Breaking News

ನ್ಯೂಯಾರ್ಕ್

ಸ್ಟಾರ್ ಶಿಪ್ ನೌಕೆ ಸ್ಪೋಟ ನ್ಯೂಯಾರ್ಕ್ ನಲ್ಲಿ ನಡೆದ ಘಟನೆ.

ಉದ್ಯಮಿ ಎಲೆನ್ ಮಸ್ಕ್ ಒಡೆತನದ “ಸ್ಪೇಸ್ ಎಕ್ಸ್ ” ಕಂಪನಿಯ ಬೃಹತ್ ಸ್ಟಾರ್ ಶಿಪ್ ನೌಕೆಯ 8 ನೇ ಪರೀಕ್ಷಾತ್ರ ಉಡಾವಣೆಯ ವೇಳೆ ಅದು ಬಾಹ್ಯಕಾಶದಲ್ಲಿ ಸ್ಫೋಟಗೊಂಡಿದೆ. ಇದರೊಂದಿದೆ ಸ್ಪೇಸ್ಕ್ಸ್ ಗೆ ದೊಡ್ಡ ಹಿನ್ನಲೆಯಾಗಿದೆ. ಟೆಕ್ಸ್ಚರ್ಸ್ ನ ಬೊಕ ಚಿಕ್ಕದಲ್ಲಿರುವ ಉಡಾವಣೆಯ ಕೇಂದ್ರದಿಂದ ಸ್ಟಾರ್ಷಿಪ್ ನೌಕೆಯು ಗುರುವಾರ ರಾತ್ರಿ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಂಡಿದೆ.

Read More »

ಇರಾನ್‌ ಮನವಿ ಮೇರೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತುಸಭೆ

ನ್ಯೂಯಾರ್ಕ್: ತನ್ನ ವಿರುದ್ಧ ಇಸ್ರೇಲ್‌ ನಡೆಸಿದ ದಾಳಿ ಸಂಬಂಧ ತುರ್ತು ಸಭೆ ನಡೆಸುವಂತೆ ಇರಾನ್‌ ಮಾಡಿದ್ದ ಮನವಿಯ ಅನುಸಾರ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂದು (ಸೋಮವಾರ) ಮಧ್ಯಾಹ್ನ ಸಭೆ ಕರೆದಿದೆ. ಯುಎನ್‌ಎಸ್‌ಸಿ ಅಧ್ಯಕ್ಷತೆ ವಹಿಸಿಕೊಂಡಿರುವ ಸ್ವಿಟ್ಜರ್‌ಲ್ಯಾಂಡ್‌, ತುರ್ತು ಸಭೆ ಆಯೋಜನೆ ಬಗ್ಗೆ ಭಾನುವಾರ ಹೇಳಿಕೆ ನೀಡಿದೆ. ಇರಾನ್‌ ಮನವಿಯನ್ನು ರಷ್ಯಾ, ಚೀನಾ ಮತ್ತು ಅಲ್ಜೀರಿಯಾ ಬೆಂಬಲಿಸಿವೆ ಎಂದು ತಿಳಿಸಿದೆ. ಇದೇ ತಿಂಗಳ ಆರಂಭದಲ್ಲಿ ಇಸ್ರೇಲ್‌ ವಿರುದ್ಧ ಇರಾನ್‌ ಕ್ಷಿಪಣಿ ದಾಳಿ …

Read More »

