ಹುಬ್ಬಳ್ಳಿ: ಚೆನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಟಿಕೆಟ್ ಕೊಡುವ ವಿಚಾರ ಈಗಾಗಲೇ ಕುಮಾರಸ್ವಾಮಿ ಅವರು ಕೂಡಾ ಕೇಂದ್ರದ ವರಿಷ್ಠರ ವಿಚಾರಕ್ಕೇ ಬಿಟ್ಟ ವಿಚಾರ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ನಾನು ಕೂಡಾ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆಯನ್ನು ಮಾಡುತ್ತೇನೆ. ಪಕ್ಷದ ವರಿಷ್ಠರು ಎಲ್ಲರೂ ಸೇರಿ ಚರ್ಚೆಯನ್ನು ಮಾಡಿ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಇನ್ನೆರಡು ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.
Read More »ಗ್ರಾಮ ಪಂಚಾಯತ್ ನೌಕರರ ಸಭೆ
ಧಾರವಾಡ: ಧಾರವಾಡ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತ್ ನೌಕರರ ಸಮಾಲೋಚನೆ ಸಭೆ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 20 ರಂದು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಸಭೆಗೆ ಜಿಲ್ಲೆ ಎಲ್ಲಾ ಗ್ರಾಮ ಪಂಚಾಯತ್ ನೌಕರರು ಭಾಗವಹಿಸುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Read More »ಮಳೆಯಿಂದ ಮನೆ ಕುಸಿತ: ಅತ್ತೆ, ಸೊಸೆ ತೀವ್ರವಾಗಿ ಗಾಯ
ನವಲಗುಂದ: ಮಳೆಯಿಂದ ಮನೆಯೊಂದು ಕುಸಿದು ಅತ್ತೆ, ಸೊಸೆ ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ. ಹನಸಿ ಗ್ರಾಮದ ಬಾಪುಗೌಡ ಬಸನಗೌಡ ಪಾಟೀಲ ಎಂಬುವರ ಮನೆ ಇದಾಗಿದ್ದು, ಮನೆ ಬೀಳುತ್ತಿದ್ದಂತೆಯೇ ಮನೆಯ ಅಡಿಯಲ್ಲಿ ಸಿಲುಕಿದ ಅತ್ತೆ ಮಂಗಳಾ ಪಾಟೀಲ (55) ಹಾಗೂ ಸೊಸೆ ಸುವರ್ಣ ಪಾಟೀಲ (37) ಅವರನ್ನು ಗ್ರಾಮಸ್ಥರೇ ರಕ್ಷಣೆ ಮಾಡಿ, ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನು ಮಂಗಳಾ ಅವರ ಎಡಗಾಲಿಗೆ ತೀವ್ರ …
Read More »ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ರಚನೆ ಮಾಡುವಾಗ ವಿಷಯವಾರು ಶಿಕ್ಷಕರ ಅಭಿಪ್ರಾಯಗಳಿಗೆ ಸಂಪೂರ್ಣ ಅವಕಾಶ ನೀಡಬೇಕು : ಬಸವರಾಜ ಗುರಿಕಾರ
ಧಾರವಾಡ: ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ರಚನೆ ಮಾಡುವಾಗ ವಿಷಯವಾರು ಶಿಕ್ಷಕರ ಅಭಿಪ್ರಾಯಗಳಿಗೆ ಸಂಪೂರ್ಣ ಅವಕಾಶ ನೀಡಬೇಕೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೆ ಅಖಿಲ ಭಾರತ ಶಿಕ್ಷಕರ ಪೆಡರೇಷನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮನವಿ ಮಾಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಏಕರೂಪವಾಗಿರುವುದಿಲ್ಲ, ಪ್ರತಿ ವಿದ್ಯಾರ್ಥಿಗೂ ಭಿನ್ನವಾಗಿರುತ್ತದೆ. ಕಲಿಕಾ ಸಾಮರ್ಥ್ಯ ಹೆಚ್ಚು ಇರುವ ವಿದ್ಯಾರ್ಥಿಗಳು, ಸಾಧಾರಣ ಕಲಿಕಾ ಸಾಮರ್ಥ್ಯ ಇರುವ ವಿದ್ಯಾರ್ಥಿಗಳು …
Read More »ಬೆಳೆವಿಮೆ ಹಾಗೂ ಪರಿಹಾರವನ್ನು ಸಕಾಲದಲ್ಲಿ ಒದಗಿಸುವಂತೆ ಆಗ್ರಹಿಸಿ ಮನವಿ ಸಲ್ಲಿಕೆ
ನವಲಗುಂದ: ಬೆಣ್ಣೆ ಹಳ್ಳ ಹಾಗೂ ತುಪ್ಪರಿಹಳ್ಳ ಪ್ರವಾಹದಿಂದ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ಬೆಳೆವಿಮೆ ಹಾಗೂ ಪರಿಹಾರವನ್ನು ಸಕಾಲದಲ್ಲಿ ಒದಗಿಸುವಂತೆ ಆಗ್ರಹಿಸಿ ಭಾಜಪಾ ತಾಲೂಕಾಧ್ಯಕ್ಷ ಗಂಗಪ್ಪ ಮನಮಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಇಂದು ಮೊರಬ ಗ್ರಾಮಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಗಂಗಪ್ಪ ನವಲಗುಂದ ಗ್ರಾಮೀಣ ಭಾಗದ ರೈತರಿಗೆ ಪ್ರವಾಹದಿಂದಾಗಿ ಸಾಕಷ್ಟು ನಷ್ಟವಾಗಿದೆ. ರಸ್ತೆಗಳು ಸಂಪರ್ಕ ಕಡಿದುಕೊಂಡಿರುವದರಿಂದ ಸಂಚಾರ ವ್ಯವಸ್ಥೆ ಅಸ್ಥವ್ಯಸ್ಥಗೊಂಡಿರುವದರಿಂದ ಪರಿಸ್ಥಿತಿಯನ್ನು …
Read More »ಮುಡಾ ನಿವೇಶನ ಹಂಚಿಕೆಯಲ್ಲಿ 4500 ಕೋಟಿ ರೂಪಾಯಿಯಷ್ಟು ಅವ್ಯವಹಾರವಾಗಿದೆ: ಬಿ.ವೈ. ವಿಜಯೇಂದ್ರ
ಹುಬ್ಬಳ್ಳಿ: ಮೈಸೂರಿನ ಮುಡಾ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿಯನ್ನು ನಾವು ನಿರೀಕ್ಷೆ ಮಾಡಿದ್ವಿ. ಈಗ ಅದು ನಿಜವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎ1 ಆರೋಪಿ ಆಗಿದ್ದಾರೆ. ಇದರ ಸಂಪೂರ್ಣ ಜವಾಬ್ದಾರಿ ಮುಖ್ಯಮಂತ್ರಿ ಹೊರಬೇಕು. ಹೀಗಾಗಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲೇಬೇಕು. ಮುಡಾ ನಿವೇಶನ ಹಂಚಿಕೆಯಲ್ಲಿ 4500 ಕೋಟಿ ರೂಪಾಯಿಯಷ್ಟು ಅವ್ಯವಹಾರವಾಗಿದೆ …
Read More »ಮುಡಾದಲ್ಲಿ ಸಾವಿರಾರು ಕೋಟಿಯ ಹಗರಣವಿದೆ : ಬೆಲ್ಲದ್
ಧಾರವಾಡ: ಮುಡಾ ಹಗರಣದ ಎ4 ಆರೋಪಿ ದೇವರಾಜು ಅವರ ಮೈಸೂರು ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯ ಕಂಡ ಅತ್ಯಂತ ದೊಡ್ಡ ಹಗರಣ ಈ ಮುಡಾ ಹಗರಣ. ಇಲ್ಲಿ ಇಡಿ ದಾಳಿ ನಿರೀಕ್ಷಿತವಾಗಿತ್ತು. ಮುಡಾದಲ್ಲಿ ಸಾವಿರಾರು ಕೋಟಿಯ ಹಗರಣವಿದೆ. ಸಿಎಂ ಬೇರೆ ಬೇರೆ ದಾರಿಯಿಂದ ಕಾರಣ ಹೇಳಿ …
Read More »ಎಸ್.ಡಬ್ಲ್ಯು.ಆರ್.ಎಂ.ಯು ಚುನಾವಣೆಗೆ ನಾಮಪತ್ರ ಸಲ್ಲಿಕ್ಕೆ
ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ನಡೆಯಲಿರುವ ಟ್ರೇಡ್ ಯೂನಿಯನ್ ಚುನಾವಣೆಗೆ ಎಸ್.ಡಬ್ಲ್ಯು.ಆರ್.ಎಂ.ಯು (ನೈಋತ್ಯ ರೈಲ್ವೆ ಮದ್ದೂರ ಯುನಿಯನ್) ಸಂಘಟನೆಯ ವತಿಯಿಂದ ಎ.ಎಂ.ಡಿಕ್ರೂಜ್ ಬಹುದೊಡ್ಡ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದರು. ಡಿಸೆಂಬರ್ 4ರಿಂದ 6ರವರೆಗೆ ನಡೆಯಲಿರುವ ರೈಲ್ವೆ ಇಲಾಖೆಯ ಟ್ರೇಡ್ ಯೂನಿಯನ್ ಚುನಾವಣೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರೈಲು ಸೌಧದಲ್ಲಿ ಶಕ್ತಿ ಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದರು. ಹುಬ್ಬಳ್ಳಿಯ ಕಚೇರಿಯಿಂದ ಬಹುದೊಡ್ಡ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆಯ ಮೆರವಣಿಗೆ …
Read More »ಹೆಣ್ಣು ಮಗುವಿನ ಮೇಲೆ ತಾತ್ಸಾರ ಮತ್ತು ತಿರಸ್ಕಾರದ ಭಾವನೆ ಬೇಡ: ಪರಶುರಾಮ ಎಫ್. ದೊಡ್ಡಮನಿ
ಧಾರವಾಡ : ಸಮಾಜದಲ್ಲಿ ಮೂಢನಂಬಿಕೆ ಮತ್ತು ಮೌಢ್ಯತೆಯ ತಪ್ಪು ಕಲ್ಪನೆಗಳಿಂದ ಹೆಣ್ಣು ಮಗುವಿನ ಮೇಲೆ ತಾತ್ಸಾರ ಮತ್ತು ತಿರಸ್ಕಾರದ ಭಾವನೆ ಬೇಡವೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ …
Read More »ಲಾಡ್ಗೆ ಟಕ್ಕರ್ ಕೊಟ್ಟ ಬೆಲ್ಲದ್
ಹುಬ್ಬಳ್ಳಿ : ಕಳೆದ 16 ತಿಂಗಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಬ್ಬಳ್ಳಿ ಧಾರವಾಡಕ್ಕೆ ಒಂದೇ ಒಂದು ಪ್ರಾಜೆಕ್ಟ್ ತಂದಿಲ್ಲ. ಮೋದಿ ಅವರ ಬಗ್ಗೆ ಮತ್ತು ಬೇರೆ ವಿಚಾರದ ಬಗ್ಗೆ ಮಾತನಾಡೊದನ್ನ ಬಿಟ್ಟು ಅನುದಾನ ತನ್ನಿ ಎಂದು ಸಂತೋಷ ಲಾಡ್ಗೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಟಕ್ಕರ್ ಕೊಟ್ಟರು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





