Breaking News

ಕರ್ನಾಟಕ

ಹುಣಸೂರ : ಪತ್ನಿಯನ್ನು ಕೊಲೆಗೈದು ಠಾಣೆಗೆ ಬಂದು ಶರಣಾದ ಪತಿ.!

ಆಟೋದಲ್ಲಿ ಗೋಬಿ ತಿನ್ನುವ ಬಾ ಎಂದು ಪುಸಲಾಯಿಸಿ ಪತ್ನಿಯನ್ನು ಕರೆತರುವಾಗ ರಸ್ತೆ ಮಧ್ಯೆದಲ್ಲೇ ಜಮೀನಿನಲ್ಲಿ ಮೋಟಾರ್‌ ಆಫ್ ಮಾಡಿ ಬರೋಣವೆಂದು ಕರೆದೊಯ್ದು, ಅಪ್ರಾಪ್ತ ಬಾಲಕನ ನೆರವಿನೊಂದಿಗೆ ಕತ್ತಿಗೆ ಹಗ್ಗ ಬಿಗಿದು ಸಾಯಿಸಿ, ನೇರವಾಗಿ ಬಿಳಿಕೆರೆ ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ.ಬಿಳಿಕೆರೆ ಠಾಣಾ ವ್ಯಾಪ್ತಿಯ ಬೂಚಳ್ಳಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವ ವನ್ನು ಕೆ.ಆರ್‌.ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.

Read More »

ಒಂಟಿ ಮಹಿಳೆಯ ಮೇಲೆ ಬಸ್ ನಲ್ಲಿ ಸಾಮೂಹಿಕ ಅತ್ಯಾಚಾರ. ಮೂವರು ಅರೆಸ್ಟ್

ವಿಜಯನಗರ ಅಪ್ಪನ ಹಳ್ಳಿಯ ಉಚ್ಚಂಗಿ ದುರ್ಗದ ಉತ್ಸವಾಂಬಾ ದೇವಿ ದರ್ಶನ ಮುಗಿಸಿ ವಾಪಸ್ ಹೊರಡುತ್ತಿದ್ದ ಮಹಿಳೆ ಒಬ್ಬರ ಮೇಲೆ ದುಷ್ಕರ್ಮಿಗಳು ಬಸ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸೆಗಿದ್ದಾರೆ. ಇದ್ದಾಗ ಬಸ್ ಚಾಲಕ ಪ್ರಕಾಶ್ ಮಡಿವಾಳ, ಹರಪನಹಳ್ಳಿಯ ಕಂಡಕ್ಟರ್ ರಾಜಶೇಖರ್ ಹಾಗೂ ಅರಸೀಕೆರೆ ಗ್ರಾಮದ ಬಸ್ ಏಜೆಂಟ್ ಸುರೇಶ್ ನನ್ನ ಪೊಲೀಸ್ ಇಂದು ಬಂಧಿಸಿದ್ದಾರೆ. ಯುಗಾದಿ ನಿಮಿತ್ತ ಉತ್ಸವಂಬ ದರ್ಶನ್ ಮುಗಿಸಿ ವಾಪಸ್ ಮುಗಿಸಿ ಊರಿಗೆ ಮರಳಲೆಂದು ರಾತ್ರಿ 8.45 ರ …

Read More »

ಬೆಂಗಳೂರಿನಲ್ಲಿ ಬಾರಿ ಮಳೆ .

ಬೆಂಗಳೂರು ನಗರ ಸೇರಿದಂತೆ ಚಿಕ್ಕಮಂಗಳೂರು ನಗರದಲ್ಲಿ ಇಂದು ಗುಡುಗು ಸಹಿತ ಬಾರಿ ಮಳೆ ಯಾಗಿದ್ದು ಪರಿಣಾಮವಾಗಿದ್ದು ವಾಹನ ಸವಾರರು ಪರದಾಟ ನಡೆಸಿದ್ದಾರೆ. ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ ಕೆಲವು ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರು ನಗರದಲ್ಲಿ ಜಲಾವೃತ್ತ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸವಾರರಿಗೆ ಸಂಕಷ್ಟ ಉಂಟಾಗಿದೆ. ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ .

Read More »

ಧಾರವಾಡ. ರಾಜಗುಪ್ತ ವಾರ್ತೆ ನಿರ್ದೇಶಕರಿಗೆ ಸ್ವರ್ಣ ಪದಕ.

ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ಶುನ್ಯಗೊಳಿಸುವ ವಿಶೇಷ ಮುತ್ತುವರ್ಜಿಯಿಂದ ಪೊಲೀಸ್ ಕಾರ್ಯಾಚರಣೆಗೆ ಮುಂದಾಳತ್ವ ವಹಿಸಿ ಮಾರ್ಗದರ್ಶನ ನೀಡುವ ಮೂಲಕ ಎಲ್ಲಾ ನಕ್ಸಲರನ್ನು ಶರಣಾಗುವಂತೆ ಮಾಡಿದ ರಾಜ್ಯ ಗುಪ್ತ ವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವರ್ಣ ಪದಕ ಪ್ರಧಾನ ಮಾಡಿದರು. ಬೆಂಗಳೂರಿನ ಕೋರಮಂಗಲದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಪೆರೆಡ ಮೈದಾನದಲ್ಲಿ ಈ ಪ್ರಧಾನ ಪದಕ ಸಮಾರಂಭ ಮಾಡಲಾಯಿತು.

Read More »

ಶಿಗ್ಗಾವ್ :”ನಮ್ಮ ಊರು ನಮ್ಮ ಕೆರೆ” ಹಸ್ತಾಂತರ ಕಾರ್ಯಕ್ರಮ.

ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ “ನಮ್ಮ ಊರು ನಮ್ಮ ಕೆರೆ” ಹಸ್ತಾಂತರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾವೇರಿ ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ಪೂರ್ಣ ಕುಂಭ ಹಸ್ತಾಂತರಿಸುವ ಮೂಲಕ ಕೆರೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್ ಮತ್ತು ಕೆರೆ ಸಮಿತಿಯವರಿಗೆ ನೀಡಿದರು. “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಲ್ಲಿ ಅತ್ತಿಗೇರಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು 24 ದಿನಗಳ ಕಾಲ ಕೆರೆ ಕಾಮಗಾರಿಯನ್ನು ಮಾಡಧಿಕೃತವಾಗಿ ಗ್ರಾಮ ಪಂಚಾಯತ್ ಮತ್ತು ಕೆರೆ ಅಭಿವೃದ್ಧಿ …

Read More »

ಬೆಂಗಳೂರು ವಿಮಾನ ನಿಲ್ದಾಣದ ಮಾಹಿತಿ. ವಿಮಾನ ವೇಳಾಪಟ್ಟಿ ಕನ್ನಡದಲ್ಲಿ ಪ್ರಕಟ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದೆ. ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷೆ ಆಯ್ಕೆಯನ್ನು ಹೊಸದಾಗಿ ಪರಿಚಯಿಸಲಾಗಿದೆ. ಈ ಆಯ್ಕೆಯನ್ನು ಬಳಸುವ ಮೂಲಕ ಸ್ಥಳೀಯ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದ ಸೇವೆಗಳನ್ನು ಕನ್ನಡ ಭಾಷೆಯಲ್ಲಿ ಪಡೆದುಕೊಳ್ಳಬೇಕಾಗಿದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಆದ್ಯತೆ ನೀಡುವ ಪ್ರಯಾಣಿಕರಿಗೆ ಒಟ್ಟಾರೆ ಅನುಭವ ಹೊಂದಿದ್ದಾರೆ.

Read More »

ಹುಬ್ಬಳ್ಳಿ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ಅಧಿಕಾರಿಗಳ ದಾಳಿ

ಹಾಡು ಹಗಲೆ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ನಡೆಯುತ್ತಿದೆ.ಅಡ್ಡೆಯ‌ ಮೇಲೆ ತಹಶೀಲ್ದಾರ್ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಇಂದು ದಾಳಿ ಮಾಡಿದ್ದಾರೆ. 470ಕ್ಕೆ ಹೆಚ್ಚು ಗ್ಯಾಸ ಸಿಲಿಂಡರ್ ಅನ್ನೋ ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ತಹಶೀಲ್ದಾರ್ ಡಿಎಚ್ ಹೋಗಾರ್ ನೇತೃತ್ವದ ತಂಡ ಧಾರವಾಡ ಸಮೀಪದ ಜೋಗುಲಾಪುರ್ ಬನಶಂಕರಿ ಎಂಟರ್ಪ್ರೈಸಸ್ ಎಚ್ ಪಿ ಗ್ಯಾಸ್ ಸಿಲೆಂಡರ್ ಗೌಡನಳ್ಳಿ ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದಾರೆ.

