Breaking News

Uncategorized

ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣ: ಶ್ವಾನದಳದಿಂದ ತಪಾಸಣೆ

ಹುಬ್ಬಳ್ಳಿ: ರಾಜ್ಯದ ಜನತೆಯನ್ನೇ ಬೆಚ್ಚಿ ಬಿಳಿಸಿರುವ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಹೈ ಅಲರ್ಟ್ ಆಗಿದ್ದು, ಕೊಲೆ ನಡೆದ ಕ್ಷಣದಿಂದಲೇ ತನಿಖೆಯನ್ನು ಕೈಗೊಂಡಿದ್ದು, ಪ್ರಾಥಮಿಕ ಹಂತವಾಗಿ ಶ್ವಾನದಳದಿಂದ ತಪಾಸಣೆ ನಡೆಸುತ್ತಿದೆ. ಹುಬ್ಬಳ್ಳಿಯ ಉಣಕಲ್ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳ ಶೋಧಕ್ಕಾಗಿ ಎಲ್ಲ ರೀತಿಯ ಆಯಾಮಗಳಿಂದಲೂ ತನಿಖೆಯನ್ನು ಕೈಗೊಂಡಿದ್ದು, ಪೊಲೀಸ್ ಆಯುಕ್ತರ ಭೇಟಿಯ ಬೆನ್ನಲ್ಲೇ ಶ್ವಾನದಳದಿಂದ ತಪಾಸಣೆ ನಡೆಸಲಾಗುತ್ತಿದೆ. ಚುರುಕಿನ …

Read More »

ಖ್ಯಾತ ಜೋತಿಷ್ಯ ಚಂದ್ರಶೇಖರ ಗುರೂಜಿ ಬೀಕರ ಹತ್ಯೆ

ಹುಬ್ಬಳ್ಳಿ; ನಗರದ ಶ್ರೀ ನಗರ ಕ್ರಾಸ್ ಬಳಿಯಿರುವ ಖಾಸಗಿ ಹೊಟೇಲ್ ಬಳಿ ಖ್ಯಾತ ಜೋತಿಷ್ಯ ಶ್ರೀ ಚಂದ್ರಶೇಖರ ಗುರುಜಿಯನ್ನು ಚಾಕು ಇರಿದು ಹತ್ಯೆ ಮಾಡಲಾಗಿದೆ.ಇನ್ನೂ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂಇದಿಲ್ಲ , ಘಟನಾ ಸ್ಥಳಕ್ಕೆ ವಿದ್ಯಾ ನಗರ ಪೋಲಿಸ್ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Read More »

ಪದ್ಮಾವತಿ ಜುಲೈ ೧೫ರಂದು ಬಿಡುಗಡೆ

ಈ ಹಿಂದೆ ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ ಎಂಬ ಹಾಸ್ಯಮಯ ಚಲನಚಿತ್ರವನ್ನು ನಿರ್ಮಿಸಿದ್ದ ನಟ ಕಮ್ ನಿರ್ಮಾಪಕ ವಿಕ್ರಮ್‌ ಆರ್ಯ ಅಭಿನಯದ, ವಿಭಿನ್ನ ಶೈಲಿಯ ಚಿತ್ರ ಪದ್ಮಾವತಿ. ಮಹಿಳಾ ಪ್ರದಾನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿಕ್ರಂ ಆರ್ಯ ಜೊತೆಗೆ ಸಾಕ್ಷಿ ಮೇಘನಾ ನಾಯಕಿಯಾಗಿ ನಟಿಸಿರುವ ಈ ಚಿತ್ರವು ಇದೇತಿಂಗಳ ೧೫ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. ರಾವ್ ಅಂಡ್ ರಾವ್ ಸಿನಿಮಾಸ್ ಲಾಂಛನದಲ್ಲಿ ದಾಮೋದರ್‌ರಾವ್ ಹಾಗೂ ನಾಮದೇವ ಭಟ್ಟರ್ ಸೇರಿ …

Read More »

ಮರ್ಯಾದಾ ಹತ್ಯೆ? ಗ್ರಾಮ ಪಂಚಾಯತಿ ಸದಸ್ಯನ ತಲೆ ಮೇಲೆ ಹೆಂಡತಿ ತಂದೆಯಿಂದ ಕಲ್ಲು ಹಾಕಿ ಕೊಲೆ.

ಹುಬ್ಬಳ್ಳಿ : ನಗರದ ಬಳಿಯ ರಾಯನಾಳನಲ್ಲಿ ಗ್ರಾಮ ಪಂಚಾಯತಿ ಸದಸ್ಯನನ್ನು ಆತನ ಹೆಂಡತಿಯ ಸಂಭಂದಿಗಳು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ ಘಟನೆ ನಿನ್ನೆ ರಾತ್ರಿ ರಾಯನಾಳದಲ್ಲಿ ನಡೆದಿದೆ. ಹುಬ್ಬಳ್ಳಿ ಬ್ಯಾಂಕರ್ಸ್ ಕಾಲೋನಿ ವಾಸಿ ಹಾಗೂ ರಾಯನಾಳ ಗ್ರಾಮ ಪಂಚಾಯತಿ ಸದಸ್ಯ ದೀಪಕ ಪಟಧಾರಿಯು ಬೈಕ್ ನಲ್ಲಿ ಗೆಳೆಯ ಬಸವರಾಜ ಮಾರಡಗಿನನ್ನು ಬಿಡಲು ಹೋದಾಗ ಆತನ ಪತ್ನಿ ಪುಷ್ಪಾ ಸಂಭಂದಿಗಳು ಇತರರು ಸೇರಿ ನಿನ್ನೆ ರಾತ್ರಿ ರಾಯನಾಳ ಕುಂಬಾರ ಓಣಿ …

Read More »

ಪಿಎಸ್‌ಐ ಹಗರಣ : ಬೊಮ್ಮಾಯಿ ರಾಜೀನಾಮೆ ನೀಡಬೇಕು : ಸಿಎಂ

ನವದೆಹಲಿ: “ಕರ್ನಾಟಕದ ಪಿಎಸ್‌ಐ ನೇಮಕಾತಿಯಲ್ಲಿ ಭಾರೀ ಹಗರಣ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನ್ಯಾಯಯುತ ತನಿಖೆಗೆ ಆದೇಶಿಸಿ ತಾವು ರಾಜೀನಾಮೆ ನೀಡಬೇಕು” ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭ್ರಷ್ಟಾಚಾರಕ್ಕೆ ಸ್ಥಾನವಿಲ್ಲ ಎಂಬ ಅವರ ಪುನರಾವರ್ತಿತ ಹೇಳಿಕೆಗಳ ಬಗ್ಗೆ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ “ನಾ ಖಾವೂಂಗಾ, ನಾ ಖಾನೆ ದುಂಗಾ ಎನ್ನುವವರು ಬಸವರಾಜ ಬೊಮ್ಮಾಯಿ ವಿರುದ್ಧ ಏಕೆ ಯಾವುದೇ ಕ್ರಮ …

Read More »

ಲೋಹದ ತಡೆಗೋಡೆಗೆ ಬೈಕ್ ಡಿಕ್ಕಿ : ತಂದೆ, ಮಗಳು ಸಾವು

ಕುಷ್ಟಗಿ: ಕುಷ್ಟಗಿ-ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ವಣಗೇರಾ ಮೇಲ್ಸೇತುವೆ ಬಳಿ ಲೋಹದ ತಡೆಗೋಡೆಗೆ ಬೈಕ್ ಡಿಕ್ಕಿಯಾದ ಪರಿಣಾಮ ತಂದೆ, ಮಗಳು ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತೊಂಡಿಹಾಳ ಗ್ರಾಮದ ಬಸಯ್ಯ ಕಳಕಯ್ಯ ಹಿರೇಮಠ (29) ಹಾಗೂ 5 ವರ್ಷದ ಮಗಳು ಅಕ್ಷರಾ ಮೃತಪಟ್ಟವರು. ಕುಷ್ಟಗಿಯ ಶರಣಯ್ಯ ಹಿರೇಮನ್ನಾಪೂರ ಅವರ ಮನೆಗೆ ಬಂದಿದ್ದ ಇವರು ಬೈಕಿನಲ್ಲಿ ಪತ್ನಿ ಶಾಂತಮ್ಮ ಹಾಗೂ ಇಬ್ಬರ ಮಕ್ಕಳ ಜೊತೆ ಬಸಯ್ಯ ತಮ್ಮ ಸ್ವಗ್ರಾಮ …

Read More »

ಪ್ರೌಢಶಾಲೆಯಲ್ಲಿ ಉದ್ವಿಗ್ನ : ಡಿಡಿಪಿಐ ಶಾಲೆಗೆ ಬೀಗ

ಮೈಸೂರು: ಲಷ್ಕರ್ ಮೊಹಲ್ಲಾದ ದಾವೂದ್ ಖಾನ್ ರಸ್ತೆಯಲ್ಲಿರುವ ಫಾರೂಕಿಯಾ ಬಾಲಕಿಯರ ಪ್ರೌಢಶಾಲೆಯ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೈಸೂರಿನ ಡಿಡಿಪಿಐ ಶಾಲೆಗೆ ಬೀಗ ಜಡಿದಿದ್ದಾರೆ. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಶಾಲೆಯನ್ನು ನಡೆಸುತ್ತಿರುವ ರಿಫಾಲ್ ಮುಸ್ಲಿಮೀನ್ ಎಜುಕೇಷನಲ್ ಟ್ರಸ್ಟ್ (ಆರ್ ಎಂಇಟಿ) ಪ್ರತಿನಿಧಿಗಳು ಸೋಮವಾರ ಪ್ರತಿಭಟನಾ ರ‍್ಯಾಲಿಗೆ ಸಿದ್ಧರಾಗುತ್ತಿದ್ದಂತೆ, ಮುಂಜಾಗ್ರತಾ ಕ್ರಮವಾಗಿ ಶಾಲೆಯ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಡಿಡಿಪಿಐ ಅಧಿಕಾರಿಗಳು ಶನಿವಾರ ಶಾಲೆಯನ್ನು ಸೀಲ್ಡೌನ್ ಮಾಡಿದ ನಂತರ, …

Read More »

ಪೌರಕಾರ್ಮಿಕರ ಸಂಘಟನೆಗಳ ಮುಖಂಡರು‌ ಸಿಎಂ ಭೇಟಿ

ಬೆಂಗಳೂರು: ಪೌರಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಸಲು ಸರ್ಕಾರ ಸಮ್ಮತಿಸಿದ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ ಮತ್ತು ವಿವಿಧ ಪೌರ ಕಾರ್ಮಿಕರ ಸಂಘಟನೆಗಳ ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು.

Read More »

ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯಮಾಡಿದ ಸಿ.ಟಿ.ರವಿ

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಉಲ್ಟಾ ಮಚ್ಚೆ ಇದ್ದು, ಅವರು ಹೇಳಿದ್ದೆಲ್ಲಾ ಉಲ್ಟಾ ಆಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹೇಳಿದ್ದು ಉಲ್ಟಾಆಗುತ್ತದೆ ಎಂಬುದು ಐತಿಹಾಸಿಕ ಸತ್ಯ. ಅವರಿಗೆ ಅವರ ಮಾತನ್ನು ಬೇಕಾದರೆ ಪುನರ್‌ ಪ್ರಸಾರ ಮಾಡಬೇಕು. ನರೇಂದ್ರ ಮೋದಿ ಅವರು ಪ್ರಧಾನಿಯಾಗಲ್ಲ ಎಂದಿದ್ದರು. ಆದರೆ ಎರಡು ಬಾರಿ ಪ್ರಧಾನಿಯಾದರು. ನಾನೇ ಮುಂದಿನ ಮುಖ್ಯಮಂತ್ರಿ …

Read More »

ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಎಸಿಬಿ ದಾಳಿ

ಬೆಂಗಳೂರು; ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿಯ ಮನೆ ಸೇರಿ ವಿವಿಧ ಕಡೆ ಪರಿಶೀಲನೆ ನಡೆಸಲಾಗುತ್ತಿದೆ. ಮಂಗಳವಾರ ಬೆಳ್ಳಂಬೆಳಗ್ಗೆ ಕರ್ನಾಟಕದ ಭ್ರಷ್ಟಾಚಾರ ನಿಗ್ರಹದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನ್ಯಾಷನಲ್ ಟ್ರಾವೆಲ್ಸ್ ಮಾಲೀಕರು ಆಗಿರುವ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ದಾಳಿ ಮಾಡಲಾಗಿದೆ. ಬೆಂಗಳೂರಿನ 5 ಪ್ರದೇಶಗಳಲ್ಲಿ 40ಕ್ಕೂ …

Read More »