Breaking News

ಹುಬ್ಬಳ್ಳಿ

ಕೆಲವೊಂದು ರೈಲ್ವು ಸಂಚಾರ ರದ್ದು

ಹುಬ್ಬಳ್ಳಿ: ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣ ಹಲವು ರೈಲುಗಳ ಸಂಚಾರ ಮತ್ತು ಫೆ. 1 ಹಾಗೂ 2ರಂದು ಹುಬ್ಬಳ್ಳಿ-ದಾದರ್‌ ನಿತ್ಯ ಎಕ್ಸ್‌ಪ್ರೆಸ್‌ ರೈಲು ಹುಬ್ಬಳ್ಳಿಯಿಂದ, 2 ಹಾಗೂ 3ರಂದು ದಾದರ್‌ನಿಂದ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ವಿಳಂಬ: ಮಾ. 27ರಿಂದ 31ರ ವರೆಗೆ ಮತ್ತು ಫೆ. 2ರಂದು ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಎಕ್ಸ್‌ಪ್ರೆಸ್‌ ರೈಲಿನ ಸಂಚಾರದಲ್ಲಿ 30 ನಿಮಿಷ ವಿಳಂಬಾಗಲಿದೆ. 27ರಿಂದ ಫೆ. 2ರ ತನಕ ಹುಬ್ಬಳ್ಳಿ-ದಾದರ್‌ ಎಕ್ಸ್‌ಪ್ರೆಸ್‌ …

Read More »

ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಪ್ರತಿಭಟನೆಗಿಳಿದ ಸಮತಾ ಸೈನಿಕ ದಳ

ಹುಬ್ಬಳ್ಳಿ : ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋ ಇಟ್ಟರೇ ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಹೇಳಿಕೆ ನೀಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ವೃತ್ತಿಯಿಂದ ವಜಾ ಮಾಡಿ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕೆಂದು ಆಗ್ರಹಿಸಿ, ಸಮತಾ ಸೈನಿಕ ದಳ ವತಿಯಿಂದ ನಗರದ ತಹಶೀಲ್ದಾರರ ಮುಖಾಂತರ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Read More »

ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನದಲ್ಲಿ ಪ್ರೀಮಿಗಳು ಫುಲ್ ರೋಮ್ಯಾನ್ಸ್

ಹುಬ್ಬಳ್ಳಿ: ನಗರದ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನದಲ್ಲಿ ಪ್ರೇಮಿಗಳು ಇಬ್ಬರು ತಮ್ಮನ್ನು ತಾವೇ ಮರೆತು ರೋಮ್ಯಾನ್ಸ್ ನಲ್ಲಿ ಬ್ಯಸಿ ಆಗಿದ್ದಾರೆ.  ಜನರು, ಮಕ್ಕಳ್ಳು, ವೈದ್ಯರು, ರೋಗಿಗಳನ್ನು ಲೇಕಿಸದೇ ತಮ್ಮ ಗುಂಗಿನಲ್ಲಿ ತಮ್ಮನೇ ತಾವೇ ಮೈ ಮರೆತ ರೀತಿ ವರ್ತಿಸಿದ್ದು ಇದೀಗ ವಿಡಿಯೋ ವೈರೆಲ್ ಆಗಿದೆ. ಇಲ್ಲಿ ಹೇಳೋರು ಇಲ್ಲ, ಕೇಳೋರು ಇಲ್ಲ ಎಂಬಂತಾಗಿದ್ದು. ಯುವ ಪ್ರೇಮಿಗಳಿಬ್ಬರು ಮುತ್ತಿನ ಗಮ್ಮತ್ತಿನಲ್ಲಿ ತಮ್ಮನ್ನೇ ತಾವು ಮರೆತಿದ್ದಾರೆ.ಅಲ್ಲೇ ಇದ್ದ ಸಾರ್ವಜನಿಕರಿಗೆ ಈ ವರ್ತನೆಯಿಂದ ಮುಜುಗುರ ಉಂಟಾಗಿದೆ. …

Read More »

ಕೊಟಗೊಂಡಹುಣಸಿಯಲ್ಲಿ 73ನೇ ಗಣರಾಜ್ಯೋತ್ಸ ಆಚರಣೆ

ಹುಬ್ಬಳ್ಳಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟಗೊಂಡಹುಣಸಿಯಲ್ಲಿ 73ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು. ಎಸ್.ಡಿ.ಎಮ್.ಸಿ ಅಧ್ಯಕ್ಷ ಶಂಕರಗೌಡ ಹೊನ್ನಪ್ಪಗೌಡ್ರ ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆ ಮತ್ತು ಹಿರಿಮೆ ಅಪಾರ. ಒಕ್ಕೂಟ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನ ಹಾಗೂ ಅದರ ಅಂಶಗಳಿಗೆ ಗೌರವ ನೀಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಇಲ್ಲಿನ ನೆಲ,ಜಲ ಹಾಗೂ ಸಂಸ್ಕ್ರತಿಯ ರಕ್ಷಣೆಯ ಜೊತೆಗೆ ಸಂವಿಧಾನದ ಮೇಲೆ ನಂಬಿಕೆಯೊಂದಿಗೆ ಪರಸ್ಪರ ಸಾಮರಸ್ಯ ಹಾಗೂ ಸೌಹಾರ್ಧತೆ ಬದುಕುವ …

