BigTv News
December 10, 2024
Uncategorized
ಬೆಳಗಾವಿ: ಜೈನ ಧರ್ಮದ ಅಹಿಂಸಾ ತತ್ವ ಸಮಾಜಕ್ಕೆ ಮಾದರಿಯಾಗಿದೆ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಅವುಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ತಾಲ್ಲೂಕಿನ ಬಸ್ತವಾಡದಲ್ಲಿ ಕರ್ನಾಟಕ ಸಮಸ್ತ ಜೈನ ಅಲ್ಪ ಸಂಖ್ಯಾತರ ಹೋರಾಟ ಸಮಿತಿ ಸೋಮವಾರ ಆಯೋಜಿಸಿದ್ದ ಜೈನ ಸಮಾವೇಶದಲ್ಲಿ ಜೈನ ಸಮುದಾಯದವರ ಬೇಡಿಕೆಗಳನ್ನು ಆಲಿಸಿ ಅವರು ಮಾತನಾಡಿದರು. ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕೊಟ್ಟಿದ್ದು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ. ನಿಮ್ಮ ಯಾವುದೇ …
Read More »
BigTv News
December 10, 2024
Uncategorized
ನವದೆಹಲಿ: ಉಚಿತ ಪಡಿತರ ನೀಡುವ ಬದಲು ಹೆಚ್ಚಿನ ಉದ್ಯೋಗ ಸೃಷ್ಟಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಿವಿಹಿಂಡಿದೆ. ಆಹಾರ ಭದ್ರತಾ ಕಾಯ್ದೆಯಡಿ ಆಹಾರ ಒದಗಿಸುವ ವಿಷಯದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್, ಬಡವರಿಗೆ ಉಚಿತ ಪಡಿತರವನ್ನು ನೀಡುವ ಬದಲು ಉದ್ಯೋಗ ಸೃಷ್ಟಿಗೆ ಕೇಂದ್ರೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಪಡಿತರ ನೀಡುವ ಚಾಲ್ತಿಯಲ್ಲಿರುವ ಪರಿಪಾಠ ಮುಂದುವರಿದರೆ, ಧಾನ್ಯಗಳನ್ನು ಒದಗಿಸುವ ಹೊಣೆಗಾರಿಕೆ ಕೇಂದ್ರದ ಮೇಲಿದೆ ಎಂದು ತಿಳಿದಿರುವುದರಿಂದ ರಾಜ್ಯ ಸರ್ಕಾರಗಳು …
Read More »
bigtvnews22
December 10, 2024
Uncategorized
ನವಲಗುಂದ: ಕ್ಷೇತ್ರದ ಚಕ್ಕಡಿ ರಸ್ತೆ ಹಾಗೂ ನೂತನವಾಗಿ ನಿರ್ಮಿಸಲಾಗಿರುವ ಆಶ್ರಯ ಬಡಾವಣೆಯನ್ನು ಸಿಎಂ ರಾಜಕೀಯ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ ವೀಕ್ಷಿಸಿದರು. ನಗರದ ಕರೆಕಲ್ಲವ್ವನ ದಾರಿ ಹಾಗೂ ಆಶ್ರಯ ಬಡಾವಣೆಗೆ ಭೇಟಿ ವೀಕ್ಷಣೆ ಮಾಡಿ ಮಾತನಾಡಿದ ಅವರು ಶಾಸಕ ಎನ್.ಎಚ್.ಕೋನರಡ್ಡಿ ರೈತರ ಹೊಲಕ್ಕೆ ಹೋಗಲು ನಮ್ಮ ಹೊಲ ನಮ್ಮ ರಸ್ತೆ ಕೆಲಸ ಹಾಗೂ ಬಡವರಿಗೆ ಆಶ್ರಯ ಯೋಜನೆಯ ಕಾಮಗಾರಿ ಆದರ್ಶ ಕಾಮಗಾರಿಗಳಾಗಿದ್ದು ತಮ್ಮ ಕ್ಷೇತ್ರದಲ್ಲಿ ಯೋಜನೆ ಅನುಷ್ಠಾನಿಸುವ …
Read More »
Shaikh BigTv
December 10, 2024
Uncategorized
ನವಲಗುಂದ: ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗಳಾದ ಮಹದಾಯಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಕೇವಲ ರಾಜಕೀಯಕ್ಕೆ ಬಳಸಿಕೊಂಡಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆರೋಪಿಸಿದರು. ಪಟ್ಟಣದಲ್ಲಿರುವ ರೈತ ಹುತಾತ್ಮ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಈ ಭಾಗದಲ್ಲಿ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟಗಾರರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ ಕೇಂದ್ರ ಹಾಗೂ ರಾಜ್ಯ ಎರಡು ಸರಕಾರಗಳ ಅದನ್ನು ರಾಜಕೀಯವಾಗಿ ಬಳಕೆ ಮಾಡಿಕೊಂಡಿವೆ. ಕೃಷ್ಣಾ …
Read More »
Shaikh BigTv
December 10, 2024
Uncategorized
ನವಲಗುಂದ: ವಾಹನ ಸಾಲಗಾರರಿಗೆ ಕೀ ವಿತರಿಸಿ, ಬ್ಯಾಂಕಿನಿಂದ ವಿತರಿಸಿದ ಹೊಸ ಟ್ರ್ಯಾಕ್ಟರ್ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಸಹಕಾರಿ ರತ್ನ ಪುರಸ್ಕೃತ ಹಾಗೂ ಧಾರವಾಡ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ಸಂತಿ ಅರ್ಬನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ, ಸಹಕಾರಿ ರತ್ನ ಪುರಸ್ಕೃತ ಎ.ಬಿ.ಉಪ್ಪಿನ ಹಾಗೂ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಹಕಾರಿ ಅಭಿವೃದ್ಧಿ ಅಧಿಕಾರಿ ವಿ.ಕೆ.ಚಿಕ್ಕಮಠ ಅವರನ್ನು ಸನ್ಮಾನಿಸಲಾಯಿತು. ಕೆಸಿಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ …
Read More »
bigtvnews22
December 10, 2024
Uncategorized
ಕುಂದಗೋಳ : ಅತಿವೇಗವಾಗಿ ಮಿನಿ ಬಸ್ ಚಲಾಯಿಸಿಕೊಂಡು ಚಾಲಕನೋರ್ವ ಸಾರಿಗೆ ಬಸ್ ಓವರಟೆಕ್ ಮಾಡುವ ಭರದಲ್ಲಿ ಬೋಲೆರೊ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಪಡಿಸಿದ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೌದು ! ಹುಬ್ಬಳ್ಳಿ ಎಡೆಗೆ ಹೊರಟಿದ್ದ ಮಿನಿ ಬಸ್ ಚಾಲಕ ಸಣ್ಣಗೋವಿಂದಪ್ಪ ಅಮಾತಿ ಎಂಬಾತ ತನ್ನ ಮುಂದೆ ರಸ್ತೆ ಮೇಲೆ ಹೊರಟಿದ್ದ ಸಾರಿಗೆ ಬಸ್ ಓವರಟೆಕ್ ಮಾಡುವ ಭರದಲ್ಲಿ ಬೋಲೆರೊ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದಾನೆ. ಈ …
Read More »
BigTv News
December 10, 2024
Uncategorized
ಬೆಂಗಳೂರು: ರಾಜ್ಯ ಸರಕಾರಿ ಪ್ರಾಥಮಿಕ ಪ್ರೌಢಶಾಲೆಗಳಲ್ಲಿನ ಅತಿಥಿ ಶಿಕ್ಷಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆಗೆ ಕಳುಹಿಸಿದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಮೇಲ್ಮನೆಯಲ್ಲಿ ಸೋಮವಾರ ಬಿಜೆಪಿಯ ಡಾ.ಧನಂಜಯ ಸರ್ಜೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಗೌರವ ಧನ ಮೊತ್ತವನ್ನು 2022ರಲ್ಲಿ ಆರ್ಥಿಕ ಇಲಾಖೆಯು ಪರಿಷ್ಕರಿಸಲು ಅನುಮತಿ ನೀಡಿತ್ತು. …
