Breaking News

Crime

ಚೆನೈ: ಹಾಡಹಗಲೇ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ, ವಿಡಿಯೋ ವೈರಲ್.!

ಚೆನ್ನೈನಲ್ಲಿ ಹಾಡಹಗಲೇ ಹೆದ್ದಾರಿಯಲ್ಲಿ ಕೆಲವು ಆಕ್ರಮಣಕಾರರು ಪೊಲೀಸ್ ಅಧಿಕಾರಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ.ಚಾಕುಗಳಿಂದ ಪೊಲೀಸ್ ಅಧಿಕಾರಿಯ ತಲೆಯನ್ನು ಕತ್ತರಿಸಿ ಕೊಂದಿದ್ದಾರೆ. ರಂಜಾನ್ ಉಪವಾಸದ ಭಾಗವಾಗಿ ದರ್ಗಾಕ್ಕೆ ಹೋಗಿ ನಂತರ ಮನೆಗೆ ಮರಳಿದರು. ಅದೇ ಸಮಯದಲ್ಲಿ, ಕೆಲವು ಆಕ್ರಮಣಕಾರರು ಬೈಕ್‌ನಲ್ಲಿ ಬಂದು ಜಾಕಿರ್ ಹುಸೇನ್ ಮೇಲೆ ಚಾಕುಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಝಾಕೀರ್ ಎಷ್ಟೇ ಪ್ರಯತ್ನಿಸಿದರೂ ವಿಫಲರಾಗಿದ್ದಾರೆ. ಅವರು ಕಾರಿನಲ್ಲಿದ್ದಾಗ ಅವರ ಮೇಲೆ ಚಾಕುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

Read More »

ಅಂಕಲ್ ಕಿರುಕುಳಕ್ಕೆ ಬೇಸತ್ತು ಯುವತಿ ದುಡುಕಿನ ನಿರ್ಧಾರ

ಗದಗ ಜಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದ ಯುವತಿಗೆ 47 ವರ್ಷದ ಕಿರಣ ಕಾರಬಾರಿ ಎಂಬಾತ ಮದುವೆ ಆಗು ಅಂತಾ ಕಿರುಕುಳ ನೀಡುತ್ತಿದ್ದನಂತೆ. ಕಿರಣನ ಕಿರುಕುಳಕ್ಕೆ ಬೇಸತ್ತ ಯುವತಿ ಗದಗ ನಗರದ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಪೆನಾಯಿಲ್ ಕುಡಿದು ಅಸ್ವಸ್ಥಳಾಗಿದ್ದಳ್ಳು. ಕೂಡಲೇ ಗದಗ ಜಿಮ್ಸ್ ಆಸ್ಪತ್ರೆ ದಾಖಲು‌ ಮಾಡಲಾಗಿತ್ತು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾಳೆ.ಮದುವೆ ಆಗದಿದ್ದರೆ ಇಬ್ಬರ …

Read More »

ಬೆಂಗಳೂರು : ಶಾಲಾ ವಾಹನದ ಮೇಲೆ ಕಲ್ಲು ಎಸೆದು ಹಲ್ಲೆ

ಮಿತಿಮೀರಿದೆ.ಹೋಳಿ ಹಬ್ಬದ ದಿನ ಲಾಲ್ ಬಾಗ್ ನ ಪುಂಡಾಟ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೇಸ್ ವರದಿಯಾಗಿದೆ.ಹೋಳಿ ಆಡುವಾಗ ದಾರಿಗಾಗಿ ಹಾರ್ನ್ ಹೊಡೆದಿದ್ದಕ್ಕೆ ಶಾಲಾ ವಾಹನದ ಮೇಲೆ‌ ಕಲ್ಲು ಎಸೆದು ಕಿಡಿಗೇಡಿಗಳು ಅಟ್ಟಹಾಸ ತೋರಿದ್ದಾರೆ.ಇದನ್ನ ಪ್ರಶ್ನಿಸಿದ ಸ್ಕೂಲ್ ಬಸ್ ಡ್ರೈವರ್ ಮೇಲೂ 5-6 ಜನ ಯುವಕರಿಂದ‌ ಹಲ್ಲೆ ಮಾಡಿರೋದಾಗಿ ಕೇಸ್ ದಾಖಲಾಗಿದೆ.ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಹೋಳಿ ಹಬ್ಬದ ದಿನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎನಿಟೈಮ್ ವಾಟರ್ ಪ್ಲಾಂಟ್ ನಲ್ಲಿ …

Read More »

ಹಾವೇರಿ : ಸ್ವಾತಿ‌ ಬ್ಯಾಡಗಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ

ಸ್ವಾತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಯಾವುದೇ ಕಾರಣಕ್ಕೂ ಅಪರಾಧಿಗಳು ಶಿಕ್ಷೆಯಿಂದ ಪಾರಾಗುವ ಅವಕಾಶ ನೀಡುವುದಿಲ್ಲ. ಹತ್ಯೆಗೀಡಾದ ಸ್ವಾತಿ ಅವರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧವಾಗಿದ್ದು, ಹತ್ಯೆ ಮಾಡಿದವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು. ಪ್ರಕರಣವನ್ನು ದುರ್ಬಲಗೊಳಿಸದಂತೆ ಎಚ್ಚರಿಕೆ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

Read More »

ಬೆಟ್ಟಿಂಗ್ ಆಪ್ ಪ್ರಚಾರ 25 ನಟ ನಟಿಯರ ಮೇಲೆ ಪ್ರಕರಣ ದಾಖಲು

ಬೆಟ್ಟಿಂಗ್ ಆಪ್ ಗಳನ್ನು ಪ್ರಚಾರ ಮಾಡಿದಕ್ಕಾಗಿ ವಿಜಯ ದೇವರಕೊಂಡ ಸೇರಿದಂತೆ 25ಕ್ಕೂ ಹೆಚ್ಚು ತೆಲುಗು ನಟ ನಟಿಯರ ವಿರುದ್ಧ ಹೈದರಾಬಾದ್ ನ ಮಿಯಾಪುರ್ ಪೋಲಿಸರ ಪ್ರಕರಣ ದಾಖಲೆ ಮಾಡಿದ್ದಾರೆ. ಈ ವಿಜಯ್ ದೇವರಕೊಂಡ ಪ್ರಕಾಶ್ ರಾಜ್ ಮಂಜು ಲಕ್ಷ್ಮಿ ಪ್ರನಿತಾ ನಿಧಿ ಅಗರವಾಲ್ ಮತ್ತೆ ನಿರೂಪಕರಾಧಾರಿತ ಚೌದ್ರಿ ಇನು ಊಳಿದ ಜನಗಳಿಂದ ಪ್ರಕರಣದ ದಾಖಲಾಗಿದೆ.

Read More »

14 ಸಾವಿರಕ್ಕೆ ಹೆಣ್ಣು ಮಗುವನ್ನು ಮಾರಾಟ ಮಾಡಿದ ಪಾಪಿ ಪೋಷಕರು

ಕರ್ನಾಟಕದಲ್ಲಿ ಮಕ್ಕಳ ಮಾರಾಟ ಜಾಲ ನಡೆಯುತ್ತಿದೆ. ಮೈಸೂರಿನಲ್ಲಿಂದು ಅವಮಾನ ಕೃತ್ಯ ನಡೆದಿದೆ. ಹೌದು ಕೇವಲ 14 ಸಾವಿರ ರೂಪಾಯಿಗೆ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿದೆ ಎನ್ನು ಆರೋಪ ಕೇಳಲಾಗಿದೆ. ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ನೀಲಕಂಠ ನಗರದಲ್ಲಿ ನಡೆದಿದೆ. ಅನಿಲ್ ಕುಮಾರ್ ಮತ್ತು ಸೌಮ್ಯ ದಂಪತಿಗಳು ಮಗುವನ್ನು ಕೇವಲ 14 ಸಾವಿರ ರೂಪಾಯಿಗೆ ಗುಂಡ್ಲುಪೇಟೆ ವ್ಯಕ್ತಿ ಒಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ

Read More »

ಸರಕಾರಿ ಬಸ್ ಕಂಡಕ್ಟರ್ ಮೇಲೆ ದುಷ್ಕರ್ಮಿಗಳ ಹಲ್ಲೆ

ಆಂಧ್ರಪ್ರದೇಶದ ಖಡಕ್ ಜಿಲ್ಲೆಯ ನಂದನೂರಿನ ಕೆಲ ಯುವಕರು ಕರ್ತವ್ಯ ನಿರತ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ ರಾಜಪೇಟೆ ಡಿಪೋಗೆ ಸೇರಿದ ಆರ್ಟಿಸ್ ಬಸ್ ಕಡಪ ಕಡೆ ತೆರಳುತ್ತಿದ್ದ ವೇಳೆ ಕಂಡಕ್ಟರ್ ಹಾಗೂ ಬಾಲಕನ ವಿರುದ್ಧ ದಾಳಿ ನಡೆಸಿದ್ದಾರೆ.

Read More »

ನವಲಗುಂದ್ , ಬೈಕ್ ಅಪಘಾತ ಸವಾರ ಸಾವು

ನವಲಗುಂದ್ ಪಟ್ಟಣದ ರೈತ ಭವನದ ಹತ್ತಿರ ವಾಹನವನ್ನು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ . ಅಣ್ಣಿಗೇರಿ ತಾಲೂಕಿನ ಬಸ್ಸಾಪುರ್ ಗ್ರಾಮದ ಯುವಕ ಎಂದು ಗುರುತಿಸಲಾಗಿದೆ ಸ್ಥಳಕ್ಕೆ ಪೊಲೀಸರ ಆಗಮಿಸಿ ತನಿಖೆ ಶುರು ಮಾಡಿದ್ದಾರೆ.

Read More »

ಮೀನು ಕದ್ದ ಆರೋಪ : ಮರಕೆ ಕಟ್ಟಿ ಮಹಿಳೆ ಮೇಲೆ ಹಲ್ಲೆ

ಮೀನು ಕದ ಆರೋಪದಡಿ ಮಹಿಳೆ ಒಬ್ಬರನ್ನು ಮರಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಮಲ್ಪೆ ಬಂದಿರಿನಲ್ಲಿ ಮೂರು ದಿನಗಳ ಹಿಂದೆ ನಡೆಯಲಾಗಿದೆ ಎಂದು ಎನ್ನಲಾಗಿದೆ ಮತ್ತು ಮಹಿಳೆ ಒಂದು ಬುಟ್ಟಿ ಮೀನು ಕದ್ದಿದ್ದಾಳೆ ಎಂದು ಆರೋಪಿಸಿ ಮತ್ತೊಬ್ಬ ಮಹಿಳೆ ಅವಳಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಬಳಿಕ ಮಹಿಳೆಯನ್ನು ಮರಕೆ ಕಟ್ಟಿ ಹಾಕಿ ಪ್ರತಿಯೊಬ್ಬ ಅವಾಚ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಎನ್ನಲಾಗಿದೆ …

Read More »

ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಬೆಟ್ಟಕ್ಕೆ ಕರೆದೊಯ್ದು ಮಹಿಳೆಮೇಲೆ ಲೈಂಗಿಕ ದೌರ್ಜನ್ಯ.!

ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಪವಿತ್ರ ಬೆಟ್ಟದಲ್ಲಿ ವ್ಯಕ್ತಿಯೊಬ್ಬ ಫ್ರೆಂಚ್ ಮಹಿಳೆಗೆ ಮೋಕ್ಷ ಕೊಡಿಸುತ್ತೇನೆಂದು ನಂಬಿಸಿ ಆಧ್ಯಾತ್ಮಿಕ ಹಿನ್ನೆಲೆಯುಳ್ಳ ಬೆಟ್ಟಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಬೆಟ್ಟದಿಂದ ಇಳಿದು ತಿರುವಣ್ಣಾಮಲೈ ಪಶ್ಚಿಮ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿ ವೆಂಕಟೇಶನನ್ನು ಬಂಧಿಸಿದ್ದಾರೆ. ಸಂತ್ರಸ್ತೆಗೆ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

Read More »