Breaking News

Uncategorized

ಅಗ್ನಿಪಥ ಯೋಜನೆಗೆ ರೈತ ಮುಖಂಡರಿಂದಲೂ ವಿರೋಧ

ಧಾರವಾಡ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಗೆ ಸೇನೆ ಸೇರಬಯಸುವ ಅಭ್ಯರ್ಥಿಗಳಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದೀಗ ಆ ಯೋಜನೆಗೆ ರೈತ ಮುಖಂಡರೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೌದು! ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದರು. ಅಗ್ನಿಪಥ ಯೋಜನೆ ಮೂಲಕ ಸೇನೆಗೆ ಅಭ್ಯರ್ಥಿಗಳನ್ನು ಸೇರಿಸಿಕೊಂಡು ಕೇವಲ ಎರಡೂವರೆ ವರ್ಷಗಳ ಕಾಲ ಮಾತ್ರ ಅವರನ್ನು ಬಳಸಿಕೊಂಡು ಆ …

Read More »

ಹಿರಿಯ ಲೇಖಕ ಡಾ ಗುರುಲಿಂಗ ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಅನುವಾದ ಪುಸ್ತಕ ಪ್ರಶಸ್ತಿಗೆ ಹಿರಿಯ ಲೇಖಕರಾದ ಡಾ ಗುರುಲಿಂಗ ಕಾಪಸೆ ಅವರು ಭಾಜನರಾಗಿದ್ದಾರೆ. ಡಾ ಕಾಪಸೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ವಿ ಸ ಖಾಂಡೇಕರ್ ಅವರ ‘ಒಂದು ಪುಟದ ಕಥೆ‘ ಯು ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಆಯ್ಕೆಯಾಗಿದೆ.’ಒಂದು ಪುಟದ ಕಥೆ’ (ಮೂಲದಲ್ಲಿ ‘ಏಕಾ ಪಾನಾಚಿ ಗೋಷ್ಠ)ಯು ಖಾಂಡೇಕರ್ ಅವರ ಆತ್ಮಕಥೆ ಯಾಗಿದೆ. ಖಾಂಡೇಕರ್ ಅವರು ಮರಾಠಿಯ ಮೊದಲ …

Read More »

ಅನೈತಿಕ ಸಂಬಂಧ ಹಿನ್ನಲೆ ಚಾಕು ಇರಿತ: ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವು

ಹುಬ್ಬಳ್ಳಿ : ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ಯುವತಿ ವಿಚಾರಕ್ಕೆ ಚಾಕು ಇರಿದ ಪ್ರಕರಣ ನಡೆದ ಹಿನ್ನಲೆ ತಡರಾತ್ರಿ ಗಾಯಾಳು ಚಂದ್ರಶೇಖರನ್ನು‌ಆಸ್ಪತ್ರೆಗೆ ದಾಖಸಲಾಗಿದ್ದು, ಚಿಕೆತ್ಸೆ ಫಲಕಾರಿಯಾಗದೆ ಮರಣಹೊಂದಿದ್ದಾನೆ. ಆಟೋ ಚಾಲಕನಾಗಿದ್ದ ಚಂದ್ರಶೇಖರ ಧಾರವಾಡ ಕಾಲೊನಿಯಲ್ಲಿ ವಾಸವಾಗಿದ್ದ. ಕಳೆದ ರಾತ್ರಿ ಯುವತಿ ಒಬ್ಬಳ ವಿಷಯವಾಗಿ ಗಲಾಟೆ ನಡೆದಿತ್ತು. ಕೋಪಗೊಂಡಿದ್ದ ಯುವತಿ ಅಣ್ಣಂದಿರು ಚಂದ್ರುನಿಗೆ ಚಾಕು ಇರಿದಿದ್ದರು. ಯುವತಿ ಯೊಂದಿಗೆ ಚಂದ್ರಶೇಖರ ಅನೈತಿಕ ಸಂಬಂಧ ಹೊಂದಿದ್ದ .ಗಂಡನ ತೊರೆದು ಬಂದಿದ್ದ ಯುವತಿಯೊಂದಿಗೆ ಸಂಪರ್ಕ …

Read More »

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಝ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಕಳೆದ 24 ಗಂಟೆಯಲ್ಲಿ 858 ಮಂದಿಯಲ್ಲಿ ಕೋವಿಡ್ 19 ಇರುವುದು ದೃಢಪಟ್ಟಿದೆ. ಅಲ್ಲದೆ ರಾಜ್ಯದಲ್ಲಿ ಓರ್ವ ಕೊರೊನಾದಿಂದ ಮೃತಪಟ್ಟಿದ್ದಾರೆ. ಇಂದು 682 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇದುವರೆಗೆ 39,18,452 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 36,289 ಮಂದಿಯನ್ನು ಕೊರೊನಾ ಟೆಸ್ಟ್ಗೆ ಒಳಪಡಿಸಲಾಗಿದ್ದು, ಇದುವರೆಗೆ 6,68,37,154 ಮಂದಿಯನ್ನು ಪರೀಕ್ಷೆ ನಡೆಸಲಾಗಿದೆ.5067 ಸಕ್ರಿಯ …

Read More »

ವಿಭಜಕಕ್ಕೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ 3 ಎಂಬಿಬಿಎಸ್​ ವಿದ್ಯಾರ್ಥಿಗಳು ಸಜೀವ ದಹನ

ಮೀರತ್ (ಹರಿಯಾಣ): ರಸ್ತೆ ಮಧ್ಯೆ ಅಡ್ಡಲಾಗಿ ಹಾಕಲಾಗಿದ್ದ ವಿಭಜಕಕ್ಕೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಮೂವರು ಎಂಬಿಬಿಎಸ್​ ವಿದ್ಯಾರ್ಥಿಗಳು ಸಜೀವವಾಗಿ ಸುಟ್ಟುಹೋಗಿರುವ ಭೀಕರ ಘಟನೆ ಹರಿಯಾಣದ ಮೀರತ್-ಝಜ್ಜರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ರೋಹ್ಟಕ್​ನ ಪಿಜಿಐನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಯುವಕರು ರೋಹ್ಟಕ್​ನಿಂದ ಹರಿದ್ವಾರಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಒಟ್ಟು ಆರು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕ ವೇಗವಾಗಿ ಕಾರನ್ನು ಓಡಿಸುತ್ತಿದ್ದ. ರಾಷ್ಟ್ರೀಯ ಹೆದ್ದಾರಿ-44ರ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಕಲ್ಲಿನ ಬ್ಯಾರಿಕೇಡ್‌ಗಳನ್ನು ರಸ್ತೆ …

Read More »

ಮುಂದಿನ ಚುನಾವಣೆಯನ್ನು ನಾವು ಎದುರಿಸುತ್ತೇವೆ ಹೊರತು ಯಾವ ಆಪರೇಷನ್​​ ಮಾಡುವುದಿಲ್ಲ: ಡಾ.ಜಿ.ಪರಮೇಶ್ವರ್

ತುಮಕೂರು: ಮುಂದಿನ ಚುನಾವಣೆಯನ್ನು ನಾವು ಎದುರಿಸುತ್ತೇವೆ ಹೊರತು ಯಾವ ಆಪರೇಷನ್​​ ಮಾಡುವುದಿಲ್ಲ, ಜನರ ಆಯ್ಕೆಯ ಮೇಲೆ ಎಲ್ಲಾ ನಿರ್ಧಾರವಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್​ ತಿಳಿಸಿದ್ದಾರೆ. ಕೊರಟಗೆರೆಯಲ್ಲಿ ಮಾತನಾಡಿದ ಅವರು, ಜನರ ಮೇಲೆ ನಮಗೆ ವಿಶ್ವಾಸವಿದೆ. 2023ರಲ್ಲಿ ಜನ ನಮ್ಮನ್ನೇ ಆಯ್ಕೆ ಮಾಡುತ್ತಾರೆಂಬ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಕರ್ನಾಟಕ ಇಬ್ಭಾಗ ಆಗಲು ಬಿಡುವುದಿಲ್ಲ, ಯಾವುದೋ ಒಂದು ಅಸಮಾಧಾನಕ್ಕೆ ಕರ್ನಾಟಕವನ್ನು ಹೊಡೆಯುವಂತಹ ಕೆಲಸವನ್ನು ಮಾಡಬಾರದು ಎಂದು ಹೇಳಿದರು. ಪಠ್ಯಪುಸ್ತಕ ಹಿಂಪಡೆಯುವ ವಿಚಾರದ …

Read More »

ಉಮೇಶ್ ಕತ್ತಿ ವಿರುದ್ಧ ವಾಗ್ದಾಳಿ ನಡೆಸಿದ ದಿನೇಶ್ ಗುಂಡುರಾವ್

ಬೆಂಗಳೂರು: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗನ್ನು ಎತ್ತಿರುವ ಸಚಿವ ಉಮೇಶ್ ಕತ್ತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ‘ಪದೇ ಪದೇ ಪ್ರತ್ಯೇಕ ರಾಜ್ಯದ ಮಾತಾನಾಡುವ ಸಚಿವ ಉಮೇಶ್ ಕತ್ತಿಯವರು ನಾಡದ್ರೋಹಿಯಲ್ಲದೆ‌ ಮತ್ತೇನು.? ಉಮೇಶ್ ಕತ್ತಿಯವರಿಗೆ ಕರ್ನಾಟಕದಲ್ಲಿ ಇರಲು ಸಂಕಟವಾದರೆ ರಾಜ್ಯ ಬಿಟ್ಟು ತೊಲಗಲಿ” ಎಂದು ಹೇಳಿದ್ದಾರೆ. ಇನ್ನು ಮುಂದುವರೆದು ಮಾತನಾಡಿರುವ ಅವರು ‘ನಮ್ಮಲ್ಲಿ ಉತ್ತರ‌ ಕರ್ನಾಟಕ-ದಕ್ಷಿಣ ಕರ್ನಾಟಕ ಎಂಬ ಬೇಧವಿಲ್ಲ.‌ ತಾಯಿನುಡಿ ಕನ್ನಡ …

