Breaking News

ಧಾರವಾಡ

ಹೆಣ್ಣು ಮಗುವಿನ ಮೇಲೆ ತಾತ್ಸಾರ ಮತ್ತು ತಿರಸ್ಕಾರದ ಭಾವನೆ ಬೇಡ: ಪರಶುರಾಮ ಎಫ್. ದೊಡ್ಡಮನಿ

ಧಾರವಾಡ : ಸಮಾಜದಲ್ಲಿ ಮೂಢನಂಬಿಕೆ ಮತ್ತು ಮೌಢ್ಯತೆಯ ತಪ್ಪು ಕಲ್ಪನೆಗಳಿಂದ ಹೆಣ್ಣು ಮಗುವಿನ ಮೇಲೆ ತಾತ್ಸಾರ ಮತ್ತು ತಿರಸ್ಕಾರದ ಭಾವನೆ ಬೇಡವೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ …

Read More »

ಇಪಿಎಸ್-95 ನಿವೃತ್ತ ನೌಕರರ ಪಿಂಚಣಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ: ಇಪಿಎಸ್-95 ನಿವೃತ್ತ ನೌಕರರ ಪಿಂಚಣಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ ಹಾಗೂ ಇಪಿಎಸ್-95 ನಿವೃತ್ತ ನೌಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಶುಕ್ರವಾರ ಧಾರವಾಡ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ದೇಶದ ಎಲ್ಲ ಇಪಿಎಸ್ 95 ನೌಕರರಿಗೆ 1 ಸಾವಿರದಿಂದ 3 ಸಾವಿರ ಪಿಂಚಣಿ ನೀಡುತ್ತಿದ್ದು, ಇಪಿಎಸ್ 95 ನೌಕರರ ಪಿಂಚಣಿ ಹೆಚ್ಚಳ …

Read More »

3 ಜನ, 150 ಕುರಿಗಳನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿ

ಕುಂದಗೋಳ : ಬೆಣ್ಣೆಹಳ್ಳದ ಪ್ರವಾಹಕ್ಕೆ ಸಿಲುಕಿ ಹಾಕಿಕೊಂಡಿದ್ದ 3 ಮಂದಿ ಕುರಿಗಾಹಿಗಳನ್ನು ಮತ್ತು 150 ಕುರಿಗಳನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿ ಆಗಿದ್ದಾರೆ. ಇಂದು ಮಧ್ಯಾಹ್ನದ ಧಾರಾಕಾರ ಮಳೆಗೆ ದೇವನೂರು ಬಳಿಯ ಬೆಣ್ಣೆಹಳ್ಳದ ಪ್ರವಾಹ ಹೆಚ್ಚಿದ ಪರಿಣಾಮ ಕುರಿಗಳನ್ನು ಮೇಯಿಸಲು ಹೋದ ಮೂವರು ಕುರಿಗಾಹಿಗಳು ಮತ್ತು 150 ಕುರಿಗಳು ನೀರಿನ ಪ್ರವಾಹಕ್ಕೆ ಸಿಲುಕಿಕೊಂಡಿದ್ದರು. ಈ ವೇಳೆ ಸ್ಥಳೀಯರಾದ ಯಲ್ಲಪ್ಪ ಬೆನಕನಹಳ್ಳಿ ಎಂಬುವವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ …

Read More »

ಮನೆಯ ಹಿತ್ತಲಿನಲ್ಲೇ ಬೆಳೆದಿದ್ದ ಗಾಂಜಾ ಗಿಡ : ವ್ಯಕ್ತಿ ಬಂಧನ

ಧಾರವಾಡ: ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದ ವ್ಯಕ್ತಿಯೊಬ್ಬ ತನ್ನ ಮನೆಯ ಹಿತ್ತಲಿನಲ್ಲೇ ಗಾಂಜಾ ಗಿಡ ಬೆಳೆದಿದ್ದ. ಈ ವಿಷಯ ಗೊತ್ತಾದ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಆ ಗಾಂಜಾ ಗಿಡ ಹಾಗೂ ಅದನ್ನು ಬೆಳೆದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. 7 ಕೆಜಿ, 455 ಗ್ರಾಂ ಹಸಿ ಗಾಂಜಾ ಇದಾಗಿದ್ದು, ಈ ಗಿಡ ಬೆಳೆಯಲು ಯಾವುದೇ ಅನುಮತಿ ಇಲ್ಲದೇ ಹೋದರೂ ಈ ವ್ಯಕ್ತಿ ಅಕ್ರಮವಾಗಿ ತನ್ನ ಮನೆಯ ಹಿತ್ತಲಿನಲ್ಲೇ ಈ ಗಾಂಜಾ …

Read More »

ಸತತ ಮಳೆಯಿಂದಾಗಿ ಧಾರವಾಡದಲ್ಲಿ ಕೊಚ್ಚಿ ಹೋದ ರಾಷ್ಟ್ರೀಯ ಹೆದ್ದಾರಿ

ಧಾರವಾಡ: ನಗರದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮವಾಗಿ ರಸ್ತೆ ಕೊಚ್ಚಿ ಹೋಗಿದೆ. ರಾಷ್ಟ್ರೀಯ ಹೆದ್ದಾರಿ 4 ಮಳೆಗೆ ಕೊಚ್ಚಿಹೋಗಿದ್ದು, ಧಾರವಾಡದ ರಮ್ಯ ರೆಸಿಡೆನ್ಸಿಯ ಬಳಿ ಈ ಘಟನೆ ಸಂಭವಿಸಿದೆ. ಹುಬ್ಬಳ್ಳಿಯಿಂದ ಧಾರವಾಡದವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಕಾಮಗಾರಿ ಕಳಪೆ ಇರುವ ಕಾರಣಕ್ಕೆ, ಅಲ್ಲಲ್ಲಿ ಈ ಅವಘಡಗಳು ಸಂಭವಿಸುತ್ತಿದೆ. ಈ ಕಾರಣಕ್ಕೆ ವಾಹನ ಸವಾರರು ಪರದಾಡಿದ್ದಾರೆ ಕಳಪೆ ರಸ್ತೆ ಕಾಮಗಾರಿ ಮಾಡುವುದರಿಂದ, ಪ್ರತೀ ಬಾರಿ ಜೋರಾಗಿ ಮಳೆ ಬಂದಾಗ, ಈ …

Read More »

ನಿರಂತರ ಮಳೆಯಿಂದಾಗಿ ಉಕ್ಕಿ ಹರಿದ ಸೊಟ್ಟೆ ಹಳ್ಳ: ದಡದಲ್ಲಿ ಪೂಜೆ ಸಲ್ಲಿಸಿದ ರೈತರು

ಧಾರವಾಡ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಸುರಿದ ಬಾರಿ ಮಳೆಯಿಂದಾಗಿ ಹಿರೇಹರಕುಣಿ ಹಾಗೂ ಶಿಶುನಾಳ ಗ್ರಾಮದ ನಡವೆ ಸಂಚಾರ ಸ್ಥಗಿತವಾಗಿದೆ. ಸೊಟ್ಟ ಹಳ್ಳದ ನೀರಿನಿಂದಾಗಿ ಗ್ರಾಮಸ್ಥರು ಹಾಗೂ ರೈತರು ಪರದಾಡುತ್ತಿದ್ದು, ಶಿಗಿ ಹುಣ್ಣಿಮೆ ಹಿನ್ನೆಲೆ ಜಮೀನಿಗೆ ತೆರಳಬೇಕಿದ್ದ ರೈತರು ಹಳ್ಳದ ದಡದಲ್ಲಿಯೇ ಪೂಜೆ ಸಲ್ಲಿಸಿ ಮರಳುವ ಸ್ಥಿತಿ ನಿರ್ಮಾಣವಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಹಾಗೂ ಶಿಶುನಾಳ ಗ್ರಾಮದ ನಡುವೆ ಬರುವ …

Read More »

ವಾಲ್ಮೀಕಿಯವರಿಂದ ರಚನೆಯಾದ ರಾಮಾಯಣವು ಇಂದಿಗೂ ಮೌಲ್ಯಯುತವಾಗಿದೆ : ಆರ್.ಎನ್. ಹಾಲಿಗೇರಿ

ನವಲಗುಂದ : ಮಹರ್ಷಿ ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದರು ವಾಲ್ಮೀಕಿಯವರಿಂದ ರಚನೆಯಾದ ರಾಮಾಯಣವು ಇಂದಿಗೂ ಮೌಲ್ಯಯುತವಾಗಿದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ ಗುರುಮಾತೆ ಆರ್.ಎನ್. ಹಾಲಿಗೇರಿ ಹೇಳಿದರು. ಅವರು ಪಟ್ಟಣದ ಸರಕಾರ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳು ಶಾಲೆ ನಂ 1ರಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಮಹರ್ಷಿ ವಾಲ್ಮೀಕಿಯವರು …

