Breaking News

ಕರ್ನಾಟಕ

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ: ಅವಳಿನಗರದಲ್ಲಿ ಹೆಚ್ಚಿದ ಬೆಟ್ಟಿಂಗ್ ಭರಾಟೆ..

ಹುಬ್ಬಳ್ಳಿ: ಲೋಕ ಚುನಾವಣೆ ಫಲಿತಾಂಶದ ಮೇಲೆ ಬೆಟ್ಟಿಂಗ್ ಜೋರಾಗಿದೆ. ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಕಾಂಚಾಣ ಕುಣಿಯುತ್ತಿದೆ. ಐಪಿಎಲ್ ಕ್ರಿಕೆಟ್ ಮ್ಯಾಚ್‌ಗಳ ಮೇಲೆ ನಡೆಯುತ್ತಿರುವ ಬೆಟ್ಟಿಂಗ್ ಅನ್ನು ಮೀರಿಸುವಂತೆ ರಾಜಕೀಯ ಬೆಟ್ಟಿಂಗ್ ಕಾವು ಪಡೆದುಕೊಂಡಿದೆ. ಧಾರವಾಡ ಲೋಕಸಭಾ ಅಖಾಡದಲ್ಲಿರುವ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಲಕ್ಷ ಲಕ್ಷ ಹಣ, ಬಾಡೂಟ ಸೇರಿದಂತೆ ಇನ್ನೂ ಅನೇಕ ಬೆಲೆಬಾಳುವ ವಸ್ತುಗಳನ್ನು ಪಣಕ್ಕಿಟ್ಟಿರುವುದು ಅಚ್ಚರಿ‌ ಮೂಡಿಸಿದೆ..ಧರ್ಮದ ಸಂಘರ್ಷ, ಸ್ವಾಮೀಜಿಗಳ ಸ್ಪರ್ಧೆ ವಿಚಾರದಿಂದ ಭಾರೀ ಕುತೂಹಲ ಮೂಡಿಸಿದ್ದು …

Read More »
Featured Video Play Icon

ರಾಜ್ಯದಲ್ಲಿ ಹಿಟ್ಲರ್ ಮೀರಿಸುವ ಆಡಳಿತವಿದೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ..!

ಹುಬ್ಬಳ್ಳಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾತ್ರದ ಬಗ್ಗೆ ಸಾಕ್ಷಿಯನ್ನು ಹೇಳಿದ ಕಾರಣ ದೇವರಾಜೇಗೌಡನ ಬಂಧನವಾಗಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ಹಿಟ್ಲರ್’ನನ್ನು ಮೀರಿಸೋ ಆಡಳಿತವಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ದೇವರಾಜೇಗೌಡನ ಬಂಧನದಲ್ಲಿ ರಾಜಕಾರಣವಿದೆ. ಸ್ವಾರ್ಥ ರಾಜಕಾರಣ, ಪಕ್ಷ ರಾಜಕಾರಣ ಇದರಲ್ಲಿ ಸ್ಪಷ್ಟವಾಗಿದೆ. ಈ ಮೂಲಕ ವಿರೋಧಿಗಳನ್ನು ಮುಗಿಸೋದು ಸ್ಪಷ್ಟವಾಗಿದೆ ಎಂದರು‌.ಇನ್ನು …

Read More »

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ.74.35 ರಷ್ಟು ಮತದಾನ..

ಧಾರವಾಡ.. ಲೋಕಸಭಾ ಚುನಾವಣೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನವಾಗಿದೆ. ರಾತ್ರಿ 9 ಗಂಟೆಯವರಗೆ ದೊರೆತ ಅಧಿಕೃತ ಮಾಹಿತಿಗಳ ಪ್ರಕಾರ ಅಂತಿಮವಾಗಿ ಶೇ. 74.35 ರಷ್ಟು ಮತದಾನವಾಗಿದೆ.ಬೆಳಿಗ್ಗೆ 7 ಗಂಟೆಗೆ ಎಲ್ಲಾ 1893 ಮತಗಟ್ಟೆಗಳಲ್ಲೂ ಮತದಾನ ಪ್ರಾರಂಭವಾಯಿತು. ಬೆಳಿಗ್ಗೆ 9 ಗಂಟೆವರೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಶೇ.9.38 ರಷ್ಟು ಮತದಾನವಾಗಿತ್ತು. ಬೆಳಿಗ್ಗೆ 11 ಗಂಟೆ ವೇಳೆಗೆ 24 ರಷ್ಟು ಮತದಾನ ಆಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 40.61 …

Read More »
Featured Video Play Icon

ಪ್ರಜಾಪ್ರಭುತ್ವದ ಹಬ್ಬ ಆರಂಭ: ಹುಬ್ಬಳ್ಳಿಯಲ್ಲಿ ಉತ್ಸುಕತೆಯಿಂದ ಮತದಾನ..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರಜಾಪ್ರಭುತ್ವದ ಹಬ್ಬ ಆರಂಭವಾಗಿದೆ. ಲೋಕಸಭಾ ಚುನಾವಣೆಯ ಮತದಾನ‌ ಪ್ರಕ್ರಿಯೆ ಆರಂಭಗೊಂಡಿದ್ದು, ಬೆಳ್ಳಂಬೆಳ್ಳಿಗೆ ಉತ್ಸಾಹದಿಂದ ಮತದಾನ ನಡೆಯುತ್ತಿದೆ.. ಲ್ಯಾಮಿಂಗ್ಟನ್ ಶಾಲೆಯ ಮತಗಟ್ಟೆಯಲ್ಲಿ‌ ಮತದಾನ‌ ಮಾಡಿದ ಹಿರಿಯ ಮತದಾರರು, ಅತ್ಯಂತ ಉತ್ಸುಕತೆಯಲ್ಲಿ ಮತದಾನ‌ ಪ್ರಕ್ರಿಯೆಯಲ್ಲಿ ಭಾಗಿಯಾದ ಮತದಾರರು, ಸರತಿ ಸಾಲಿನಲ್ಲಿ‌ ನಿಂತು ಮತದಾನಕ್ಕೆ ಮುಂದಾಗಿದ್ದಾರೆ.ಹಿರಿಯ ಮತದಾರರು ಹಾಗೂ ಪ್ರಥಮ‌ಬಾರಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದ ಯುವ ಮತದಾರರು ಉತ್ಸಾಹದಿಂದ ಮತದಾನ ಮಾಡಿದರು‌.

Read More »
Featured Video Play Icon

ನೇಹಾ ಮನೆಗೆ ಸಿಎಂ ಸಿದ್ಧರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ..

ಹುಬ್ಬಳ್ಳಿ: ಮೊನ್ನೆಯಷ್ಟೇ ಕೆಎಲ್ಇ ಬಿವ್ಹಿಬಿ ಕಾಲೇಜಿನಲ್ಲಿ ಕೊಲೆಯಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ಧರಾಮಯ್ಯನವರು ಆಗಮಿಸಿದ್ದು, ನೇಹಾಳ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಮುಂದಾಗಿದ್ದಾರೆ.ಹೌದು.. ಹುಬ್ಬಳ್ಳಿಯ ಬಿಡನಾಳದಲ್ಲಿರುವ ನೇಹಾ ಮನೆಗೆ ಆಗಮಿಸಿದ ಸಿಎಂ ಸಿದ್ಧರಾಮಯ್ಯನವರಿಗೆ ಸಚಿವ ಸಂತೋಷ ಲಾಡ್, ವಿನೋದ ಅಸೂಟಿ ಸಾಥ್ ನೀಡಿದ್ದು, ಕುಟುಂಬಸ್ಥರಿಗೆ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಿದ್ದಾರೆ.ಇನ್ನೂ ಹುಬ್ಬಳ್ಳಿ ಹಾಗೂ ಗದಗ ಜಿಲ್ಲೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಸಿದ್ಧರಾಮಯ್ಯನವರು ಕಾಂಗ್ರೆಸ್ ಕಾರ್ಪೋರೆಟರ್ ಕುಟುಂಬಕ್ಕೆ ಸಾಂತ್ವನ …

Read More »

ನಕಲಿ ಸಿಐಡಿ ಅಧಿಕಾರಿಗಳನ್ನು ಬಂಧನ ಮಾಡಿದ ಹಳೇ ಹುಬ್ಬಳ್ಳಿ ಪೊಲೀಸರು..

ಹುಬ್ಬಳ್ಳಿ: ಈಗಾಗಲೇ ನೇಹಾ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಎಸ್ಪಿ ವೆಂಕಟೇಶ ನೇತೃತ್ವದ ತಂಡ ಸೋಮವಾರ ರಾತ್ರಿ ಹುಬ್ಬಳ್ಳಿಗೆ ಬಂದು ವಾಸ್ತವ್ಯ ಮಾಡಿದೆ. ಈ ನಡುವೆ ಹಳೇಹುಬ್ಬಳ್ಳಿ ಪೊಲೀಸರು ಸಿಐಡಿ ಕ್ರೈಂ ಬ್ರ್ಯಾಂಚ್’ನ ಅಧಿಕಾರಿಗಳು ಎಂದು ಬಂದಿದ್ದ ಮೂವರು ನಕಲಿ ಸಿಐಡಿ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಇತ್ತಿಚೆಗೆ ಹುಬ್ಬಳ್ಳಿ ನಗರದಲ್ಲಿ ಮೂರು ಜನರು ಸಿಐಡಿ ಕ್ರೈಂ ಬ್ರ್ಯಾಂಚ್ ಪೊಲೀಸರು ಎಂದು ಸುಳ್ಳು ಹೇಳಿಕೊಂಡು, ಚೈತನ್ಯ ನಗರದ ನಿವಾಸಿ …

Read More »

ದಿಂಗಾಲೇಶ್ವರ ಶ್ರೀಗಳ ಮನವೊಲಿಸುವಲ್ಲಿ ಯಶಸ್ವಿಯಾದ ರಜತ ಉಳ್ಳಾಗಡ್ಡಿಮಠ…?

ಹುಬ್ಬಳ್ಳಿ ಟ್ರಬಲ್ ಶೂಟರ್ ರಜತ್ ಎಂದರೆ ದೊಡ್ಡವರು ಹುಬ್ಬಳ್ಳಿ : ಅಂತಿಮ ಹಂತದಲ್ಲಿ ತಮಗೆ ಲೋಕಸಭೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದರು,ಪಕ್ಷಕ್ಕಾಗಿ ಹಗಲಿರುಳು ದುಡಿಯುವ ಮತ್ತು ಸಮಸ್ಯೆ ಬಂದಾಗ ಅದನ್ನು ಬಗೆಹರಿಸುವ ಮೈಗುಣವನ್ನು ರಜತ್ ಉಳ್ಳಾಗಡ್ಡಿ ಮಠ ಮತ್ತೊಮ್ಮೆ ಸಾಬೀತು ಪಡಿಸಿ ತಮ್ಮನ್ನು ತಾವು ಸೈ ಎನಿಸಿಕೊಂಡಿದ್ದಾರೆ.ದಿಂಗಾಲೇಶ್ವರ ಶ್ರೀಗಳು ಚುನಾವಣಾ ಕಣಕ್ಕೆ ಧುಮುಕುವ ಮಾಹಿತಿ ಪಡೆಯುತ್ತಿದ್ದಂತೆ ಶ್ರೀಗಳನ್ನು ಮನವೊಲಿಸಲು ಹಲವು ಬಾರಿ ರಜತ್ ಉಳ್ಳಾಗಡ್ಡಿ ಮಠ ಪ್ರಯತ್ನಿಸಿದ್ದರು.ಅಲ್ಲದೆ ತಮ್ಮ ಮಗಳ ತೊಟ್ಟಿಲ …

Read More »

ಸ್ಥಗಿತಗೊಂಡ ಗರಡಿಮನೆ ತಾಲೀಮು: ನಿರ್ವಹಣೆಯಿಲ್ಲದೇ ಕಣ್ಮರೆಯಾದ 150 ಗರಡಿಮನೆ..!