Read More »

ಗಾಂಧಿ ಪ್ರತಿಮೆಯಲ್ಲಿ ಅಕ್ರಮ ಆಗಿ ನಮ್ಮ ಹೆಸರು ಹಾಳಾಗಿದೆ‌,ಸ್ಪೀಕರ್ ಸಾರ್ವಜನಿಕರ ಹಣ ಅಕ್ರಮವಾಗಲು‌ ಬಿಡಬಾರದು. : ರಮೇಶ್ ಬಾಬು

ಬೆಂಗಳೂರು: 254 ಕೋಟಿ ಯೋಜನೆ ಖಾಸಗಿ ಅವ್ರಿಗೆ ಕೊಡೋಕೆ ಸರ್ಕಾರ ಮುಂದಾಗಬಾರದು ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹೇಳಿಕೆ ನೀಡಿದ್ದಾರೆ. ಖಾಸಗಿ ಅವ್ರಿಗೆ ಕೊಟ್ಟರೆ 254 ಕೋಟಿ ಭ್ರಷ್ಟಾಚಾರ ಆಗಲಿದೆ. ಕೂಡಲೇ ಈ ಯೋಜನೆ ಕೈ ಬಿಡಬೇಕು. ಒಂದು ವೇಳೆ ಕಾಗದ ರಹಿತ ಯೋಜನೆ ತರೋದು ಆದ್ರೆ ಕೇಂದ್ರ ಸರ್ಕಾರದ ನೇವಾ ಯೋಜನೆ ಮೂಲಕ ಅನುಷ್ಠಾನ ಮಾಡಬೇಕು. ಗಾಂಧಿ ಪ್ರತಿಮೆಯಲ್ಲಿ ಅಕ್ರಮ ಆಗಿ ನಮ್ಮ ಹೆಸರು ಹಾಳಾಗಿದೆ. ಸ್ಪೀಕರ್ …

Read More »

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ

ಬೆಳಗಾವಿ/ವಿಜಯಪುರ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಔಷಧ ಹಾಗೂ ರಸಗೊಬ್ಬರ ಮಾರಾಟ ಮಳಿಗೆಯ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳಗಾವಿಯ ಕೃಷಿ ‌ಅಧಿಕಾರಿ ಹಾಗೂ ವಿಜಯಪುರ ಗ್ರಾಮೀಣ ಬಿಇಒ ಕಚೇರಿಯ ಎಫ್​ಡಿಎ ಎಸಿಬಿ ಬಲೆಗೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಕಚೇರಿಯ ಕೃಷಿ ಅಧಿಕಾರಿ ಯೋಗೇಶ ಫಕಿರೇಶ ಅಗಡಿ ಎಸಿಬಿ ಬಲೆಗೆ ಬಿದ್ದವರು. ಔಷಧ ಹಾಗೂ ರಸಗೊಬ್ಬರ ಮಾರಾಟ …

Read More »

ಮಾಹಿತಿ ಹಕ್ಕು ಕಾಯ್ದೆ ಪ್ರಕರಣ : ಪಿಡಿಓ ಅಧಿಕಾರಿ ಅಮಾನತು

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಕರಣದಲ್ಲಿ ಮಾಹಿತಿ ನೀಡಿದ ಕಾರಣಕ್ಕೆ ಕರ್ತವ್ಯ ಲೋಪದ ಎಸಗಿರುವ ಆರೋಪದ ಮೇಲೆ ಪಿಡಿಓ ಅಧಿಕಾರಿ ತುಳಸಿ‌ನಾಥ್ ನನ್ನು ಅಧಿಕಾರದಿಂದ ಅಮಾನತು ಮಾಡಲಾಗಿದೆ.ಇಲ್ಲಿನ ಹೆನ್ನಾಗರ ಗ್ರಾಮದ ವೀರಭದ್ರಸ್ವಾಮಿ ಎಂಬವರು ಮಾಹಿತಿ ಹಕ್ಕು ಮೂಲಕ ಮಾಹಿತಿಯನ್ನು ಪಿಡಿಓ ತುಳಸಿನಾಥ್ ಗೆ ಕೇಳಿದ್ದರು.. ಅದರೆ ಮಾಹಿತಿ ನೀಡಿದೆ ಬೇಜವಾಬ್ದಾರಿಯಾಗಿ ನಿರ್ಲಕ್ಷ್ಯ ತೊರಿದ ಕಾರಣಕ್ಕೆ ರಾಜ್ಯ ಮಾಹಿತಿ ಆಯುಕ್ತರು ಎಚ್. ಪಿ. …

Read More »