Breaking News

ಧಾರವಾಡ

ರೈತರು ಬೆಳೆದ ಧಾನ್ಯಗಳನ್ನು ಕಳ್ಳತನ ಮಾಡಿದ ಕಳ್ಳರ ಬಂಧನ

ಧಾರವಾಡ : ಅಂದಾಜು 3 ಲಕ್ಷ ರೂಪಾಯಿ ಮೌಲ್ಯದ ದವಸ, ಧಾನ್ಯ ಕಳ್ಳತನ ಮಾಡಿದ್ದ ಮೂವರನ್ನು ನವಲಗುಂದ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನವಲಗುಂದದ ಕಿರಣ್ ಕುಂಬಾರ, ಅಣ್ಣಿಗೇರಿಯ ಕೃಷ್ಣಾ ಗಾಣದಾಳ ಹಾಗೂ ವಿಜಯ ಉಣಕಲ್ ಎಂಬುವವರೇ ಬಂಧಿತ ಆರೋಪಿಗಳು. ನವಲಗುಂದದ ರಾಮಲಿಂಗೇಶ್ವರ ಓಣಿಯಲ್ಲಿ ಸಂಗ್ರಹಿಸಿ ಇಡಲಾಗಿದ್ದ 80 ಚೀಲ ಧಾನ್ಯಗಳನ್ನು ಈ ಮೂವರೂ ಸೇರಿ ಕಳ್ಳತನ ಮಾಡಿದ್ದರು. ಈ ಸಂಬಂಧ ನವಲಗುಂದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ …

Read More »

ಸೆರ್ವರ್‌ ದೋಷದಿಂದ ರೊಚ್ಚಿಗೆದ್ದ ಜನರು; ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳ ಜೊತೆಗೆ ಮಾತಿನ ಚಕಮಕಿ

ಧಾರವಾಡ: ಸರ್ವರ್ ದೋಷದಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಬರುವ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರನ್ನು ನಿಯಂತ್ರಿಸಲು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಹೌದು! ಧಾರವಾಡ ಜಿಲ್ಲಾ ಆಸ್ಪತ್ರೆಯ ನೋಂದಣಿ ಕೇಂದ್ರದಲ್ಲಿ ಬೆಳಿಗ್ಗೆಯಿಂದ ಸರ್ವರ್ ದೋಷ ಉಂಟಾಗಿದ್ದು, ನೋಂದಣಿ ಕಾರ್ಯ ವಿಳಂಬವಾಗುತ್ತಿದೆ. ಜನರು ಸಾಲುಗಟ್ಟಿ ನಿಂತು ಬೇಸತ್ತು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಜೋತೆ ವಾಗ್ವಾದಕ್ಕಿಳಿದ ಘಟನೆ ಇಂದು ನಡೆದಿದೆ. ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ, ಸರ್ವರ್ ದೋಷದಿಂದ ಸಮಸ್ಯೆ ಆಗುತ್ತಿದೆ ಎಂದು …

Read More »

ರಸ್ತಪಕ್ಕದಲ್ಲಿ ಅಂಗಡಿಗಳ ತೆರವು ಮಾಡಲು ಆದೇಶ ಹಿನ್ನಲೆ, ಸಮಯಾವಕಾಶ ನೀಡುವಂತೆ ಮನವಿ

ಧಾರವಾಡ : ಜಯ ಕರ್ನಾಟಕ ಜನಪರ ವೇದಿಕೆಯಿಂದ‌‌, ಧಾರವಾಡದ ಶಹರದಲ್ಲಿ ಸುಮಾರು 20 – 30 ವರ್ಷಗಳಿಂದ ಹೊಟ್ಟೆಯ ಪಾಡಿಗಾಗಿ ಬಡ ಜನರು ಕೆಲವೊಂದು ರಸ್ತೆಯ ಪಕ್ಕದಲ್ಲಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ತಮ್ಮ ಜೀವನ ನಿರ್ವಹಿಸುತ್ತಿದ್ದು. ಈ ಬಡ ಜನರ ದಿನ ನಿತ್ಯದ ಜೀವನ ಇದರಿಂದಲೇ ನಡೆಯುತ್ತಿರುವುದು, ಆದರೆ ಈಗ ಏಕಾಏಕಿಯಾಗಿ ಯಾವುದೇ ರೀತಿಯ ಸಮಯ ಅವಕಾಶ ನೀಡದೆ ಸದರಿ ಡಬ್ಬಾ ಅಂಗಡಿಗಳನ್ನು ತೆರೆವುಗೊಳಿಸಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದು. ವಿಷಾದನೀಯ …

Read More »

ಬಾಲಕಿ ಮೇಲೆ ಮಂಗವೊಂದರ ದಾಳಿ ಬಾಲಕಿಗೆ ಗಂಭೀರ ಗಾಯ

ಶಾಲೆಯಿಂದ ಹೊರಬಂದಿದ್ದ ಮಗುವಿನ ಮೇಲೆ ಮಂಗವೊಂದು ದಾಳಿ ಮಾಡಿ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಧಾರವಾಡದ ಗರಗ ಗ್ರಾಮದಲ್ಲಿ ಇಂದು ನಡೆದಿದ್ದು, ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ನಿವಾಸಿ ಇಕರಾ ಗಡಕಾರಿ (8) ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಉರ್ದು ಶಾಲೆಯಲ್ಲಿ 2ನೇ ತರಗತಿ ಒದುತ್ತಿದ್ದು, ಶಾಲೆ ಆಟದ ಸಮಯದಲ್ಲಿ ವಿದ್ಯಾರ್ಥಿನಿ ಶಾಲೆಯಿಂದ ಆಚ್ಚೆ ಬಂದು ಶಾಲೆಯ ಆವರಣಕ್ಕೆ ಮರಳುತ್ತಿರುವ ವೇಳೆ ಒಂಟಿ ಮಂಗ ವಿದ್ಯಾರ್ಥಿನಿಯ …

Read More »

ವಂದೇ ಭಾರತ ರೈಲು ಆರಂಭವಾಗಿದೆ. ವಿಮಾನದಲ್ಲಿ ಹೋದ ಅನುಭವ ಆಗುತ್ತದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ : ದಕ್ಷಿಣ ಮತ್ತು ಉತ್ತರ ಭಾರತದ ನಡುವೆ ಸಂಪರ್ಕ ಕಲ್ಪಿಸುವ ಮೊದಲ ವಂದೇ ಭಾರತ ರೈಲು ಇದಾಗಿದೆ. ಈ ರೈಲು ಆರಂಭಿಸುವಂತೆ ಬಹುದಿನಗಳ ಬೇಡಿಕೆ ಇತ್ತು ಏಪ್ರಿಲ್ ನಲ್ಲಿ ಆರಂಭಿಸಬೇಕಾಗಿತ್ತು. ಸ್ವಲ್ಪ ತಡವಾದ್ರೂ, ಈಗ ಆರಂಭವಾಗಿದೆ. ಸ್ವದೇಶಿ ನಿರ್ಮಿತ ಟ್ರೈನ್ ಇದು ಅನ್ನೋದು ಹೆಮ್ಮೆ ವಿಚಾರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಧಾರವಾಡದಿಂದ ಪ್ರಯಾಣದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿ, ವಿದೇಶಗಳಲ್ಲಿ ಇಂತಹ ಟ್ರೈನ್ ನೋಡುತ್ತಿದ್ದೆವು. …

Read More »

ಅಕ್ಕಿ ಸಮರ ಅಕ್ಕಿನೀಡಿದ್ದು ಮೋದಿ ಅಲ್ಲ ಯು,ಪಿ.ಎ.ಸರಕಾರ ಸಂತೋಷ ಲಾಡ್

ಧಾರವಾಡ: ಪಡಿತರ ಅಕ್ಕಿ ನರೇಂದ್ರ ಮೋದಿಯವರದ್ದೆಂಬ ವಿಚಾರವಾಗಿ ಸ‌ಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಇಂದು ಮಾತನಾಡಿದ ಸಚಿವ ಸಂತೋಷ ಲಾಡ್ ನರೇಂದ್ರ ಮೋದಿ ಅಕ್ಕಿ ಎಂದು ಹೇಳುತ್ತಿದ್ದಾರೆ ಆದರೆ ಅದು ನರೇಂದ್ರ ಮೋದಿ ಅಕ್ಕಿ ಅಲ್ಲ ಅದು ಯು.ಪಿ.ಎ. ಸರಕಾರ ನೀಡಿರುವ ಅಕ್ಕಿ ಯುಪಿಎ 2 ಸರ್ಕಾರ ಆಡಳಿತದಲ್ಲಿ ಇದ್ದ ವೇಳೆಯಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದ್ದಾರೆ ಭಾರತ ದೇಶದಲ್ಲಿ ಈ‌ ಕಾಯ್ದೆ ಮೂಲಕ 5 ಕೆಜಿ …

Read More »

ಮಾದಕವಸ್ತು ವ್ಯಸನದ ವಿರುದ್ಧ ಎಲ್ಲರೂ ಹೋರಾಟ ಮಾಡುವುದು ಉಪ ಪೊಲೀಸ್ ಆಯುಕ್ತ ರಾಜು ಎಂ

ಧಾರವಾಡ ಮಾದಕ ವ್ಯಾಸನವು ಮೂಲತಃ ಮೆದುಳಿನ ಕಾಯಿಲೆಯಾಗಿದೆ. ಮಾದಕ ವ್ಯಸನದ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸದೇ ಮಾದಕವಸ್ತು ವ್ಯಸನದ ವಿರುದ್ಧ ಎಲ್ಲರೂ ಹೋರಾಟ ಮಾಡುವುದು ಅತ್ಯಂತ ಅವಶ್ಯವಾಗಿದೆ. ಡ್ರಗ್ಸ್ ವಿರುದ್ದದ ಸಮರವೇ ಈ ಜಾಥಾ ಎಂದು ಎಂದು ಉಪ ಪೊಲೀಸ್ ಆಯುಕ್ತ ರಾಜು ಎಂ. ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ನಗರದ ಕೆಸಿಡಿ ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತಾಲಯ ಮತ್ತು ಆರೋಹಣ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ *ಮದಕವಸ್ತು …

Read More »

ಕೇಂದ್ರದ 5 ಕೆಜಿ ಬಿಟ್ಟು ರಾಜ್ಯ ಕಾಂಗ್ರೆಸ್ ಸರ್ಕಾರ 10ಕೆಜಿಅಕ್ಕಿ ಕೊಡಲಿ ಜೋಶಿ

ಧಾರವಾಡ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳ ಮೇಲಾಯ್ತು. ಇದುವರೆಗೂ ರಾಜ್ಯದ ಜನತೆಗೆ ಈ ಸರ್ಕಾರ ಒಂದು ಕೆಜಿ ಅಕ್ಕಿಯನ್ನೂ ಕೊಟ್ಟಿಲ್ಲ. ಈಗ ಕೊಡುತ್ತಿರುವ ಐದು ಕೆಜಿ ಅಕ್ಕಿ ಕೇಂದ್ರದ್ದು. ಕೇಂದ್ರ ಕೊಡುವ 5 ಕೆಜಿ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿಯನ್ನು ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು ಧಾರವಾಡದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 5 …

Read More »

ನಾಡಿನಾದ್ಯಂತ ಮಣ್ಣೆತ್ತಿನ ಅಮವಾಸ್ಯೆ ಜೋರು –

ಧಾರವಾಡ: ಇಂದು ನಾಡಿನಾದ್ಯಂತ ಮಣ್ಣೆತ್ತಿನ ಅಮವಾಸ್ಯೆ ಆಚರಣೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಅಮವಾಸ್ಯೆಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ಈ ದಿನ ರೈತಾಪಿ ವರ್ಗ ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜೆ ಮಾಡುತ್ತಾರೆ. ನಗರ ಪ್ರದೇಶಗಳಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ತಂದು ಮಾರಾಟ ಮಾಡಲಾಗುತ್ತದೆ. ನಗರ ಪ್ರದೇಶದ ಜನ ಅದೇ ಮೂರ್ತಿಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತಾರೆ. ಇಂದು ಧಾರವಾಡದ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿತ್ತು. ಮಣ್ಣಿನ ಎತ್ತುಗಳಿಗೆ ಭಾರಿ ಬೇಡಿಕೆ …

Read More »

ಧಾರವಾಡ: ಕಾಂಗ್ರೆಸ್ ಸರ್ಕಾರ ಶಿಕ್ಷಕರ ಬೇಡಿಕೆ ಈಡೇರಿಸಬೇಕು ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಸ್.ಬಿ. ಕೇಸರಿ ಆಗ್ರಹ

ಧಾರವಾಡ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಕ ಸಂಘದ ಅಧ್ಯಕ್ಷರು , ಈ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಹಲವಾರು ಭಾರಿ ಹೋರಾಟ ಮಾಡುತ್ತಲೇ ಶಿಕ್ಷಕರ ಬೇಡಿಕೆ ಈಡೇರಿಸಲು ಆಗ್ರಹಿಸಿದರು. ಯಾವುದೇ ಪ್ರಯೋಜನವಾಗಿಲ್ಲ , ಈಗ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೊಟ್ಟ ಮಾತಿನಂತೆ ನಡೆಯಬೇಕು ಶಿಕ್ಷಕರ ಬೇಡಿಕೆ ಈಡೇರಿಸುವ ಮೂಲಕ ಶಿಕ್ಷಕರ ಸಮಸ್ಯೆ ನಿವಾರಣೆ ಮಾಡಬೇಕು ಎಂದು ಎಸ್.ಬಿ.ಕೇಸರಿ ಅವರು ಆಗ್ರಹಿಸಿದರು, ಹಳೆ ಪಿಂಚಣಿ ಯೋಜನೆ ಜಾರಿ, …

Read More »