾರೆ. ನಂತರ ಗ್ರಾಮದ ಕೆಲವರಿಗೆ ಈ ವಿಷಯ ಗೊತ್ತಾದ ತಕ್ಷಣ ಆ ಯುವಕನನ್ನು ಬಿಡಿಸಿಕೊಂಡು ಬಂದು ಧಾರವಾಡದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಮಾಜಿ ಶಾಸಕ ಅಮೃತ ದೇಸಾಯಿ ಕೂಡ ಭೇಟಿ ನೀಡಿ ಆ ಯುವಕನ ಆರೋಗ್ಯ ವಿಚಾರಿಸಿದ್ದಾರೆ.

ಯುವಕನ ಮೇಲೆ ಮನಸೋಇಚ್ಛೆ ಥಳಿಸಿದ ನಂತರ ಪೊಲೀಸರು ಈ ವಿಷಯ ಯಾರಿಗೂ ಹೇಳಬಾರದು. ಹೇಳಿದರೆ ನಿನ್ನ ಮೇಲೆ ರೇಪ್ ಕೇಸ್ ಕೂಡ ಹಾಕುತ್ತೇವೆ ಎಂದು ಪೊಲೀಸರು ಬೆದರಿಕೆ ಹಾಕಿದ್ದಾರೆ. ಈ ವಿಷಯವನ್ನು ಈಗಾಗಲೇ ಎಸ್‌ಪಿ ಅವರ ಗಮನಕ್ಕೆ ತಂದಿದ್ದೇವೆ. ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮ ಆಗಬೇಕು ಎಂದು ಮಾಜಿ ಶಾಸಕ ಅಮೃತ ದೇಸಾಯಿ ಆಗ್ರಹಿಸಿದ್ದಾರೆ.

Share News

About Shaikh BigTv

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *