BigTv News
May 23, 2025
Breaking News, Crime
ಬೆಂಗಳೂರಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ನಾಲ್ವರು ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಯುವತಿ ಸೇರಿದಂತೆ ಅಬಕಾರಿ ಅಧಿಕಾರಿಗಳು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.ಬಂಧಿತರಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಒಡಿಶಾ ಮೂಲದ ಸಂಪತ್ ಪ್ರಧಾನ (23) ತಪಸ್ ಪ್ರಧಾನ್ (22) ಜಗನ್ ಪತಂಜಲಿ (24) ಹಾಗೂ ದೀಪಾಂಜಲಿ (22) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. …
Read More »
BigTv News
May 23, 2025
Breaking News, Crime
ಶಿಬಾಜೆಯ ಕುರುಂಜ ಮನೆಯ ಎದುರು ನಿಂತಿದ್ದ ವೇಳೆ ಸ್ಥಳೀಯ ನಿವಾಸಿ ಪ್ರವೀಣ್ ಎಂಬಾತನ ಮೇಲೆ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಹಲ್ಲೆಗೆ ಯತ್ನಿಸಿದ್ದರು. ಆನಂದ ಗೌಡ ಕೈಯಲ್ಲಿ ಕೊಡಲಿಯನ್ನು ಹಿಡಿದುಕೊಂಡು ಹಾಗೂ ತಿಮ್ಮಪ್ಪ ಪೂಜಾರಿ ಕಬ್ಬಿಣದ ಸಲಾಕೆಯನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಲು ಬಂದಿದ್ದು, ಈ ವೇಳೆ ಪ್ರವೀಣ್ ತಪ್ಪಿಸಿಕೊಂಡು ಮನೆಯೊಳಗೆ ಹೋಗಿ ಬಾಗಿಲು ಹಾಕಿದ್ದಾನೆ. ಈ ವೇಳೆ ಮನೆಯ ಅಂಗಳಕ್ಕೆ ಅಕ್ರಮ …
Read More »
BigTv News
May 23, 2025
Breaking News, Crime
ದಂಪತಿ ನಡುವೆ ಯಾವಾಗಲೂ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.ಹೀಗಾಗಿ ಮಾತುಕತೆ ಮೂಲಕ ಗಲಾಟೆ ಬಗೆಹರಿಸಲು ಸುಲೈಮಾನ್ ರಿಯಾಬ್ & ಸಿಯಾಬ್ ಎಂಬ ಇಬ್ಬರು ಪುತ್ರರೊಂದಿದೆ ಬಂದಿದ್ದು, ಈ ವೇಳೆ ಮುಸ್ತಫಾ ಸುಲೆಮಾನ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಈ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ವೇಳೆ ಆರೋಪಿಯ ದಾಳಿ ತಡೆಯಲು ಮುಂದಾದ ಮುಸ್ತಾಫಾ ಪುತ್ರ ಶಿಯಾಬ್ ಎದೆ ಭಾಗಕ್ಕೆ ಮತ್ತು ರಿಯಾಬ್ ಬಲ ತೋಳಿಗೆ ಚೂರಿಯಿಂದ ಹಲ್ಲೆ ಮಾಡಿದ್ದು …
Read More »
BigTv News
May 23, 2025
Breaking News, Crime
ಹೈದರಾಬಾದ್ನ ಮಿಯಾಪುರದಲ್ಲಿ ಆರ್ ಟಿಸಿ ಬಸ್ ಚಾಲಕನ ಮೇಲೆ ಆಟೋ ಚಾಲಕನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಆಟೋ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕನು ಕೋಪಗೊಂಡು ಹಲ್ಲೆ ಮಾಡಲು ಮುಂದಾಗಿದ್ದಾನೆ. ಆರ್‌ಟಿಸಿ ಬಸ್ ಕಾಚೆಗುಡದಿಂದ ಪತೆಂಚೇರಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.ವಿಡಿಯೋದಲ್ಲಿ ಆಟೋ ಚಾಲಕನು ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸುತ್ತಿರುವುದನ್ನು ನೋಡಬಹುದು. ಆಟೋ ಹೋಗಲು ದಾರಿ ಬಿಡಲಿಲ್ಲ ಎನ್ನುವ ಕಾರಣಕ್ಕೆ ಆಟೋ ಚಾಲಕನು ಕೋಪಗೊಂಡಿದ್ದಾನೆ. ಚಲಿಸುತ್ತಿದ್ದ …
Read More »
BigTv News
May 23, 2025
Breaking News, Crime
ರಂಗಸ್ವಾಮಿ ಹಾಗೂ ವಿನಯ್ ಕುಮಾರ್ ವೃತ್ತಿಯಲ್ಲಿ ಆಟೊ ಚಾಲಕರು. ಒಂದೇ ಬಡಾವಣೆಯ ನಿವಾಸಿಗಳು. ಮೇ 18ರ ರಾತ್ರಿ ಬಸವನಕಟ್ಟೆಯ ಬಾರ್ ಬಳಿ ರಂಗಸ್ವಾಮಿ ಕುಡಿದು ರಂಪಾಟ ಮಾಡುತ್ತಾ ಅಕ್ಕಪಕ್ಕದ ಮನೆಯವರನ್ನು ನಿಂದಿಸುತ್ತಿದ್ದರು. ಇದನ್ನು ವಿನಯ್ ಪ್ರಶ್ನಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ತಳ್ಳಾಟ, ನೂಕಾಟ ಸಂಭವಿಸಿದಾಗ ರಂಗಸ್ವಾಮಿ ಕೆಳಗೆ ಬಿದ್ದರು’ ಎಂದು ಪೊಲೀಸರು ತಿಳಿಸಿದರು.ಕೆಳಗೆ ಬಿದ್ದ ಗಾಯಗೊಂಡಿದ್ದ ರಂಗಸ್ವಾಮಿ ತಲೆಗೆ ಗಂಭೀರ ಪೆಟ್ಟಾಗಿತ್ತು. ಅವರನ್ನು ವಿಕ್ಟೋರಿಯಾ …
Read More »
BigTv News
May 23, 2025
Breaking News, Crime
ಮಾಲೀಕ ಮುಖೇಶ್ ಠಾಕೂರ್ ಮತ್ತು ಬಾಡಿಗೆದಾರ ಜತಿನ್ ಒಟ್ಟಿಗೆ ಮದ್ಯ ಸೇವಿಸುತ್ತಿದ್ದರು. ರಾತ್ರಿ, ಮುಖೇಶ್ ಎಚ್ಚರಗೊಂಡಾಗ, ಜತಿನ್ ತನ್ನ ಪತ್ನಿ ಸುಧಾಳ ಜೊತೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇರುವುದನ್ನು ಕಂಡು ಕೋಪಗೊಂಡನು.ಇದರಿಂದ ಮೂವರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಮರುದಿನ ಬೆಳಗ್ಗೆ ಸುಧಾ ಕಾರ್ಖಾನೆಗೆ ಕೆಲಸಕ್ಕೆ ಹೋದ ನಂತರ ಮುಖೇಶ್ ಮತ್ತು ಜತಿನ್ ನಡುವೆ ಮತ್ತೊಮ್ಮೆ ಕಲಹ ನಡೆದು ಕೊಲೆಗೆ ಕಾರಣವಯಿತು.
Read More »
Shaikh BigTv
May 23, 2025
Breaking News, Crime, ಕರ್ನಾಟಕ, ಹಾವೇರಿ
ಗ್ಯಾಂಗ್ ರೇಪ್ ಆರೋಪಿಗಳ ರೋಡ್ ಶೋ..?? ಜಾಮೀನು ಸಿಕ್ಕ ಮೇಲೆ ರೀಲ್ಸ್ ಮಾಡಿ ಹರಿಬಿಟ್ಟ ಪುಂಡರು… ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ 7 ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ರೋಡ್ ಶೋ ಮೂಲಕ ಪಟ್ಟಣದ ಬೀದಿ ಬೀದಿಗಳಲ್ಲಿ ಮೆರೆದಾಡಿರುವ ಘಟನೆ ನಡೆದಿದೆ. ಆಲೂರು ಪಟ್ಟಣದಲ್ಲಿ ಆರೋಪಿಗಳು 5 ಕಾರುಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.ಆರೋಪಿಗಳು ಮೆರವಣಿಗೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.2024ರ ಜ.8ರಂದು ಹಾನಗಲ್ ಹೊರವಲಯದಲ್ಲಿ …
Read More »
BigTv News
May 23, 2025
Breaking News, Crime
ಅತ್ಯಾಚಾರ ಕೇಸ್ ಗೆ ಸಂಬಂಧಿಸಿದಂತೆ ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರ್ ಮನುನನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬೆಂಗ್ಳೂರಿಗೆ ಕರೆತಂದಿದ್ದಾರೆ.ವಿಚಾರಣೆಯಲ್ಲಿ ಹಲವು ರಹಸ್ಯೆಗಳನ್ನು ಮನು ಬಾಯ್ಬಿಟ್ಟಿದ್ದಾರೆ.ಅದು ಅತ್ಯಾಚಾರ ಅಲ್ಲ, ಒಪ್ಪಂದದ ಸಂಪರ್ಕ. ನಟಿಯನ್ನು ಮದುವೆ ಆಗದ್ದೇನೆ. ಮೂವರ ಮಾತು ಕೇಳಿ, ಆಕೆ ದೂರು ನೀಡಿದ್ದಾಳೆ. ಇಬ್ಬರೂ ಹೀರೋ, ಒಬ್ಬಳು ಲೇಡಿ ಡಾನ್ ಮಾತು ಕೇಳಿ ದೂರು ದಾಖಲಿಸಿದ್ದಾಳೆ. ಲೇಡಿ ಡಾನ್ ನಟಿಗೆ ಆತ್ಮಿಯಳು. ಕಾಮಿಡಿ ಕಿಲಾಡಿಗಳು ಶೋ ನಟಿ ಅಂತ ಮನು …
Read More »
BigTv News
May 23, 2025
Breaking News, Crime
ಮಾನಸಿಕ ಅಸ್ವಸ್ಥನೋರ್ವ ತನ್ನ ಅಣ್ಣನ ಪುಟ್ಟ ಮಗುವನ್ನು ಕೊಂದು, ತುಂಡು ತುಂಡು ಮಾಡಿ ತಲೆಯನ್ನು ಕೆರೆಗೆ ಎಸೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮೊದಲೇ ಮಾನಸಿಕ ಅಸ್ವಸ್ಥನಾಗಿದ್ದ ಸಂಜಯ್, ಲೆಮೋರಿಯಾಳನ್ನು ಹಿತ್ತಲಿಗೆ ಎಳೆದುಕೊಂಡು ಹೋಗಿ, ಚಾಕು ತೆಗೆದುಕೊಂಡು ತಲೆಯನ್ನೇ ಕಡಿದಿದ್ದಾನೆ. ಮಗುವನ್ನು ಕೊಂದ ನಂತರ ಭಯಬಿದ್ದ ಸಂಜಯ್ ಕತ್ತರಿಸಿದ ತಲೆಯನ್ನು ಕೆರೆಯಲ್ಲಿ ಎಸೆದುಬಂದಿದ್ದಾನೆ.ಸುದ್ದಿ ತಿಳಿಯುತ್ತಿದ್ದಂತೆಯೇ ಎಮನೇಶ್ವರಂ ಪೊಲೀಸರು ಮಾಹಿತಿ ಪಡೆದು, ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ದೇಹ ಮತ್ತು ತಲೆ ಎರಡನ್ನೂ ಹೊರತೆಗೆಸಿದ್ದಾರೆ. …
Read More »
BigTv News
May 23, 2025
Breaking News, Crime
ಬೇಕರಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಟೆಂಪೋ ರಿಕ್ಷಾವನ್ನ ಬದಿಗೆ ಸರಿಸಲು ಹೇಳಿದ್ದಕ್ಕೆ ಕುಪಿತಗೊಂಡ ಚಾಲಕ ತನ್ನ ಸಹಚರ ರಿಕ್ಷಾ ಚಾಲಕನೊಂದಿಗೆ ಬೇಕರಿಗೆ ನುಗ್ಗಿ ಮಾಲಕ ಮತ್ತು ಅವರ ತಾಯಿಗೆ ಹಲ್ಲೆಗೆ ಯತ್ನಿಸಿದ್ದು, ರಿಕ್ಷಾ ಚಾಲಕರ ಪುಂಡಾಟಿಕೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.ತೊಕ್ಕೊಟ್ಟು ಜಂಕ್ಷನ್ ನಲ್ಲಿ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ಮಾರುತಿ ಸ್ವೀಟ್ಸ್ ಮಾಲಕರಾದ ಅಶ್ವಿನ್ ಕುಮಾರ್ ಅವರು ತಮ್ಮ ಬೇಕರಿ ಮುಂದುಗಡೆಯೇ ಅಡ್ಡಲಾಗಿ ನಿಲ್ಲಿಸಿದ್ದ ಟೆಂಪೋ ರಿಕ್ಷಾವನ್ನ ಸ್ವಲ್ಪ ಬದಿಗೆ ಸರಿಸುವಂತೆ …
Read More »