Read More »

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ನವಲಗುಂದ: ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಸಂತೋಷ ಹುಬ್ಬಳ್ಳಿ ರವರು ವಾಲ್ಮೀಕಿಯವರಿಂದ ರಚನೆಯಾದ ಮಹಾಕಾವ್ಯ ರಾಮಾಯಣವು ಇಂದಿನ ಜಗತ್ತಿನಲ್ಲಿ ಸತ್ವವುಳ್ಳ ಹಾಗೂ ಮೌಲ್ಯಯುತವಾದ ಕಾವ್ಯವಾಗಿದ್ದು ಶ್ರೇಷ್ಠ ಸಾಹಿತ್ಯದ ಸೃಷ್ಟಿಗೆ ಕಾರಣವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಎಂ.ಬಿ.ಬಾಗಡಿ ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ …

Read More »

ಹಳ್ಳದ ದಂಡೆಗೆ ನೀರಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಣೆ

ಕುಂದಗೋಳ : ರೈತಾಪಿ ಜನರ ಬಹುದೊಡ್ಡ ಹಬ್ಬ ಸೀಗೆ ಹುಣ್ಣಿಮೆಗೆ ಭೂಮಿ ತಾಯಿಯ ಪೂಜೆ ಸಲ್ಲಿಸಲು ತರೆಳಿದ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಅಣ್ಣಯ್ಯ ನಂದಯ್ಯನವರ, ಮುಕ್ಕಣ್ಣ ಹಂಚಿನಾಳ ಗ್ರಾಮದಿಂದ ಸಂಪರ್ಕ ಕಳೆದುಕೊಂಡ ಬೇರೆ ಮಾರ್ಗದ ಮೂಲಕ ಊರು ತಲುಪಲು ಮುಂದಾಗಿದ್ದಾರೆ. ಇತ್ತ ಹಳ್ಳ ತುಂಬಿ ರಭಸದಿಂದ ತುಂಬಿ ಹರಿಯುತ್ತಿರುವ ಕಾರಣ ತಮ್ಮ ಜಮೀನಿಗೆ ತೆರಳಲು ಮಾರ್ಗ ಇಲ್ಲದೆ ರೈತಾಪಿ ಜನ ಜಮೀನಿಗೆ ಪೂಜೆ ಸಲ್ಲಿಸುವ ಬದಲು ಹಳ್ಳದ ದಂಡೆಗೆ …

Read More »

ಕಲಘಟಗಿಯಲ್ಲಿ ಸೀಗೆ ಹುಣ್ಣಿಮೆ ಆಚರಣೆ

ಕಲಘಟಗಿ:ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಸಂಭ್ರಮ ಸಡಗರದ ನಡೆಯಬೇಕಿದ್ದ ಸೀಗೆ ಹುಣ್ಣಿಮೆ ಈ ಬಾರಿ ಸಂಕ್ಷೇಪವಾಗಿ ರೈತರು ತಮ್ಮ ಜಮೀನುಗಳಿಗೆ ಚರಗ ಚೆಲ್ಲುವ ಮೂಲಕ ಆಚರಣೆ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದು ರೈತರು ತಮ್ಮ ಜಮೀನಿಗೆ ಹೋಗಲಾರದೆ ರಸ್ತೆ ಪಕ್ಕದಲ್ಲಿ ಐದು ಮಂದಿ ಪಾಂಡವರ ಮೂರ್ತಿ ಇಟ್ಟು ಚರಗ ಚೆಲ್ಲಿದರು. ನೆನ್ನೆ ಕೆಲವರು ರಸ್ತೆ ಪಕ್ಕದಲ್ಲಿ ಇರುವ ಜಮೀನಿಗೆ ತೆರಳಿ ಚೆರಗ ಚೆಲ್ಲಿ ಮಳೆ ಕಡಿಮೆ ಆಗುವಂತೆ ದೇವರಲ್ಲಿ …

Read More »