Read More »

ಬೆಲೆ ಏರಿಕೆಯನ್ನು ಖಂಡಿಸಿ ಜೆಡಿಎಸ್ ನಿಂದ ಉಗ್ರ ಹೋರಾಟ . ನಿಖಿಲ್ ಕುಮಾರಸ್ವಾಮಿ

ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯದಾಂತ ಜೆಡಿಎಸ್ ನಿಂದ ಶೀಗ್ರವೆ ಉಗ್ರ ಹೋರಾಟ ಮಾಡುವುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಕಸಕ್ಕೂ ಟ್ಯಾಕ್ಸ್ ಹಾಕುತ್ತಿದೆ ಮೆಟ್ರೋ ರೈಲ್ ನೀರು ಹಾಲು ಪೆಟ್ರೋಲ್ ಡೀಸೆಲ್ ಎಲ್ಲದರ ಬೆಲೆ ಏರಿಗೆಯಾಗಿದೆ. ಇದನ್ನು ಖಂಡಿಸಿ ನಿಖಿಲ್ ಕುಮಾರಸ್ವಾಮಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.

Read More »

ಡೀಸೆಲ್ ಬೆಲೆ ಏರಿಕೆ .ಆರ್. ಅಶೋಕ್ ಕೆಂಡಮಂಡಲ

ಬಜೆಟ್ ನಲ್ಲಿ ಯಾವುದೇ ತೆರಿಗೆ ಹೆಚ್ಚಳವನ್ನು ಬೆಲೆ ಏರಿಕೆ ಅನು ಘೋಷಣೆ ಮಾಡದೆ ಕನ್ನಡಿಗರ ಕಿವಿಗೆ ಹೋಯಿತ ಸಿಎಂ ಸಿದ್ದರಾಮಯ್ಯ ಈಗ ದಿನಕ್ಕೊಂದು ವಸ್ತುಗಳ ಮೇಲೆ ತೆರಿಗೆಯನ್ನು ಹೆಚ್ಚಳ ಮಾಡುತ್ತಿದ್ದಾರೆ. ಬಡ್ಡವರು ಮಾಧ್ಯಮ ವರ್ಗಗಳ ರಕ್ತ ಹಿರಳು ಹೂರಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕಿಡಿಕಾಡಿದ್ದಾರೆ. ಹಾಲಿನ ದರ ಏರಿಕೆ ಮಾಡಿದ್ದಾಯ್ತು ಕಸ ಸಂಗ್ರಹಣೆ ಮೇಲೆ ಸೆಸ್ ಹಾಕಿದ್ದಾಯಿತು ಈಗ ಏಕಾಏಕಿ ಡೀಸೆಲ್ ಬೆಲೆ ಎರಡು ರೂಪಾಯಿಗೆ …

Read More »

ಮುಂದಿನ ಐದು ದಿನಗಳಲ್ಲಿ ಗುಡುಗು ಸಹಿತ ಮಳೆ

ದಗದಗ ಬಿಸಿಲಿನ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳಲ್ಲಿ ಗುಡುಗು ಸಹಿತ ಮಳೆ ಅಗಲಿದ್ದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ. ಉತ್ತರ ಕನ್ನಡ. ದಕ್ಷಿಣ ಕನ್ನಡ. ಉಡುಪಿ ಹಾಗೂ ದಕ್ಷಿಣ ಒಳನಾಡು , ಮಲೆನಾಡು ಭಾಗದ ಚಿಕ್ಕಮಂಗಳೂರು. ಕೊಡಗು. ಶಿವಮೊಗ್ಗ. ಹಾಸನ. ಮೈಸೂರು. ಚಾಮರಾಜನಗರ ಜಿಲ್ಲೆಗಳಲ್ಲಿ ಹಗುರದಿಂದಲೇ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

Read More »