Read More »
BigTv News
December 10, 2024
Uncategorized
ಬೆಳಗಾವಿ: ಪ್ರವರ್ಗ ‘2ಎ’ ಮೀಸಲಾತಿಗೆ ಆಗ್ರಹಿಸಿ, ಸುವರ್ಣ ವಿಧಾನಸೌಧ ಬಳಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಳ್ಳಲು ಜನಸಾಗರವೇ ಹರಿದುಬರುತ್ತಿದೆ. ವಿವಿಧೆಡೆಯಿಂದ ಬರುತ್ತಿರುವ ಟ್ರ್ಯಾಕ್ಟರ್‌ಗಳನ್ನು ಹಿರೇಬಾಗೇವಾಡಿ ಬಳಿಯೇ ತಡೆಯಲಾಗಿದೆ. ಹಾಗಾಗಿ ಜನರು ಕಾಲ್ನಡಿಗೆ ಮೂಲಕವೇ ಪ್ರತಿಭಟನಾ ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಒಬ್ಬೊಬ್ಬರೇ ನಾಯಕರು ಬಂದು ಭಾಗಿಯಾಗುತ್ತಿದ್ದಾರೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಇದೀಗ ವೇದಿಕೆಗೆ ಬಂದಿದ್ದು, ಸಾವಿರಾರು ಕಾರ್ಯಕರ್ತರು ಜೈಕಾರ ಹಾಕುತ್ತಿದ್ದಾರೆ. …
Read More »
BigTv News
December 10, 2024
Uncategorized
ಯಾದಗಿರಿ: ವಿಜಯಪುರದ ಆಲಮಟ್ಟಿ ಮತ್ತು ಯಾದಗಿರಿ ನಡುವಣ 91 ವರ್ಷದ ಹಳೆಯದಾದ ರೈಲು ಮಾರ್ಗ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. 1933ರ ದಶಕದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಈ ಮಾರ್ಗದಲ್ಲಿ ರೈಲ್ವೆ ಯೋಜನೆ ಯೋಜಿಸಲಾಗಿತ್ತು. ಆದರೆ, ಸ್ವಾತಂತ್ರ್ಯ ಸಂಗ್ರಾಮ ತೀವ್ರಗೊಂಡ ನಂತರ ಅದನ್ನು ನಿಲ್ಲಿಸಲಾಗಿತ್ತು. ಪ್ರಸ್ತಾವಿತ ರೈಲು ಮಾರ್ಗವು ಅನುಷ್ಠಾನಗೊಂಡರೆ, ವಿಶಾಖಪಟ್ಟಣಂ ಅನ್ನು ಗೋವಾಕ್ಕೆ ಸಂಪರ್ಕಿಸುತ್ತದೆ. ಕರ್ನಾಟಕದ ಎರಡು ಪ್ರಮುಖ ಪ್ರದೇಶಗಳಾದ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಬೆಸೆಯಲಿದೆ. ಆಲಮಟ್ಟಿ, …
Read More »
BigTv News
December 10, 2024
Uncategorized
ನವದೆಹಲಿ : ದೇಶಾದ್ಯಂತ ಒಟ್ಟು 994 ಆಸ್ತಿಗಳನ್ನು ವಕ್ಫ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದ್ದು, ಅದರಲ್ಲಿ ತಮಿಳುನಾಡು ಮಾತ್ರ ಅತಿ ಹೆಚ್ಚು ಅಂದರೆ 734 ಆಸ್ತಿಗಳನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ತಿಳಿಸಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ನಾಯಕ ಜಾನ್ ಬ್ರಿಟಾಸ್ ಅವರ ಪ್ರಶ್ನೆಗಳಿಗೆ ಲಿಖಿತ ಉತ್ತರದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ವಕ್ಫ್ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಉಲ್ಲೇಖಿಸಿ, ದೇಶದಲ್ಲಿ 872,352 ಸ್ಥಿರ …
Read More »