Breaking News

News

ಹಣ ಪಡೆದು ಆರೋಗ್ಯ ತಪಾಸಣೆ ಮಾಡುತ್ತಿದ್ದ ಮಹಿಳಾ ವೈದ್ಯೆ ಅಮಾನತು

ಬೆಂಗಳೂರು; ಲಂಚಾವತಾರ ತಾಳಿದ ವೈದ್ಯೆಯ ಅಮಾನತು ಮಾಡಿ ಆದೇಶ ಹೊರಡಿಸಿದೆ. ಸೂಜಿ ಚುಚ್ಚಲು, ಬ್ಯಾಂಡೆಂಜ್ ಹಾಕಲು ಕಾಸು ಪಡೆದ ಡಾಕ್ಟರ್ ಕೋಮಲ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್ ಆದೇಶ ಮಾಡಿದ್ದು, ಸುದ್ದಿ ಪ್ರಸಾರದ ಬೆನ್ನಲ್ಲೇ ಅಮಾನತು ಮಾಡಿ ಆದೇಶ‌ ಮಾಡಿದ್ದಾರೆ. ಜನರ ವಿಶ್ವಾಸಕ್ಕೆ ಪ್ರಾತ್ರರಾಗಿದ್ದಾರೆ. ಶಾಂತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಕೋಮಲ ಎಂಬ ವೈದ್ಯೆ ಜನರಿಂದ ಹಣ ಸುಲಿಗೆ ಮಾಡುತ್ತಿದ್ದು ವೈದ್ಯಯ ಲಂಚಾವತಾರ ವಿಡಿಯೋ …

Read More »

ಪ್ಲಾಸ್ಟಿಕ್‌ ಬಳಕೆ ವ್ಯಾಪರಸ್ಥರಿಗೆ ದಂಡ ವಿಧಿಸಿದ ಮಹಾನಗರ ಪಾಲಿಖೆ ಅಧಿಕಾರಿಗಳು

ಹುಬ್ಬಳ್ಳಿ: ಪ್ಲಾಸ್ಟಿಕ್ ಬ್ಯಾನ್ ಮಾಡಿ ಸರ್ಕಾರ ಆದೇಶ ಹೊರಡಿಸಿದರೂ ಕೂಡ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾತ್ರ ಎಗ್ಗಿಲ್ಲದೇ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 8ರ ಸಹಾಯಕ ಆಯುಕ್ತ ಮಲ್ಲಿಕಾರ್ಜುನ ಬಿ.ಎಮ್ ಅವರ ನೇತೃತ್ವದಲ್ಲಿ ವಲಯ ಕಚೇರಿ 8ರ ವಿವಿಧ ಪ್ರದೇಶದಲ್ಲಿ ನಿಷೇಧಿತ ಪ್ಲಾಸ್ಟಿಕ್ ರೆಡ್ ಮಾಡಿ ದಂಡ ವಿಧಿಸಲಾಯಿತು. ಇನ್ನು …

Read More »

ಬಸ್ ಇಲ್ಲದೆ ಶಾಲಾ ಮಕ್ಕಳು ಪರದಾಟ, ಪಾಲಕರು ಹಾಗೂ ಮಕ್ಕಳಿಂದ ಪ್ರತಿಭಟನೆ;

ಧಾರವಾಡ : ಶಕ್ತಿ ಯೋಜನೆಗೆ ಚಾಲನೆ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರ ಪ್ರಯಾಣ ಸಂಖ್ಯೆ ಹೆಚ್ಚಾದ ಹಿನ್ನಲೆ ವಿದ್ಯಾರ್ಥಿಗಳ ದಿನನಿತ್ಯ ತೊಂದರೆ ಹಾಗುತ್ತಿದೆ. ಧಾರವಾಡ ತಾಲೂಕಿನ ಧಾರವಾಡ, ಹಾರೋಬೆಳವಡಿ ಹಾಗೂ ಇನಾಮಹೊಂಗಲ ಗ್ರಾಮದಲ್ಲಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಧಾರವಾಡ ಹಾರೋಬೆಳವಡಿ ಹಾಗೂ ಇನಾಮಹೊಂಗಲ ಗ್ರಾಮಕ್ಕೆ ಬಸ್ ಸಮಸ್ಯೆ ಇದ್ದು, ವಿಧ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಹೆಚ್ಚುವರಿ ಬಸ್ ವ್ಯವಸ್ಥೆ …

