Breaking News

ಗ್ರಾಮಸ್ಥರು ಕುಡಿಯುವ ನೀರಿನಲ್ಲಿ ಮೃತಪಟ್ಟ ಜೋಡಿ ಮಂಗಗಳು ನೀರು ಕುಡಿದ ಗ್ರಾಮಸ್ಥರ ಅಕ್ರೋಶ

ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಕಲುಷಿತ ನೀರಿನ ಪ್ರಕರಣ ಬೆಳಕಿಗೆ ಬಂದಿದೆ. ಮೂರು ದಿನಗಳಿಂದ ಎರಡು ಮಂಗಗಳು ಸತ್ತು ಸತ್ತ ಬಿದ್ದ ನೀರನ್ನೇ ಗ್ರಾಮಸ್ಥರು ಕುಡಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಖಾನಾಪುರದಲ್ಲಿ ನಡೆದಿದೆ. ಕಳೆದೊಂದು ವಾರದಿಂದ ಎರಡು ಮಂಗಗಳು ಸತ್ತು ಬಿದ್ದ ಟ್ಯಾಂಕ್ ನಿಂದಲೇ ಇಡೀ ಊರಿಗೆ ನೀರು ಸರಬರಾಜು ಆಗ್ತಿತ್ತು.
ತೆರೆದ ವಾಟರ್ ಟ್ಯಾಂಕ್ ನಲ್ಲಿ ನೀರು ಕುಡಿಯಲು ಹೋಗಿ ಎರಡು ಕೋತಿಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇಂದು ಟ್ಯಾಂಕ್ ಸ್ವಚ್ಛಗೊಳಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ನೀರಿನ ಟ್ಯಾಂಕರ್ ಮುಚ್ಚಲು ಯಾವುದೇ ಕ್ರಮವಹಿಸದ ಕಾರಣ ಅವಘಡ ಸಂಭವಿಸಿದೆ. ದೇವದುರ್ಗದ ಯಮನಾಳ ಗ್ರಾಮ ಪಂಚಾಯತಿ ಸಿಬ್ಬಂದಿಯಿಂದ ಬೇಜವಾಬ್ದಾರಿ ತೋರಲಾಗಿದೆ. ಹೀಗಾಗಿ
ಯಮನಾಳ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಸಿಬ್ಬಂದಿ ವಿರುದ್ಧ ಜನ ಆಕ್ರೋಶ ವ್ಯಕ್ತವಾಗಿದೆ.

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *