Breaking News

Crime

ವಿಟ್ಲ : ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯ ವರ್ತನೆ ಆರೋಪ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿರುದ್ಧ ಪ್ರಕರಣ ದಾಖಲು!

ವ್ಯಕ್ತಿಯೊರ್ವ ಮಹಿಳೆಗೆ ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾದ ಘಟನೆ ಇಡ್ಕಿದು ಗ್ರಾಮದ ಕೊಪ್ಪ ಎಂಬಲ್ಲಿ ನಡೆದಿದೆ.ಆರೋಪಿಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ಎಂದು ಗುರುತಿಸಲಾಗಿದೆ.ಮಹಿಳೆ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತನ್ನ ಮನೆಗೆ ಬರುವ ದಾರಿಯಲ್ಲಿ ಯಾರೋ ಕೆಲಸ ಮಾಡುವ ಶಬ್ದ ಕೇಳಿದ ಹಿನ್ನಲೆ ಸ್ಥಳಕ್ಕೆ ತೆರಳಿ ವಿಡಿಯೋ ಮಾಡಿದ್ದು, ಇದನ್ನು ನೋಡಿದ ಪದ್ಮನಾಭ ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Read More »

ಬೆಂಗಳೂರು : ಹೆರಿಗೆ ಆಸ್ಪತ್ರೆಯಲ್ಲಿ ಅವ್ಯವಸ್ಥೆ,ವೈದ್ಯರಿಗೆ ನಾಗಲಕ್ಷ್ಮೀ ಚೌಧರಿ ತರಾಟೆ!!

ಟಿ.ದಾಸರಹಳ್ಳಿಯ ಮಲ್ಲಸಂದ್ರ ಹೆರಿಗೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮೀ ಚೌಧರಿ, ವೈದ್ಯರು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದಾಗ, ಇರುವೆಗಳು, ಧೂಳು ಹಿಡಿದ ಉಪಕರಣಗಳು, ಬಳಸಿರುವ ಸಿರಿಂಜ್‌ಗಳು ಕಂಡು ಬಂತು. ವೈದ್ಯರ ಕೊರತೆಯಿಂದಾಗಿ ತಿಂಗಳಿನಿಂದ ಹೆರಿಗೆ ವಾರ್ಡ್ ಬಂದ್ ಆಗಿರುವ ವಿಚಾರ ತಿಳಿದು, ವೈದ್ಯಾಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಬಳಿಕ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಂಜುನಾಥನಗರ, ಕಾಟರಾಯನ ನಗರ, ಕರೇಕಲ್ಲು …

Read More »

ಕಲಬುರಗಿ: ಬಾಲಕಿ ಮೇಲೆ ಅತ್ಯಾಚಾರ, ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆ!

ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದರಿಂದ ತಾಲ್ಲೂಕಿನ ತಾಂಡಾವೊಂದರ ನಿವಾಸಿ ಸೋನು ತಾರಾಸಿಂಗ್ ಜಾಧವ್ (19) ಎಂಬಾತನಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹ 30 ಸಾವಿರ ದಂಡ ವಿಧಿಸಿದೆ.ಪಿಎಸ್‌ಐ ರೇಣುಕಾದೇವಿ ಹಾಗೂ ಪಿಐ ಸುಶೀಲಕುಮಾರ್ ಅವರು ಸೋನು ಜಾಧವ್ ವಿರುದ್ಧ ಬಿಎನ್‌ಎಸ್ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ …

Read More »

ಗೌರಿಬಿದನೂರು :ಕೆರೆ ಜಾಗ ಮಾರಾಟಕ್ಕೆ ಯತ್ನ,ಗ್ರಾಮಸ್ಥರ ವಿರೋಧ!

ಗ್ರಾಮದ ಜನರಿಗೆ ಕುಡಿಯುವ ನೀರಿಗಾಗಿ ಸರ್ಕಾರದಿಂದ ಎಂಟು ಕೊಳವೆ ಬಾವಿ ಕೊರೆಸಲಾಗಿದೆ. ಕೆರೆಯ ಕೋಡಿಯನ್ನು ಸಹ ಸರ್ಕಾರದಿಂದಲೇ ನಿರ್ಮಾಣ ಮಾಡಲಾಗಿದೆ. ₹20 ಲಕ್ಷ ನರೇಗಾ ಕಾಮಗಾರಿಯು ನಡೆದಿದೆ. ಇತ್ತೀಚೆಗೆ ಜಲ ಜೀವನ್ ಯೋಜನೆ ಅಡಿಯಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಇಷ್ಟ ಸರ್ಕಾರ ಕಾಮಗಾರಿ ನಡೆದಿರುವ ಜಾಗವನ್ನು ಕೆಲವರು ತಮ್ಮದೆಂದು ಮಾರಾಟಕ್ಕೆ ಯತ್ನಿಸಿರುವುದು ಅಪರಾಧ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಾಂತರಾಜು ದೂರಿದರು.ಕೆರೆಯಲ್ಲಿ ಸರ್ವೆ ನಂಬರ್ 22, 23,24,25 ಖಾಸಗಿ ಖಾತೆದಾರರ …

Read More »

ಸಾಗರ :ಪೂಜೆ ನೆಪದಲ್ಲಿ ಬಂಗಾರದ ಆಭರಣ ಕಳ್ಳತನ: ನಕಲಿ ಸ್ವಾಮೀಜಿ ಬಂಧನ!!

ಕಾಯಿಲೆ ವಾಸಿ ಮಾಡುತ್ತೇನೆ ಎಂದು ಹೇಳಿ ಮಹಿಳೆಯ ಮಾಂಗಲ್ಯ ಸರ, ಪುರುಷನ ಉಂಗುರವನ್ನು ಅಪಹರಿಸಿಕೊಂಡು ಹೋಗಿದ್ದ ಕಳ್ಳ ಸ್ವಾಮಿಯೋರ್ವನನ್ನು ಗುರುವಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪೂಜೆ ಮಾಡುವಾಗ ಹಿಟ್ಟಿನ ಗೊಂಬೆಯೊಳಗೆ ಚೈನ್‌ ಮತ್ತು ಉಂಗುರ ಅಡಗಿಸಿ ಇಡಬೇಕು ಎಂದು ಹೇಳಿ ಶೈಲಜಾರ ಕುತ್ತಿಗೆಯಲ್ಲಿದ್ದ 35 ಗ್ರಾಂ ತೂಕದ ಮಾಂಗಲ್ಯ ಸರ, ವಿನಾಯಕ ಅವರ ಕೈಯಲ್ಲಿದ್ದ 5 ಗ್ರಾಂ. ತೂಕದ ಉಂಗುರವನ್ನು ನಕಲಿ ಸ್ವಾಮಿ ಪಡೆದುಕೊಂಡಿದ್ದ. ಆದರೆ ಪೂಜೆ ಬಳಿಕ ಹಿಟ್ಟಿನ …

Read More »

ಬೆಂಗಳೂರು: ಬಂಧಿತ ಆರೋಪಿಗಳಿಗೆ ಬೆದರಿಸಿ ಹಣ ವಸೂಲಿ ಆರೋಪ, ಮೂವರು ಪೊಲೀಸರು ವಶಕ್ಕೆ!

ಚಿಕ್ಕಜಾಲ ಠಾಣೆಯ ಇಬ್ಬರು ಹೆಡ್‍ಕಾನ್‍ಸ್ಟೇಬಲ್ ಹಾಗೂ ಒಬ್ಬರು ಕಾನ್‍ಸ್ಟೇಬಲ್ ಸೇರಿ ಮೂವರನ್ನು ವಶಕ್ಕೆ ಪಡೆದಿರುವ ಬಾಗಲೂರು ಠಾಣೆಯ ಪೊಲೀಸರು ವಿಚಾರಣೆಗೊಳಪಡಿಸಿರುವುದಾಗಿ ತಿಳಿದುಬಂದಿದೆ.ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ದ್ವಿಗುಣಗೊಳಿಸುವ ದಂಧೆಗೆ ಸಂಬಂಧಪಟ್ಟಂತೆ ಖಚಿತ ಮಾಹಿತಿ ಪಡೆದು ಪ್ರತಿಷ್ಠಿತ ಹೋಟೆಲ್‍ವೊಂದಕ್ಕೆ ದಾಳಿ ನಡೆಸಿದ ಚಿಕ್ಕಜಾಲ ಠಾಣೆಯ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ, ಅನಂತರ ಅವರನ್ನು ಬೆದರಿಸಿ ಆರು ಲಕ್ಷ ರೂ. ಪಡೆದುಕೊಂಡು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ …

Read More »

ನೆಲ್ಯಾಡಿ: ಚಾಕುವಿನಿಂದ ಇರಿದು ಯುವಕನ ಕೊಲೆ!!

ಚಾಕುವಿನಿಂದ ಇರಿದು ಯುವಕನೋರ್ವನನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ನೆಲ್ಯಾಡಿ ಹೊರ ಠಾಣೆ ವ್ಯಾಪ್ತಿಯ ಮಾದೇರಿ ಸಮೀಪ ನಡೆದಿದೆ.ಮನೆಯ ಅಂಗಳದಲ್ಲಿ ಶರತ್ ನನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿದ್ದು, ಕೌಟುಂಬಿಕ ಕಲಹ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ.

Read More »

ಬೆಂಗಳೂರು : ತಾಜ್ ಹೋಟೆಲ್‌ನಲ್ಲಿ ಕಳ್ಳತನ!!

ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ನುಗ್ಗಿದ ಕಳ್ಳ ಅಡುಗೆ ಮನೆಯಲ್ಲಿ ಲ್ಯಾಪ್‌ಟಾಪ್ ಮತ್ತು ಮೇಕಪ್ ಕಿಟ್‌ನ್ನು ಕದ್ದು ಪರಾರಿಯಾಗಿದ್ದಾನೆ.ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ಸೆಕ್ಯೂರಿಟಿ ವ್ಯವಸ್ಥಾಪಕ ತಿಮ್ಮೇಗೌಡ, ಈ ಕುರಿತು ಹೈಗ್ರೌಂಡ್ಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಈಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೇ 4ರ ಬೆಳಗ್ಗೆ 8.15ರಲ್ಲಿ ಅಪರಿಚಿತ ವ್ಯಕ್ತಿ, ಹೋಟೆಲ್‌ನ ಮುಖ್ಯದ್ವಾರದಿಂದ ಒಳ ಪ್ರವೇಶ ಮಾಡಿ ಕೇಟರಿಂಗ್ ಸೇಲ್ಸ್ ವಿಭಾಗಕ್ಕೆ ಹೋಗಿ …

Read More »

ಕುಂದಾಪುರ : ಯುವಕ ಹೊಳೆಗೆ ಹಾರಿ ಆತ್ಮಹತ್ಯೆ!!

ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುವ ಸ್ವಭಾವದವರಾಗಿದ್ದ ಅವರು ಮಾನಸಿಕ ಖನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಅಜ್ಜಿ ತಾಯಿಗೆ ಎಳನೀರು ಕೊಟ್ಟು ಬರುವಂತೆ ಹೇಳಿದಾಗ ಕೋಪಿಸಿಕೊಂಡು ಸೈಕಲ್‌ ತೆಗೆದುಕೊಂಡು ಹೋದ ಮೊಮ್ಮಗ ಮರಳಿ ಮನೆಗೆ ಬಂದಿರಲಿಲ್ಲ.ಮೃತದೇಹ ವಾರಾಹಿ ಹೊಳೆಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಅಜ್ಜ ಗಣಪತಿ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಳ್ಕೂರು ಗ್ರಾಮದ ಸ್ವಸ್ತಿಕ್‌ (21) ಅವರು ಬಳ್ಕೂರು ಕಳುವಿನಬಾಗಿಲು ವಾರಾಹಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Read More »
Featured Video Play Icon

ಪೊಲೀಸರೇ ನಡೆಸ್ತಿದ್ದಾರಾ ಮೀಟರ್ ಬಡ್ಡಿ.. ದಂಧೆ..?

ಅವಳಿನಗರದ ಜನತೆ ಹುಷಾರ!!! ಬಡವರ ರಕ್ತ ಹಿರುವ ಬಡ್ಡಿ ಗ್ಯಾಂಗ್!! ಜನನ ರಕ್ಷಣೆ ಮಾಡುವವರೇ ಬಡ್ಡಿ ದಂಧೆಯಲ್ಲಿ ಭಾಗಿ ಜನಸ್ನೇಹಿ ಮುಖವಾಡದ ಅಸಲಿ ಕಹಾನಿ..? ಬಡ್ಡಿ ಕೊಡುವದು ತಡವಾದರೆ ಗಾಡಿಗಳನ್ನ ಎಳೆ ತರುವ ಪಾಪಿಗಳು.. ಸರ್ಕಾರಿ ನೌಕರಿ ಇದ್ರು ರಾಜಾರೋಷವಾಗಿ ಬಡ್ಡಿ ಧಂದೆ… ಬಡವರ ರಕ್ತ ಹಿರುವ ಈ ರಾಕ್ಷಸರ ಆಡಿಯೋ ವಿಡಿಯೋ ನೋಡಿದ್ರೆ ತಬ್ಬಿಬ್ಬು ಆಗ್ತಿರಿ!! ಪೊಲಿಸ್ ಅನ್ನೊ ಹುದ್ದೆಯೆ ಬಡ್ಡಿ ಗ್ಯಾಂಗನ ಪ್ರಮುಖ ಅಸ್ತ್ರ....? ಅನಕ್ಷರಸ್ಥ ಆಟೋ …

Read More »