admin
December 14, 2021
Breaking News, ಅಪರಾಧ, ಕರ್ನಾಟಕ, ಚಾಮರಾಜನಗರ
ಚಾಮರಾಜನಗರ : ವರದಕ್ಷಿಣೆ ಕಿರುಕುಳದಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಉಡಿಗಾಲದಲ್ಲಿ ಸೋಮವಾರ ನಡೆದಿದೆ. ಉಡಿಗಾಲದ ಜಯಶಂಕರ್ ಎಂಬುವವರ ಪತ್ನಿ 24 ವರ್ಷದ ದಿವ್ಯಾ ಅವರು ಮೃತಪಟ್ಟವರು. ಮಗಳನ್ನು ವರದಕ್ಷಿಣೆಗಾಗಿ ಹಿಂಸಿಸಿ, ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ದಿವ್ಯ ಅವರ ತಂದೆ ದೇವಪ್ಪ ಅವರು ಚಾಮರಾಜನಗರದ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ದಿವ್ಯ ಅವರ ಪತಿ ಜಯಶಂಕರ್, ಮಾವ ಸಿದ್ದಮಲ್ಲಪ್ಪ, ಅತ್ತೆ ಸುಂದ್ರಮ್ಮ, ಬಾವ ಚಂದ್ರಶೇಖರ್ ಹಾಗೂ ಅವರ …
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಚಾಮರಾಜನಗರದಲ್ಲಿ ಆಯೋಜಿಸಲಾಗಿದೆ. ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಕೆಂಪೇಗೌಡ ರಥಕ್ಕೆ ಸಮುದಾಯದ ಮುಖಂಡರು ಚಾಲನೆ ನೀಡಿದರು. ವಿವಿಧ ಕಲಾ ತಂಡಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಮುದಾಯದ ಮುಖಂಡರು ಮೆರವಣಿಗೆಯಲ್ಲಿ ಭಾಗಿಯಾಗಿ, ಕೆಂಪೇಗೌಡರಿಗೆ ಜಯಘೋಷಣೆಗಳನ್ನ ಕೂಗಿ ಹರ್ಷ ವ್ಯಕ್ತಪಡಿಸಿದರು. ಬಳಿಕ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಜಿಲ್ಲಾ …
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ಚಾಮರಾಜನಗರ:- ನಾಯಕ ಜನಾಂಗಕ್ಕೆ 7.5% ಮೀಸಲಾತಿ ಜಾರಿಮಾಡಬೇಕೆಂದು ಒತ್ತಾಯಿಸಿ ನಾಯಕ ಸಮುದಾಯದ ಮುಖಂಡರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನಾಯಕ ಜನಾಂಗದ ಮುಖಂಡರು, ಪಚ್ಚಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಮಾಜಿ ಜಿಲ್ಲಾಪಂಚಾಯತ್ ಅಧ್ಯಕ್ಷ ಎಂ.ರಾಮಚಂದ್ರ, ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡುವ ಸಲುವಾಗಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿ ಸಾಂಕೇತಿಕವಾಗಿ …
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ಚಾಮರಾಜನಗರದ ನಗರಸಭೆ ನಿರ್ಲಕ್ಷ್ಯವನ್ನು ಖಂಡಿಸಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಮುಂದೆ ತಮಟೆ ಚಳುವಳಿ ನಡೆಸಿದ ಪ್ರತಿಭಟನಾಕಾರರು ನಗರಸಭೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾತನಾಡಿದ ಶ್ರೀನಿವಾಸಗೌಡ, ಪಟ್ಟಣದಲ್ಲಿ ಹಲವಾರು ದಿನಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಜನಸಾಮಾನ್ಯರು ಹಾಗೂ ವಾಹನ ಸವಾರರು ಓಡಾಟ ನಡೆಸಲು ತೊಂದರೆಯಾಗುತ್ತಿದೆ. ಅಲ್ಲದೇ ಒಳಚರಂಡಿ ಕಾಮಗಾರಿ ಸರಿಯಾದ ರೀತಿಯಲ್ಲಿ ಆಗದೇ ಅಲ್ಲಲ್ಲಿ ಗುಂಡಿಗಳು ಬಾಯಿ ತೆರೆದು ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿದೆ …
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ಚಾಮರಾಜನಗರ ಜಿಲ್ಲೆಯಾಗಲು ನನ್ನ ಶ್ರಮ ಅಪಾರ ಇದು ಹಿಂದುಳಿದ ಗಡಿಪ್ರದೇಶವಾಗಿದ್ದು, ಇನ್ನೂ ಸಾಕಷ್ಟು ಅಭಿವೃದ್ದಿ ಕಾಣಬೇಕಾಗಿದೆ ಅದಕ್ಕಾಗಿ ಜಿಲ್ಲೆಗೆ ವಿಶೇಷವಾದ ಅನುದಾನ ಮತ್ತು ಒಂದು ಪ್ಯಾಕೇಜ್ ನೀಡಬೇಕು ಎಂದು ಮಾಜಿ ಶಾಸಕ ವಾಟಾಳ್ ನಾಗರಾಜ್ ಇಂದಿಲ್ಲಿ ಆಗ್ರಹಿಸಿದರು.ಚಾಮರಾಜನಗರಕ್ಕೆ ನೀರು ತರಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವಾಗ ಭೀಕರ ಬರಗಾಲ ಉಂಟಾಗಿದ್ದು ಗ್ರಾಮೀಣ ಪ್ರದೇಶ ಹಾಗೂ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಪಟ್ಟಣಕ್ಕೆ ಪ್ರತಿನಿತ್ಯ ಕುಡಿಯುವ ನೀರು, ಜಾನುವಾರುಗಳಿಗೆ …
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವ್ರು ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ನಡೆಸಿ, ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.ಮೊದಲಿಗೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗೇಟ್‍ನಲ್ಲಿ ಸ್ಥಳೀಯ ಮುಖಂಡರಿಂದ ಸ್ವಾಗತ ಸ್ವೀಕರಿಸಿದ ಸಚಿವರು, ಬಳಿಕ ತುಂಬಿದ ಬೆಂಡರವಾಡಿ ಕೆರೆಯನ್ನು ವೀಕ್ಷಿಸಿದ್ರು. ನಂತ್ರ ಬದನಗುಪ್ಪೆ ಗ್ರಾಮದ ರೈತ ನಾಗರಾಜು ಎಂಬುವವರಿಗೆ ಸೇರಿದ, ಮಳೆಗೆ ನೆಲಕಚ್ಚಿದ ಬಾಳೆ ಬೆಳೆಯನ್ನು ವೀಕ್ಷಿಸಿ, ಸ್ಥಳದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ರೈತ ನಾಗರಾಜು, ಜಿಲ್ಲಾಧಿಕಾರಿ ಕಾವೇರಿಯವರೊಂದಿಗೆ …
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ರಸ್ತೆಬದಿ ಬೈಕ್ ನಿಲ್ಲಿಸಿ ಮಗುವನ್ನು ಮೂತ್ರ ವಿಸರ್ಜನೆ ಮಾಡಿಸುತ್ತಿದ್ದ ಪೋಷಕರ ಮೇಲೆ ಲಾರಿ ಹರಿದ ಘಟನೆ ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದ ಬಳಿ ನಡೆದಿದೆ. ಬೈಕ್ ನಲ್ಲಿದ್ದ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐದು ವರ್ಷದ ಮಗು ಪಾರಾಗಿದೆ. ಮಾದೇಶ್(೫೦), ಮಣಿ(೩೫) ಮೃತ ದಂಪತಿಗಳು. ಚಾಮರಾಜನಗರದ ಕಾಗಲವಾಡಿಯಿಂದ ಮೈಸೂರಿಗೆ ತೆರಳುವಾಗ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲು ನಾನೇನು ಯುವಕನೇ? ಎಂದು ಚಾಮರಾಜನಗರದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿಕೆ ನೀಡಿದರು. ಪ್ರತಿಯೊಬ್ಬರಿಗೂ ಒಂದು ಕಾಲವಿರ್ತದೆ. ಅದರ ಆಧಾರದ ಮೇಲೆ ಕೆಲಸ ಮಾಡ್ತಾರೆ. ಯಾವಾಗಲೂ ಕಂಪ್ಲೇಂಟ್ ಮಾಡೋ ದೃಷ್ಟಿಯಲ್ಲಿ ಇರಬಾರದು. ಅಡ್ಜಸ್ಟ್ ಮಾಡ್ಕೊಂಡು ಹೋಗ್ಬೇಕು. ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡೋರು ಯಾರು? ಅವರು ಸೇಫ್ ಲೀಡರ್. ಅವ್ರು ನಮ್ಮ ನಾಯಕರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರಿದ್ದಾರೆ. ಮೇಜರ್ ಸರ್ಜರಿ ನಡೆಯುವ ಪ್ರಶ್ನೆಯೇ …
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ಜಿಂದಾಲ್ ಗೆ ಭೂಮಿ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟಿಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರು, ರೈತರು ಒಂದು ಎಕರೆ ಭೂಮಿ ಖರೀದಿಸಲು ಕಷ್ಟವಿದೆ. ರೈತರಿಗೆ ಸಾಗುವಳಿ ಭೂಮಿ ನೀಡುತ್ತಿಲ್ಲ. ಒಂದು ಎಕರೆ ಭೂಮಿ ಖರೀದಿಸಿ ನೋಂದಣಿ ಮಾಡಿಸಲು ನೂರೆಂಟು ದಾಖಲೆಗಳನ್ನ ಕೇಳಿ ಅಲೆದಾಡಿಸಲಾಗುತ್ತೆ. ಆದ್ರೆ ಜಿಂದಾಲ್ ಗೆ ಸರ್ಕಾರವೇ ಮೂರೂವರೆ ಸಾವಿರ ಎಕರೆ ಭೂಮಿ ನೀಡಲು ಮುಂದಾಗಿ. ಎಕರೆಗೆ …
Read More »
admin
September 12, 2019
ಚಾಮರಾಜನಗರ, ಜಿಲ್ಲೆ
ಶಿಥಿಲಗೊಂಡಿರುವ ಚಾಮರಾಜೇಶ್ವರ ರಥದ ಕಾಮಗಾರಿಯ ವಿಳಂಬ ನೀತಿ ವಿರೋಧಿಸಿ ಕರ್ನಾಟಕ ಸೇನಾಪಡೆ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿತು.ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಚಾ.ರಂ.ಶ್ರೀನಿವಾಸಗೌಡ, ಇತಿಹಾಸ ಪ್ರಸಿದ್ದ ಚಾಮರಾಜೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಸುಮಾರು ತಿಂಗಳುಗಳೇ ಕಳೆದರೂ ಅಭಿವೃದ್ಧಿ ಕಾರ್ಯ ಪ್ರಾರಂಭಗೊಂಡಿಲ್ಲ ಎಂದು ಆರೋಪಿದರು. …
Read More »