Read More »

ಸಿದ್ದರಾಮಯ್ಯ ಸುಮ್ಮನೆ ಹುಳ ಬಿಡೋ ಕೆಲಸ ಮಾಡುತ್ತಿದ್ದಾರೆ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಆಯಾ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಬೇಕಿತ್ತು. ಇದಿ ನನ್ನ ಅಭಿಪ್ರಾಯ ಎಂದು ಹೇಳುವ ಮೂಲಕ ಮಾಜಿ‌ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜಿಲ್ಲಾ ಉಸ್ತುವಾರಿ ನೇಮಕದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾತನಾಡಿದ ಅವರು, ನನ್ನ ಪ್ರಕಾರ ಇದು ಇನ್ ಕನ್ವಿನೆಂಟ್ ಆಗುತ್ತೆ. ಆಡಳಿತ ಅಭಿವೃದ್ಧಿ ದೃಷ್ಟಿಯಿಂದ ಆಯಾ ಜಿಲ್ಲೆಯವರಿಗೆ ನೀಡಿದ್ರೆ ಒಳ್ಳೆದಾಗುತ್ತಿತ್ತು. ನಾನು ಈಗಾಗಲೇ ಸಿಎಂ ಗಮನಕ್ಕೂ ತಂದಿದ್ದೇನೆ. ಆದ್ರೆ ಪಕ್ಷದ ಪಾಲಿಸಿ,ಪ್ರಯೋಗವಿದೆ‌. ನೋಡೋಣ ಇದು ಯಾವ …

Read More »

ದೂರು ಕೊಡಲು ಹೋದಾಗ PSI ಧಮ್ಕಿ : ಕುಟುಂಬದ ಸದಸ್ಯರು ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ: ಮಾಜಿ ಅಧ್ಯಕ್ಷ ನಾಗನಗೌಡ ಕೋಟಿಗೌಡರ ವಿರುದ್ಧ ಮಾಜಿ ಸದಸ್ಯ ಸಿದ್ದಪ್ಪ ಕಳಸಣ್ಣ ದೂರು ನೀಡಲು ಠಾಣೆಗೆ ಹೋದಾಗ ಪಿಎಸ್‌ಐ ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದ್ದು, ಮನನೊಂದ ಒಂದೇ ಕುಟುಂಬ ಮೂವರು ಆತ್ಮಹತ್ಯೆಗೆ  ಯತ್ನಿಸಿದ್ದಾರೆ.  ಕುಟುಂಬಸ್ಥರು ಆತ್ಮಹತ್ಯೆಗೆ ಯತ್ನಿಸಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಮೂವರಿಗೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತರ್ಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ ಅಂತ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸಿದ್ದಪ್ಪ ಕಳಸಣ್ಣ, ಮಾಜಿ ಅಧ್ಯಕ್ಷ ನಾಗನಗೌಡ …

Read More »

ಕೋವಿಡ್ ಹಾವಳಿ : 2 ಶಾಲೆ, 1 ಕಾಲೇಜು ಸಿಲ್ ಡೌನ್

ಹುಬ್ಬಳ್ಳಿ: ನಗರದ ಪ್ರಿಯದರ್ಶಿನಿ ಕಾಲೊನಿಯಲ್ಲಿರುವ ಡಾ.ಆರ್‌.ಬಿ.ಪಾಟೀಲ ಮಹೇಶ ಪಿಯು ಕಾಲೇಜಿನಲ್ಲಿ 53 ಪ್ರಕರಣ, ಸೇಂಟ್ ಮಿಶೆಲ್ ಪ್ರೌಢಶಾಲೆಯಲ್ಲಿ 12 ಹಾಗೂ ಚನ್ನಪೇಟೆಯ ಜೀವೇಶ್ವರ ಪ್ರೌಢಶಾಲೆಯಲ್ಲಿ 12 ಪ್ರಕರಣಗಳು ಪತ್ತೆಯಾದ ಹಿನ್ನಲೆ ಎರಡು ಪ್ರೌಢಶಾಲೆಗಳು ಹಾಗೂ ಒಂದು ಕಾಲೇಜಿನ ಕೆಲ ವಿದ್ಯಾರ್ಥಿಗಳಿಗೆ ಕೋವಿಡ್-19 ದೃಢಪಟ್ಟಿರುವುದರಿಂದ, ತಾಲ್ಲೂಕು ಆಡಳಿತವು ಶುಕ್ರವಾರ ಆ ಶಾಲಾ- ಕಾಲೇಜುಗಳನ್ನು ಸೀಲ್‌ಡೌನ್ ಮಾಡಿದೆ. ವಿಷಯ ಗೊತ್ತಾಗುತ್ತಿದ್ದಂತೆ, ತಾಲ್ಲೂಕು ಆಡಳಿತದ ಸಿಬ್ಬಂದಿ ಶಾಲಾ- ಕಾಲೇಜಿಗೆ ಹೋಗಿ ಐದು ದಿನಗಳವರೆಗೆ ಸೀಲ್‌ಡೌನ್ ಮಾಡಿದ್ದಾರೆ …

Read More »

ರಾತ್ರೋರಾತ್ರಿ ಪ್ರತಿಭಟನೆಗಿಳಿದ ರೈತರು: ಬೇಗನೆ ಹೋಟೆಲ್ ಬಂದ್ ಮಾಡಿಸಿದ್ದಕ್ಕೆ ಉಟಕ್ಕಾಗಿ ಪರದಾಡಿದ ಅನ್ನದಾತನ….!

ಹುಬ್ಬಳ್ಳಿ: ಪೊಲೀಸರು ಬೇಗನೆ ಹೊಟೇಲುಗಳನ್ನು ಬಂದ್ ಮಾಡಿಸಿದ್ದರಿಂದ ಊಟ ಸಿಕ್ಕಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ನೂರಾರು ರೈತರು ಇಲ್ಲಿನ ಎಪಿಎಂಸಿ ಎದುರು ಹು-ಧಾ ಮುಖ್ಯ ರಸ್ತೆ ಹಾಗೂ ಬಿಆರ್ ಟಿಎಸ್ ರಸ್ತೆ ಬಂದ್ ಮಾಡಿ ರಾತ್ರಿ ಪ್ರತಿಭಟಿಸಿದರು. ಮೆಣಸಿನಕಾಯಿ ಮಾರಾಟಕ್ಕೆ ಧಾರವಾಡ ಸೇರಿದಂತೆ ಗದಗ, ಬಾಗಲಕೋಟೆ ಜಿಲ್ಲೆ ಹಾಗೂ ಬೇರೆ ಬೇರೆ ಊರುಗಳಿಂದ ರೈತರು ಬಂದಿದ್ದರು. ಮೆಣಸಿನಕಾಯಿ ತೂಕ ಆಗಿಲ್ಲ. ಪೊಲೀಸರು ಬೇಗನೇ ಎಲ್ಲ ಹೋಟೆಲ್ ಗಳನ್ನು ಬಂದ್ ಮಾಡಿಸಿದ್ದಾರೆ. ಹೀಗಾಗಿ …

Read More »

ವಿಶ್ವದಾಖಲೆಯಲ್ಲಿ ಧಾರವಾಡಕ್ಕೆ ಮತ್ತೊಂದು ಕಿರೀಟ ತಂದ ಕೊಟ್ಟ ಕವಿತಾ ಮೇದಾರ

ಹುಬ್ಬಳ್ಳಿ:ಆಕೆ ನಿಜಕ್ಕೂ ಕಿತ್ತು ತಿನ್ನುವ ಬಡತನದಲ್ಲಿ ಹುಟ್ಟಿದ ಹೆಣ್ಣುಮಗಳು. ಈಗ ಆಕೆ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನು ಬರೆದಿದ್ದಾಳೆ. ತೊಟ್ಟಿಲನ್ನು ತೂಗುವ ಕೈ ಜಗತ್ತನೇ ಆಳಬಲ್ಲದು ಎಂಬುವಂತ ಗಾದೆಗೆ ನಿದರ್ಶನ ಎಂಬಂತೆ ಈ ಮಹಿಳೆ ಸಾಧನೆ ಮಾಡಿದ್ದಾಳೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ಬಾರ್ ಗಳಲ್ಲಿ ಬಾರ್ ಟೆಂಡರ್ ಗಳನ್ನು ನೀವು ನೋಡಿರ್ತೀರಾ. ಅದರಲ್ಲಿ ಬಾರ್ ಟೆಂಡರ್ ಗಳ ಬಾಟಲಿ ತಿರುಗಿಸುವುದನ್ನು ನೋಡಿಯೇ ಹೌ ಹಾರಿರುತ್ತೇವೆ. ಅಂಥದ್ದರಲ್ಲಿ ಇಲ್ಲೊರ್ವ ಯುವತಿ ಗ್ರಾಮೀಣ …

Read More »

ಕೃಷಿ ಹೊಂಡದಲ್ಲಿ ಈಜಲು ಹೋಗಿ ಯುವಕ ಸಾವು

ಹುಬ್ಬಳ್ಳಿ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಯುವಕ ಸಾವನ್ನಪ್ಪಿದ ಘಟನೆ, ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮ ಸರಹದ್ದಿನ ಜಮೀನೊಂದರ ಕೃಷಿ ಹೊಂಡದಲ್ಲಿ ನಡೆದಿದೆ. ಸೌದಿಮಠ ( 21 ) ಮೃತಪಟ್ಟವ ಯುವಕ. ಶಿವಪ್ಪ ಎಂಬುವರ ಹೊಲದ ಕೃಷಿ ಹೊಂಡದಲ್ಲಿ ಈಜಲು ಹೋದಾಗ ಈ ಅವಘಡ ಸಂಭವಿಸಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »