Breaking News

bigtvnews22

ತುಂಗಭದ್ರಾ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಗಂಗಾವತಿ ಕಂಪ್ಲಿ ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ

ಬಳ್ಳಾರಿ: ತುಂಗಭದ್ರಾ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಗಂಗಾವತಿ ಕಂಪ್ಲಿ ಸೇತುವೆ ಮುಳುಗಡೆ ಹಂತ ತಲುಪಿದೆ. ಸೇತುವೆ ಮೇಲೆ ವಾಹನ ಸವಾರರಿಗೆ ನಿರ್ಭಂದ ಏರಲಾಗಿದ್ದು, ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಪ್ರವೇಶ ನಿರ್ಭಂದಿಸಿದ್ದಾರೆ. ಕಂಪ್ಲಿ ತಾಲೂಕಿನ ಕಂಪ್ಲಿ ಕೋಟೆ ಬಳಿಯ ಕಂಪ್ಲಿ ಸೇತುವೆ ಇದಾಗಿದ್ದು, ಈ ವರ್ಷ ಐದನೆ ಬಾರಿಗೆ ಸೇತುವೆ ಮೇಲೆ ಸಂಚಾರ ನಿರ್ಭಂದ ವಿಧಿಸಲಾಗಿದೆ. ನದಿಗೆ ಹೆಚ್ಚಿನ ಪ್ರಮಾಣದ ನೀರು ಇದ್ದು, ಪ್ರತಿ ಬಾರಿ …

Read More »

ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಗದಗ: ವಿಜಯನಗರ ಜಿಲ್ಲೆ ಹೂವಿನ ಹಡಗಲಿ ವ್ಯಾಪ್ತಿಯ ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕ ದಿನೇಶ್ ಮೃತದೇಹ‌ ಇಂದು ತೀರದಲ್ಲಿ ಪತ್ತೆಯಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಮೇಲಿಂದ ತುಂಗಭದ್ರಾ ನದಿಗೆ ಹಾರಿ ದಿನೇಶ್ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ವರದಿ ತಿಳಿಸಿದೆ. ಮುಂಡರಗಿ ತಾಲೂಕು ಮುರಡಿ ತಾಂಡಾದ ಯುವಕ ದಿನೇಶ ಸಾಲದ ಸುಳಿಗೆ ಸಿಲುಕಿದ್ದು, ಇದರಿಂದಾಗಿ ಅಕ್ಟೋಬರ್ 20 (ಭಾನುವಾರ)ದಂದು ನದಿಗೆ ಹಾರಿದ್ದ. ನೀರಿನ ಸೆಳೆತ ಹೆಚ್ಚಾಗಿದ್ದರಿಂದ …

Read More »

ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಇನ್ಮುಂದೆ ಆಹಾರ ಕಿಟ್ ವಿತರಣೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದ್ದು, ಅದೇ ಇನ್ಮುಂದೆ ಆಹಾರ ಕಿಟ್ ವಿತರಣೆ ಮಾಡಲು ಮುಂದಾಗಿರುವುದಾಗಿ ಆಹಾರ ಸಚಿವ ವಿ.ಮುನಿಯಪ್ಪ ಸುಳಿವು ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ 5 ಕೆಜಿ ಅಕ್ಕಿಯ ಬದಲಾಗಿ ಡಿಬಿಟಿ ಮೂಲಕ ಹಣವನ್ನು ಪಾವತಿ ಮಾಡಲಾಗುತ್ತಿದೆ. ಇನ್ಮುಂದೆ ಇದರ ಬದಲಿಗೆ ಎಣ್ಣೆ, ಬೇಳೆಯನ್ನು ಒಳಗೊಂಡಂತೆ ಆಹಾರ ಕಿಟ್ ವಿತರಣೆ ಮಾಡೋದಕ್ಕೆ ಚಿಂತನೆ …

Read More »

ಶಿವಮೊಗ್ಗದಲ್ಲಿ ಮೊಟ್ಟಮೊದಲ ರಾಜ್ಯ ಮಟ್ಟದ ಬಾಕ್ಸಿಂಗ್ ಕ್ರೀಡಾಕೂಟ ಆಯೋಜನೆ

ಶಿವಮೊಗ್ಗ: ನಗರದಲ್ಲಿ ಮೊಟ್ಟಮೊದಲ ಬಾರಿಗೆ ಶಾಲಾ ಶಿಕ್ಷಣ(ಪದವಿ ಪೂರ್ವ) ಇಲಾಖೆಯು 2024-25 ನೇ ಸಾಲಿನ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬಾಕ್ಸಿಂಗ್ ಕ್ರೀಡಾಕೂಟವನ್ನು ದಿನಾಂಕ 21 ಮತ್ತು 22 ರಂದು ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದೆ. ಇದಕ್ಕೆ ಅವಶ್ಯಕತೆ ಇರುವ ಬಾಕ್ಸಿಂಗ್ ರಿಂಗ್ ಅನ್ನು ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್(ಕಾಬಾ) ಬೆಂಗಳೂರು ಇವರು ಶಿವಮೊಗ್ಗ ಜಿಲ್ಲೆಗೆ ಒದಗಿಸಿರುತ್ತಾರೆ. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಅತ್ಯಾಧುನಿಕ ಅಂತರಾಷ್ಟ್ರೀಯ ಮಾದರಿಯ ಬಾಕ್ಸಿಂಗ್ ರಿಂಗ್ ಇದಾಗಿರುತ್ತದೆ. …

Read More »

ಅನಧಿಕೃತ ಹೋಮ್ ಸ್ಟೇಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಚಿವ ಮಂಕಾಳ ವೈದ್ಯ ಸೂಚನೆ

ಕಾರವಾರ: ಜಿಲ್ಲೆಯ ಎಲ್ಲ ಹೋಮ್ ಸ್ಟೇಗಳ ಪರಿಶೀಲನೆ ನಡೆಸಿ, ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿರುವ ಬಗ್ಗೆ ವರದಿ ಸಲ್ಲಿಸಬೇಕು ಅನಧಿಕೃತವಾಗಿರುವ ಹೋಮ್ ಸ್ಟೇಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಅನಧಿಕೃತ ಹೋಮ್ ಸ್ಟೇಗಳ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯ ಕಡಲತೀರಗಳಲ್ಲಿ ಪ್ರವಾಸಿಗರ …

Read More »

ವಿಜಯಪುರದಲ್ಲಿ ಮೊದಲ ಎದೆಹಾಲು ಬ್ಯಾಂಕ್ ಸ್ಥಾಪನೆ

ವಿಜಯಪುರ: ತಾಯಿಯ ಹಾಲಿನ ಕೊರತೆಯಿಂದ ಬಳಲುವ ನವಜಾತ ಶಿಶುಗಳಿಗಾಗಿ ಇದೀಗ ಎದೆಹಾಲಿನ ಬ್ಯಾಂಕ್‌ ಓಪನ್‌ ಆಗಿದೆ ಮಕ್ಕಳಿಗೆ ಮೊದಲ ಅಮೃತ ನೀಡುವ ಬ್ಯಾಂಕ್‌ ಇದಾಗಿದ್ದು, ಎಷ್ಟೋ ಕಂದಮ್ಮಗಳ ಆರೋಗ್ಯಕ್ಕಾಗಿ ಬ್ಯಾಂಕ್‌ ಸಹಾಯ ಮಾಡಲಿದೆ. ವಿಜಯಪುರ ಸರ್ಕಾರಿ ಆಸ್ಪತ್ರೆಯು ಉತ್ತರ ಕರ್ನಾಟಕದಲ್ಲಿ ಮೊದಲ ಎದೆಹಾಲು ಬ್ಯಾಂಕ್ ಸ್ಥಾಪಿಸಲು ಮುಂದಾಗಿದೆ. ಇದು ವಾರ್ಷಿಕವಾಗಿ 2 ಸಾವಿರ ನವಜಾತ ಶಿಶುಗಳಿಗೆ ಸೇವೆ ಸಲ್ಲಿಸಲಿದೆ. ಸುಶೇನಾ ಹೆಲ್ತ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ ಸಂತೋಷ್ ಕರ್ಲೆಟ್ಟಿ …

Read More »

ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸಮನ್ವಯತೆ, ಸಮಯಪ್ರಜ್ಞ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಸಮಸ್ಯೆಗೆ ಸ್ಪಂದನೆ ಹಾಗೂ ಹೊಣೆಗಾರಿಕೆ ಈ ಪಂಚ ಸೂತ್ರ ಅಳವಡಿಸಿಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಸಲಹೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಇಲಾಖೆ, ಖಾಸಗಿ ಹೋಟೆಲ್​ನಲ್ಲಿ ಇಂದು ಆಯೋಜಿಸಲಾಗಿದ್ದ ಪಂಚಾಯತ್​ರಾಜ್​ ಅಧಿಕಾರಿಗಳ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ಜತೆ ಚೆನ್ನಾಗಿ ಸಮನ್ವಯತೆ ಹೊಂದಿದ್ದಾರೆ ಆದರೆ, ಅಧಿಕಾರಿಗಳ …

Read More »

ಕಾಡಾನೆಗಳ ಗುಂಪಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಪೆಟ್ರೋಲ್ ರೈಲು

ಕೊಲಂಬೊ: ಲಕ್ಷಗಟ್ಟಲೆ ಪೆಟ್ರೋಲ್ ಸಾಗಿಸುತ್ತಿದ್ದ ರೈಲು ಭಾರಿ ಅಪಘಾತಕ್ಕೀಡಾಗಿದ್ದು, ಕೊಲಂಬೊದಿಂದ ಬ್ಯಾಟಿಕಲೋವಾಕ್ಕೆ ತೆರಳುತ್ತಿದ್ದ ರೈಲು ಮಿನ್ನೇರಿಯಾ ರೈಲು ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ. ಹಳಿಗಳ ಮೇಲೆ ಆನೆಗಳ ಗುಂಪನ್ನು ನೋಡಿದ ಲೊಕೊ ಪೈಲಟ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದರು. ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿವೆ ಎರಡು ಬೋಗಿಗಳು ಸಂಪೂರ್ಣವಾಗಿ ಪೆಟ್ರೋಲ್ ಸೋರಿಕೆಯಾಗಿ ನೆಲಕ್ಕೆ ಬಿದ್ದವು. ಉಳಿದ ಬೋಗಿಗಳಿಂದ ಇಂಧನ ತೆಗೆಯಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ಅವಘಡದಲ್ಲಿ ಎರಡು ಆನೆಗಳು ಸಾವನ್ನಪ್ಪಿದ್ದು, …

Read More »

ನೀತಿ ಸಂಹಿತೆ ಉಲ್ಲಂಘಿಸಿ ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ಘೋಷಣೆ: ಸಿ.ಟಿ ರವಿ ಆರೋಪ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅವರ ನೆನಪಿನಾರ್ಥ ರಾಜ್ಯದ ಎಲ್ಲಾ ಪರಿಶಿಷ್ಟ ಪಂಗಡ ವಸತಿ ಶಾಲೆಗಳು ಮತ್ತು ರಾಯಚೂರು ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಹೆಸರಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಹನೀಯರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ರಾಜನಹಳ್ಳಿ ವಾಲ್ಮೀಕಿ ಸಮುದಾಯ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ, ರಾಯಚೂರು ವಿವಿಗೆ ವಾಲ್ಮೀಕಿ ಹೆಸರಿಡಬೇಕು. ಹಾವನೂರು ಹೆಸರಲ್ಲಿ ಪ್ರಶಸ್ತಿ …

Read More »

ಸತತ ಸುರಿಯುತ್ತಿರುವ ಮಳೆಯಿಂದಾಗಿ ಕೊಳೆಯುತ್ತಿರುವ ಈರುಳ್ಳಿ ಬೆಳೆ: ಸಂಕಷ್ಟಕ್ಕೆ ಸಿಲುಕಿದ ರೈತರು

ಅಳವಂಡಿ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿ-ಜಿಟಿ ಮಳೆಗೆ ಸಮೀಪದ ಹನಕುಂಟಿ ಗ್ರಾಮದ ರೈತರ ಜಮೀನಿಗಳಲ್ಲಿ ಕಟಾವು ಮಾಡಿರುವ ಈರುಳ್ಳಿ ಕೊಳೆಯುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬಿತ್ತನೆ ಮಾಡಿದ್ದು, ಮಳೆಯಿಂದ ಈರುಳ್ಳಿ ಕೊಳೆತು ಹಾಳಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ನಮ್ಮ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ರೈತರ ಕಷ್ಟಗಳನ್ನು ಪರಿಹರಿಸಬೇಕು ಎಂದು ಹನಕುಂಟಿ ಗ್ರಾಮದ ಗೋಣೆಪ್ಪ ಕೋಳಿ ಹಾಗೂ ನಾಗಪ್ಪ ಮರಿಬಸಣ್ಣರ …

Read More »