Read More »

ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಪೋಲಿಸ್‌ರ ದಾಳಿ: ವಾಹನಗಳನ್ನು ವಶಕ್ಕೆ ಪಡೆದ ಪೋಲಿಸರು.

ಬೆಳಗಾವಿ: ಅಥಣಿ ತಾಲೂಕಿನ ಮಹಿಷವಾಡಗಿಯಲ್ಲಿ ಅಕ್ರಮವಾಗಿ ಮರುಳು ತುಂಬುತ್ತಿದ್ದ 30 ಕ್ಕೂ ಅಧಿಕ ವಾಹನಗಳನ್ನು ಅಥಣಿ ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಸಧ್ಯ 26 ಟ್ರ್ಯಾಕ್ಟರ್, 4 ಜೆಸಿಪಿ, 2 ಹೈವಾ (ಟಿಪ್ಪರ್)ಗಳನ್ನು ವಶ ಪಡಿಸಿಕೊಂಡು ಅಥಣಿ ಡಿವೈಎಸ್ಪಿ ಕಛೇರಿ ಆವರಣದಲ್ಲಿ ವಾಹನಗಳನ್ನು ಇರಿಸಿದ್ದಾರೆ.ಈ ದಾಳಿಯಲ್ಲಿ ಸಿಪಿಐ ರವೀಂದ್ರ ನಾಯಕೋಡಿ, ಪಿಎಸ್ಐ ಶಿವಶಂಕರ ಮುಖರಿ , ರಾಕೇಶ ಬಗಲಿ, ಚಂದ್ರಕಾಂತ ಸಾಗನೂರ, ಸಿಬ್ಬಂದಿಗಳಾದ ರಮೇಶ ಹಾದಿಮನಿ, ಜಿ ಎಚ್ …

Read More »

ಯುವ ಜನಾಂಗ ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವದು ಅವಶ್ಯಕ: ಡಾ ಗುಡಸಿ.

ಧಾರವಾಡ : ಯುವ ಜನಾಂಗ ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವ ಹಾಗೆ ಪ್ರೇರಣೆ ನೀಡಲು ವಿಜ್ಞಾನಿಗಳ ನಾಟಕ “ಪ್ರಭಾಸ್ ” ಮೂಲಕ ಅಭಿನಯ ಭಾರತಿ ನೀಡ್ತಾ ಇರೋದು ಉತ್ತಮ ಕಾರ್ಯ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಗುಡಸಿ ಅವರು ಶ್ರಜನಾ ರಂಗ ಮಂದಿರದಲ್ಲಿನ ನಾಟಕ ಪ್ರದರ್ಶನ ವೀಕ್ಷಿಸಿ ಹೇಳಿದರು. ನೋಬಲ್ ಪ್ರಶಸ್ತಿ ವಿಜ್ಞಾನಿ ಮೇಡಂ ಕ್ಯೂರಿ ಅವರ ಸಾಧನೆಯನ್ನು ಗಮನಿಸಿ ಯುವ ಜನಾಂಗ ಪ್ರೇರಣೆ …

Read More »

ಬಸ್ಸು ಹತ್ತುವಾಗ ಮಹಿಳೆ ಚಿನ್ನ ಕದ್ದ ಕಳ್ಳರು,

ವಿಜಯಪುರ: ಬಸ್ ಹತ್ತುವಾಗ ಮಹಿಳೆಯ ಚಿನ್ನ ಕಳ್ಳತನ ಆಗಿರುವ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಶಕ್ತಿಯೋಜನೆ ಹಿನ್ನಲೆ ದಿನನಿತ್ಯೆ ಮಹಿಳೆಯರ ಓಡಾಟ ಹಾಗೂ ಪ್ರಯಾಣಿಕ ಸಂಖ್ಯೆ ಹೆಚ್ಚಾಗಿ ಇರುವ ಕಾರಣ ದಿನನಿತ್ಯ ಕಳ್ಳತನದ ಪ್ರಕರಣಗಳು ಹಚ್ಚಾಗುತ್ತವೆ ಇಂದು ಸಹ ವಿಜಯಪುರದಲ್ಲಿ ಬಸ್ಸು ಹತ್ತುವ ಸಮಯದಲ್ಲಿ ಮಹಿಳೆಯೊಬ್ಬರ ಚಿನ್ನವನ್ನು ಕಳ್ಳತನ ಮಾಡಿದ್ದಾರೆ. ದಿಲ್ಶಾದ್ ಬಳ್ಳಾರಿ ಎಂಬುವರ ಚಿನ್ನವನ್ನು ಕಳ್ಳರು ಕಳ್ಳತನಗೈದು ಪರಾರಿಯಾಗಿದ್ದಾರೆ. ಸುಮಾರು 1 ಲಕ್ಷದ 30 …

Read More »

ಹೊಸಯಲ್ಲಾಪುರ ಹಿರೇಮಠದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ

ಗುರು ತೋರಿದ ಮಾರ್ಗವೇ ಅರಿವಿನ ದಾರಿ; ಎಲ್ಲರಲ್ಲೂ ಭಕ್ತಿ ಭಾವ, ನಿರ್ಮಲ ಮನಸ್ಸು ಸದಾ ಇರಲಿ: ಗುರುಸಿದ್ದೇಶ್ವರ ಶಿವಾಚಾರ್ಯ ಮಾಹಾಸ್ವಾಮಿಗಳು. ತಿಳಿಸಿದರು ಧಾರವಾಡದ ಭಾರತೀಯ ಪರಂಪರೆಯಲ್ಲಿ ಮತ್ತು ವೀರಶೈವ ಧರ್ಮದಲ್ಲಿ ಗುರುವಿಗೆ ಪರಮ ಸ್ಥಾನವಿದೆ. ಗುರುವಾದವನು ನೀಡುವ ಶಿಕ್ಷಣ, ಸಂಸ್ಕಾರ, ತೋರುವ ಸಂಸ್ಕೃತಿ ಮಾರ್ಗಗಳು ಪ್ರತಿಯೊಬ್ಬರಿಗೂ ಅರಿವಿನ ಪಥವಾಗಿರುತ್ತವೆ ಎಂದು ಶಿರಕೋಳ ಹಿರೇಮಠದ ಪಟ್ಟಾಧ್ಯಕ್ಷ ಷ.ಬ್ರ.ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಗುರು ಪೂರ್ಣಿಮೆ ವೇದಿಕೆ ಕಾರ್ಯಕ್ರಮ ಪೂರ್ವದಲ್ಲಿ ಷ.ಬ್ರ.ಪಟ್ಟದ ಮಳೇಶ್ವರ …

Read More »

ಗ್ರಾಮಸ್ಥರು ಕುಡಿಯುವ ನೀರಿನಲ್ಲಿ ಮೃತಪಟ್ಟ ಜೋಡಿ ಮಂಗಗಳು ನೀರು ಕುಡಿದ ಗ್ರಾಮಸ್ಥರ ಅಕ್ರೋಶ

ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಕಲುಷಿತ ನೀರಿನ ಪ್ರಕರಣ ಬೆಳಕಿಗೆ ಬಂದಿದೆ. ಮೂರು ದಿನಗಳಿಂದ ಎರಡು ಮಂಗಗಳು ಸತ್ತು ಸತ್ತ ಬಿದ್ದ ನೀರನ್ನೇ ಗ್ರಾಮಸ್ಥರು ಕುಡಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಖಾನಾಪುರದಲ್ಲಿ ನಡೆದಿದೆ. ಕಳೆದೊಂದು ವಾರದಿಂದ ಎರಡು ಮಂಗಗಳು ಸತ್ತು ಬಿದ್ದ ಟ್ಯಾಂಕ್ ನಿಂದಲೇ ಇಡೀ ಊರಿಗೆ ನೀರು ಸರಬರಾಜು ಆಗ್ತಿತ್ತು.ತೆರೆದ ವಾಟರ್ ಟ್ಯಾಂಕ್ ನಲ್ಲಿ ನೀರು ಕುಡಿಯಲು ಹೋಗಿ ಎರಡು ಕೋತಿಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇಂದು …

Read More »

ರಾಜ್ಯಪಾಲರ ಭಾಷಣ ಕಾಂಗ್ರೇಸ್‌ ಪಕ್ಷದ ಪ್ರಣಾಳಿಕೆ ; ಶಾಸಕ ಸಿ.ಸಿ.ಪಾಟೀಲ ಟೀಕೆ

ವಿಧಾನ ಮಂಡಲದಲ್ಲಿ ಇಂದು ರಾಜ್ಯಪಾಲರು ಮಂಡಿಸಿದ ಭಾಷಣವು ರಾಜ್ಯದ ಅಭಿವೃದ್ಧಿಯ ದಿಕ್ಸೂಚಿಯಂತಾಗಿರದೇ, ಅದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತಿತ್ತು ಎಂದು ಮಾಜಿ ಸಚಿವರು ಮತ್ತು ನರಗುಂದ ಶಾಸಕರಾದ ಸಿ.ಸಿ ಪಾಟೀಲರು ಟೀಕಿಸಿದ್ದಾರೆ. ಕರ್ನಾಟಕದ ಹಿತಾಸಕ್ತಿಯ ರಕ್ಷಣೆ ತಮ್ಮ ಉದ್ದೇಶವೆಂದು ರಾಜ್ಯಪಾಲರ ಬಾಯಿಂದ ಹೇಳಿಸಲಾಗಿದೆ. ಆದರೆ ವಾಸ್ತವದಲ್ಲಿ ನಮ್ಮ ಬಿಜೆಪಿ ಸರ್ಕಾರವು ರಾಜ್ಯದ ಸಮಗ್ರ ಹಿತಾಸಕ್ತಿ ರಕ್ಷಿಸಲು ಜಾರಿಗೊಳಿಸಿದ್ದ ಅನೇಕ ಯೋಜನೆಗಳ ಬಗ್ಗೆ ಇಂದಿನ ರಾಜ್ಯಪಾಲರ ಭಾಷಣದಲ್ಲಿಚಕಾರ ಕೂಡ ಎತ್ತಿಲ್ಲ. ಒಟ್ಟಾರೆ ಈ …

Read More »

ವಿಮಾನ ನಿಲ್ದಾಣ ಉನ್ನತೀಕರಣ -ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಮಹತ್ವದ ಸಭೆ

ಹುಬ್ಬಳ್ಳಿ: 03, ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಸೇರಿದಂತೆ ಇತರ ಸೌಲಭ್ಯಗಳ ಬೃಹತ್ ಸುಧಾರಣೆ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಪ್ರಸ್ತಾವನೆಗೆ ಸ್ಪಂದಿಸಿ ಕೇಂದ್ರ ಸರಕಾರ ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕೇಂದ್ರ ಸಚಿವರು, ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಮತ್ತಷ್ಟು ಮೇಲ್ದರ್ಜೆಗೆ ಏರಲಿದೆ ಎಂದು ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿಯವರು ತಿಳಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ರಾಜ್ಯದ 2ನೇ …

Read More »