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಗರಡಿಮನೆ ತಾಲೀಮು ಅಂದರೇ ಅದೊಂದು ಗತ್ತು ಗಾಂಭಿರ್ಯ ಇರುತ್ತಿತ್ತು. ಧಾರವಾಡದ ಪೈಲ್ವಾನರು ಅಂದರೆ ಕೊಲ್ಹಾಪುರ, ಪುಣೆ, ಮುಂಬೈ.. ಹಿಂಗ ಎಲ್ಲಿಗೇ ಕುಸ್ತಿ ಆಡಲು ಹೋದರೂ ಗೆದ್ದು ಗರ್ವದಿಂದ ಬರುತ್ತಿದ್ದರು. ಕುಸ್ತಿಗಿ ರಾಜ್ಯದಾಗ ಧಾರವಾಡ ಜಿಲ್ಲಾ ಹೆಸರಾಗಿತ್ತು. ಆದರೆ ಈಗ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಗರಡಿ ಮನೆಗಳು ನಿರ್ವಹಣೆಯಿಂದ ಮರೆಯಾಗುತ್ತಿವೆ. ಹೌದು.. ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಮನೆಗೊಬ್ಬರು ಪೈಲ್ವಾನರು, ಓಣಿಗೊಂದು ಗರಡಿ ಮನೆ ಇತ್ತು. ಆದರೆ …

Read More »
Featured Video Play Icon

ಕಮೀಷನರೇಟ್ ನಿಂದ ಪೊಲೀಸ್ ಧ್ವಜ ದಿನಾಚರಣೆ: ಕವಾಯತ್ ಮೂಲಕ ಗೌರವ ಸಮರ್ಪಣೆ..

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಗೋಕುಲ ರಸ್ತೆಯ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆಗೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಎಲ್.ಕಸ್ತೂರಿ ಹಾಗೂ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ವಿದ್ಯುಕ್ತವಾಗಿ ಚಾಲನೆ ನೀಡಿದರು.ಪ್ರತಿವರ್ಷದಂತೆ ಈ ವರ್ಷವೂ ಕೂಡ ಪೊಲೀಸ್ ಕಮೀಷನರೇಟ್ ನಿಂದ ಪೊಲೀಸ್ ಧ್ವಜ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಕವಾಯತ್ ಮೂಲಕ ಅತಿಥಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಅಲ್ಲದೆ …

Read More »
Featured Video Play Icon

ವಿಧಾನ ಪರಿಷತ್ ಸದಸ್ಯತ್ವಕ್ಕೆ ಮರಿತಿಬ್ಬೇಗೌಡ ರಾಜೀನಾಮೆ: ಸಭಾಪತಿ ಹೊರಟ್ಟಿ ನಿವಾಸದಲ್ಲಿ ಸಲ್ಲಿಕೆ..

ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯತ್ವಕ್ಕೆ ಮರಿತಿಬ್ಬೇಗೌಡ ರಾಜೀನಾಮೆ ನೀಡಿದ್ದು, ಲೋಕಸಭಾ ಚುನಾವಣೆಗೂ ಮುನ್ನ ವಿಧಾನಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ತಮ್ಮ ಸದಸ್ಯತ್ವಕ್ಕೆ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಹೌದು..ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹುಬ್ಬಳ್ಳಿಯ ಗೃಹ ಕಚೇರಿಗೆ ಆಗಮಿಸಿ ರಾಜೀನಾಮೆ ಪತ್ರ ಸಲ್ಲಿಸಿರುವ ಮರಿತಿಬ್ಬೇಗೌಡ, ಲಿಖಿತ ಮೂಲಕ ತಮ್ಮ ರಾಜೀನಾಮೆ ನೀಡಿದರು.ಇನ್ನೂ ರಾಜೀನಾಮೆ ಸ್ವೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿಯವರು, ಮರಿತಿಬ್ಬೇಗೌಡ ಸ್ವ …

Read More »