Breaking News

Uncategorized

ಚಾಮರಾಜನಗರ ನಂದು ಎಂದು ಹೇಳುವ ಮೂಲಕ ತವರೂರಿನ ಅಭಿಮಾನ ಮೆರೆದ ಹ್ಯಾಟ್ರಿಕ್ ಹೀರೋ

ಚಾಮರಾಜನಗರ : ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ತಮ್ಮ ತವರೂರು ಚಾಮರಾಜನಗರಕ್ಕೆ ಬದಲಿಸಿಕೊಂಡು ಡೈಲಾಗ್ ಹೇಳುತ್ತಿದ್ದಂತೆ ನೆರೆದಿದ್ದ ಸಾವಿರಾರು ಜನರು ಹೋ.. ಎಂದು ಹರ್ಷೋದ್ಗಾರ ಮಾಡಿದರು. ಸಿಳ್ಳೆಗಳು ಮೊಳಗಿದವು, ಶಿವಣ್ಣಂಗೆ ಜೈ , ಪುನೀತ್ ಗೆ ಜೈ ಎಂಬ ಜೈಕಾರಗಳು ತಾರಕಕ್ಕೇರಿದವು. ಭೈರಾಗಿ ಚಿತ್ರದ ಪೂರ್ವಭಾವಿ ಸಮಾರಂಭ (ಪ್ರಿ ಇವೆಂಟ್) ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ಕರುನಾಡ ಚಕ್ರವರ್ತಿ, ನಟ ಡಾ. ಶಿವರಾಜ್‌ಕುಮಾರ್ ಅವರು ಚಾಮರಾಜನಗರ ನಂದು ಎಂದು ಹೇಳುವ ಮೂಲಕ ತವರೂರಿನ …

Read More »

ಸರಣಿ ಅಪಘಾತ : 8 ವಾಹನಗಳು ಸಂಪೂರ್ಣ ಜಖಂ

ಬೆಂಗಳೂರು: ನಗರದ ಹೊರವಲಯದ ಟೋಲ್ ಫ್ಲಾಜಾ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, 8 ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಹೊಸಕೋಟೆ ಬಳಿಯ ಟೋಲ್ ಫ್ಲಾಜಾ ಬಳಿ ಈ ಅಪಘಾತ ಸಂಭವಿಸಿದ್ದು, ಎರಡು ಬಸ್ ಗಳು, ಒಂದು ಲಾರಿ, ಒಂದು ಗೂಡ್ಸ್ ಹಾಗೂ ಮೂರು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಸರಣಿ ಅಪಘಾತದಲ್ಲಿ 8 ವಾಹನಗಳು ನಜ್ಜುಗುಜ್ಜಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

Read More »

ಉದ್ಧವ್‌ ಠಾಕ್ರೆ ಅವರ ಗೂಂಡಾಗಿರಿ ಕೊನೆಯಾಗಬೇಕು, ರಾಷ್ಟ್ರಪತಿ ಆಡಳಿತ ಜಾರಿಗೆಬರಬೇಕು : ನವನೀತ್‌ ರಾಣಾ

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿರುವ ಬಂಡಾಯ ಶಾಸಕರ ಕುಟುಂಬದವರಿಗೆ ನೀಡಿದ್ದ ಭದ್ರತೆಯನ್ನು ಅಲ್ಲಿನ ಸರ್ಕಾರ ಹಿಂಪಡೆದಿದೆ. ಈ ಕ್ರಮವನ್ನು ಅಮರಾವತಿ ಸಂಸದೆ ನವನೀತ್‌ ರಾಣಾ ಟೀಕಿಸಿದ್ದಾರೆ. ರಾಣಾ ಅವರು, ‘ಉದ್ಧವ್‌ ಠಾಕ್ರೆ ಸರ್ಕಾರ ತೊರೆದು, ತಮ್ಮದೇ ನಿರ್ಧಾರ ಕೈಗೊಂಡಿರುವ ಹಾಗೂ ಬಾಳಾ ಸಾಹೇಬರ ಚಿಂತನೆಗಳಿಗೆ ಬದ್ಧವಾಗಿರುವ ಶಾಸಕರ ಕುಟುಂಬಗಳಿಗೆ ಭದ್ರತೆ ಒದಗಿಸುವಂತೆ ಅಮಿತ್‌ ಶಾ ಅವರಲ್ಲಿ ಮನವಿ ಮಾಡುತ್ತೇನೆ. ಉದ್ಧವ್‌ ಠಾಕ್ರೆ ಅವರ ಗೂಂಡಾಗಿರಿ ಕೊನೆಯಾಗಬೇಕು. ರಾಜ್ಯದಲ್ಲಿ ರಾಷ್ಟ್ರಪತಿ …

Read More »

ನಾಳೆಯಿಂದ ಎಸೆಸೆಲ್ಸಿ ಪೂರಕ ಪರೀಕ್ಷೆ

ಬೆಂಗಳೂರು: ಎಸೆಸೆಲ್ಸಿ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣ ರಾಗಿರುವ ಅಭ್ಯರ್ಥಿಗಳಿಗೆ ರಾಜ್ಯಾದ್ಯಂತ ಜೂ.27ರಿಂದ ಜು.4ರ ವರೆಗೆ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ. ಪರೀಕ್ಷೆಗೆ 11,415 ಶಾಲೆಗಳಿಂದ 63,363 ವಿದ್ಯಾರ್ಥಿ ಗಳು, 31,283 ವಿದ್ಯಾರ್ಥಿನಿಯರು ಹಾಗೂ ಮೂವರು ತೃತೀಯ ಲಿಂಗಿಗಳು ಸಹಿತ ಒಟ್ಟಾರೆ 94,649 ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ 423 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಪೈಕಿ 343 ಸಾಮಾನ್ಯ ಮತ್ತು 80 …

Read More »

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ ಸೋಂಕು ದೃಢ

ಇಂಗ್ಲೆಂಡ್ ನ ಲೀಸೆಸ್ಟನ್ ನಲ್ಲಿ ನಡೆದ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿದೆ. ಶನಿವಾರ ರ್ಯಾಪಿಡ್ ಟೆಸ್ಟ್ ನಡೆಸಲಾಗಿದ್ದು, ಕೋವಿಡ್ ಸೋಂಕು ದೃಢಪಟ್ಟಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೈದ್ಯಕೀಯ ತಂಡದೊಂದಿಗೆ ಪ್ರತ್ಯೇಕವಾಗಿ ಇರಿಸಲಾಗಿದೆ. ಶನಿವಾರ ನಡೆಸಿದ ರ್ಯಾಪಿಡ್ ಆಂಟಿಜೆನ್ ಟೆಸ್ಟ್ (ಆರ್‌ಎಟಿ) ನಂತರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಕೋವಿಡ್ …

Read More »

ಬಾಲನಟರು ದುರ್ಬಳಕೆಯನ್ನು ತಡೆಯಲು ಹೊಸ ನಿಯಮ ಜಾರಿಗೆ

ಸಿನಿಮಾ ರಿಯಾಲಿಟಿ ಶೋಗಳಲ್ಲಿ ಬಾಲನಟರು ದುರ್ಬಳಕೆಯನ್ನು ತಡೆಯಲು ಹೊಸ ನಿಯಮ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈಗಾಗಲೇ ಕರಡು ನಿಯಮವನ್ನು ರೂಪಿಸಿದೆ ಎಂದು ಹೇಳಲಾಗಿದೆ. ಈ ನಿಯಮದ ಪ್ರಕಾರ ಮಕ್ಕಳು ಮದ್ಯಪಾನ, ಧೂಮಪಾನ ಮಾಡುವ ಅಥವಾ ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವಂತೆ ಬಿಂಬಿಸಲು ನಿರ್ಬಂಧವಿರುತ್ತದೆ.

Read More »

ಚಾಲಕನ ನಿಯಂತ್ರಣ ತಪ್ಪಿ ನಾಲಾಕ್ಕೆ ಬಿದ್ದ ಕ್ರೂಸರ್​ : 7 ಜನ ಸಾವು

ಬೆಳಗಾವಿ:ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಕ್ರೂಸರ್​ ವಾಹನ ಬಿದ್ದಿದು,  7 ಜನರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ದಾರುಣ ಘಟನೆ ತಾಲೂಕಿನ ಕಣಬರಗಿ ಸಮೀಪ ನಡೆದಿದೆ. ದಿನಗೂಲಿ ಕೆಲಸಕ್ಕೆಂದು ಗೋಕಾಕ್ ತಾಲೂಕಿನ ಅಕ್ಕತಂಗಿಯರ ಹಾಳ ಗ್ರಾಮದಿಂದ ಬೆಳಗಾವಿಗೆ ಬರುತ್ತಿದ್ದಾಗ ಬೆಳಿಗ್ಗೆ 7.30ರ ಸುಮಾರಿಗೆ ಘಟನೆ ನಡೆದಿದೆ.  ಬೆಳಗಾವಿಗೆ ಬರುತ್ತಿದ್ದಾಗ. ಮಾರಿಹಾಳ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡುತ್ತಿದ್ದಾರೆ. ರೈಲು ಹಳಿ ಜೋಡಣೆ ಕೆಲಸಕ್ಕೆ ಒಟ್ಟು 18 ಜನರು …

Read More »

ಮಕ್ಕಳಿಂದ ಶಿಸ್ತುಬದ್ಧ ಅಣುಕು ಮತದಾನ, ಅಭ್ಯರ್ಥಿಗಳ ಆಯ್ಕೆ

ಕುಂದಗೋಳ : ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2021 22 ನೇ ಸಾಲಿನ ಚುನಾವಣೆಯ ಶಾಲಾ ವಿದ್ಯಾರ್ಥಿಗಳಿಂದ ಅಣಕು ಪ್ರದರ್ಶನ ನಡೆಯಿತು ಇಂದಿನ ಮಕ್ಕಳು ಮುಂದಿನ 18ನೇ ವಯಸ್ಸಿನಲ್ಲಿ ಯಾವ ತರಹ ಚುನಾವಣೆಯಲ್ಲಿ ಭಾಗವಹಿಸುವುದು ಹೇಗೆ ಎಂಬುದು ಶಿಕ್ಷಕರು ಶಿಕ್ಷಕಿಯರು ಅನುಕು ಪ್ರದರ್ಶನದಲ್ಲಿ ಮಕ್ಕಳಿಂದ ಮತ ಚಲಾಯಿಸುವುದು ಮತಪೆಟ್ಟಿಗೆ ಮತದಾನದಲ್ಲಿ ಯಾವತರ ಮುಂಜಾಗ್ರತಾ ಕ್ರಮದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮವು ಜರುಗಿತು ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು …

Read More »

ಬೈಕ್, ಕಾರು ನಡುವೆ ಅಪಘಾತ : ವಾಹನ‌ ಸವಾರನಿಗೆ ಗಾಯ

ಹುಬ್ಬಳ್ಳಿ : ನಗರದ ಗದಗ ರಸ್ತೆಯಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಹುಬ್ಬಳ್ಳಿ ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಗಾಯಗೊಂಡ ಪುನಗ್ ಬೆಕ್ಕುನ್ನು ಆಸ್ಪತ್ರೆಗೆ ದಾಖಲು

ಧಾರವಾಡ : ನರೇಂದ್ರ ಗ್ರಾಮದ ಈಳಗಿ ಎಂಬ ವ್ಯಕ್ತಿಯ ಹೊಲದಲ್ಲಿ ಪುನಗ್ ಬೆಕ್ಕು ಪತ್ತೆಯಾಗಿದೆ. ಗ್ರಾಮದ ರಾಜನಗೌಡ ಪಾಟೀಲ ಎಂಬ ರೈತರಿಂದ ರಕ್ಷಣೆ ಮಾಡುವ ಸಮಯದಲ್ಲಿ ಬೆಕ್ಕಿಗೆ ಗಾಯಗೊಂಡ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ದ ರೈತರು ಕೃಷಿ ವಿವಿಯ ಡಾ:ಅನೀಲ್ ಪಾಟೀಲ ಅವರಿಂದ ಚಿಕಿತ್ಸೆ ನೀಡಿ ಪ್ರಾಣಿ ಪ್ರೀಯ ಸೊಮಶೇಖರ ಅವರಿಗೆ ಒಪ್ಪಿಸಿದರು. ವೈದ್ಯರು ಸದ್ಯಕ್ಕೆ ಗಾಯಗೊಂಡ ಬೆಕ್ಕನ್ನು ಸೋಮಶೇಖರ್ ನೋಡಿಕೊಳ್ಳುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಅಪರೂಪದ ಪುನುಗು ಬೆಕ್ಕು ಧಾರವಾಡದ ಕೃಷಿ …

Read More »