ಹೊಸ ಬೆಳವಣಿಗೆಯ ಅವಕಾಶ ಬಳಸಿಕೊಳ್ಳಲು ಭಾರತ ಬದ್ಧ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ನ್ಯೂಯಾರ್ಕ್: ಜಾಗತಿಕ ಆರ್ಥಿಕ ವಾತಾವರಣವು ಸವಾಲುಗಳನ್ನು ಎದುರಿಸಬಹುದು ಆದರೆ ಹೊಸ ಬೆಳವಣಿಗೆಯ ಅವಕಾಶಗಳನ್ನು ಬಳಸಿಕೊಳ್ಳಲು ಭಾರತವು ಉತ್ತಮ ಸ್ಥಾನದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಲ್ಲಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಭಾರತದ ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಸವಾಲು ಮತ್ತು ಅನಿಶ್ಚಿತ ಜಾಗತಿಕ ಪರಿಸರದ ನಡುವೆ ಭವಿಷ್ಯ ಕುರಿತು ವಿಶೇಷ ಉಪನ್ಯಾಸ ನೀಡುವಾಗ ಸೀತಾರಾಮನ್ ಈ ಹೇಳಿಕೆಗಳನ್ನು ನೀಡಿದರು. ಭಾರತವು ದೇಶೀಯ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಬಾಹ್ಯ ಆಘಾತಗಳ ವಿರುದ್ಧ …

Read More »

ಆರ್ಥಿಕ ಪ್ರಗತಿಯಲ್ಲಿ ಗಮನಾರ್ಹ ಸಾಧನೆ: ಯು ಎನ್ ಎಸ್ ಸಿ ಯಲ್ಲಿ ಖಾಯಂ ಸದಸ್ಯತ್ವ ಪಡೆಯಲು ಭಾರತ ಅರ್ಹ ಎಂದ ಭೂತಾನ್

ನ್ಯೂಯಾರ್ಕ್‌: ಆರ್ಥಿಕ ಪಗ್ರತಿಯಲ್ಲಿ ಗಮನಾರ್ಹ ಸಾಧನೆ ತೋರುತ್ತಿರುವ ಮತ್ತು ಜಾಗತಿಕ ನಾಯಕತ್ವ ವಹಿಸುತ್ತಿರುವ ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಕಾಯಂ ಸದಸ್ಯತ್ವ ಪಡೆಯಲು ಅರ್ಹವಾಗಿದೆ ಎಂದು ಭೂತಾಪ್‌ ಪ್ರಧಾನಿ ಶೆರಿಂಗ್‌ ಟೊಬಗೆ ಹೇಳಿದ್ದಾರೆ. ತೀರಾ ಹಿಂದುಳಿದ ದೇಶಗಳ (ಎಲ್‌ಡಿಸಿ) ಕೆಟಗರಿಯಿಂದ ಪ್ರಗತಿಯತ್ತ ಮುನ್ನಡೆಯಲು ಭೂತಾನ್‌ಗೆ ಭಾರತ ನೀಡಿದ ನೆರವು ಮತ್ತು ಸ್ನೇಹಕ್ಕಾಗಿ, ಟೊಬಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವಿಶ್ವಸಂಸ್ಥೆಯ ಮಹಾ ಅಧಿವೇಶನದ 79ನೇ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯು ಪ್ರಸ್ತುತ …

Read More »

ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪ್ರಧಾನಿ ಮೋದಿ ನಾಳೆ ಭಾಷಣ

ನ್ಯೂಯಾರ್ಕ್‌: ಭಾರತೀಯ ಸಮುದಾಯದ ಕಾರ್ಯಕ್ರಮ ಹಾಗೂ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನ್ಯೂಯಾರ್ಕ್‌ ತಲುಪಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮ ತವರು ಡೆಲವೇರ್‌ ರಾಜ್ಯದ ವಿಲ್ಮಿಂಗ್ಟನ್‌ನಲ್ಲಿ ಶನಿವಾರ ಆಯೋಜಿಸಿದ್ದ ಕ್ವಾಡ್‌ ಶೃಂಗ ಸಭೆ ಮುಕ್ತಾಯದ ಬಳಿಕ ಮೋದಿ, ನ್ಯೂಯಾರ್ಕ್‌ಗೆ ಬಂದಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಗೂ ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ ಅವರೂ ಕ್ವಾಡ್‌ ಶೃಂಗ ಸಭೆಯಲ್ಲಿ ಹಾಜರಾಗಿದ್ದರು. …

Read More »

ಯುದ್ಧ ಇಡೀ ಜಗತ್ತನ್ನು ನಿಧಾನವಾಗಿ ಸಾವಿನ ಕೂಪಕ್ಕೆ ತಳ್ಳುತ್ತಿದೆ…

ನ್ಯೂಯಾರ್ಕ್: ಯುದ್ಧ ಇಡೀ ಜಗತ್ತನ್ನು ನಿಧಾನವಾಗಿ ಸಾವಿನ ಕೂಪಕ್ಕೆ ತಳ್ಳುತ್ತಿದೆ. ಅತ್ತ ಹಮಾಸ್ ಮತ್ತು ಇಸ್ರೇಲ್ ಮಧ್ಯೆ ಭೀಕರ ಕಾಳಗ ನಡೆಯುತ್ತಿದ್ದರೆ, ಇನ್ನೊಂದ್ಕಡೆ ಉಕ್ರೇನ್ ಹಾಗೂ ರಷ್ಯಾ ಹಾವು & ಮುಂಗುಸಿ ರೀತಿ ಕಿತ್ತಾಡುತ್ತಿವೆ. ಹೀಗೆ ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲೇ ವಿಶ್ವಸಂಸ್ಥೆ ಹಮಾಸ್ ಉಗ್ರರಿಗೆ ಖಡಕ್ ಸೂಚನೆ ನೀಡಿದೆ. ಹಾಗಾದರೆ ಈಗ ಹಮಾಸ್‌ಗೆ ವಿಶ್ವಸಂಸ್ಥೆ ನೀಡಿರುವ ಸಂದೇಶ ಏನು?ಯಾರದ್ದೋ ಕಿಚ್ಚು ಇನ್ಯಾರದ್ದೋ ಕಿತ್ತಾಟ. ಆದ್ರೂ ಅಮಾಯಕರು ಸಾಯುವುದು ಎಷ್ಟು …

Read More »

ಪ್ಯಾಲೆಸ್ತೀನ್‌ ಸ್ವತಂತ್ರವಾಗಲಿ ಎಂದು ಘೋಷಣೆ….

ನ್ಯೂಯಾರ್ಕ್: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಬಾಂಬ್ ದಾಳಿಯನ್ನು ಖಂಡಿಸಿ ಸಾವಿರಾರು ಪ್ರತಿಭಟನಾಕಾರರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಬೀದಿಗಿಳಿದಿದ್ದಾರೆ. ಪ್ಯಾಲೆಸ್ತೀನ್‌ ಸ್ವತಂತ್ರವಾಗಲಿ ಎಂದು ಘೋಷಣೆ ಕೂಗಿದ್ದಾರೆ. ಅಮೆರಿಕ ಸರ್ಕಾರ ಇಸ್ರೇಲ್‌ ಪರ ಬ್ಯಾಟ್‌ ಬೀಸಿದ ಸಂದರ್ಭದಲ್ಲೇ ಈ ಪ್ರತಿಭಟನೆಗಳು ಭುಗಿಲೆದ್ದಿವೆ. ಇದು ಯುಎಸ್‌ ಅಧ್ಯಕ್ಷ ಜೋ ಬೈಡನ್‌ ಅವರನ್ನು ಚಿಂತೆಗೀಡು ಮಾಡಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.ಇಸ್ರೇಲಿ ಆಕ್ರಮಣ ಗಾಜಾದ ಮೇಲೆ ಅಕ್ರಮಣ ಮಾಡುತ್ತಿದೆ. ಪ್ಯಾಲೆಸ್ತೀನ ಪ್ರದೇಶಗಳು ವಿಮೋಚನೆಯಾಗಬೇಕಿದೆ’ ಎಂದು ಪ್ರತಿಭಟನಾಕಾರರು ಘೋಷಣೆಯನ್ನು ಕೂಗಿದ್ದಾರೆ.

Read More »